ನೂರಕ್ಕೂ ಅಧಿಕ ವರ್ಷ ಹಳೆಯ ಮೋಟಾರ್‌ಸೈಕಲ್ ಕಂಪನಿಗಳು ಯಾವುವು ಗೊತ್ತಾ? ನಿಮ್ಮ ಬೈಕ್‌ ಸಹ ಇರಬಹುದು

ನಾವಿಂದು ಓಡಿಸುತ್ತಿರುವ ಬಹುತೇಕ ಎಲ್ಲಾ ಬೈಕ್‌ಗಳು ಸಹ ಸಾಕಷ್ಟು ಹಳೆಯ ಇತಿಹಾಸ ಹೊಂದಿರುವ ಬೈಕ್‌ಗಳೇ. ಈ ಬೈಕ್‌ಗಳ ಕುರಿತಾಗಿ ಇಂದಿನ ತಲೆಮಾರಿನವರಿಗಿಂತಲೂ ೯೦ ರ ದಶಕದ ಯುವಕರಿಗೆ ಹೆಚ್ಚಿನ ಅರಿವಿರುತ್ತದೆ. ಆ ಕಾಲದಲ್ಲಿ ಹಳೆಯ ಬೈಕ್‌ಗಳಿಗಿದ್ದ ಖದರ್, ಪ್ರೌಢಿ ಇವೆಲ್ಲಾ ಏನು ಎಂಬುದು ಅವರಿಗಿಂತಲೂ ಚೆನ್ನಾಗಿ ಅರಿತಿರುವವರು ವಿರಳ.

ಇಂದಿನ ಈ ಲೇಖನದಲ್ಲಿ ನಾವು ಸುಮಾರು ನೂರು ವರ್ಷಗಳಿಗಿಂತಲೂ ಹಳೆಯ ಇತಿಹಾಸ ಇರುವ ಟಾಪ್‌ ಫೈವ್‌ ಬೈಕ್‌ ಕಂಪನಿಗಳು ಯಾವುದು ಎಂಬುದನ್ನು ನೋಡಲಿದ್ದೇವೆ. ಈ ಪಟ್ಟಿಯಲ್ಲಿ ನಿಮಗೆ ತಿಳಿದರುವ ಕಂಪನಿಗಳೇ ಬಹುತೇಕ ಎಂದು ಈಗಲೇ ಹೇಳುತ್ತಿದ್ದೇನೆ. ಇದರಲ್ಲಿ ನಿಮ್ಮ ನೆಚ್ಚಿನ ಬೈಕ್‌ ತಯಾರಿಕಾ ಕಂಪನಿಗಳು ಸಹ ಇರಬಹುದು. ಹಾಗಾದರೆ ಒಂದೊಂದಾಗೇ ಬೈಕ್‌ಗಳ ಕಂಪನಿಗಳನ್ನು ನೋಡೋಣ ಬನ್ನಿ.

Top Five Bike Manufacturing Companies Which Has History Over 100 Years

ಹಾರ್ಲೆ ಡೇವಿಡ್ಸನ್ (1903)‌: ನಮ್ಮ ಪಟ್ಟಿಯ ಟಾಪ್‌ ಫೈವ್‌ನಲ್ಲಿರುವ ಕಂಪನಿ ಎಂದರೆ ಅದುವೇ ಈ ಹಾರ್ಲೆ ಡೇವಿಡ್ಸನ್‌. ಹಾರ್ಲೆ ಡೇವಿಡ್ಸನ್ ಬೈಕ್‌ಗಳ ಕುರಿತಾಗಿ ಕೇಳದೆ ಇರುವವರ ಸಂಖ್ಯೆ ಬಹಳ ಕಮ್ಮಿ ಎಂದೇ ಹೇಳಬಹುದು. ಮೂಲತಃ ಅಮೇರಿಕಾ ದೇಶದ ಬೈಕ್‌ ನಿರ್ಮಾಣ ಕಂಪನಿಯಾದ ಹಾರ್ಲೆ ಡೇವಿಡ್ಸನ್ ಜಾಗತಿಕವಾಗಿ ತನ್ನ ಬೈಕ್‌ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿದೆ.

ಇನ್ನು ಈ ಹಾರ್ಲೆ ಡೇವಿಡ್ಸನ್ ಕಂಪನಿಯ ಮತ್ತೊಂದು ಕುತೂಹಲಕಾರಿಯಾದ ಸಂಗತಿಯೆಂದರೆ ಈ ಕಂಪನಿಯನ್ನು ನಿರ್ಮಾಣ ಮಾಡಿದ್ದು ಇಬ್ಬರು ಬಾಲ್ಯ ಸ್ನೇಹಿತರು. ಅವರೇ, ವಿಲಯಂ ಎಸ್‌ ಹಾರ್ಲೆ ಮತ್ತು ಆರ್ಥರ್ ಡೇವಿಡ್ಸನ್‌. ಇಬರಿಬ್ಬರ ಹೆಸರನ್ನು ಸೇರಿಸಿ ಈ ಕಂಪನಿಗೆ ಹಾರ್ಲೆ ಡೇವಿಡ್ಸನ್ ಎಂದು ಹೆಸರಿಡಲಾಗಿದೆ.

ಹಸ್ಕ್ವರ್ನಾ (1903): ಇತ್ತೀಚಿನ ಕೆಲವು ವರ್ಷಗಳಿಂದ ಈಚೆಗೆ ಈ ಹಸ್ಕ್ವರ್ನಾ ಎಂಬ ಹೆಸರು ಭಾರತೀಯ ಯುವಕರ ಮಧ್ಯೆ ಕೊಂಚ ಹೆಸರು ಮಾಡುತ್ತಾ ಬರುತ್ತಿದೆ. ಇದಕ್ಕೆ ಪ್ರಮುಖ ಕಾರಣ ಬಜಾಜ್‌. ಹಸ್ಕ್ವರ್ನಾ ಕಂಪನಿಯ ಎರಡು ಮಾಡೆಲ್‌ಗಳನ್ನು ಬಜಾಜ್‌ ಕಂಪನಿಯು ಭಾರತದಲ್ಲಿ ಮಾರುತ್ತಿದ್ದು, ಇದರ ವಿಶೇಷ ವಿನ್ಯಾಸದಿಂದ ಕೆಲವು ಯುವಕರು ಈ ಬೈಕ್‌ ಅನ್ನು ಕೊಳ್ಳುತ್ತಿದ್ದಾರೆ. ೧೯೦೩ ರಿಂದ ಹಸ್ಕ್ವರ್ನಾ ಬೈಕ್‌ಗಳನ್ನು ನಿರ್ಮಿಸಲು ಆರಂಭಿಸಿದೆ.

ಟ್ರಯಂಫ್‌ (1902): ಯುನೈಟೆಡ್‌ ಕಿಂಗ್‌ಡಂನ ಅತ್ಯಂತ ದೊಡ್ಡ ಬೈಕ್‌ ನಿರ್ಮಾಣ ಕಂಪನಿ ಈ ಟ್ರಯಂಫ್ ಮೋಟೋರ್‌ಸೈಕಲ್ಸ್‌. ೧೯೦೨ ರಲ್ಲಿ ನಿರ್ಮಾಣವಾದ ಈ ಕಂಪನಿ ಇಲ್ಲಿಯವರೆಗೆ ದ್ವಿಚಕ್ರ ವಾಹನ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿಕೊಂಡು ಬರುತ್ತಿದೆ. ಇನ್ನು ರೇಸಿಂಗ್‌ನಲ್ಲಿ ನೋಡುವುದಾದರೆ ಹಲವಾರು ದಾಖಲೆಗಳನ್ನು ಟ್ರಯಂಫ್ ಕಂಪನಿಯ ಬೈಕ್‌ಗಳು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಇಂಡಿಯನ್‌ ಮೋಟಾರ್‌ಸೈಕಲ್ಸ್‌ (1901): ಇಂಡಿಯನ್‌ ಮೋಟಾರ್‌ಸೈಕಲ್ಸ್ ಎಂಬ ಹೆಸರಿನಿಂದಾಗಿ ಇದು ಇಂಡಿಯಾದ ಮೋಟೋರ್‌ಸೈಕಲ್‌ ಬ್ರಾಂಡ್‌ ಅಲ್ಲ. ಇದೂ ಸಹ ಅಮೇರಿಕಾ ಮೂಲದ ಮೋಟಾರ್‌ಸೈಕಲ್‌ ಕಂಪನಿಯಾಗಿದ್ದು, ಸುಮಾರು ನೂರಕ್ಕೂ ಅಧಿಕ ವರ್ಷಗಳ ಇತಿಹಾಸ ಈ ಬೈಕ್‌ ಕಂಪನಿಗಿದೆ. ಭಾರತದ ಹೆದ್ದಾರಿಗಳಲ್ಲು ಆಗಾಗ ಈ ಕಂಪನಿಯ ಮೋಟಾರ್‌ಸೈಕಲ್‌ಗಳು ಕಾಣ ಸಿಗುತ್ತವೆ.

ರಾಯಲ್‌ ಎನ್‌ಫೀಲ್ಡ್‌ (1901) ಜಗತ್ತಿನ ಮೊದಲ ಮೋಟಾರ್‌ಸೈಕಲ್‌ ಕಂಪನಿ ಎಂಬ ಹೆಗ್ಗಳಿಕೆ ರಾಯಲ್‌ ಎನ್‌ಫೀಲ್ಡ್‌ ಕಂಪನಿಯದ್ದು. ಭಾರತೀಯರಿಗಂತೂ ಅತಿ ಚಿರಪರಿಚಿತವಾಗಿರುವ ಈ ಕಂಪನಿ ಮೂಲತಃ ಬ್ರಿಟೀಷ್‌ ಆದರೂ ಸದ್ಯಕ್ಕೆ ಭಾರತೀಯ ಮೂಲದ ವಾಹನ ಕಂಪನಿಯ ಒಡೆತನದಲ್ಲಿದೆ. ರಾಯಲ್‌ ಎನ್‌ಫೀಲ್ಡ್ ಕಂಪನಿಯ ಬೈಕ್‌ಗಳು ಜಾಗತಿಕವಾಗಿ ಮಾರುಕಟ್ಟೆಯನ್ನು ಹೊಂದಿದ್ದು ಬಹುತೇಕರ ನೆಚ್ಚಿನ ಬ್ರಾಂಡ್‌ ಆಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, December 3, 2023, 8:30 [IST]
English summary
Top five bike manufacturing companies which has history over 100 years
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+