ತೂಫಾನಿನಂತೆ ಬಂದು ಮೆಗಾ ಫ್ಲಾಫ್ ಆದ ಟಾಪ್ ಫೈವ್ ಎಸ್‌ಯುವಿಗಳು: ಮಾರುತಿ ಸುಜುಕಿಯದ್ದೂ ಇದೆ!
ಕಾರು ಕ್ರೇಜ್ ವಿಶ್ವದ ಯಾವುದೇ ದೇಶಗಳಿಗೆ ಹೋಲಸಿದರೂ ನಮ್ಮ ದೇಶವೇನೂ ಹಿಂದೆ ಬಿದ್ದಿಲ್ಲ. ಇತ್ತೀಚೆಗೆ ನಮ್ಮ ದೇಶದ ಮಾರುಕಟ್ಟೆಯಲ್ಲಿ ಎಸ್‌ಯುವಿ ಹವಾ ಜೋರಾಗಿದೆ. ನಮ್ಮ ದೇಶದಲ್ಲಿ ಯಶಸ್ವಿಯಾದಷ್ಟೇ, ಹಲವಾರು ಕಾರುಗಳು ಫ್ಲಾಪ್ ಸಹ ಆಗಿದೆ. ನಾವಿಂದು ಭಾರತದ ಮಾರುಕಟ್ಟೆಯಲ್ಲಿ ಫ್ಲಾಪ್ ಆದ ಟಾಪ್ ಫೈವ್ ಎಸ್‌ಯುವಿಗಳನ್ನು ನೋಡೋಣ.
ಮಹೀಂದ್ರಾ ಅಲ್ಟುರಾಸ್ ಜಿ4: ಭಾರತೀಯ ಎಸ್‌ಯುವಿ ಕಾರ್ ಸೆಗ್ಮೆಂಟ್‌ನಲ್ಲಿ ಫಾರ್ಚ್ಯೂನರ್ ಮತ್ತು ಫೋರ್ಡ್ ಎಂಡೋವರ್ ಕಾರುಗಳಿಗೆ ಪೈಪೋಟಿ ನೀಡಲು ಮಹೀಂದ್ರಾ ಕಂಪನಿಯು ಬಹು ನಿರೀಕ್ಷೆಯಿಂದ ಹೊರ ತಂದ ಕಾರು ಈ ಮಹೀಂದ್ರಾ ಅಲ್ಟುರಾಸ್ ಜಿ4. ಆದರೆ ಭಾರತೀಯರನ್ನು ಸೆಳೆಯುವಲ್ಲಿ ಈ ಕಾರು ವಿಫಲವಾಯಿತು.

ಫರ್ಸ್ಟ ಜೆನೆರೇಷನ್ ಹ್ಯುಂಡೈ ಟ್ಯುಸಾನ್: 2000 ಇಸವಿಯ ಮಧ್ಯದಲ್ಲಿ ಭಾರತದಲ್ಲಿ ಹ್ಯುಂಡೈ ಕಂಪನಿಯು ಟೆರಾಕಾನ್ ಎಸ್‌ಯುವಿಯ ಬದಲಿಯಾಗಿ ಹ್ಯುಂಡೈ ಟ್ಯುಸಾನ್ ಅನ್ನು ಬಿಡುಗಡೆಗೊಳಿಸಿತ್ತು. ಮೊದಲ ತಲೆಮಾರಿನ ಈ ಹ್ಯುಂಡೈ ಟ್ಯುಸಾನ್ ಭಾರತೀಯರನ್ನು ಆಕರ್ಷಿಸುವಲ್ಲಿ ವಿಫಲವಾಗಿ ಕೊನೆಗೆ ಹೇಳದೆ ಕೇಳದೆ ಮಾರುಕಟ್ಟೆಯಿಂದ ಕಣ್ಮರೆಯಾಯಿತು.
ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ 4×4: ಇತ್ತೀಚೆಗೆ ಬಿಡುಗಡೆಯಾಗಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿರುವ ಗ್ರ್ಯಾಂಡ್ ವಿಟಾರಾಗೆ ಒಂದು ಮರೆಯಲಾಗದ ಫ್ಲ್ಯಾಶ್‌ಬ್ಯಾಕ್ ಇದೆ. ಹಲವು ವರ್ಷಗಳ ಹಿಂದೆ 2.4-litre ಪೆಟ್ರೋಲ್ ಇಂಜಿನ್, ಫೋರ್ ವ್ಹೀಲ್ ಡ್ರೈವ್‌ನೊಂದಿಗೆ ಬಂದಿದ್ದ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ 4×4 ಭಾರತದ ಫ್ಲಾಪ್ ಎಸ್‌ಯುವಿಗಳಲ್ಲಿ ಒಂದಾಗಿದೆ.

ಶೆವೋರ್ಲೆ ಟ್ರೈಲ್‌ಬ್ಲೇಸರ್: ಕಂಪನಿಯು ಭಾರತದಿಂದ 2017 ರಲ್ಲಿ ಹೊರ ಹೋಗುವುದಕ್ಕೂ ಮುನ್ನ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ಲ್ಯಾಡರ್ ಆನ್ ಫ್ರೇಮ್ ಎಸ್‌ಯುವಿಯಾಗಿತ್ತು ಈ ಶೆವೋರ್ಲೆ ಟ್ರೈಲ್‌ಬ್ಲೇಸರ್. ಈ ಕಾರನ್ನು ಮಾರುಕಟ್ಟೆಗೆ ತಂದ ಕೆಲವೇ ಕಾಲದಲ್ಲಿ ಕಂಪನಿ ಭಾರತದಿಂದ ಹೊರಹೋಗಿದ್ದು ಈ ಎಸ್‌ಯುವಿ ಫ್ಲಾಪ್ ಆಗಲು ಕಾರಣ.
ನಿಸಾನ್ ಎಕ್ಸ್‌ಟ್ರೈಲ್: ನಿಸಾನ್ ಕಂಪನಿಯು ತನ್ನ ಜಾಗತಿಕ ಲೈನ್‌ಅಪ್ ಅನ್ನು ಭಾರತೀಯರಿಗೆ ಪರಿಚಯಿಸುವುದಕ್ಕಾಗಿ ಭಾರತದಲ್ಲಿ ಬಿಡುಗಡೆಗೊಳಿಸಿದ ಕಾರು ಈ ನಿಸಾನ್ ಎಕ್ಸ್‌ಟ್ರೈಲ್. 2.0-litre ಡೀಸೆಲ್ ಇಂಜಿನ್ ಹೊಂದಿದ್ದ ಇ ಟಾರ್ಕೀ ಮೆಷಿನ್ ಭಾರತೀಯರಿಗೆ ಇಷ್ಟವದರೂ, ಇದರ ಬೆಲೆ ಮತ್ತು ನಿರ್ವಹಣಾ ಸಮಸ್ಯೆಯಿಂದಾಗಿ ಇದು ಭಾರತೀಯರ ಮನಗೆಲ್ಲುವಲ್ಲಿ ವಿಫಲವಾಯಿತು.
ಈ ಮೇಲೆ ತಿಳಿಸಿದ ಐದು ಎಸ್‌ಯುವಿಗಳಲ್ಲದೇ ಇನ್ನೂ ಹಲವಾರು ಎಸ್‌ಯುವಿಗಳು ಭಾರತದಲ್ಲಿ ಬಿಡುಗಡೆಯಾಗಿ ಕೆಲವೇ ವರ್ಷದಲ್ಲಿ ಮರೆಯಾಗಿದೆ. ಇದರಲ್ಲಿ ಪ್ರತಿಷ್ಟಿತ ಕಾರು ತಯಾರಿಕಾ ಕಂಪನಿಗಳು ಸಹ ಇವೆ. ಇದಕ್ಕೆ ಪ್ರಮುಖ ಕಾರಣ ಭಾರತೀಯರ ಬಜೆಟ್, ಅಭಿರುಚಿ ಮತ್ತು ಅವಶ್ಯಕತೆಗಳನ್ನು ಪೂರೈಸಲು ಆಗದೇ ಇರುವುದು ಎನ್ನಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications