ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಹಾರುವ ಕಾರುಗಳಿವು

ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳಂತೆ ಹಾರುವ ಕಾರುಗಳು ಶೀಘ್ರದಲ್ಲೇ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿವೆ. ಈ ಕನಸು ನನಸಾಗುವುದು ಯಾವಾಗ ಎಂಬ ಪ್ರಶ್ನೆ ಹಲವು ದಿನಗಳಿಂದ ಜನರನ್ನು ಕಾಡುತ್ತಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಹಾರುವ ಕಾರುಗಳಿವು

ಹಾರುವ ಕಾರುಗಳು ಆಟೋ ಉತ್ಸಾಹಿಗಳಲ್ಲಿ ಹಾಗೂ ವಾಹನ ತಯಾರಕ ಕಂಪನಿಗಳಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಮೂಡಿಸಿವೆ. ಈ ಕಾರಣಕ್ಕೆ ಜನಪ್ರಿಯ ಕಂಪನಿಗಳಿಂದ ಹಿಡಿದು ಸ್ಟಾರ್ಟ್ ಅಪ್‌ ಕಂಪನಿಗಳವರೆಗೆ ಹಲವು ಕಂಪನಿಗಳು ಹಾರುವ ಕಾರುಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿವೆ. ಒಟ್ಟು ಐದು ಕಾರುಗಳು ಬಳಕೆಗೆ ಸಿದ್ದವಾಗುತ್ತಿವೆ. ಯಾವ ಕಂಪನಿಗಳು, ಹಾರುವ ಕಾರುಗಳನ್ನು ಬಿಡುಗಡೆ ಮಾಡಲಿವೆ. ಅವುಗಳ ವಿಶೇಷತೆ ಏನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಹಾರುವ ಕಾರುಗಳಿವು

ಭಾರತದಲ್ಲಿಯೂ ಸಹ ಹಾರುವ ಕಾರುಗಳು ಬಿಡುಗಡೆಯಾಗಲಿವೆ. ಪಾಲ್-ವಿ ಕಂಪನಿಯು ಭಾರತದಲ್ಲಿ ಹಾರುವ ಕಾರುಗಳನ್ನು ಬಿಡುಗಡೆಗೊಳಿಸಲಿದೆ. ಈ ಲೇಖನದಲ್ಲಿ ಆ ಕಾರಿನ ಬಗೆಗಿನ ಮಾಹಿತಿಯನ್ನು ಸಹ ನೋಡೋಣ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಹಾರುವ ಕಾರುಗಳಿವು

ಆಸ್ಟ್ರೋ ಎಲ್ರಾಯ್:

ಈ ಕಾರು ಆಟೋಮ್ಯಾಟಿಕ್ ಆಗಿ ಹಾರುತ್ತದೆ. ಈ ಹಾರುವ ಕಾರನ್ನು ಯಾವುದೇ ನಗರ ಪ್ರದೇಶಗಳಲ್ಲಿ ಬಳಸಬಹುದು. ಈ ಕಾರನ್ನು ಬಳಸಲು ಪ್ರತ್ಯೇಕ ನೆಲ ಅಥವಾ ಜಾಗದ ಅಗತ್ಯವಿಲ್ಲ. ಆಸ್ಟ್ರೋ ಎಲ್ರಾಯ್ ಗಾತ್ರದಲ್ಲಿ ಚಿಕ್ಕದಾಗಿದ್ದರೂ ಹಾರಾಟ ನಡೆಸುವ ಸಾಮರ್ಥ್ಯವನ್ನು ಹೊಂದಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಹಾರುವ ಕಾರುಗಳಿವು

ಈ ಕಾರು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಯಾವಾಗ ಎಂಬ ಖಚಿತ ಮಾಹಿತಿ ಲಭ್ಯವಾಗಿಲ್ಲ. ಕರೋನಾ ವೈರಸ್ ಹರಡುವಿಕೆಯು ಅಸ್ಟ್ರಾ ಎಲ್ರಾಯ್ ಫ್ಲೈಯಿಂಗ್ ಕಾರಿನ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ ಎಂದು ಹೇಳಲಾಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಹಾರುವ ಕಾರುಗಳಿವು

ಲಿಫ್ಟ್ ಹೆಕ್ಸಾ

ಈ ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರಿನಲ್ಲಿ ಕೇವಲ ಒಬ್ಬರು ಪ್ರಯಾಣಿಕರು ಮಾತ್ರ ಪ್ರಯಾಣಿಸಬಹುದು. ಈ ಫ್ಲೈಯಿಂಗ್ ಕಾರನ್ನು ಕಡಿಮೆ ಅಂತರದಲ್ಲಿ ಹಾರಲು ಇಷ್ಟಪಡುವವರಿಗೆ ವಿನ್ಯಾಸಗೊಳಿಸಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಹಾರುವ ಕಾರುಗಳಿವು

ಈ ಕಾರು ಅಲ್ಟ್ರಾಲೈಟ್‌ಗಳಿಂದ ಚಾಲನೆಯಾಗುತ್ತದೆ ಎಂಬುದು ವಿಶೇಷ. ಈ ಹಾರುವ ಕಾರನ್ನು ಚಾಲನೆ ಮಾಡಲು ಪೈಲಟ್ ಪರವಾನಗಿ ಪಡೆಯುವ ಅಗತ್ಯವಿಲ್ಲ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಹಾರುವ ಕಾರುಗಳಿವು

ಹೋವರ್‌ಸರ್ಫ್:

ಹೋವರ್‌ಸರ್ಫ್ ವಿಶ್ವದ ಅತ್ಯಂತ ದುಬಾರಿ ಹಾಗೂ ಅತ್ಯಾಧುನಿಕ ಕಾರುಗಳಲ್ಲಿ ಒಂದಾಗಿದ್ದು, ದುಬೈ ಪೊಲೀಸರ ಗಮನವನ್ನು ಸೆಳೆಯುತ್ತಿದೆ. ಈ ಕಾರು ಬಿಡುಗಡೆಯಾದ ನಂತರ ದುಬೈ ಪೊಲೀಸರ ಪಡೆಯಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಗಳಿವೆ. ಇದು ಇವಿಟಿಒಎಲ್ ಪ್ರಮಾಣೀಕೃತ ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರ್ ಆಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಹಾರುವ ಕಾರುಗಳಿವು

ಅಗಸ್ಟಾ ವೆಸ್ಟ್ ಲ್ಯಾಂಡ್ ಎಡಬ್ಲ್ಯು609

ಈ ಹಾರುವ ಕಾರನ್ನು ವಿಐಪಿಗಳ ಬಳಕೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಕಾರು ನೇರವಾಗಿ ಕೆಳಕ್ಕಿಳಿದು, ಮೇಲಕ್ಕೆರುತ್ತದೆ. ಈ ಕಾರು ಹೆಚ್ಚು ದೂರ ಪ್ರಯಾಣಿಸುತ್ತದೆ ಎಂದು ಹೇಳಲಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಹಾರುವ ಕಾರುಗಳಿವು

ಪಾಲ್-ವಿ

ಡಚ್ ಕಂಪನಿಯ ಈ ಫ್ಲೈಯಿಂಗ್ ಕಾರು ಶೀಘ್ರದಲ್ಲೇ ವಿಶ್ವದಾದ್ಯಂತ ಲಭ್ಯವಾಗಲಿದೆ. ಮಿಲ್ಕ್-ವಿ ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಕಾರನ್ನು ಫ್ಲೈಯಿಂಗ್ ಕಾರ್ ಅಥವಾ ರಸ್ತೆ ಕಾರ್ ಆಗಿ ಬಳಸಬಹುದು.

ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಹಾರುವ ಕಾರುಗಳಿವು

ಈ ಕಾರಿನಲ್ಲಿ ಇಬ್ಬರು ಪ್ರಯಾಣಿಕರು ಮಾತ್ರ ಸಂಚರಿಸಬಲ್ಲರು. ಮೇಲೆ ತಿಳಿಸಲಾದ ಈ ಐದು ಹಾರುವ ಕಾರುಗಳು ಶೀಘ್ರದಲ್ಲೇ ಸಾರ್ವಜನಿಕ ಬಳಕೆಗೆ ಬರಲಿವೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಹಾರುವ ಕಾರುಗಳಿವು

ಇವುಗಳಲ್ಲಿ ಕೆಲವು ಕಾರುಗಳನ್ನು ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಪಾಲ್-ವಿನಂತಹ ಹಾರುವ ಕಾರುಗಳನ್ನು ವಾಣಿಜ್ಯ ಹಾಗೂ ಸಾರ್ವಜನಿಕರ ಬಳಕೆಗಾಗಿ ಬಿಡುಗಡೆಗೊಳಿಸಲಾಗುವುದು.

Most Read Articles

Kannada
English summary
Top five flying cars which are launching soon. Read in Kannada.
Story first published: Monday, September 14, 2020, 19:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X