ಭಾರತೀಯ ಸೇನೆಯ ಅಚ್ಚುಮೆಚ್ಚಿನ ಐದು ಕಾರುಗಳಿವು: ನಿಮ್ಮ ಬಳಿಯೇನಾದರು ಇದ್ದರೆ ಯಾರಿಗೂ ಮಾರಬೇಡಿ

ಭಾರತೀಯ ಸೇನೆ (Indian Army) ಎಂದರೆ ನಮಗೆ ನೆನಪಾಗುವುದು ದೊಡ್ಡ ದೊಡ್ಡ ಟ್ಯಾಂಕರ್‌ಗಳು, ಬಲಿಷ್ಟವಾದ ಟ್ರಕ್‌ ಹಾಗೂ ಬಗೆ ಬಗೆಯ ಮಿಲಿಟರಿ ಟ್ರಕ್‌ಗಳು. ಆದರೆ ಇದೆಲ್ಲದರ ಜೊತೆಗೆ ಭಾರತೀಯ ಸೇನೆಯು ಹಲವಾರು ನಾಗರೀಕಾ ವಾಹನಗಳನ್ನು ಸಹ ಬಳಸುತ್ತಾ ಬಂದಿದೆ ಎಂದರೆ ನೀವು ನಂಬಲೇ ಬೇಕು.

ಹೌದು, ನಾಗರೀಕ ವಾಹನಗಳೆಂದರೆ ನಾಗರೀಕರು ತಮ್ಮ ಅವಶ್ಯಕತೆಗಳನ್ನು ಪೂರೈಸಲು ಬಳಸುವ ವಾಹನಗಳು. ಅದರಲ್ಲಿ ಬಲಿಷ್ಟವಾದ, ಉತ್ತಮ ಆನ್‌ರೋಡ್‌ ಮತ್ತು ಆಫ್‌ ರೋಡ್‌ ಪರ್ಫಾಮೆನ್ಸ್‌ಗಳನ್ನು ನೀಡುವಂತಹ ವಾಹನಗಳನ್ನು ಭಾರತೀಯ ಸೇನೆಯು ಬಳಸಿದೆ. ಹೀಗೆ ಬಳಸಿದ ಕೆಲವೊಂದು ಪ್ರಮುಖ ಕಾರುಗಳ ಮಾಹಿತಿಗಳನ್ನು ಲೇಖನದಲ್ಲಿ ನೋಡೋಣ.

Indian Army cars

ಹಿಂದುಸ್ಥಾನ್‌ ಅಂಬಾಸಿಡರ್: ದೇಶ ಕಂಡ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಅಂಬಾಸಿಡರ್‌ ಸಹ ಒಂದು. ಒಂದು ಕಾಲದಲ್ಲಿ ದೇಶದ ಹೆದ್ದಾರಿಗಳನ್ನು ಆಳಿದ್ದ ಕಾನ್ನು ಸಹ ಭಾರತೀಯ ಸೇನೆಯು ತಮ್ಮ ಅವಶ್ಯಕತೆಗಳನ್ನು ಪೂರೈಸಲು ಬಳಸುತ್ತಿದ್ದರು. ಕಾರು ಆಫ್‌ರೋಡ್‌ ನಲ್ಲಿ ಬಳಸಲು ಉಪಯೋಗಿಸಿಕ್ಕೊಳ್ಳಲು ಅಷ್ಟೊಂದು ಸೂಕ್ತವಾಗಿರಲಿಲ್ಲ, ಆದರೂ ಇದನ್ನು ಇತರ ಕೆಲಸಗಳಿಗಾಗಿ ಸೇನೆಯಲ್ಲಿ ಬಳಸಲಾಗುತ್ತಿತ್ತು.

ಮಾರುತಿ ಜಿಪ್ಸಿ: ಭಾರತೀಯ ಮಾರುಕಟ್ಟೆಯಲ್ಲಿ ಆಫ್‌ರೋಡ್‌ ಪ್ರೀಯರ ಅಚ್ಚುಮೆಚ್ಚಿನ ವಾಹನವಾಗಿತ್ತು ಮಾರುತಿ ಸುಜುಕಿ ಜಿಮ್ನಿ. ವಾಹನವನ್ನು ಮೊದಲಿಗೆ 1991 ರಲ್ಲಿ ಪರಿಚಯಿಸಲಾಗಿತ್ತು. ವರ್ಷಗಳು ಕಳೆದಂತೆ ಕಾರು ತನ್ನ ಜನಪ್ರಿಯತೆಯನ್ನು ಹೆಚ್ಚಿಸುತ್ತಲೇ ಹೋಯಿತು. ಲೈಟ್‌ವೈಟ್‌ ಕಾಂಪಾಕ್ಟ್‌ ಎಸ್‌ಯುವಿ ಆಗಿದ್ದ ಜಿಪ್ಸಿ, ರೋಡುಗಳಿಲ್ಲದ ಕಷ್ಟಕರ ಸ್ಥಳಗಳಲ್ಲಿಯೂ ಭಾರತೀಯ ಸೇನೆಗೆ ತನ್ನ ಸೇವೆಯನ್ನು ಒದಗಿಸುತ್ತಿತ್ತು.

Indian Army cars

ಟಾಟಾ ಸುಮೋ 4x4: ಭಾರತದ ಹೆಮ್ಮೆಯ ಕಾರು ತಯಾರಿಕಾ ಕಂಪನಿ ಟಾಟಾ ಮೋಟೋರ್ಸ್‌ನ ಟಾಟಾ ಸುಮೋ 4x4 ಸಹ ಭಾರತೀಯ ಸೇನೆಯಲ್ಲಿ ತನ್ನದೆ ಆದ ಚಾಪನ್ನು ಮೂಡಿಸಿತ್ತು. ಭಾರತೀಯ ಸೇನೆಯ ವೈದ್ಯ ವಿಭಾಗಕ್ಕೆ ಸೇವೆಯನ್ನು ಒದಗಿಸುವುದಕ್ಕಾಗಿ ಕಾರನ್ನು ವಿಶೇಷವಾಗಿ ನಿರ್ಮಿಸಲಾಗಿತ್ತು.

ಟಾಟಾ ಮೋಟೋರ್ಸ್‌ ಸಫಾರಿ ಸ್ಟೋರ್ಮ್: ಟಾಟಾ ಮೋಟಾರ್ಸ್‌ನ ಮತ್ತೊಂದು ಬಲಶಾಲಿಯಾದ ಎಸ್‌ಯುವಿ ಟಾಟಾ ಸಫಾರಿ ಸ್ಟೋರ್ಮ್. ಟಾಟಾ ಮೋಟಾರ್ಸ್‌ ಮೊದಲ ಭಾಗದಲ್ಲಿ ಸುಮಾರು 3192 ಸಫಾರಿ ಸ್ಟೋರ್ಮ್‌ಗಳನ್ನು ಪೂರೈಸಿತ್ತು. ಈಗಲೂ ಸಹ ದೇಶದ ಹಲವೆಡೆ ಸೇನೆಗೆ ಬಳಸಿದ ಸಫಾರಿ ಸ್ಟೋರ್ಮ್‌ಗಳನ್ನು ಕಾಣಬಹುದಾಗಿದೆ.

ಮಹೀಂದ್ರಾ ಸ್ಕಾರ್ಪಿಯೋ 4x4: ನಮ್ಮ ಕಾರು ಪ್ರೀಯರ ನೆಚ್ಚಿನ ಎಸ್‌ಯುವಿಗಳಲ್ಲಿ ಮಹೀಂದ್ರಾ ಸ್ಕಾರ್ಪಿಯೋ 4x4 ಸಹ ಒಂದು. ಸದ್ಯಕ್ಕೆ ಜನತೆಗೆ ಕಾರಿನ ವೇರಿಯೆಂಟ್‌ಗಳನ್ನು ಮಿತವಾಗಿ ವಿತರಿಸಲಾಗಿದ್ದು, ಭಾರತೀಯ ಸೇನೆಯು ಇತ್ತೀಚೆಗೆ ಸುಮಾರು 1470 ಮಹೀಂದ್ರಾ ಸ್ಕಾರ್ಪಿಯೋ 4x4 ಕಾರಿಗೆ ಬೇಡಿಕೆ ಇಟ್ಟಿರುವುದು ಇದರ ಜನಪ್ರಿಯತೆಯನ್ನು ಇನ್ನೂ ಹೆಚ್ಚಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, June 8, 2023, 17:28 [IST]
English summary
Top five iconic cars of indian army
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+