ಬಾಲಿವುಡ್ ನಟ ಶಾರುಖ್ ಖಾನ್ ಮಾಲೀಕತ್ವದ ಟಾಪ್ 5 ಐಷಾರಾಮಿ ಕಾರುಗಳು

ನಟ ಶಾರುಖ್ ಖಾನ್ ತಮ್ಮ ಮುಂಬರುವ 'ಪಠಾನ್' ಸಿನಿಮಾ ಮೂಲಕ ಬಾಲಿವುಡ್‌ಗೆ ಗ್ರ್ಯಾಂಡ್ ರೀ-ಎಂಟ್ರಿ ಕೊಡಲು ರೆಡಿಯಾಗುತ್ತಿದ್ದಾರೆ. ಅದರ ಬೆನ್ನಲ್ಲೇ ಪಠಾನ್ ಚಿತ್ರದ ಸುತ್ತ ವಿವಾದಗಳು ಕೂಡ ಶುರುವಾಗಿದೆ. ಸದ್ಯ ಈ ಬಗ್ಗೆ ಪರ-ವಿರೋಧ ಚರ್ಚೆಗಳು ಆಗುತ್ತಿದ್ದು, ಕೆಲವೆಡೆ ಭಾರಿ ಪ್ರತಿಭಟನೆಗಳು ನಡೆಯುತ್ತಿವೆ.

ಈ ಚಿತ್ರದ ಮೊದಲ ಹಾಡು 'ಬೇಷರಂ ರಂಗ್' ಇತ್ತೀಚೆಗೆ ರಿಲೀಸ್ ಮಾಡಲಾಯಿತು. ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ, ಚಿತ್ರದ ನಾಯಕಿ ದೀಪಿಕಾ ಪಡುಕೋಣೆ, ನಾಯಕ ನಟ ಶಾರುಖ್, ಉಡುಪಿನ ಬಣ್ಣವನ್ನು ನೋಡಿ, ಅದನ್ನು ಸರಿಪಡಿಸುವಿಕೆಗೆ ಕರೆ ನೀಡಿದ ನಂತರ, ವಿವಾದಗಳು ಆರಂಭವಾದವು. ಶಾರುಖ್ ಖಾನ್ ಬಾಲಿವುಡ್ ಚಿತ್ರರಂಗದಲ್ಲಿ ಹಲವು ದಶಕಗಳಿಂದ ಇದ್ದು, ಇತರೆ ವ್ಯಾಪಾರ ಉದ್ಯಮಗಳಲ್ಲಿ ತೊಡಗುಸಿಕೊಳ್ಳುವ ಮೂಲಕ ಅಪಾರ ಪ್ರಮಾಣದ ಸಂಪತ್ತನ್ನು ಗಳಿಸಿದ್ದಾರೆ. ಶಾರುಖ್ ಅವರಿಗೆ ಕಾರ್ ಕ್ರೇಜ್ ಸಹ ಇದ್ದು, ಅವರ ಒಡೆತನದ ಟಾಪ್ 5 ಕಾರುಗಳು ಇಲ್ಲಿವೆ.

ಬಾಲಿವುಡ್ ನಟ ಶಾರುಖ್ ಖಾನ್ ಮಾಲೀಕತ್ವದ ಟಾಪ್ 5 ಐಷಾರಾಮಿ ಕಾರುಗಳು

ರೋಲ್ಸ್ ರಾಯ್ಸ್ ಫ್ಯಾಂಟಮ್ ಡ್ರಾಪ್‌ಹೆಡ್ ಕೂಪೆ:
ಬಹುತೇಕ ಸೆಲೆಬ್ರಿಟಿಗಳು, ಉದ್ಯಮಿಗಳಿಗೆ ರೋಲ್ಸ್ ರಾಯ್ಸ್ ಕಾರುಗಳು ತಮ್ಮ ಶ್ರೀಮಂತಿಕೆಯ ಸಂಕೇತ. ಅಂತಹದರಲ್ಲಿ ಬಾಲಿವುಡ್‌ನ 'ಕಿಂಗ್ ಖಾನ್' ತನ್ನ ಗ್ಯಾರೇಜ್‌ನಲ್ಲಿ ರೋಲ್ಸ್-ರಾಯ್ಸ್ ಕಾರನ್ನು ಹೊಂದಿಲ್ಲದಿದ್ದರೆ ಅದು ಅವರಿಗೆ ಒಂದು ರೀತಿಯ ಹಿನ್ನಡೆಯೇ ಸರಿ. ಆದರೆ, ಶಾರುಖ್ ಖಾನ್ ಐಷಾರಾಮಿ ರೋಲ್ಸ್ ರಾಯ್ಸ್ ಫ್ಯಾಂಟಮ್ ಡ್ರಾಪ್‌ಹೆಡ್ ಕೂಪ್ ಅನ್ನು ಖರೀದಿ ಮಾಡಿದ್ದಾರೆ. ಇದಲ್ಲದೆ, ಈ ಕಾರಿನಲ್ಲೇ ಪ್ರಯಾಣಿಸುವ ಮೂಲಕ ಹಲವು ಬಾರಿ ಕಾಣಿಸಿಕೊಂಡಿದ್ದಾರೆ.

ಎಂಜಿನ್ ಸಾಮರ್ಥ್ಯದ ಬಗ್ಗೆ ಹೇಳುವುದಾದರೇ ರೋಲ್ಸ್ ರಾಯ್ಸ್ ಫ್ಯಾಂಟಮ್ ಡ್ರಾಪ್‌ಹೆಡ್ ಕೂಪೆ 6.75-ಲೀಟರ್, ಟ್ವಿನ್-ಟರ್ಬೊ, V12 ಎಂಜಿನ್ ಅನ್ನು ಹೊಂದಿದ್ದು, 462 bhp ಗರಿಷ್ಠ ಪವರ್ ಮತ್ತು 750Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದಲ್ಲದೆ, ಈ ಫ್ಯಾಂಟಮ್ ಡ್ರಾಪ್‌ಹೆಡ್ ಕೂಪೆ ಪವರ್ ಯುನಿಟ್‌ನಿಂದ ಶಕ್ತಿ ಮತ್ತು ಟಾರ್ಕ್ ಅನ್ನು 8-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಮೂಲಕ ರೇರ್ ವೀಲ್ ಗಳಿಗೆ ವರ್ಗಾಯಿಸುತ್ತದೆ.

ಬಾಲಿವುಡ್ ನಟ ಶಾರುಖ್ ಖಾನ್ ಮಾಲೀಕತ್ವದ ಟಾಪ್ 5 ಐಷಾರಾಮಿ ಕಾರುಗಳು

ಬೆಂಟ್ಲಿ ಕಾಂಟಿನೆಂಟಲ್ ಜಿಟಿ:
ಶಾರುಖ್ ಖಾನ್ ಪ್ರಸಿದ್ಧ ಬ್ರಿಟಿಷ್ ಕಾರು ತಯಾರಕ ಕಂಪನಿ ಬೆಂಟ್ಲಿಯ ಕಾಂಟಿನೆಂಟಲ್ ಜಿಟಿಯನ್ನು ಹೊಂದಿದ್ದಾರೆ. ಇದೊಂದು ಐಷಾರಾಮಿ ಕಾರು ಆಗಿದ್ದು, ಆಗಾಗ್ಗೆ ಮುಂಬೈ ರಸ್ತೆಗಳನ್ನು ಸಂಚರಿಸುವಾಗ ಇದರಲ್ಲಿ ಶಾರುಖ್ ಕಾಣಿಸಿಕೊಂಡಿದ್ದರು. ಬೆಂಟ್ಲಿ ಕಾಂಟಿನೆಂಟಲ್ GTಯ ಇತ್ತೀಚಿನ ವೆರಿಯಂಟ್ 4.0-ಲೀಟರ್, ಟ್ವಿನ್-ಟರ್ಬೊ, V8 ಎಂಜಿನ್‌ನಿಂದ 542 bhp ಗರಿಷ್ಠ ಪವರ್ ಮತ್ತು 770 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಮೂಲಕ ಎಲ್ಲಾ ನಾಲ್ಕು ಚಕ್ರಗಳಿಗೆ ಪವರ್ ಅನ್ನು ವರ್ಗಾಯಿಸುತ್ತದೆ.

BMW 7 ಸೀರಿಯಸ್:
ಬಹುತೇಕ ಸೆಲೆಬ್ರಿಟಿಗಳು ಈ ಕಾರನ್ನು ಹೊಂದಿರುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ಅಧಿಕೃತ ಕಾರಾಗಿ BMW 7 ಸೀರಿಯಸ್ ಅನ್ನು ಬಳಸುತ್ತಿದ್ದರು. ಶಾರುಖ್ ಸಹ BMW 7 ಸೀರಿಯಸ್ ಕಾರನ್ನು ಹೊಂದಿದ್ದಾರೆ. ಹಲವು ಬಾರಿ ವಿಮಾನಗಳಲ್ಲಿ ಕಾಣಿಸಿಕೊಂಡಿದ್ದರು. ಈ BMW 760 Li 6.0-ಲೀಟರ್, ಟ್ವಿನ್-ಟರ್ಬೊ, V12 ಎಂಜಿನ್‌ನಿಂದ 550 bhp ಪವರ್ ಮತ್ತು 750Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಪವರ್ ಯುನಿಟ್‌ನಿಂದ ಪವರ್ ಮತ್ತು ಟಾರ್ಕ್ ಅನ್ನು 8-ಸ್ಪೀಡ್ ಅಟೋಮೆಟಿಕ್ ಗೇರ್‌ಬಾಕ್ಸ್ ಮೂಲಕ ರೇರ್ ವೀಲ್ ಗಳಿಗೆ ವರ್ಗಾಯಿಸುತ್ತದೆ.

ಬಾಲಿವುಡ್ ನಟ ಶಾರುಖ್ ಖಾನ್ ಮಾಲೀಕತ್ವದ ಟಾಪ್ 5 ಐಷಾರಾಮಿ ಕಾರುಗಳು

ಟೊಯೊಟಾ ಲ್ಯಾಂಡ್ ಕ್ರೂಸರ್:
ನಟ ಶಾರುಖ್ ಖಾನ್ ಬಳಿ ಟೊಯೊಟಾ ಲ್ಯಾಂಡ್ ಕ್ರೂಸರ್ ಸಹ ಇದೆ. ಇದೊಂದು ಆಫ್-ರೋಡ್ ಎಸ್‌ಯುವಿ ಆಗಿದೆ. ಲ್ಯಾಂಡ್ ಕ್ರೂಸರ್ ಮಿಲಿಟರಿ ಟ್ಯಾಂಕ್‌ಗಳಿಗೆ ಪ್ರತಿಸ್ಪರ್ಧಿಯಾಗುವ ಖ್ಯಾತಿಯೊಂದಿಗೆ ಮಾರುಕಟ್ಟೆಗೆ ಬಂದವು. ಈ ಎಸ್‌ಯುವಿ ಅತ್ಯುತ್ತಮ ರೈಡ್ ಗುಣಮಟ್ಟದೊಂದಿಗೆ ಬರುತ್ತಿದ್ದು, ಆಕರ್ಷಕ ವೈಶಿಷ್ಟ್ಯಗಳುನ್ನು ಹೊಂದಿದೆ. ಈ ಕ್ರೂಸರ್, 4.5-ಲೀಟರ್, V8. ಡೀಸೆಲ್ ಎಂಜಿನ್ ಅನ್ನು ಹೊಂದಿದ್ದು, ಇದು 283 bhp ಗರಿಷ್ಠ ಪವರ್ ಮತ್ತು 650 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 4WD ಡ್ರೈವ್‌ಟ್ರೇನ್‌ನೊಂದಿಗೆ ಖರೀದಿಗೆ ಲಭ್ಯವಿದೆ.

Audi A8 L:
ಜರ್ಮನ್ ವಾಹನ ತಯಾರಕರ ಪ್ರಮುಖ ಐಷಾರಾಮಿ ಸೆಡಾನ್ Audi A8 L ಆಗಿದೆ. ಇತರೆ Audi ಕಾರುಗಳಂತೆ, A8 L ಪ್ರೀಮಿಯಂ ಐಷಾರಾಮಿ ಸೆಡಾನ್ ತುಂಬಾ ಆಕರ್ಷಕ ಲುಕ್ ಹಾಗೂ ವೈಶಿಷ್ಠ್ಯಗಳನ್ನು ಹೊಂದಿದ್ದು, ಈ ಕಾರು 4.2-ಲೀಟರ್, ಟರ್ಬೋಚಾರ್ಜ್ಡ್, V8 ಪವರ್‌ಟ್ರೇನ್ ಜೊತೆಗೆ 381 bhp ಗರಿಷ್ಠ ಪವರ್ ಮತ್ತು 850 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ, 7-ಸ್ಪೀಡ್ DCT ಗೇರ್‌ಬಾಕ್ಸ್ ಮೂಲಕ ಎಲ್ಲಾ ನಾಲ್ಕು ವೀಲ್ ಗಳಿಗೆ ಶಕ್ತಿಯನ್ನು ವರ್ಗಾಯಿಸುತ್ತದೆ. ಶಾರುಖ್ ಅವರ ಮನೆ ಬಳಿ ಕೆಲವು ಬಾರಿ ಈ ಕಾರನ್ನು ಬಳಸುತ್ತಿರುವುದು ಕಂಡುಬಂದಿದೆ.

ಹ್ಯುಂಡೈ ಕಂಪನಿ ಹಾಗೂ ಶಾರುಖ್ ಖಾನ್ ಅವರ ಸಂಬಂಧ 1998ರಲ್ಲಿ ಪ್ರಾರಂಭವಾಯಿತು ಎಂದು ಹೇಳಬಹುದು. ಅಂದಿನಿಂದ ಅವರು, ಕೆಲವು ಹ್ಯುಂಡೈ ಕಾರುಗಳನ್ನು ತಮ್ಮ ಗ್ಯಾರೇಜ್ ನಲ್ಲಿ ಹೊಂದಿದ್ದಾರೆ. ವಾಸ್ತವವಾಗಿ, ಶಾರುಖ್ ಖಾನ್ ದೇಶದಲ್ಲಿ ಮೊಟ್ಟ ಮೊದಲ 2020 ಹ್ಯುಂಡೈ ಕ್ರೆಟಾ SUV ಅನ್ನು ಹೊಂದಿದ್ದಾರೆ. ಅವರು, ಈ ಕಾರನ್ನು ಹುಂಡೈನಿಂದ ಉಡುಗೊರೆಯಾಗಿ ಸ್ವೀಕರಿಸಿದ್ದರು. ಅದಕ್ಕಿಂತ ಹೆಚ್ಚಾಗಿ, ಶಾರುಖ್ ಖಾನ್ ಮೊದಲ ತಲೆಮಾರಿನ ಹ್ಯುಂಡೈ ಸ್ಯಾಂಟ್ರೋ ಹ್ಯಾಚ್‌ಬ್ಯಾಕ್ ಮಾಲೀಕರಾಗಿದ್ದಾರೆ.

More from DriveSpark

Article Published On: Friday, December 16, 2022, 10:12 [IST]
English summary
Top five luxury cars owned by bollywood actor shahrukh khan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+