ಈ ಐದು ಕಾರಣಗಳಿಂದಲೇ ಮಾರುತಿ ಸುಜುಕಿಯ ಈ ಕಾರು ಭಾರತೀಯರ ಹಾಟ್ ಫೇವರೀಟ್ ಆಗಿದ್ದು
ಮಾರುತಿ ಸುಜುಕಿ ಕಾರುಗಳೆಂದರೆ ನಾವು ಭಾರತೀಯರಿಗೆ ಅದೇನೋ ತುಂಬಾ ಪ್ರೀತಿ. ಇದಕ್ಕೆ ಕಾರಣ ಮಾರುತಿ ಸುಜುಕಿ ಕಂಪನಿಯ ಸರ್ವೀಸ್ ನೆಟ್‌ವರ್ಕ್ ಮತ್ತು ಗ್ರಾಹಕರ ಅಭಿರುಚಿಗೆ ತಕ್ಕಂತೆ ಕಾರುಗಳನ್ನು ತಯಾರಿಸಿ ಅದನ್ನು ಜನ ಸಾಮಾನ್ಯರ ಬಜೆಟ್ ಮೀರದಂತೆ ಬಿಡುಗಡೆ ಮಾಡುವುದು ಎಂದರೆ ತಪ್ಪಾಗಲಾರದು.
ಅದೇ ರೀತಿ ಮಾರುಕಟ್ಟೆಗೆ ಬಂದು ಬಿಡುಗಡೆಯಾಗಿ ಹಲವಾರು ವರ್ಷಗಳು ಕಳೆದರೂ ಇಂದಿಗೂ ಭಾರತದ ಒಂದಷ್ಟು ವರ್ಗ ಜನರ ಮಾರುತಿ ಸುಜುಕಿ ಫೇವರೀಟ್ ಕಾರು ಎಂದರೆ ಅದು ಮಾರುತಿ ಸುಜುಕಿ ಬಲೇನೋ (Maruti Suzuki Baleno). ಈ ಕಾರು ಭಾರತದಲ್ಲಿ ಇಷ್ಟೊಂದು ಜನಪ್ರಿಯತೆ ಗಳಿಸಲು ಇರುವ ಪ್ರಮುಖ 5 ಕಾರಣಗಳನ್ನು ನಾವಿಲ್ಲಿ ತಿಳಿಸುತ್ತಿದ್ದೇವೆ.

ಡಿಸೈನ್: ಮಾರುತಿ ಸುಜುಕಿಯು ಬಲೇನೋವನ್ನು ಅತ್ಯಾಕರ್ಷಕ ರೀತಿಯಲ್ಲಿ ವಿನ್ಯಾಸಗೊಳಿಸಿದೆ. ಹೌದು, ಮಾರುತಿ ಸುಜುಕಿಯು ಬಲೇನೋ ಹೆದ್ದಾರಿಯಲ್ಲಿ ಹೋಗುತ್ತಿದ್ದರೆ ಯಾರೇ ಆದರೂ ಒಮ್ಮೆ ತಿರುಗಿ ನೋಡುತ್ತಾರೆ. ಏರೋಡೈನಾಮಿಕ್, ನೀಟಾದ ಬಾಡಿ ಲೈನ್ಸ್‌ನೊಂದಿಗೆ ಸ್ಲೀಕ್ ಡಿಸೈನ್, ಎಲ್‌ಇಡಿ ಡಿಆರ್‌ಎಲ್, ಈ ಕಾರಿನ ಹೊರಾಂಗಣ ವಿನ್ಯಾಸದಲ್ಲಿರುವುದು ಇದಕ್ಕೆ ಕಾರಣ. 2022 ರ ನಂತರ ಕಂಪನಿಯು ಬಲೇನೋ ಕಾರಿಗೆ ಮತ್ತಷ್ಟು ಡಿಸೈನ್‌ಗಳನ್ನು ಸೇರಿಸಿ ಇದಕ್ಕೆ ಮತ್ತಷ್ಟು ಪ್ರೀಮಿಯಂ ಟಚ್ ನೀಡಿದೆ.
ಇಂಟೀರಿಯರ್: ಮಾರುತಿ ಸುಜುಕಿ ಬಲೇನೋ ಭಾರತೀಯರ ಜನಮಾನಸದಲ್ಲಿ ನೆಲೆಯೂರಲು ಇದರ ಒಳಾಂಗಣ ವಿನ್ಯಾಸವೂ ಸಹ ಒಂದು ಕಾರಣ. ಈ ಕಾರಿನಲ್ಲಿ 5 ಮಂದಿ ಆರಾಮವಾಗಿ ಪ್ರಯಾಣ ಮಾಡಬಹುದಾಗಿದೆ. ಇದರಲ್ಲಿ ಉತ್ತಮ ಕುಷನ್ ಇರುವ ಸೀಟುಗಳು, ಹಿಂಬದಿ ಪ್ರಯಾಣಿಕರಿಗೆ ಕಾಲಿಡಲು ಸಾಕಷ್ಟು ಸ್ಥಳಾವಕಾಶ, ಹೆಡ್‌ರೂಮ್ ಮತ್ತು ಪ್ರೀಮಿಯಂ ಇಂಟೀರಿಯರ್ ಡಿಸೈನ್ ಈ ಕಾರಿನ ಹೈಲೈಟ್.
ಫೀಚರ್‌ಗಳು: ಮಾರತಿ ಸುಜುಕಿ ಬಲೇನೋ, ಭಾರತೀಯರ ಫೇವರಿಟ್ ಕಾರಾಗುವಲ್ಲಿ ಈ ಕಾರಿನ ಫೀಚರ್‌ಗಳು ಸಹ ಒಂದು ಕಾರಣ. ಇತ್ತೀಚೆಗೆ ಬಲೇನೋದಲ್ಲಿ ಹೊಸ ಹೊಸ ಫೀಚರ್‌ಗಳಾದ 9 ಇಂಚ್‌ಗಳ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ವೈರ್‌ಲೆಸ್ ಆಂಡ್ರ್ಯಾಯ್ಡ್ ಆಟೋ ಮತ್ತು ಅ್ಯಪಲ್ ಕಾರ್‌ಪ್ಲೇ, ಹೆಡ್‌ಅಪ್ ಡಿಸ್ಪ್ಲೇ ಮುಂತಾದ ಅತ್ಯಾಧುನಿಕ ಫೀಚರ್‌ಗಳಿವೆ.
ಉತ್ತಮ ಮೈಲೇಜ್: ಇದು ಮಾರುತಿ ಸುಜುಕಿ ಬಲೇನೋ ಕಾರನ್ನು ಇದೇ ಸೆಗ್ಮೆಂಟ್‌ನ ಇತರ ಕಾರುಗಳಿಗಿಂತ ಒಂದು ಹೆಜ್ಜೆ ಮುಂದೆ ನಿಲ್ಲುವಂತೆ ಮಾಡುವ ವಿಷಯ. ವರದಿಗಳ ಪ್ರಕಾರ ಬಲೇನೋ ಕಾರು ಪ್ರತಿ ಲೀಟರ್‌ಗೆ ಮ್ಯಾನುವಲ್ ಟ್ರಾನ್ಸಮಿಷನ್‌ನಿಂದ 22 ಕಿಮೀ ಮತ್ತು ಎಎಂಟಿ ಟ್ರಾನ್ಸ್ಮಿಷನ್‌ನಲ್ಲಿ ಸುಮಾರು 23 ಕಿಮೀ ಮೈಲೇಜ್ ನೀಡುತ್ತದೆ. ಇದರಲ್ಲಿ ಸಿಎನ್‌ಜಿ ಆವೃತ್ತಿಯೂ ಸಹ ಲಭ್ಯವಿದೆ.
ಬೆಲೆ: ಮಾರುತಿ ಸುಜಿಕಿ ಬಲೇನೋ ಕಾರು ಪ್ರೀಮಿಯಂ ಫೇವರ್‌ಗಳೊಂದಿಗೆ ಬರುವ ಬಜೆಟ್ ಫ್ರೆಂಡ್ಲೀ ಕಾರು. ಹಲವು ಸೇಫ್ಟೀ ಫೀಚರ್‌ಗಳೊಂದಿಗೆ ಬರುವ ಈ ಕಾರು ತನ್ನ ಸೆಗ್ಮೆಂಟ್‌ನಲ್ಲಿ 6 ಏರ್‌ಬ್ಯಾಗ್‌ಗಳನ್ನು ನೀಡುತ್ತಿದೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆಯು 6.61 ಲಕ್ಷದಿಂದ 9.88 ಲಕ್ಷ ರೂಗಳಲ್ಲಿ ಲಭ್ಯವಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications