ಹೊಸ ಟೈರ್‌ ಕೊಳ್ಳುವಾಗ ಈ ಅಂಶಗಳನ್ನು ಗಮನಿಸಿದ್ದೀರ?: ಟಾಪ್‌ ಫೈವ್‌ ಟಿಪ್ಸ್‌

ಪ್ರತಿಯೊಬ್ಬರಿಗೂ ತಮ್ಮ ವಾಹನಗಳಿಗೆ ಸರಿ ಹೊಂದುವ ಟೈರ್‌ಗಳನ್ನು ಆಯ್ಕೆ ಮಾಡುವುದು ಕೊಂಚ ಕಷ್ಟದ ಸಂಗತಿಯೇ ಸರಿ. ಅದು ಕಾರ್‌ ಆಗಿರಬಹುದು ಅಥವಾ ಬೈಕ್‌ ಇರಬಹುದು. ಇಂದಿನ ಈ ಲೇಖನದಲ್ಲಿ ನಮ್ಮ ವಾಹನಗಳಿಗೆ ಸರಿಯಾದ ಟೈರ್‌ಗಳನ್ನು ಹೇಗೆ ಆಯ್ಕೆ ಮಾಡಲು ಟಾಪ್‌ ಫೈವ್‌ ಟಿಪ್ಸ್‌ಗಳನ್ನು ನೋಡೋಣ.

ವಾಹನದ ಅಗತ್ಯವನ್ನು ಅರಿತುಕೊಳ್ಳಿ: ವಾಹನ ಮ್ಯಾನುಫಾಕ್ಚರಿಂಗ್‌ ಕಂಪನಿಗಳು ಆಯಾ ವಾಹನದ ಅಗತ್ಯತೆಗಳನ್ನು ಅರಿತುಕೊಳ್ಳಿ. ಆ ವಾಹನದ ಸೈಜ್‌, ಲೋಡಿಂಗ್‌ ಕ್ಯೆಪಾಸಿಟಿ, ಸ್ಪೀಡ್ ರೇಟಿಂಗ್‌ ಹಾಗೂ ಇತರ ವಿಷಯಗಳನ್ನು ಕಂಪನಿಯು ನೀಡಿರುತ್ತಾರೆ. ಇದೆಲ್ಲವನ್ನು ಅರಿತುಕೊಂಡು ಅದಕ್ಕೆ ಸೂಕ್ತವಾದ ರೀತಿಯಲ್ಲಿ ವಾಹನಗಳಿಗೆ ಟೈರ್‌ಗಳನ್ನು ಆಯ್ಕೆಮಾಡಿ.

Top Five Tips For New Tyre Buyers

ನಿಮ್ಮ ಡ್ರೈವಿಂಗ್‌ ಕಂಡೀಷನ್‌ಗಳನ್ನು ಗಮನಿಸಿ: ಪ್ರತಿಯೊಬ್ಬರೂ ತಮ್ಮ ವಾಹನಗಳಿಗೆ ಬೇಕಾದ ಟೈರ್‌ಗಳನ್ನು ಆಯ್ಕೆಮಾಡುವ ಮೊದಲು ತಮ್ಮ ಡ್ರೈವಿಂಗ್‌ ಕಂಡೀಷನ್‌ ಅನ್ನು ಅವಲೋಕಿಸಬೇಕು. ವಾಹನವನ್ನು ಎಲ್ಲಿ ಓಡಿಸಬೇಕು, ಆಫ್‌ರೋಡ್‌ ಅಥವಾ ಆನ್‌ ರೋಡ್‌. ಹೈವೈ ಅಥವಾ ಸಣ್ಣ ದಾರಿಗಳು. ಹೀಗೆ ಇವೆಲ್ಲವನ್ನೂ ಅವಲೋಕಿಸಿ ಅದಕ್ಕೆ ತಕ್ಕದಾದ ರೀತಿಯ ಟೈರ್‌ಗಳನ್ನು ಆಯ್ಕೆ ಮಾಡಬೇಕು.

ಟೈರ್‌ ಪರ್ಫಾಮೆನ್ಸ್‌ ಗಮನಿಸಿ: ನಿಮ್ಮ ಟೈರ್‌ ಯಾವ ರೀತಿ ಪರ್ಫಾಮೆನ್ಸ್‌ ನೀಡಬೇಕು ಎಂಬುದನ್ನು ತೀರ್ಮಾನಿಸಿ. ನೀವು ಸ್ಮೂತ್‌ ಮತ್ತು ಶಾಂತವಾದ ರೀತಿ ಡ್ರೈವ್‌ ಮಾಡುವವರಾಗಿದ್ದರೆ ಅದಕ್ಕೆ ತಕ್ಕದಾದ ಟೈರ್‌ ಸಿಗುತ್ತದೆ. ಸ್ಪೋರ್ಟಿ ಅಥವಾ ಹೈವೇಯಲ್ಲಿ ರೈಡ್‌ ಮಾಡುವವರಿಗೆ ಬೇರೆಯದೇ ಟೈರ್‌ ಇದೆ. ಇನ್ನು ಇದರಲ್ಲಿ ಬ್ರೇಕಿಂಗ್‌, ಮೈಲೇಜ್‌ ಮುಂತಾದ ವಿಷಯಗಳೂ ಒಳಗಾಗುತ್ತವೆ.

Top Five Tips For New Tyre Buyers

ನಿಮ್ಮ ಬಜೆಟ್‌ ಆಯ್ಕೆಮಾಡಿ: ಟೈರ್‌ ಕೊಳ್ಳುವಾಗ ಗಮನಿಸಬೇಕಾದ ಮುಖ್ಯ ಅಂಶದಲ್ಲಿ ಇದೂ ಒಂದು. ನೀವು ಟೈರ್‌ಗಳನ್ನು ಕೊಳ್ಳುವಾಗ ನಿಮ್ಮ ಬಜೆಟ್‌ ಅನ್ನು ಗಮನದಲ್ಲಿರಿಸಿಕೊಳ್ಳಿ. ಕಮ್ಮಿ ಬಜೆಟ್‌ ಇದ್ದರೆ ಕಡಿಮೆ ಬೆಲೆಗೆ ಒಳ್ಳೆಯ ಕ್ವಾಲಿಟಿ ಮತ್ತು ಬಾಳಿಕೆ ನೀಡುವ ಟೈರ್‌ ಬ್ರ್ಯಾಂಡ್‌ಗಳು ನಮ್ಮ ನಡುವೆ ಇವೆ.

ರಿವ್ಯೂವ್‌ ಮತ್ತು ಪ್ರೊಫೆಷನಲ್‌ಗಳ ಸಲಹೆ ಪಡೆದುಕೊಳ್ಳಿ: ಮೇಲಿನ ಅಂಶವನ್ನೆಲ್ಲಾ ಗಮನಿಸಿದ ಮೇಲೆ ನೀವು ತೆಗೆದುಕೊಳ್ಳುವ ಟೈರನ್ನು ಆಯ್ಕೆ ಮಾಡಿದ ಮೇಲೆ ಅದರ ಕುರಿತಾಗಿನ ರಿವ್ಯೂವ್‌ಗಳನ್ನು ಓದಿ. ಆಗ ನಿಮಗೆ ಆ ಟೈರ್‌ನ ಒಂದು ಸಂಪೂರ್ಣ ಚಿತ್ರಣ ದೊರಕುತ್ತದೆ. ಇನ್ನು ಈ ಕುರಿತಾಗಿ ಎಕ್ಸ್‌ಪರ್ಟ್‌ಗಳನ್ನು ಕೇಳಿದರೂ ಸಾಕು.

ಟೈರ್‌ನ ರೆಗ್ಯುಲರ್‌ ನಿರ್ವಹಣೆ, ಸರಿಯಾದ ಅಲೈನ್‌ಮೆಂಟ್‌ಗಳನ್ನು ಮಾಡುವುದರಿಂದ ಟೈರ್‌ನ ಬಾಳಿಕೆಯನ್ನು ಹೆಚ್ಚಿಸಬಹುದಾಗಿದೆ. ಈ ಮೇಲಿನ ಅಂಶವನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಜೊತೆಗೆ ನಿಮ್ಮ ರಿಸರ್ಚನ್ನೂ ಸೇರಿಸಿಕೊಂಡು ಯಾವ ಟೈರ್‌ ಸೂಕ್ತ ಕುರಿತಾಗಿ ಉತ್ತಮ ತೀರ್ಮಾನವನ್ನು ತೆಗೆದುಕೊಳ್ಳಬಹುದಾಗಿದೆ. ನಿಮ್ಮ ಸುರಕ್ಷೆ, ಅಗತ್ಯತೆ, ಬಾಳಿಕೆ, ಬಜೆಟ್‌ ಹೀಗೆ ಹತ್ತು ಹಲವಾರು ವಿಷಯಗಳು ನಿಮ್ಮ ಟೈರ್‌ ಆಯ್ಕೆಯಲ್ಲಿರುತ್ತದೆ ಎಂಬುದನ್ನು ಮರೆಯುವ ಹಾಗಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, June 19, 2023, 16:00 [IST]
English summary
Top five tips for new tyre buyers
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+