ರೈನ್‌ ಕೋಟ್‌ ಕೊಳ್ಳುವಾಗ ಈ 5 ಅಂಶಗಳಿಲ್ಲದಿದ್ದರೆ ಅದನ್ನು ತೆಗೆದುಕೊಳ್ಳಲೇ ಬೇಡಿ: ಟಾಪ್‌ 5 ಟಿಪ್ಸ್‌

ಮಳೆಗಾಲ ಬಂತೆಂದರೆ ಸಾಕು ಹಲವರು ತಮ್ಮ ತಮ್ಮ ಸಿದ್ದತೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಅದರಲ್ಲಿ ಬೈಕರ್‌ಗಳೂ ಸಹ ಒಂದು ಗುಂಪು. ಮಳೆಗಾಲ ಪ್ರಾರಂಭವಾದರೆ ಬೈಕ್ ಸವಾರರು ಮಾಡುವ ಮೊದಲ ಕೆಲಸ ಏನೆಂದರೆ ಹೋಗಿ ಒಂದು ರೈನ್‌ ಕೊಟ್‌ (Rain Coat) ತೆಗೆದುಕೊಳ್ಳುವುದು. ರೈನ್‌ ಕೊಟನ್ನು ಕೊಳ್ಳುವಾಗ ಹೇಗೆ ಸರಿಯಾಗಿ ಆಯ್ಕೆಮಾಡುವುದು ಎಂದು ನೋಡೋಣ.

1. ವಾಟರ್‌ ಪ್ರೂಫ್‌ ಮೆಟಿರಿಯಲ್‌: ನಾವು ರೈನ್‌ ಕೊಟನ್ನು ಕೊಳ್ಳುವಾಗ ಮೊದಲಿಗೆ ನೋಡಬೇಕಾದ ಅಂಶವೆದರೆ ಅದು ರೈನ್‌ ಕೋಟ್ ಯಾವುದರಿಂದ ತಯಾರಿಸಲ್ಟಟ್ಟಿದೆ ಎಂದು. ನಾವು ತೆಗೆದುಕೊಳ್ಳುವ ಕೋಟ್‌ ಸಾಮಾನ್ಯ ಕಳಪೆ ಪ್ಲಾಸ್ಟಿಕ್‌ ಗಿಂತ ಉತ್ತಮ ವಸ್ತುವಿನಿಂದ ತಯಾರಾದರೆ ಅದು ಮಳೆ ನೀರನ್ನು ಒಳಗೆ ಬಾರದಂತಡ ತಡೆಯುತ್ತವೆ.

Top Five Tips To Buy Rain Coat In Monsoon

2. ಫಿಟ್‌ ಮತ್ತು ಸೈಜ್‌: ರೈನ್‌ ಕೋಟ್‌ ತೆದುಕೊಳ್ಳುವಾಗ ಗಮನಿಸಬೇಕಾದ ಮತ್ತೊಂದು ಪ್ರಮುಖವಾದ ಅಂಶವೆಂದರೆ ಅದು ರೈನ್‌ ಕೊಟಿನ ಫಿಟ್‌ ಮತ್ತು ಸೈಜ್‌. ಕೆಲವರು ಆನ್‌ ಲೈನ್‌ ನಲ್ಲಿ ಆರ್ಡರ್‌ ಮಾಡುವಾಗ ಗಲಿಬಿಲಿಗೊಂಡು ಯಾವುದೋ ಸೈಜ್‌ನ ರೈನ್‌ ಕೋಟನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಿಂದ ಮಳೆ ನೀರು ಕೋಟ್‌ನ ಒಳಗೆ ಬರುವ ಸಾಧ್ಯತೆ ಇರುತ್ತದೆ.

3. ವಿಸಿಬಲಿಟಿ: ಒಂದು ರೈನ್‌ ಕೊಟ್‌ ಕೊಳ್ಳುವಾಗ ಅದರ ವಿಸಿಬಲಿಟಿ ಸಹ ಅಷ್ಟೇ ಮುಖ್ಯ. ಇದಕ್ಕೆ ಕಾರಣವೇನೆಂದರೆ ರಾತ್ರಿಯಲ್ಲಿ ನಾವು ಸಂಚರಿಸುವಾಗ ಅದು ಹಿಂದೆ ಅಥವಾ ಮುಂದೆ ಬರುವ ವಾಹನ ಸವಾರರಿಗೆ ಎಷ್ಟರ ಮಟ್ಟಿಗೆ ಕಾಣುತ್ತದೆ ಎಂಬುದು. ಇದಕ್ಕಾಗಿ ರಿಫ್ಲೆಕ್ಟಾರ್‌ಗಳು ಇರುವ ಕೋಟನ್ನು ಕೊಳ್ಳುವುದು ಒಳ್ಳೆಯದು.

Top Five Tips To Buy Rain Coat In Monsoon

4. ಪಾಕೆಟ್‌ಗಳು: ರೈನ್‌ ಕೋಟ್‌ನಲ್ಲಿ (Rain Coat) ಪಾಕೆಟ್‌ಗಳು ತುಂಬಾ ಮುಖ್ಯ. ಮಳೆಗಾಲದಲ್ಲಿ ಬೈಕ್‌ನಲ್ಲಿ ಹೋಗುವಾಗ ಪಾಕೆಟ್‌ಗಳಲ್ಲಿ ನಮಗೆ ಬೇಕಾದ ವಸ್ತುಗಳು ನೆನೆಯದಂತೆ ಕೊಂಡೊಯ್ಯಲು ಸಾಧ್ಯ. ಹಾಗಾಗಿ ರೈನ್‌ ಕೋಟ್‌ ಕೊಳ್ಳುವಾಗ ಪಾಕೆಟ್‌ಗಳು ಇಲ್ಲದೇ ಇರುವುದನ್ನು ತೆಗೆದುಕೊಂಡರೆ ಪರದಾಡಬೇಕಾಗುತ್ತದೆ ಎಂಬುದು ಮತ್ತೊಮ್ಮೆ ಇಲ್ಲಿ ಹೇಳಬೇಕಾಗಿಲ್ಲ.

5. ಬಾಳಿಕೆ: ರೈನ್‌ ಕೋಟ್‌ ಕೊಳ್ಳುವಾಗ ಉತ್ತಮ ಗುಣ ಮಟ್ಟದ ರೈನ್‌ ಕೋಟನ್ನು ನೊಡಿ ಆರಿಸಿಕೊಳ್ಳಬೇಕು. ಕಡಿಮೆ ಬೆಲೆಯಲ್ಲೂ ಒಳ್ಳೆಯ ಗುಣಮಟ್ಟದ ಬಾಳಿಕೆ ಬರುವಂತಹ ರೈನ್ ಕೋಟ್‌ಗಳು ಸಹ ಇರುತ್ತವೆ. ನಾವು ಆಯ್ಕೆ ಮಾಡಿಕೊಳ್ಳುವಾಗ ಅದನ್ನು ಸರಿಯಾಗಿ ನೊಡಿ ಆಯ್ಕೆ ಮಾಡಿಕೊಳ್ಳಬೇಕು.

ಇವು ನಾವೊಂದು ರೈನ್‌ ಕೊಟ್‌ ಕೊಳ್ಳುವಾಗ ಗಮನಿಸಬೇಕಾದ ಪ್ರಮುಖ ಅಂಶಗಳು. ಇನ್ನು ಒವು ಮಾತ್ರವಲ್ಲದೇ, ಬಳಕೆ, ರಿವ್ಯೂವ್‌ಗಳು ಮುಂತಾದವುಗಲನ್ನು ಸಹ ನಾವು ನೊಡಬೇಕು. ಒಮ್ಮೊಮ್ಮೆ ನಮ್ಮ ಕೊಟ್‌ ಅಥವಾ ನಾವು ತೆಗೆದುಕೊಳ್ಳುವ ಕೋಟ್ ಯಾವ ಬ್ರಾಂಡ್‌ ಎನ್ನುವುದೂ ಸಹ ಇಲ್ಲಿ ಮುಖ್ಯವಾಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, July 7, 2023, 18:47 [IST]
English summary
Top five tips to buy rain coat in monsoon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+