ವಿದೇಶಿ ಕಾರುಗಳಿಗೆ ಸೆಡ್ಡು ಹೊಡೆದ ಅತ್ಯುತ್ತಮ ಸ್ವದೇಶಿ ಕಾರುಗಳು: ಟಾಟಾ ಮೋಟಾರ್ಸ್ ಮೇಲುಗೈ

ನಾವು ಯಾವಾಗಲೂ ವಿದೇಶಿ ಉತ್ಪನ್ನಗಳ ಕಡೆಗೆ ಹೆಚ್ಚು ಆಕರ್ಷಣೆಯನ್ನು ಹೊಂದಿರುತ್ತೇವೆ. ಅದರಲ್ಲಿ ವಿಶೇಷವಾಗಿ ಕಾರುಗಳು ಮತ್ತು ಬೈಕುಗಳು. ಏಕೆಂದರೆ ಬಹಳ ಹಿಂದಿನ ವರ್ಷಗಳಲ್ಲಿ ಹೆಚ್ಚು ಅತ್ಯಾಧುನಿಕ ಭಾರತೀಯ ಕಾರುಗಳು ಇರಲಿಲ್ಲ. ಆದರೆ ಕಳೆದ ಎರಡು ದಶಕಗಳಲ್ಲಿ ಇದು ಖಂಡಿತವಾಗಿಯೂ ಬದಲಾಗಿದೆ.

ವಿದೇಶಿ ಕಾರುಗಳಿಗೆ ಸೆಡ್ಡು ಹೊಡೆದ ಅತ್ಯುತ್ತಮ ಸ್ವದೇಶಿ ಕಾರುಗಳು: ಟಾಟಾ ಮೋಟಾರ್ಸ್ ಮೇಲುಗೈ

ಭಾರತೀಯ ಕಾರು ತಯಾರಕರು ನಿರಂತರವಾಗಿ ತಮ್ಮ ಗುಣಮಟ್ಟವನ್ನು ಸುಧಾರಿಸುತ್ತಿದ್ದಾರೆ ಮತ್ತು ಅವರ ಉತ್ಪನ್ನಗಳು ಬಹಳಷ್ಟು ಸುಧಾರಿಸಿವೆ. ವಿದೇಶಿ ಬ್ರ್ಯಾಂಡ್‌ಗಳಿಗೆ ತೀವ್ರ ಪೈಪೋಟಿಯನ್ನು ನೀಡುವ ಅನೇಕ ಭಾರತೀಯ ಕಾರುಗಳಿವೆ. ಅತ್ಯಾಧುನಿಕ ಫೀಚರ್ಸ್, ಆಕರ್ಷಕ ವಿನ್ಯಾಸ, ಉತ್ತಮ ಕಾರ್ಯಕ್ಷಮತೆ ಮತ್ತು ಪವರ್ ಫುಲ್ ಎಂಜಿನ್ ಹೊಂದಿರುವ ಸ್ವದೇಶಿ ಕಾರುಗಳು ಕೂಡ ಇವೆ. ವಿದೇಶಿ ಬ್ರಾಂಡ್‌ಗಳ ವಿರುದ್ಧ ಗಟ್ಟಿಯಾಗಿ ನಿಂತು ಪ್ರಬಲ ಪೈಪೋಟಿ ನೀಡಿದ ಜನಪ್ರಿಯ ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ವಿದೇಶಿ ಕಾರುಗಳಿಗೆ ಸೆಡ್ಡು ಹೊಡೆದ ಅತ್ಯುತ್ತಮ ಸ್ವದೇಶಿ ಕಾರುಗಳು: ಟಾಟಾ ಮೋಟಾರ್ಸ್ ಮೇಲುಗೈ

ಟಾಟಾ ಇಂಡಿಕಾ

ಟಾಟಾ ಇಂಡಿಕಾ ಭಾರತದ ಮೊದಲ ಡೀಸೆಲ್ ಎಂಜಿನ್ ಹೊಂದಿದ್ದ ಪ್ರಯಾಣಿಕ ಕಾರು. ಭಾರತದ ಆಟೋಮೊಬೈಲ್ ಇತಿಹಾಸದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ಕಾರು ಇದಾಗಿದೆ. ಟಾಟಾ ಮೋಟಾರ್ಸ್ ಕಂಪನಿಯು ಈ ಇಂಡಿಕಾ ಕಾರನ್ನು ಭಾರತದಲ್ಲಿ 1998ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿತು.

ವಿದೇಶಿ ಕಾರುಗಳಿಗೆ ಸೆಡ್ಡು ಹೊಡೆದ ಅತ್ಯುತ್ತಮ ಸ್ವದೇಶಿ ಕಾರುಗಳು: ಟಾಟಾ ಮೋಟಾರ್ಸ್ ಮೇಲುಗೈ

ಟಾಟಾ ಇಂಡಿಕಾ ಕಾರು 2018ರವರೆಗೆ ಮಾರಾಟದಲ್ಲಿತ್ತು ಮತ್ತು ಆದ್ದರಿಂದ ಸುಮಾರು 2 ದಶಕಗಳ ದೀರ್ಘಾವಧಿಯವರೆಗೆ ಮಾರಾಟದಲ್ಲಿತ್ತು. ಈ ಕಾರು ಇಂದಿಗೂ ಹೆಚ್ಚಾಗಿ ಸಿಟಿಗಳಲ್ಲಿ ಟ್ಯಾಕ್ಸಿಗಳಾಗಿ ಓಡಾಡುತ್ತಿದೆಟಾಟಾ ಇಂಡಿಕಾ ಕ್ಯಾಬ್, ಉತ್ತಮ ಸವಾರಿ ಗುಣಮಟ್ಟ ಮತ್ತು ಸಾಕಷ್ಟು ಕ್ಯಾಬಿನ್ ಸ್ಥಳಾವಕಾಶವಾಗಿ ಜನಪ್ರಿಯವಾಗಿತ್ತು. ಇದು ಹಣಕ್ಕೆ ಉತ್ತಮ ಮೌಲ್ಯ, ಯೋಗ್ಯ ನೋಟ ಮತ್ತು ವೈಶಿಷ್ಟ್ಯಗಳನ್ನು ನೀಡಿತು

ವಿದೇಶಿ ಕಾರುಗಳಿಗೆ ಸೆಡ್ಡು ಹೊಡೆದ ಅತ್ಯುತ್ತಮ ಸ್ವದೇಶಿ ಕಾರುಗಳು: ಟಾಟಾ ಮೋಟಾರ್ಸ್ ಮೇಲುಗೈ

ಈ ಇಂಡಿಕಾ ಕಾರಿನಲ್ಲಿ 1.4 ಎಲ್ ಡೀಸೆಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 54 ಬಿಹೆಚ್‍ಪಿ ಪವರ್ ಮತ್ತು 135 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 1998ರಲ್ಲಿ ಬಿಡುಗಡೆಯಾಗಿದ್ದ ಇಂಡಿಕಾ ಕಾರು ಉತ್ತಮ ಬೇಡಿಕೆಯೊಂದಿಗೆ ಹೊಂದಿದ್ದಲ್ಲದೇ ಭಾರತೀಯ ಆಟೋ ಉದ್ಯಮದಲ್ಲಿ ತಮ್ಮದೇ ಅಧಿಪತ್ಯ ಸಾಧಿಸಿತ್ತು. ಆದರೆ ಬದಲಾದ ಮಾರುಕಟ್ಟೆಯಲ್ಲಿ ಸನ್ನಿವೇಶಗಳು ಇಂಡಿಕಾ ಕಾರನ್ನು ಮೂಲೆಗುಂಪಾಗುವಂತೆ ಮಾಡಿತು.

ವಿದೇಶಿ ಕಾರುಗಳಿಗೆ ಸೆಡ್ಡು ಹೊಡೆದ ಅತ್ಯುತ್ತಮ ಸ್ವದೇಶಿ ಕಾರುಗಳು: ಟಾಟಾ ಮೋಟಾರ್ಸ್ ಮೇಲುಗೈ

ಟಾಟಾ ನೆಕ್ಸಾನ್

ಟಾಟಾ ನೆಕ್ಸಾನ್ ಮಾದರಿಯು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಈ ಕಾಂಪ್ಯಾಕ್ಟ್ ಎಸ್‍ಯುವಿ ಮಾದರಿಗೆ ಭಾರತೀಯ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಸ್ವದೇಶಿ ಕಾರು ತಯಾರಕರಾದ ಟಾಟಾ ಮೋಟಾರ್ಸ್ ಈ ಕಾರನ್ನು ಹೆಚ್ಚು ಪೈಪೋಟಿ ಇರುವ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಬಿಡುಗಡೆಗೊಳಿಸಲಾಗಿದೆ.

ವಿದೇಶಿ ಕಾರುಗಳಿಗೆ ಸೆಡ್ಡು ಹೊಡೆದ ಅತ್ಯುತ್ತಮ ಸ್ವದೇಶಿ ಕಾರುಗಳು: ಟಾಟಾ ಮೋಟಾರ್ಸ್ ಮೇಲುಗೈ

ಟಾಟಾ ನೆಕ್ಸಾನ್ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹ್ಯುಂಡೈ ವೆನ್ಯೂ ಮತ್ತು ಹ್ಯುಂಡೈ ಕ್ರೆಟಾದಂತಹ ಕಾರುಗಳಿಗೆ ಪೈಪೋಟಿ ನೀಡುತ್ತಿದೆ. ಟಾಟಾ ಮೋಟಾರ್ಸ್ ಹಲವಾರು ಕಾರಣಗಳಿಂದಾಗಿ ನೆಕ್ಸಾನ್ ಅನ್ನು ದೀರ್ಘಕಾಲದಿಂದಲೂ ಹೆಚ್ಚು ಮಾರಾಟವಾಗುತ್ತಿರುವ ಮಾದರಿಗಳಲ್ಲಿ ಒಂದಾಗಿದೆ. ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ನಲ್ಲಿ ಐದು ಸ್ಟಾರ್ ರೇಟಿಂಗ್ ಅನ್ನು ಪಡೆದ ಮಾದರಿಯಾಗಿದೆ.

ವಿದೇಶಿ ಕಾರುಗಳಿಗೆ ಸೆಡ್ಡು ಹೊಡೆದ ಅತ್ಯುತ್ತಮ ಸ್ವದೇಶಿ ಕಾರುಗಳು: ಟಾಟಾ ಮೋಟಾರ್ಸ್ ಮೇಲುಗೈ

2017ರ ಕೊನೆಯಲ್ಲಿ ಬಿಡುಗಡೆಯಾದ ನಂತರ ಸಬ್-ಫೋರ್-ಮೀಟರ್ ಎಸ್‍ಯುವಿಯು ಗ್ರಾಹಕರ ಗಮನ ಸೆಳೆಯಿತು. 2020ರ ಆರಂಭದಲ್ಲಿ ಫೇಸ್ ಲಿಫ್ಟ್ ನೆಕ್ಸಾನ್ ಆಗಮನವು ಮಾರಾಟವನ್ನು ಮತ್ತಷ್ಟು ಹೆಚ್ಚಿಸಿತು. ಈ ಟಾಟಾ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‍ಯುವಿಯ ಬೇಡಿಕೆಯು ಹೆಚ್ಚಾಗುತ್ತಿದೆ.

ವಿದೇಶಿ ಕಾರುಗಳಿಗೆ ಸೆಡ್ಡು ಹೊಡೆದ ಅತ್ಯುತ್ತಮ ಸ್ವದೇಶಿ ಕಾರುಗಳು: ಟಾಟಾ ಮೋಟಾರ್ಸ್ ಮೇಲುಗೈ

ಟಾಟಾ ಸಫಾರಿ

ಸಫಾರಿ ನಿಜವಾಗಿಯೂ ಭಾರತದಲ್ಲಿ ಕ್ರಾಂತಿಕಾರಿ ಎಸ್‍ಯುವಿಯಾಗಿದೆ. ಸಫಾರಿ ಸ್ಟಾರ್ಮ್ ಅನೇಕ ರಾಜ್ಯಗಳ ಪೊಲೀಸ್ ಪಡೆಗಳೊಂದಿಗೆ ಮತ್ತು ಭಾರತೀಯ ಸೇನೆಯೊಂದಿಗೆ ಅಪಾರ ಜನಪ್ರಿಯತೆಯನ್ನು ಗಳಿಸಿತು. GS800 ನಿರ್ದಿಷ್ಟವಾಗಿ ಸೈನ್ಯಕ್ಕಾಗಿ ವಿನ್ಯಾಸಗೊಳಿಸಲಾದ ಸಫಾರಿಯ ಒಂದು ರೂಪಾಂತರವಾಗಿದೆ.

ವಿದೇಶಿ ಕಾರುಗಳಿಗೆ ಸೆಡ್ಡು ಹೊಡೆದ ಅತ್ಯುತ್ತಮ ಸ್ವದೇಶಿ ಕಾರುಗಳು: ಟಾಟಾ ಮೋಟಾರ್ಸ್ ಮೇಲುಗೈ

ಇದು ಅತ್ಯುತ್ತಮ ಆಫ್-ರೋಡ್ ಸಾಮರ್ಥ್ಯಗಳನ್ನು ಹೊಂದಿತ್ತು ಮತ್ತು 270 ಬಿಹೆಚ್‍ಪಿ ಪವರ್ ಮತ್ತು 800 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವ ಎಂಜಿನ್ ಅನ್ನು ಹೊಂದಿತ್ತು.ಡು ದಶಕಗಳಿಂದ, ಸಫಾರಿ ಪ್ರತಿಷ್ಠೆ ಮತ್ತು ಕಾರ್ಯಕ್ಷಮತೆಗಳಿಂದ ಜನಪ್ರಿಯನ್ನು ಗಳಿಸಿತ್ತು.ಇದೀಗ ನ್ಯೂ ಜನರೇಷನ್ ಟಾಟಾ ಸಫಾರ ಹೊಸ ಅವತಾರದಲ್ಲಿ ಮಾರಾಟವಾಗುತ್ತಿದೆ.

ವಿದೇಶಿ ಕಾರುಗಳಿಗೆ ಸೆಡ್ಡು ಹೊಡೆದ ಅತ್ಯುತ್ತಮ ಸ್ವದೇಶಿ ಕಾರುಗಳು: ಟಾಟಾ ಮೋಟಾರ್ಸ್ ಮೇಲುಗೈ

ಮಹೀಂದ್ರಾ ಎಕ್ಸ್‌ಯುವಿ700

ಮಹೀಂದ್ರಾ ಕಂಪನಿಯ ಹೊಸ ಎಕ್ಸ್‌ಯುವಿ700 ಎಸ್‌ಯುವಿ ಹಲವು ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ, ಈ ಹೊಸ ಎಸ್‍ಯುವಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಮೂಲಕ ಕನಿಷ್ಠ 1 ವರ್ಷಗಳ ವೈಟಿಂಗ್ ಪಿರೇಡ್ ಅನ್ನು ಹೊಂದಿದೆ. ಈ ಹೊಸ ಎಕ್ಸ್‌ಯುವಿ700 ಮಾದರಿಯನ್ನು ಮಹೀಂದ್ರಾ ಕಂಪನಿಯು 5 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಮಾರಾಟ ಮಾಡುತ್ತಿದೆ.

ವಿದೇಶಿ ಕಾರುಗಳಿಗೆ ಸೆಡ್ಡು ಹೊಡೆದ ಅತ್ಯುತ್ತಮ ಸ್ವದೇಶಿ ಕಾರುಗಳು: ಟಾಟಾ ಮೋಟಾರ್ಸ್ ಮೇಲುಗೈ

ಈ ಹೊಸ ಎಸ್‍ಯುವಿಯಲ್ಲಿ 2.0-ಲೀಟರ್ mHawk ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ನೀಡಲಾಗಿದೆ. ಈ ಇಂಜೆಕ್ಷನ್ ಟರ್ಬೊ ಪೆಟ್ರೋಲ್ ಎಂಜಿನ್ 197 ಬಿಹೆಚ್‍ಪಿ ಪವರ್ ಮತ್ತು 380 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಈ ಹೊಸ ಮಹೀಂದ್ರಾ ಎಕ್ಸ್‌ಯುವಿ700 ಎಸ್‍ಯುವಿಯು ಕೇವಲ 5 ಸೆಕೆಂಡುಗಳಲ್ಲಿ 0-60 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ವಿದೇಶಿ ಕಾರುಗಳಿಗೆ ಸೆಡ್ಡು ಹೊಡೆದ ಅತ್ಯುತ್ತಮ ಸ್ವದೇಶಿ ಕಾರುಗಳು: ಟಾಟಾ ಮೋಟಾರ್ಸ್ ಮೇಲುಗೈ

ಎಕ್ಸ್‌ಯುವಿ700 ಎಸ್‍ಯುವಿಯು ಮೂರು ಡ್ರೈವಿಂಗ್ ಮೋಡ್‌ಗಳನ್ನು ಒಳಗೊಂಡಿದೆ. ಇನ್ನು ಈ ಎಸ್‍ಯುವಿಯು ಎಂಎಕ್ಸ್, ಎಎಕ್ಸ್3, ಎಎಕ್ಸ್5, ಎಎಕ್ಸ್7 ಮತ್ತು ಎಎಕ್ಸ್7 ಲಗ್ಷುರಿ ಎನ್ನುವ ವಿವಿಧ ವೆರಿಯೆಂಟ್‌ಗಳಲ್ಲಿ ಲಭ್ಯವಿದೆ. ಈ ಎಸ್‍ಯುವಿಯ ಕ್ಯಾಬಿನ್ ನಲ್ಲಿ ಇಂಟಿಲಿಜೆಂಟ್ ಕಾಕ್‌ಪಿಟ್, ಸ್ಕೈ-ರೂಫ್, ಕ್ಯಾಬಿನ್ ಏರ್ ಪ್ಯೂರಿಫೈಯರ್ ಇತ್ಯಾದಿಗಳಂತಹ ಇತ್ತೀಚಿನ ಅತ್ಯಾಧುನಿಕ ಫೀಚರ್ಸ್ ಗಳೊಂದಿಗೆ ಬರುತ್ತದೆ.

ವಿದೇಶಿ ಕಾರುಗಳಿಗೆ ಸೆಡ್ಡು ಹೊಡೆದ ಅತ್ಯುತ್ತಮ ಸ್ವದೇಶಿ ಕಾರುಗಳು: ಟಾಟಾ ಮೋಟಾರ್ಸ್ ಮೇಲುಗೈ

ಮಹೀಂದ್ರಾ ಥಾರ್

ಮಹೀಂದ್ರಾ ಥಾರ್ ಎಸ್‍ಯುವಿ ಮಾದರಿ ಬಹಳ ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಆಫ್-ರೋಡರ್ ಆಗಿದೆ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಹೀಂದ್ರಾ ಥಾರ್ ಮಾದರಿಯು ಬಹುಬೇಡಿಯೊಂದಿಗೆ ದಾಖಲೆ ಮಟ್ಟದಲ್ಲಿ ಮಾರಾಟವಾಗುತ್ತಿದೆ.

ವಿದೇಶಿ ಕಾರುಗಳಿಗೆ ಸೆಡ್ಡು ಹೊಡೆದ ಅತ್ಯುತ್ತಮ ಸ್ವದೇಶಿ ಕಾರುಗಳು: ಟಾಟಾ ಮೋಟಾರ್ಸ್ ಮೇಲುಗೈ

ಹೊಸ ಮಹೀಂದ್ರಾ ಥಾರ್ ಎಸ್‍ಯುವಿಯ ಬೇಡಿಕೆಯ ಹೆಚ್ಚಳದಿಂದಾಗಿ ಕೆಲವು ನಗರಗಳಲ್ಲಿ ಇದರ ವೈಟಿಂಗ್ ಪಿರೇಡ್ ಕೂಡ ಹೆಚ್ಚಾಗಿದೆ. ಭಾರತದಲ್ಲಿ ಆಫ್-ರೋಡ್ ವಾಹನಗಳು ಎಂದಾಗ ಮೊದಲು ನೆನಪಿಗೆ ಬರುವುದು ಥಾರ್ ಎಸ್‍ಯುವಿಯಾಗಿದೆ. ಈ ಥಾರ್ ಎಸ್‍ಯುವಿಯ ಅತ್ಯುತ್ತಮ ಆಫ್-ರೋಡ್ ಸಾಮರ್ಥ್ಯದಿಂದಾಗಿ ಹೆಚ್ಚಿನ ವಾಹನ ಪ್ರಿಯರು ಥಾರ್ ಎಸ್‍ಯುವಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ವಿದೇಶಿ ಕಾರುಗಳಿಗೆ ಸೆಡ್ಡು ಹೊಡೆದ ಅತ್ಯುತ್ತಮ ಸ್ವದೇಶಿ ಕಾರುಗಳು: ಟಾಟಾ ಮೋಟಾರ್ಸ್ ಮೇಲುಗೈ

ಟಾಟಾ ನೆಕ್ಸಾನ್ ಇವಿ

ನೆಕ್ಸಾನ್ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಹೆಚ್ಚು ಮಾರಾಟವಾದ ಪ್ರಯಾಣಿಕರ ಎಲೆಕ್ಟ್ರಿಕ್ ಕಾರು ಆಗಿದೆ. ಅಲ್ಲದೇ ಇದು ಜಿಪ್ಟ್ರಾನ್ ತಂತ್ರಜ್ಞಾನವನ್ನು ಆಧರಿಸಿದ ಮೊದಲ ವಾಹನವಾಗಿದ್ದು, ಮುಂಬರುವ ಟಾಟಾ ಇವಿಗಳಿಗೆ ಕಾರಣವಾಗಿದೆ. ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿ ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್, ಸನ್‌ರೂಫ್, ರೈನ್ ಸೆನ್ಸಾಸಿಂಗ್, ಇಂಟಿಗ್ರೇಟೆಡ್ ಟರ್ನ್ ಇಂಡೀಕೇಟರ್, ಎಲ್ಲಾ ಪವರ್ ವಿಂಡೋಸ್, ಕೀಲೆಸ್ ಎಂಟ್ರಿ ಅಂಡ್ ಗೋ, ಕೂಲ್ಡ್ ಗ್ಲೋವ್ ಬಾಕ್ಸ್, ಹ್ಯಾಂಡ್ಸ್-ಫ್ರೀ ಟೈಲ್‌ಗೇಟ್, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು ಮತ್ತು ಎಲ್ಇಡಿ ಟೈಲ್‌ಲ್ಯಾಂಪ್‌ಗಳನ್ನು ಹೊಂದಿವೆ.

ವಿದೇಶಿ ಕಾರುಗಳಿಗೆ ಸೆಡ್ಡು ಹೊಡೆದ ಅತ್ಯುತ್ತಮ ಸ್ವದೇಶಿ ಕಾರುಗಳು: ಟಾಟಾ ಮೋಟಾರ್ಸ್ ಮೇಲುಗೈ

ಈ ಎಲೆಕ್ಟ್ರಿಕ್ ಕಾರಿನಲ್ಲಿ ಸಿಂಕ್ರೊನಸ್ ಮೋಟರ್ ಅನ್ನು ಹೊಂದಿದೆ. ಇದರಲ್ಲಿ 30.2 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದೆ. ಈ ಇವಿ ಮಾದರಿಯು ಒಟ್ಟು 127 ಬಿಹೆಚ್‌ಪಿ ಮತ್ತು 245 ಎನ್‌ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಲೆಕ್ಟ್ರಿಕ್ ಕಾರು ಕೇವಲ 9.9 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಎಆರ್ಎಐ ಪ್ರಕಾರ ಈ ನೆಕ್ಸಾನ್ ಇವಿ ಮಾದರಿಯು 312 ಕಿ.ಮೀ ರೇಂಜ್ ಅನ್ನು ಒದಗಿಸುತ್ತದೆ.

ವಿದೇಶಿ ಕಾರುಗಳಿಗೆ ಸೆಡ್ಡು ಹೊಡೆದ ಅತ್ಯುತ್ತಮ ಸ್ವದೇಶಿ ಕಾರುಗಳು: ಟಾಟಾ ಮೋಟಾರ್ಸ್ ಮೇಲುಗೈ

ನೆಕ್ಸಾನ್ ಎಲೆಕ್ಟ್ರಿಕ್ ಕಾರು ಸಾಮಾನ್ಯ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‌ಯುವಿಯಿಂದ ಸ್ಟೈಲಿಂಗ್ ಅನ್ನು ಪಡೆದುಕೊಂಡಿದೆ. ಆದರೆ ಎಲೆಕ್ಟ್ರಿಕ್ ವಾಹನವಾಗಿರುವುದರಿಂದ ಅದಕ್ಕೆ ಅನುಗುಣವಾಗಿ ಕೆಲವು ಕಾಸ್ಮೆಟಿಕ್ ನವೀಕರಣಗಳನ್ನು ಕೂಡ ನಡೆಸಿದ್ದಾರೆ. ಕೈಗೆಟುಕುವ ದರ, ಹೆಚ್ಚಿನ ರೇಂಜ್ ಮತ್ತು ಆಕರ್ಷಕ ವಿನ್ಯಾಸದಿಂದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ.

Article Published On: Sunday, January 30, 2022, 13:00 [IST]
English summary
Top made in india cars that stood against foriegn competitors across time details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+