ಪ್ರಪಂಚದ ಟಾಪ್ 10 ವಿಸ್ಮಯಕಾರಿ ಕಾರುಗಳು

By Nagaraja

ಹಲವು ಸುಂದರ ಸೃಷ್ಟಿಗೆ ಕಾರಣವಾಗಿರುವ ಈ ಪ್ರಪಂಚದಲ್ಲಿ ಮಾನವ ನಿರ್ಮಿತ ಕಾರುಗಳಿಗೂ ಅಷ್ಟೇ ಪ್ರಾಧ್ಯಾನತೆಯಿದೆ. ನಮ್ಮ ದೈನಂದಿನ ಜೀನವದ ಅವಿಭಾಜ್ಯ ಅಂಗವಾಗಿರುವ ಕಾರು ಆಧುನಿಕ ಜಗತ್ತಿನ ಕೈಗನ್ನಡಿಯಾಗಿದೆ.

ಆಟೋಮೊಬೈಲ್ ಕ್ಷೇತ್ರದಲ್ಲಿ ಸಾವಿರಾರು ಮಾದರಿಗಳು ಬಂದು ಹೋಗಿವೆ. ಈ ಪೈಕಿ ಹಲವು ರೂಪದ ವಿಧದ ವರ್ಣಮಯ ಕಾರುಗಳನ್ನು ನೀವು ನೋಡಿರಬಹುದು. ಆದರೆ ಇಡೀ ಜಗತ್ತನ್ನೇ ಮೂಕವಿಸ್ಮಿತವಾಗಿಸಿರುವ ಮಾದರಿಗಳು ಯಾವುವು? ನಿಮ್ಮ ನೆಚ್ಚಿನ ಕಾರು ಈ ಪಟ್ಟಿಯಲ್ಲಿದೆಯೇ ? ಈ ಬಗ್ಗೆ ಮಾಹಿತಿಯನ್ನು ಕೊಡುವ ಪ್ರಯತ್ನವನ್ನು ನಾವಿಲ್ಲಿ ಮಾಡಲಿದ್ದೇವೆ.

10. ಷೆವರ್ಲೆ ಕಾರ್ವೆಟ್

10. ಷೆವರ್ಲೆ ಕಾರ್ವೆಟ್

ಜನರಲ್ ಮೋಟಾರ್ಸ್ ನ ಷೆವರ್ಲೆ ವಿಭಾಗದಿಂದ ನಿರ್ಮಾಣವಾಗಿರುವ ಕಾರ್ವೆಟ್ ಇದುವರೆಗೆ ಏಳು ತಲೆಮಾರಿನ ರೂಪಗಳನ್ನು ಪಡೆದುಕೊಂಡಿದೆ. 1953ನೇ ಇಸವಿಯಲ್ಲಿ ನಿರ್ಮಾಣವಾದ ಮೊದಲ ಕನ್ವರ್ಟಿಬಲ್ ಮಾದರಿಯನ್ನು ಹಾರ್ಲೆ ಈರ್ಲ್ ವಿನ್ಯಾಸಗೊಳಿಸಿದ್ದರು. ಇದು ತನ್ನ ಆದ ವಿಶಿಷ್ಟ ಶೈಲಿಯ ವಿನ್ಯಾಸದಿಂದ ಗುರುತಿಸಿಕೊಂಡಿದೆ.

09. ಬಿಎಂಡಬ್ಲ್ಯು 3 ಸಿರೀಸ್

09. ಬಿಎಂಡಬ್ಲ್ಯು 3 ಸಿರೀಸ್

ಅತ್ಯುತ್ತಮ ಕಾರ್ಯ ನಿರ್ವಾಹಕ ಕಾರುಗಳಲ್ಲಿ ಒಂದಾಗಿರುವ ಬಿಎಂಡಬ್ಲ್ಯು 3 ಸಿರೀಸ್ 1975ನೇ ಇಸವಿಯಿಂದಲೇ ನಿರ್ಮಿಸಲಾಗುತ್ತಿದೆ. ಇದುವರೆಗೆ ಆರು ತಲೆಮಾರು ಹಾಗೂ ಐದು ವಿವಿಧ ದೇಹ ಶೈಲಿಯಲ್ಲಿ ನಿರ್ಮಾಣವಾಗಿದೆ. ಹಾಗೆಯೇ ಬಿಎಂಡಬ್ಲ್ಯು ಒಟ್ಟು ಮಾರಾಟದ ಶೇಕಡಾ 30ರಷ್ಟನ್ನು ವಶಪಡಿಸಿಕೊಂಡಿದೆ.

08. ಫೆರಾರಿ 330 ಪಿ4

08. ಫೆರಾರಿ 330 ಪಿ4

ಸ್ಪೋರ್ಟ್ಸ್ ಪ್ರೊಟೊಟೈಪ್ ಮಾದರಿಯಾಗಿರುವ ಫೆರಾರಿ 330 ಪಿ4 ಸೀಮಿತ ನಾಲ್ಕು ಆವೃತ್ತಿಗಳಷ್ಟೇ ನಿರ್ಮಾಣವಾಗಿದೆ. ಇದು 1960 ಹಾಗೂ 1970ರ ದಶಕದ ಆರಂಭಿಕ ಕಾಲಘಟ್ಟದಲ್ಲಿ ನಿರ್ಮಾಣವಾಗಿತ್ತು. ಮೋಟಾರು ಕ್ರೀಡೆಯಲ್ಲಿ ತನ್ನ ಪ್ರತಿಸ್ಪರ್ಧಿ ಫೋರ್ಡ್ ಹಿಮ್ಮೆಟ್ಟಿಸಲು ವಿಶೇಷವಾದ ವಿನ್ಯಾಸ ರಚಿಸಲಾಗಿತ್ತು.

07. ಪೋರ್ಷೆ ಬಾಕ್ಸ್ ಸ್ಟರ್

07. ಪೋರ್ಷೆ ಬಾಕ್ಸ್ ಸ್ಟರ್

1996ನೇ ಇಸವಿಯಲ್ಲಿ ನಿರ್ಮಾಣವಾಗಿರುವ ಪೋರ್ಷೆ ಬಾಕ್ಸ್ ಸ್ಟರ್ ಮಾದರಿಯು ಎರಡು ಬಾಗಿಲುಗಳ ರೋಡ್ ಸ್ಟರ್ ಕ್ರೀಡಾ ಕಾರಾಗಿದೆ. ಇದರ ಹೆಸರಿನ ಹಿಂದೆ ಕುತೂಹಲವಿದ್ದು, ಬಾಕ್ಸರ್ ಎಂಜಿನ್ ಹಾಗೂ ಎರಡು ಸೀಟುಗಳ ಸಾಮರ್ಥ್ಯದ ರೋಡ್ ಸ್ಟರ್ ಪದದಿಂದ ಬಾಕ್ಸ್ ಸ್ಟರ್ ಹುಟ್ಟಿಕೊಂಡಿದೆ.

06. ಜಾಗ್ವಾರ್ ಎಕ್ಸ್ ಜೆ13

06. ಜಾಗ್ವಾರ್ ಎಕ್ಸ್ ಜೆ13

1966ರಲ್ಲಿ ಪ್ರಮುಖವಾಗಿಯೂ ವಿಶ್ವ ಪ್ರಸಿದ್ಧ ಲೀಮ್ಯಾನ್ ರೇಸ್ ಸ್ಪರ್ಧೆಯಲ್ಲಿ ಭಾಗವಹಿಸಲು ಉತ್ಪಾದಿಸಲ್ಪಟ್ಟ ಜಾಗ್ವಾರ್ ಎಕ್ಸ್ ಜೆ13 ಕೇವಲ ಏಕ ಮಾತ್ರ ಯುನಿಟ್ ನಿರ್ಮಾಣವಾಗಿದೆ. ಹಾಗಿದ್ದರೂ ರೇಸ್‌ನಲ್ಲಿ ಭಾಗವಹಿಸಲು ವಿಫಲವಾಗಿರುವ ಜಾಗ್ವಾರ್ ಎಕ್ಸ್ ಜೆ13 ಇದುವರೆಗೆ ನಿರ್ಮಾಣವಾದ ಶ್ರೇಷ್ಠ ರೇಸ್ ರೇಸ್ ಕಾರುಗಳಲ್ಲಿ ಒಂದೆನಿಸಿಕೊಂಡಿದೆ. ಇದಲ್ಲಿ 5.0 ಲೀಟರ್ ಡಿಒಎಚ್ ಸಿ ವಿ12 ಎಂಜಿನ್ ಆಳವಡಿಸಲಾಗಿದೆ.

ಚಿತ್ರ ಕೃಪೆ: Mike Morrin / Wiki Commons
05. ರೋಲ್ಸ್ ರಾಯ್ಸ್ ಫಾಟಂ

05. ರೋಲ್ಸ್ ರಾಯ್ಸ್ ಫಾಟಂ

ಸರಿ ಸುಮಾರು ಕಳೆದೊಂದು ಶತಮಾನದಿಂದ ಮಾರುಕಟ್ಟೆಯಲ್ಲಿರುವ ರೋಲ್ಸ್ ರಾಯ್ಸ್ ಫಾಟಂ ಸರ್ವಕಾಲಿಕ ಶ್ರೇಷ್ಠ ಕಾರುಗಳಲ್ಲಿ ಒಂದಾಗಿದೆ. ಇಲ್ಲಿ ಗ್ರಾಹಕರಿಗೆ ತಮ್ಮ ಬಯಕೆಗಳಿಗೆ ತಕ್ಕಂತೆ ಕಾರನ್ನು ಮಾರ್ಪಾಡುಗೊಳಿಸುವ ಅವಕಾಶವಿದ್ದು, ಬರೋಬ್ಬರಿ 44,000 ಸಾವಿರ ಬಣ್ಣಗಳ ಪೈಕಿ ತಮ್ಮ ನೆಚ್ಚಿನ ವರ್ಣವನ್ನು ಆಯ್ಕೆ ಮಾಡಬಹುದಾಗಿದೆ.

04. ಆಲ್ಪಾ ರೊಮಿಯೊ 33 ಸ್ಟ್ರ್ಯಾಡಲ್

04. ಆಲ್ಪಾ ರೊಮಿಯೊ 33 ಸ್ಟ್ರ್ಯಾಡಲ್

ಇಟಲಿಯ ಆಲ್ಪಾ ರೊಮಿಯೊದಿಂದ ನಿರ್ಮಿಸಲ್ಪಟ್ಟ 33 ಸ್ಟ್ರಾಡಲ್ ಮಗದೊಂದು ಶ್ರೇಷ್ಠ ಕ್ರೀಡಾ ಕಾರುಗಳಲ್ಲಿ ಒಂದಾಗಿದೆ. ವಿಶೇಷವೆಂದರೆ ಸೀಮಿತ 18 ಯುನಿಟ್ ಮಾತ್ರಗಳಷ್ಟು ಮಾತ್ರ ಇದು ನಿರ್ಮಾಣವಾಗಿದೆ. ಟು ಡೋರ್ ಕೂಪೆ ಶೈಲಿಯ ವಿನ್ಯಾಸ ಹೊಂದಿರುವ ಆಲ್ಪಾ ರೊಮಿಯೊ 33 ಸ್ಟ್ರಾಡಲ್ ನಲ್ಲಿ 2.0 ಲೀಟರ್ ವಿ8 ಎಂಜಿನ್ ಆಳವಡಿಸಲಾಗಿದೆ.

03. ಫೋಕ್ಸ್ ವ್ಯಾಗನ್ ಗಾಲ್ಫ್ ಜಿಟಿಐ

03. ಫೋಕ್ಸ್ ವ್ಯಾಗನ್ ಗಾಲ್ಫ್ ಜಿಟಿಐ

ಸಣ್ಣ ಫ್ಯಾಮಿಲಿ ಕಾರಾಗಿರುವ ಫೋಕ್ಸ್ ವ್ಯಾಗನ್ ಗಾಲ್ಪ್ ಜಿಟಿಐ ಇದುವರೆಗೆ ನಿರ್ಮಾಣವಾದ ಬೆಸ್ಟ್ ಸೆಲ್ಲಿಂಗ್ ಫೋಕ್ಸ್ ವ್ಯಾಗನ್ ಮಾದರಿಯಾಗಿದೆ. ಇದನ್ನು 1974ರಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿತ್ತು. ಇದುವರೆಗೆ ಏಳು ತಲೆಮಾರಿನ ಮಾದರಿಗಳನ್ನು ಕಂಡಿರುವ ಫೋಕ್ಸ್ ವ್ಯಾಗನ್ ಗಾಲ್ಪ್ 2012ರ ವರೆಗೆ 29 ಮಿಲಿಯನ್ ಗಳಷ್ಟು ಯುನಿಟ್ ನಿರ್ಮಾಣವಾಗಿತ್ತು.

02. ಫೆರಾರಿ 250 ಜಿಟಿಒ

02. ಫೆರಾರಿ 250 ಜಿಟಿಒ

ರೇಸಿಂಗ್ ಗ್ರ್ಯಾನ್ ಟೂರಿಂಗ್ ಕಾರಾಗಿರುವ ಫೆರಾರಿ 250 ಜಿಟಿಒ ಮಾದರಿಯನ್ನು 1962ರಿಂದ 1964ನೇ ಇಸವಿಯ ವರೆಗೆ ನಿರ್ಮಿಸಲಾಗಿತ್ತು. ಇದು ಸೀಮಿತ 39 ಯುನಿಟ್ ಮಾತ್ರ ನಿರ್ಮಾಣವಾಗಿದೆ. ಅಲ್ಲದೆ ಜಗತ್ತಿನ ಅತ್ಯಂತ ದುಬಾರಿ ಕಾರುಗಳಲ್ಲಿ ಎನಿಸಿಕೊಂಡಿರುವ ಹಿನ್ನಲೆಯಲ್ಲಿ 'ಮೊನಾಲಿಸಾ' ಎಂದೇ ಪ್ರಖ್ಯಾತಿ ಗಿಟ್ಟಿಸಿಕೊಂಡಿದೆ. ಅಷ್ಟೇ ಯಾಕೆ 1960ರ ದಶಕದ ಟಾಪ್ 10 ಸ್ಪೋರ್ಟ್ಸ್ ಕಾರುಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಫೆರಾರಿ 250 ಜಿಟಿಒದಲ್ಲಿ 3.0 ಲೀಟರ್ ವಿ12 ಎಂಜಿನ್ ಆಳವಡಿಸಲಾಗಿದ್ದು, 300 ಅಶ್ವಶಕ್ತಿ ಉತ್ಪಾದಿಸುತ್ತದೆ.

01. ಬುಗಾಟಿ ವೆರೋನ್

01. ಬುಗಾಟಿ ವೆರೋನ್

ಜಗತ್ತಿನ ಅತ್ಯಂತ ಸುಂದರ ಎರಡು ಬಾಗಿಲುಗಳ ಕ್ರೀಡಾ ಕಾರುಗಳಲ್ಲಿ ಒಂದಾಗಿರುವ ಬುಗಾಟಿ ವೆರೋನ್ ನಿರ್ಮಾಣ 2005ರಲ್ಲಿ ಆರಂಭವಾಗಿತ್ತು. 8.0 ಲೀಟರ್ ಡಬ್ಲ್ಯು ಎಂಜಿನ್ ಹೊಂದಿರುವ ಬುಗಾಟಿ ವೆರೋನ್ ಸೋರ್ಟ್ಸ್ ವರ್ಷನ್ ಗಂಟೆಗೆ 431.07 ಸಾಮರ್ಥ್ಯವನ್ನು ಹೊಂದಿದೆ. ಅಷ್ಟೇ ಅಲ್ಲದೆ ನಿರ್ಮಾಣ ಹಂತ ತಲುಪಿರುವ ಅತಿ ವೇಗದ ಸ್ಟ್ರೀಟ್ ಲೀಗಲ್ ಕಾರೆಂಬ ಗಿನ್ನೆಸ್ ವಿಶ್ವ ದಾಖಲೆಗೂ ಇದುಪಾತ್ರವಾಗಿದೆ.

ಅಂಬಾಸಿಡರ್

ಅಂಬಾಸಿಡರ್

ಇದುವರೆಗೆ ವಿದೇಶಿ ನಿರ್ಮಿತ ಕಾರುಗಳ ಬಗ್ಗೆ ಚರ್ಚಿಸಿದ್ದೇವೆ. ಆದರೆ ಪಟ್ಟಿಯ ಮುಂಚೂಣಿಯಲ್ಲಿ ಭಾರತೀಯ ರಸ್ತೆಗಳ ರಾಜ ಅಂಬಾಸಿಡರ್ ಕಾರನ್ನು ಗುರುತಿಸಲು ನಾವು ಇಷ್ಟಪಡುತ್ತೇವೆ. ಬ್ರಿಟನ್‌ನ ಮೋರಿಸ್ ಆಕ್ಸ್‌ಫರ್ಡ್ 3 ಕಾರಿನ ಮಾದರಿಯನ್ನು ಹೋಲುವ ಅಂಬಾಸಿಡರ್ 1958ರ ಇಸವಿಯಿಂದಲೇ ದೇಶದಲ್ಲಿ ಮಾರಾಟದಲ್ಲಿದೆ. ಇಂದಿಗೂ ದೇಶದ ಅತ್ಯಂತ ಸುರಕ್ಷಿತ ಕಾರೆಂಬ ಪಟ್ಟ ಉಳಿಸಿಕೊಂಡಿರುವ ಅಂಬಾಸಿಡರ್ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿರಲಿಲ್ಲ.

Morris Oxford Series III

ಚಿತ್ರ ಕೃಪೆ: Redsimon / Wiki Commons


More from DriveSpark

Article Published On: Monday, March 23, 2015, 17:01 [IST]
English summary
Does you favorite car happen to be in this list. We list down the Top 10 most incredible cars ever built. Let us know if we missed out any?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+