ಒಂದು ಲಕ್ಷದ ಒಳಗೆ ಮನಸೋಲುವ ವಿನ್ಯಾಸ: Hero Xtreme 125R ಕೊಳ್ಳಲು ಇಲ್ಲಿದೆ ಪ್ರಮುಖ ಕಾರಣಗಳು
ಭಾರತದಲ್ಲಿ ಕಳೆದ ತಿಂಗಳಷ್ಟೇ ಹೀರೋ ಕಂಪನಿಯು ತನ್ನ ಹೊಸ ಬೈಕ್ ಒಂದನ್ನು ಲಾಂಚ್ ಮಾಡಿತ್ತು. ಅತ್ಯಾಕರ್ಷಕ ಲುಕ್ ಮತ್ತು ಫೀಚರ್ ಪ್ಯಾಕ್ ಆಗಿ ಬಂದ ಈ ಬೈಕ್ ಬೇರೆ ಯಾವುದೂ ಅಲ್ಲ, ಹೊಸ ಹೀರೋ ಎಕ್ಸ್‌ಟ್ರಿಮ್ 125ಆರ್. ಮೊದಲ ನೊಟದಲ್ಲಿಯೇ ನೋಡುಗರನ್ನು ಈ ಬೈಕ್ ತನ್ನತ್ತ ಸೆಳೆಯುತ್ತದೆ.
ಇಂದಿನ ಈ ಲೇಖನದಲ್ಲಿ ನೀವೇನಾದರೂ 125 ಸಿಸಿ ಸೆಗ್ಮೆಂಟ್‌ನಲ್ಲಿ ಬೈಕ್ ಕೊಳ್ಳಬೇಕು ಎಂದು ಕೊಂಡಿದ್ದರೆ ಯಾಕೆ ನೀವು ಈ ಹೊಸ ಹೀರೋ ಎಕ್ಸ್‌ಟ್ರಿಮ್ 125ಆರ್ ಬೈಕ್ ಅನ್ನು ಕೊಳ್ಳಬೇಕು ಎಂಬುದನ್ನು ನಾವು ಹೇಳುತ್ತಿದ್ದು, ಇದರ ಸಂಪೂರ್ಣ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೆ ಓದಿ.

೧. ವಿನ್ಯಾಸ: ಹೀರೋ ಎಕ್ಸ್‌ಟ್ರಿಮ್ 125ಆರ್ (Hero Xtreme 125R) ಬೈಕ್ ಅತ್ಯಾಧುನಿಕ ವಿನ್ಯಾಸ (ಡಿಸೈನ್) ಹೊಂದಿದ್ದು, ನೋಡುಗರನ್ನು ಆಕರ್ಷಿಸುತ್ತದೆ. ಮುಂಭಾಗ ಎಕ್ಸ್‌ಟ್ರಿಮ್ 200ಎಸ್ (Xtreme 200S) ಮೋಟಾರ್‌ಸೈಕಲ್‌ಗೆ ಹೋಲಿಕೆಯಾಗುವ ಫುಲ್ ಎಲ್ಇಡಿ ಹೆಡ್‌ಲ್ಯಾಂಪ್ ಪಡೆದಿದೆ. ಫ್ಯುಯೆಲ್ (ಇಂಧನ) ಟ್ಯಾಂಕ್ ಮತ್ತು ಹಿಂಭಾಗದ ವಿನ್ಯಾಸವು ಆಕರ್ಷಕವಾಗಿದೆ. ನೂತನ ಬೈಕ್, ಕಪ್ಪು (Black) ಸೇರಿದಂತೆ 3 ಬಣ್ಣಗಳ ಆಯ್ಕೆಯಲ್ಲಿ ದೊರೆಯುತ್ತದೆ.
೨. ಎಂಜಿನ್: ಈ ಹೀರೋ ಎಕ್ಸ್‌ಟ್ರಿಮ್ 125ಆರ್ ಮೋಟಾರ್‌ಸೈಕಲ್ 125 ಸಿಸಿ, ಸಿಂಗಲ್ ಸಿಲಿಂಡರ್ ಏರ್ - ಕೂಲ್ಡ್ ಎಂಜಿನ್ ಹೊಂದಿದ್ದು, 11.5 bhp ಗರಿಷ್ಠ ಪವರ್, 10.5 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ 5 - ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ.

೩. ಫೀಚರ್‌ಗಳು: ಹೊಸ ಹೀರೋ ಎಕ್ಸ್‌ಟ್ರಿಮ್ 125ಆರ್ ಮೋಟಾರ್‌ಸೈಕಲ್ ಹಲವಾರು ಉತ್ತಮ ಫೀಚರ್‌ಗಳೊಂದಿಗೆ ಲಭ್ಯವಿದೆ. ಆಕರ್ಷಕ ಡಿಜಿಟಲ್ ಕನ್ಸೋಲ್, ಆರಾಮದಾಯಕವಾಗಿ ಪ್ರಯಾಣಿಸಲು ಸ್ಪ್ಲಿಟ್ - ಸೀಟ್ ಸೆಟಪ್ (Split - Seat Setup) ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಹೀರೋ ಎಕ್ಸ್‌ಟ್ರಿಮ್ 125ಆರ್ ಮೋಟಾರ್‌ಸೈಕಲ್‌ಗೆ ಟಿವಿಎಸ್ ರೈಡರ್ 125 (TVS Raider 125) ದೊಡ್ಡ ಪ್ರತಿಸ್ಪರ್ಧಿಯಾಗಿದೆ.
೪. ಸಸ್ಪೆನ್ಷನ್: ಈ ಬೈಕ್‌ನ ಸಸ್ಪೆನ್ಷನ್ ಕುರಿತಾಗಿ ಮಾತನಾಡಲೇ ಬೇಕು. ಈ ಬೈಕ್‌ನ ಮುಂಭಾಗದಲ್ಲಿ 37 ಎಂಎಂ ಟೆಲಿಸ್ಕೋಪಿಕ್ ಫೋರ್ಕ್, ರೇರ್ (ಹಿಂಭಾಗ) ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಒಳಗೊಂಡಿದೆ. ಬ್ರೇಕಿಂಗ್ ಸಿಸ್ಟಮ್ ವಿಚಾರಕ್ಕೆ ಬರುವುದಾದರೆ, ರೂಪಾಂತರಗಳಿಗೆ ಅನುಗುಣವಾಗಿ ಮುಂಭಾಗ ಡಿಸ್ಕ್ ಮತ್ತು ಹಿಂಭಾಗ ಡ್ರಮ್/ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.

೫. ಬೆಲೆ: ಹೊಸ ಹೀರೋ ಎಕ್ಸ್‌ಟ್ರಿಮ್ 125ಆರ್ ಬೈಕ್‌ನ ಬೆಲೆಯೂ ಸಹ ಈ ಬೈಕ್ ಅನ್ನು ಕೊಳ್ಳಲು ಪ್ರೇರೇಪಿಸುತ್ತದೆ. ಇದರ ಬೆಲೆಯನ್ನು ನೋಡುವುದಾದರೆ ಇದರ ಸಿಂಗಲ್ ಡಿಸ್ಕ್ ವೇರಿಯೆಂಟ್ ರೂ.95,000 ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಇದರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಗ್ರಾಹಕರು ಈ ಬೈಕ್‌ನ ಕಡೆಗೆ ಹೆಚ್ಚು ಆಕರ್ಷಕವಾಗುವುದಂತೂ ಖಂಡಿತ ಎನ್ನುತ್ತಾರೆ ಆಟೋಮೊಬೈಲ್ ಪಂಡಿತರು.
ಈ ಬೈಕ್ ಅತ್ಯಾಧುನಿಕ ವೈಶಿಷ್ಟ್ಯ ಹಾಗೂ ಡಿಸೈನ್ ಹೊಂದಿರುವುದರಿಂದ ಮುಂಬರುವ ದಿನಗಳಲ್ಲಿ ಹೆಚ್ಚಿನ ಮಂದಿ ಇಷ್ಟಪಟ್ಟು ಖರೀದಿಸಬಹುದು. ಕೆಲವೇ ದಿನಗಳಲ್ಲಿ ಬುಕ್ಕಿಂಗ್ ಶುರುವಾಗುವ ಸಾಧ್ಯತೆಯಿದೆ. ಏನೇ ಆದರೂ ಹೀರೋ ಮಾತ್ರ ಈ ವರ್ಷವನ್ನು ಭರ್ಜರಿಯಾಗಿಯೇ ಅರಂಭಿಸಿದೆ. ಈ ವರ್ಷ ಇನ್ನೂ ಹಲವಾರು ಬೈಕ್‌ಗಳು ಬಿಡುಗಡೆಯಾಗಲಿದೆ ಎನ್ನುತ್ತಿವೆ ಮೂಲಗಳು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications