ಮಹಿಳೆಯರಿಗೆ ಸೂಕ್ತವಾದ 10 ಕಾರುಗಳು

By Nagaraja

ಆಧುನಿಕ ಜಗತ್ತಿನಲ್ಲಿ ಎಲ್ಲ ಕ್ಷೇತ್ರದಲ್ಲೂ ಪುರುಷರಿಗೆ ಸಮಾನವಾಗಿ ಮಹಿಳೆಯರು ಬೆಳೆದು ನಿಂತಿದ್ದಾರೆ. ಇದರೊಂದಿಗೆ ಮಹಿಳೆಯರ ಬಗ್ಗೆ ಇದ್ದ ಕಲ್ಪನೆಯಲ್ಲೂ ಬದಲಾವಣೆ ಕಂಡುಬಂದಿದೆ. ವಾಹನ ಜಗತ್ತಿನಲ್ಲೂ ಇದರ ಪ್ರಭಾವ ಕಂಡುಬಂದಿರುವುದು ಶುಭ ಸೂಚಕವಾಗಿದೆ.

ಉದ್ಯೋಗವನ್ನು ಕಂಡುಕೊಳ್ಳುವ ಮಹಿಳೆಯರು ಪುರುಷರನ್ನು ಆಶ್ರಯಿಸದೇ ತಮ್ಮ ಕಾಲಿನಲ್ಲೇ ತಾವೇ ನಿಂತುಕೊಳ್ಳುವಷ್ಟು ಆತ್ಮವಿಶ್ವಾಸವನ್ನು ಪಡೆದಿದ್ದಾರೆ. ಇಲ್ಲಿ ಕಿಕ್ಕಿರಿದು ತುಂಬಿದ ಟ್ರಾಫಿಕ್ ನಡುವೆಯೂ ಮಹಿಳೆಯರು ಸರಾಗವಾಗಿ ವಾಹನ ಓಡಿಸುವುದನ್ನು ಕಾಣಬಹುದಾಗಿದೆ. ಪ್ರಸ್ತುತ ಲೇಖನದಲ್ಲಿ ಮಹಿಳೆಯರಿಗೆ ಸೂಕ್ತವಾದ 10 ಎಎಂಟಿ ಕಾರುಗಳ ಬಗ್ಗೆ ವಿವರವನ್ನು ಕೊಡುವ ಪ್ರಯತ್ನ ಮಾಡಲಿದ್ದೇವೆ.

01. ಟಾಟಾ ನ್ಯಾನೋ ಎಎಂಟಿ

01. ಟಾಟಾ ನ್ಯಾನೋ ಎಎಂಟಿ

ಆಕಾರದಲ್ಲಿ ಸಣ್ಣದಾಗಿರುವ ನ್ಯಾನೋ ಕಾರನ್ನು ನಿರ್ವಹಿಸುವುದು ಅತಿ ಸುಲಭ. ಇನ್ನು ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಥವಾ ಎಎಂಟಿ ತಂತ್ರಗಾರಿಕೆ ಇರುವುದರಿಂದ ಮೊದಲ ಬಾರಿಗೆ ವಾಹನ ಓಡಿಸುವ ಹೆಣ್ಮಕ್ಕಳಿಗೆ ಸೂಕ್ತ ಆಯ್ಕೆಯಾಗಿರಲಿದೆ. ಇಲ್ಲಿ ಪದೇ ಪದೇ ಗೇರ್ ಬದಲಾಯಿಸಬೇಕೆಂಬ ತೊಂದರೆಯು ಕಾಡದು. ಒಟ್ಟಿನಲ್ಲಿ ಅತ್ಯುತ್ತಮ ಚಾಲನೆ, ಸುಲಭ ನಿರ್ವಹಣೆ, ಹೆಚ್ಚಿನ ಮೈಲೇಜ್, ಕಡಿಮೆ ಟರ್ನಿಂಗ್ ರೇಡಿಯಸ್, ಸ್ಪರ್ಧಾತ್ಮಕ ಬೆಲೆ ಹಾಗೂ ಕಡಿಮೆ ದೂರದ ಪ್ರದೇಶಗಳಿಗೆ ಸಂಚರಿಸಲು ನ್ಯಾನೋ ಅತ್ಯುತ್ತಮ ಆಯ್ಕೆಯಾಗಿರಲಿದೆ.

02. ಮಾರುತಿ ಆಲ್ಟೊ ಕೆ10 ಎಎಂಟಿ

02. ಮಾರುತಿ ಆಲ್ಟೊ ಕೆ10 ಎಎಂಟಿ

ಕೆಲವು ಹೆಣ್ಮಕ್ಕಳಿಗೆ ನ್ಯಾನೋ ವಿನ್ಯಾಸ ಇಷ್ಟವಾಗುವುದಿಲ್ಲ. ಅಂತಹ ಭಾವನೆ ನಿಮ್ಮಲ್ಲೂ ಇದ್ದಲ್ಲಿ ನೀವು ನೆರವಾಗಿ ಮಗದೊಂದು ಎಂಟ್ರಿ ಲೆವೆಲ್ ಎಎಂಟಿ ಕಾರಾಗಿರುವ ಆಲ್ಟೊ ಕೆ10 ಆಯ್ಕೆ ಮಾಡಬಹುದಾಗಿದೆ. ನ್ಯಾನೋ ತರಹನೇ ಆಲ್ಟೊ ಕೆ10 ಎಎಂಟಿ ಕಾರು ಸಹ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಂಡಿದ್ದು, ನಿರ್ವಹಣಾ ವೆಚ್ಚವೂ ಕಡಿಮೆಯಾಗಿದೆ.

 03. ಮಾರುತಿ ಸೆಲೆರಿಯೊ ಎಎಂಟಿ

03. ಮಾರುತಿ ಸೆಲೆರಿಯೊ ಎಎಂಟಿ

ಹಾಗೆ ನೋಡಿದಾಗ ನೀವು ಚಾಲನೆಯನ್ನು ಮೊದಲೇ ಕರಗತ ಮಾಡಿಕೊಂಡಿದ್ದಲ್ಲಿ ನೇರವಾಗಿ ಮಾರುತಿ ಸೆಲೆರಿಯೊ ಎಎಂಟಿ ಕಾರನ್ನು ಆಯ್ಕೆ ಮಾಡಬಹುದಾಗಿದೆ. ನಿಮಗಿದು ಗೊತ್ತಿದೆಯೋ ಮಾರುತಿ ಸೆಲೆರಿಯೊ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಎಎಂಟಿ ಕಾರಾಗಿದೆ. ಇಂದು ಶೈಲಿಯಿಂದ ತೊಡಗಿ, ಮೈಲೇಜ್, ಸರ್ವಿಸ್ ಹಾಗೂ ಅನುಕೂಲ ಇತ್ಯಾದಿ ವಿಚಾರದಲ್ಲೂ ಪರಿಣಾಮಕಾರಿಯೆನಿಸಿದೆ.

04. ಹೋಂಡಾ ಬ್ರಿಯೊ ಆಟೋಮ್ಯಾಟಿಕ್

04. ಹೋಂಡಾ ಬ್ರಿಯೊ ಆಟೋಮ್ಯಾಟಿಕ್

ಅತ್ತ ಜಪಾನ್ ಮೂಲದ ಹೋಂಡಾ ಸಂಸ್ಥೆಯು ಬ್ರಿಯೊ ಆಟೋಮ್ಯಾಟಿಕ್ ಕಾರನ್ನು ಒದಗಿಸುತ್ತಿದ್ದು, ಮಾರುತಿ, ಟಾಟಾ ಸಂಸ್ಥೆಗಳಿಗಿಂತ ವಿಭಿನ್ನ ವಾಹನಗಳನ್ನು ಆಯ್ಕೆ ಮಾಡುವವರಿಗೆ ಅತ್ಯುತ್ತಮ ಆಯ್ಕೆಯಾಗಿರಲಿದೆ. ಚೊಕ್ಕದಾದ ಈ ಕಾರು ಮಹಿಳೆಯರಿಗೆ ಅದ್ಬುತ ಚಾಲನಾ ಅನುಭವ ನೀಡಲಿದ್ದು, 5 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಲಗತ್ತಿಸಲಾಗಿದೆ.

05. ಹ್ಯುಂಡೈ ಗ್ರಾಂಡ್ ಐ10 ಆಟೋಮ್ಯಾಟಿಕ್

05. ಹ್ಯುಂಡೈ ಗ್ರಾಂಡ್ ಐ10 ಆಟೋಮ್ಯಾಟಿಕ್

ಇನ್ನೊಂದೆಡೆ ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಹ್ಯುಂಡೈ ಸಹ ಐ10 ಆಟೋಮ್ಯಾಟಿಕ್ ಕಾರಿನ ಮೂಲಕ ಮಹಿಳೆಯರ ಚಾಲನೆಯನ್ನು ಉತ್ತೇಜಿಸುತ್ತಿದೆ. ಅತ್ಯುತ್ತಮ ನೋಟ, ವೈಶಿಷ್ಟ್ಯ, ಇಂಧನ ಕ್ಷಮತೆ ಹಾಗೂ ರಿಸೇಲ್ ಮೌಲ್ಯವನ್ನು ಗ್ರಾಂಡ್ ಐ10 ಕಾಪಾಡಿಕೊಂಡಿದೆ.

06. ಫೋರ್ಡ್ ಫಿಗೊ ಸಿವಿಟಿ

06. ಫೋರ್ಡ್ ಫಿಗೊ ಸಿವಿಟಿ

ಸುಲಭ ಚಾಲನೆ, ನಿರ್ವಹಣೆ ಹಾಗೂ ಗುಣಮಟ್ಟದ ಕಾರನ್ನು ಬಯಸುವುದಾದ್ದಲ್ಲಿ ಫೋರ್ಡ್ ಫಿಗೊ ಸಿವಿಟಿ ಪರಿಪೂರ್ಣ ಆಯ್ಕೆಯಾಗಿರಲಿದೆ. ಕಾಲೇಜ್ ಕನ್ಯೆಯರ ದೈನಂದಿನ ಪಯಣಕ್ಕೂ ಇದು ಹೆಚ್ಚು ಸೂಕ್ತವೆನಿಸಲಿದೆ.

07. ನಿಸ್ಸಾನ್ ಮೈಕ್ರಾ ಎಕ್ಸ್-ಶಿಫ್ಟ್

07. ನಿಸ್ಸಾನ್ ಮೈಕ್ರಾ ಎಕ್ಸ್-ಶಿಫ್ಟ್

ಜಪಾನ್ ಮೂಲದ ನಿಸ್ಸಾನ್ ಸಂಸ್ಥೆಯು ಮೈಕ್ರಾ ಎಕ್ಸ್-ಶಿಫ್ಟ್ ಸಿವಿಟಿ ಗೇರ್ ಬಾಕ್ಸ್ ಕಾರನ್ನು ಗ್ರಾಹಕರಿಗಾಗಿ ಒದಗಿಸುತ್ತಿದೆ. ಶಕ್ತಿಶಾಲಿ ಎಂಜಿನ್ ಜೊತೆಗೆ ಅತ್ಯುತ್ತಮ ಇಂಧನ ಕ್ಷಮತೆಯನ್ನು ಇದು ಕಾಪಾಡಿಕೊಂಡಿದೆ.

08. ಮಾರುತಿ ಬಲೆನೊ ಸಿವಿಟಿ

08. ಮಾರುತಿ ಬಲೆನೊ ಸಿವಿಟಿ

ಹಾಗೊಂದು ವೇಳೆ ನೀವು ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರಿನ ಹುಡುಕಾಟದಲ್ಲಿದ್ದರೆ ಮಾರುತಿ ಬಲೆನೊ ನೆಚ್ಚಿನ ಆಯ್ಕೆಯಾಗಿರಲಿದೆ. ಆಧುನಿಕ ಶೈಲಿಯ ವಿನ್ಯಾಸದ ಜೊತೆಗೆ ಹೆಚ್ಚು ಶಕ್ತಿಶಾಲಿ ಎಂಜಿನ್, ಇಂಧನ ಕ್ಷಮತೆಯೊಂದಿಗೆ ಮಾರುತಿಯಿಂದ ಸರ್ವೀಸ್ ಸೇವೆಯೂ ಲಭ್ಯವಾಗಲಿದೆ.

09. ಹೋಂಡಾ ಜಾಝ್ ಸಿವಿಟಿ

09. ಹೋಂಡಾ ಜಾಝ್ ಸಿವಿಟಿ

ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿರುವ ಆಧುನಿಕ ಕಾರುಗಳಲ್ಲಿ ಹೋಂಡಾ ಜಾಝ್ ಸಿವಿಟಿ ಕೂಡಾ ಒಂದಾಗಿದೆ. ನೂತನ ಹೋಂಡಾ ಜಾಝ್ ಹಿಂದಿಗಿಂತಲೂ ಹೆಚ್ಚು ಪ್ರಭಾವಶಾಲಿ ಎನಿಸಿಕೊಂಡಿದ್ದು, ಗರಿಷ್ಠ ಸ್ಥಳಾವಕಾಶ ಹಾಗೂ ವೈಶಿಷ್ಟ್ಯಗಳನ್ನು ನೀಡುತ್ತಿದೆ.

10. ಹೋಂಡಾ ಸಿಟಿ ಆಟೋಮ್ಯಾಟಿಕ್

10. ಹೋಂಡಾ ಸಿಟಿ ಆಟೋಮ್ಯಾಟಿಕ್

ಹಾಗೊಂದು ವೇಳೆ ನೀವು ಸ್ಟೈಲಿಷ್ ಪ್ರೀಮಿಯಂ ಕಾರಿನ ಹುಡುಕಾಟದಲ್ಲಿದ್ದರೆ ಮಧ್ಯಮ ಗಾತ್ರದ ಸೆಡಾನ್ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟವನ್ನು ಕಾಪಾಡಿಕೊಂಡಿರುವ ಹೋಂಡಾ ಸಿಟಿ ಆಟೋಮ್ಯಾಟಿಕ್ ಕಾರನ್ನು ಆಯ್ಕೆ ಮಾಡಬಹುದಾಗಿದೆ. ಇದು ಸ್ಟೈಲಿಷ್, ಗುಣಮಟ್ಟದ ಹಾಗೂ ಹಣಕ್ಕೆ ತಕ್ಕ ಮೌಲ್ಯವನ್ನು ನೀಡಲಿದೆ.

ರೆನೊ ಕ್ವಿಡ್

ರೆನೊ ಕ್ವಿಡ್

ಈ ನಡುವೆ ಎಎಂಟಿ ವಿಭಾಗಕ್ಕೆ ಮಗದೊಂದು ಕಾರು ಎಂಟ್ರಿ ಕೊಡಲು ಸಜ್ಜಾಗುತ್ತಿದೆ ಅದುವೇ, ರೆನೊ ಕ್ವಿಡ್. ಈಗಾಗಲೇ 2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ರೆನೊ ಕ್ವಿಡ್ ಎಸ್ ಯುವಿ ಶೈಲಿಯ ವಿನ್ಯಾಸ, ಸುಲಭ ಹ್ಯಾಂಡ್ಲಿಂಗ್ ಹಾಗೂ ಕಡಿಮೆ ಬೆಲೆಯಲ್ಲಿ ಗ್ರಾಹಕರನ್ನು ತಲುಪಲಿದೆ.

More from DriveSpark

Article Published On: Tuesday, March 8, 2016, 11:53 [IST]
English summary
Top 10 Best Cars For Women
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+