ಜಗತ್ತಿನ 10 ಅತಿ ವೇಗದ ವಿಮಾನಗಳು

ಪ್ರಮುಖವಾಗಿಯೂ ಅತ್ಯಂತ ವೇಗದ ವಿಮಾನಗಳನ್ನು ಮಿಲಟರಿ ಹಾಗೂ ಅಧ್ಯಯನ ಅಗತ್ಯಗಳಿಗಾಗಿ ನಿರ್ಮಿಸಲಾಗುತ್ತದೆ. ಮೊನಾಚಾದ ವಿನ್ಯಾಸವನ್ನು ಹೊಂದಿರುವ ಇಂತಹ ವಿಮಾನಗಳು ಸಂಚರಿಸುವ ವೇಗವನ್ನು ಸಾಮಾನ್ಯ ಜನರಿಂದ ಊಹಿಸಲಾಸಾಧ್ಯ.

ಮಿಸೈಲ್, ಬಾಂಬ್ ಗಳನ್ನು ಹೊತ್ತುಕೊಂಡು ಸಾಗಬಲ್ಲ ಇಂತಹ ವಿಮಾನಗಳನ್ನು ಯುದ್ಧ ಪರಿಸ್ಥಿತಿಯಲ್ಲಿ ಮಾತ್ರ ಬಳಕೆ ಮಾಡಲಾಗುತ್ತದೆ. ಅಂದ ಹಾಗೆ ಪ್ರತಿಯೊಂದು ದೇಶಗಳೂ ತಮ್ಮದೇ ಆದ ವಿಮಾನ ನಿರ್ಮಾಣ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದೆ. ಇಂದಿನ ಈ ಲೇಖನದಲ್ಲಿ ವಾಯುಪಡೆಯನ್ನು ಬಲಿಷ್ಠವಾಗಿಸಿರುವ ಜಗತ್ತಿನ 10 ಅತಿ ವೇಗದ ವಿಮಾನಗಳ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ.

10. ಸುಖೋಯ್ ಸು-27

10. ಸುಖೋಯ್ ಸು-27

ಶೀತಕಾಲ ಕಾಲಘಟ್ಟದಲ್ಲಿ ಸೋವಿಯತ್ ಒಕ್ಕೂಟ ನಿರ್ಮಿಸಿರುವ ಸುಖೋಯ್ ಸು-27 ಯುದ್ಧ ವಿಮಾನವು ಗಂಟೆಗೆ 2878 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಈ ಟ್ವಿನ್ ಎಂಜಿನ್ ಜೆಟ್ ಗಳನ್ನು ಅಮೆರಿಕದ ಫೈಟರ್ ಗಳ ವಿರುದ್ಧವಾಗಿ ನಿರ್ಮಿಸಿತ್ತು. ಸುಖೋಯ್ ಸು-30, ಸುಖೋಯ್ ಸು-33, ಸುಖೋಯ್ ಸು-34, ಸುಖೋಯ್ ಸು-35 ಹಾಗೂ ಸುಖೋಯ್ ಸು-37 ಇದರ ಆಧುನಿಕ ಆವೃತ್ತಿಗಳಾಗಿದೆ.

09. ಜನರಲ್ ಡೈನಾಮಿಕ್ಸ್ ಎಫ್ 111 ಆರ್ಡ್ ವಾರ್ಕ್

09. ಜನರಲ್ ಡೈನಾಮಿಕ್ಸ್ ಎಫ್ 111 ಆರ್ಡ್ ವಾರ್ಕ್

ಒಂದು ಸಾಮಾನ್ಯ ಫೈಟರ್ ಜೆಟ್ ಗಿಂತಲೂ ಭಿನ್ನವಾಗಿ ಬಾಂಬ್ ದಾಳಿ ನಡೆಸುವ ಸಾಮರ್ಥ್ಯವನ್ನು ಇದು ಹೊಂದಿದೆ. 1998ರಲ್ಲಿ ನಿರ್ಮಾಣ ಸ್ಥಗಿತಗೊಂಡಿರುವ ಈ ವಿಮಾನದಲ್ಲಿ 14,300 ಕೆ.ಜಿ ಸಾಮರ್ಥ್ಯದ ಬಾಂಬ್ ಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಇದಕ್ಕೂ ಮೇಲಾಗಿ 2000 ರೌಂಡ್ ಮೆಷಿನ್ ಗನ್ ಸಹ ಜೋಡಣೆ ಮಾಡಬಹುದಾಗಿದೆ. ಪ್ರಸ್ತುತ ವಿಮಾನ ಗಂಟೆಗೆ 3062 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

8. ಮೆಕ್ ಡೋನಾಲ್ಡ್ ಡಗ್ಲಾಸ್ ಎಫ್-15 ಈಗಲ್

8. ಮೆಕ್ ಡೋನಾಲ್ಡ್ ಡಗ್ಲಾಸ್ ಎಫ್-15 ಈಗಲ್

ಪ್ರಪಂಪದಲ್ಲಿ ನಿರ್ಮಾಣವಾಗಿರುವ ಅತ್ಯಂತ ಯಶಸ್ವಿ ಯುದ್ದ ವಿಮಾನಗಳಲ್ಲಿ ಮೆಕ್ ಡೋನಾಲ್ಡ್ ಡಗ್ಲಾಸ್ ಎಫ್-15 ಈಗಲ್ ಒಂದಾಗಿದೆ. ಅಮೆರಿಕ ವಾಯುಪಡೆಯ ಐದನೇ ತಲೆಮಾರಿ ಈ ವಿಮಾನವು ಗಂಟೆಗೆ 3062 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

07. ಮಿಕೊಯಾನ್ ಮಿಗ್-31 ಫಾಕ್ಸ್ ಬಾಟ್

07. ಮಿಕೊಯಾನ್ ಮಿಗ್-31 ಫಾಕ್ಸ್ ಬಾಟ್

3466 ಕೀ.ಮೀ. ವೇಗದಲ್ಲಿ ಸಂಚರಿಸುವ ಮಿಕೊಯಾನ್ ಮಿಗ್ 31 ಫಾಕ್ಸ್ ಬಾಟ್ ಅತಿ ಎತ್ತರದ ವಾಯುಮಂಡದಲ್ಲೂ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಈ ಸೋವಿಯತ್ ವಿಮಾನವು ಯುದ್ಧ ಸಾಮಾಗ್ರಿಗಳನ್ನು ಹೊತ್ತೊಯ್ಯಲು ಸಮರ್ಥವಾಗಿದೆ.

06. ಎಕ್ಸ್ ಬಿ-70 ವಾಲ್ಕೈರೀ

06. ಎಕ್ಸ್ ಬಿ-70 ವಾಲ್ಕೈರೀ

ವಿಶಿಷ್ಟ ವಿನ್ಯಾಸ, ಆರು ಎಂಜಿನ್, 240,000 ಕೆ.ಜಿ ತೂಕ ಹಾಗೂ ಗಂಟೆಗೆ 3675 ಕೀ.ಮೀ. ವೇಗವು ಎಕ್ಸ್ ಬಿ-70 ವಾಲ್ಕೈರೀ ವಿಮಾನದ ವಿಶಿಷ್ಟತೆಯಾಗಿದೆ.

05. ಬೆಲ್ ಎಕ್ಸ್-2 ಸ್ಟಾರ್ ಬಸ್ಟರ್

05. ಬೆಲ್ ಎಕ್ಸ್-2 ಸ್ಟಾರ್ ಬಸ್ಟರ್

ಅಮೆರಿಕದ ಅಧ್ಯಯನ ವಿಮಾನವಾಗಿರುವ ಬೆಲ್ ಎಕ್ಸ್-2 ಸ್ಟಾರ್ ಬಸ್ಟರ್ 1956ರಲ್ಲಿ ಮೊದಲ ಹಾರಾಟ ನಡೆಸಿತ್ತು. ಆದರೆ ತನ್ನ ಮೊದಲ ಹಾರಾಟದಲ್ಲೇ ಗಂಟೆಗೆ 3915 ಕೀ.ಮೀ. ವೇಗದಲ್ಲಿ ಹಾರಾಟ ನಡೆಸಿದ ಈ ವಿಮಾನವು ಕೆಲವು ತಾಂತ್ರಿಕ ತೊಂದರೆಗಳಿಂದಾಗಿ ವಿಮಾನಕ್ಕೆ ಬೆಚ್ಚಿ ಹಚ್ಚಿಕೊಂಡಿತ್ತು. ಇದರಲ್ಲಿದ್ದ ಪೈಲಟ್ ಮಿಲ್ ಬರ್ನ್ ಜಿ ಆಪ್ಟ್ ಪ್ಯಾರಚೂಟ್ ಸಹಾಯದಿಂದ ಪಾರಾಗಲು ಯತ್ನಿಸಿದ್ದರೂ ಅತಿ ಚಿಕ್ಕ ಪ್ಯಾರಚೂಟ್ ನಿಂದಾಗಿ ತಮ್ಮ ಜೀವವನ್ನೇ ಕಳೆದುಕೊಂಡರು. ಬಳಿಕ ಈ ಯೋಜನೆಯನ್ನು ಕೈಬಿಡಲಾಗಿತ್ತು.

4 ಮಿಕೊಯಾನ್ ಮಿಗ್-25 ಫಾಕ್ಸ್ ಬ್ಯಾಟ್

4 ಮಿಕೊಯಾನ್ ಮಿಗ್-25 ಫಾಕ್ಸ್ ಬ್ಯಾಟ್

ಶೀತಕಾಲ ಸಮರ ಕಾಲಘಟ್ಟದಲ್ಲಿ ಅಮೆರಿಕ ಹಾಗೂ ಸೋವಿಯತ್ ಒಕ್ಕೂಟಗಳು ತಮ್ಮ ಮಿಲಿಟರಿ ಬಲವನ್ನು ಬಲಾಢ್ಯಗೊಳಿಸುವುದರಲ್ಲಿ ತಲ್ಲೀನವಾಗಿದ್ದವು. ಇದರಂತೆ ಶತ್ರು ರಾಷ್ಟ್ರಗಳನ್ನು ಹೊಡೆದುರುಳಿಸಲು ಸಿದ್ಧ ಈ ಸೋವಿಯತ್ ಜೆಟ್ ಗಂಟೆಗೆ 3920 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

03. ಲಾಕ್ ಹೀಡ್ ವೈಎಫ್-12

03. ಲಾಕ್ ಹೀಡ್ ವೈಎಫ್-12

ಅಮೆರಿಕದ ಪ್ರತಿಬಂಧಕ ಮೊದಲ ಮಾದರಿ ಯುದ್ಧ ವಿಮಾನ ಇದಾಗಿದ್ದು ಗಂಟೆಗೆ 4103 ಕೀ.ಮೀ. ವೇಗದಲ್ಲಿ ಸಂಚರಿಸುತ್ತದೆ. ಬ್ಲ್ಯಾಕ್ ಬರ್ಡ್ ಯುದ್ಧ ವಿಮಾನಕ್ಕೆ ಸಾಮತ್ಯೆಯನ್ನು ಹೊಂದಿರುವ ಇದು ಅತಿ ಎತ್ತರದ ವಾಯು ಮಂಡಲದಲ್ಲಿ ಸಂಚರಿಸುವಷ್ಟು ಶಕ್ತವಾಗಿದೆ.

02. ಲಾಕ್ ಹೀಡ್ ಎಸ್ ಆರ್-71 ಬ್ಲ್ಯಾಕ್ ಬರ್ಡ್

02. ಲಾಕ್ ಹೀಡ್ ಎಸ್ ಆರ್-71 ಬ್ಲ್ಯಾಕ್ ಬರ್ಡ್

1966ರಲ್ಲಿ ಎಂಟ್ರಿ ಕೊಟ್ಟಿದ್ದ ಬ್ಲ್ಯಾಕ್ ಬರ್ಡ್ ಸೇವೆಯನ್ನು ಅಮೆರಿಕ ವಾಯುಪಡೆಯ ಜೊತೆಗೆ ನಾಸಾ ಕೂಡಾ ಬಳಕೆ ಮಾಡಿತ್ತು. ಪ್ರಾಯೋಗಿಕ ಪರೀಕ್ಷೆ ಹಾಗೂ ಸಂಶೋಧನೆಗಾಗಿ ಇಂತಹ 32 ಮಾದರಿಗಳನ್ನು ನಿರ್ಮಿಸಲಾಗಿತ್ತು. ಇದು ಗಂಟೆಗೆ 4100ಗಿಂತಲೂ ಹೆಚ್ಚಿನ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

1. ನಾರ್ತ್ ಅಮೆರಿಕನ್ ಎಕ್ಸ್ 15

1. ನಾರ್ತ್ ಅಮೆರಿಕನ್ ಎಕ್ಸ್ 15

ಪ್ರಸ್ತುತ ಜಗತ್ತಿನ ಅತಿ ವೇಗದ ವಿಮಾನ ಎಂಬ ಗೌರವಕ್ಕೆ ನಾರ್ತ್ ಅಮೆರಿಕನ್ ಎಕ್ಸ್15 ಪಾತ್ರವಾಗಿದೆ. ಇದು ಗಂಟೆಗೆ 7200 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಇದರ ವಿಶೇಷವೆಂದರೆ ಭೂಮಿಗಿಂತ 100 ಕೀ.ಮೀ. ಮೇಲ್ಪೆಯಲ್ಲಿ ಸಂಚರಿಸುವಷ್ಟು ಶಕ್ತವಾಗಿದ್ದು, ಶಬ್ದ ವೇಗಕ್ಕಿಂತ ಆರು ಪಟ್ಟು ಜಾಸ್ತಿ ವೇಗವನ್ನು ಹೊಂದಿರುತ್ತದೆ.

More from DriveSpark

Article Published On: Friday, May 15, 2015, 11:03 [IST]
English summary
Top Ten Fastest Aircraft In The World
Read more on ವಿಮಾನ plane
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+