ಟಾಟಾ ಎಲೆಕ್ಟ್ರಿಕ್ ಕಾರಿನಲ್ಲಿ ಚಹಾ ಮಾಡಿ ಕುಡಿದ ಪ್ರವಾಸಿಗ: ಹೇಗೆ ಗೊತ್ತಾ?
ಭಾರತೀಯರ ಹಾಟ್ ಫೇವ್‌ರೇಟ್ ಪಾನೀಯ ಅಂದ್ರೆ ಅದು ಚಹಾ ಎಂದರೆ ತಪ್ಪಗಲಾರದು. ಯಾವಾಗ ಬೇಕಾದರೂ, ಯಾವ ಟೈಮಲ್ಲಿ ಬೇಕಾದರೂ ಕುಡಿಯುತ್ತಾರೆ. ಇಷ್ಟೇ ಅಲ್ಲದೇ ಅಲ್ಲಿ ಟೀ ಚೆನ್ನಾಗಿರುತ್ತದೆ, ಇಲ್ಲಿ ಚೆನ್ನಾಗಿರುತ್ತದೆ ಎಂದು ಸ್ಥಳಗಳನ್ನು ಹುಡುಕಿಕೊಂಡು ಹೋಗಿ ಕುಡಿಯುತ್ತಾರೆ. ಆದರೆ ವ್ಯಕ್ತಿಯೊಬ್ಬರು ಟಾಟಾ ಕರ್ವ್ ಇವಿ (Tata Curvv ev) ಮಾದರಿಯನ್ನು ಬಳಸಿಕೊಂಡು ಚಹಾವನ್ನು ತಯಾರಿಸುವ ವೀಡಿಯೊಂದು ವೈರಲ್ ಆಗಿದೆ. ವ್ಯಕ್ತಿಯೊಬ್ಬರು ಹಿಮಪಾತದಿಂದಾಗಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಾಗ ಟಾಟಾ ಕರ್ವ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಬಳಿಸಿಕೊಂಡು ಚಹಾವನ್ನು ರೆಡಿಮಾಡಿದ್ದಾರೆ.
ಈ ವಿಡಿಯೋವನ್ನು ರಾಮ್ ಗೋತವಾಲ್ ಎಂಬವರು ತಮ್ಮ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ, ಹಿಮ ಪರ್ವತಗಳಲ್ಲಿ ಎಲ್ಲೋ ತಮ್ಮ ಸರದಿಗಾಗಿ ವಾಹನಗಲ್ಲಿ ಉದ್ದನೆಯ ಸಾಲು ಕಾಯುತ್ತಿರುವುದನ್ನು ನಾವು ನೋಡಬಹುದು. ನಾವು ಇತ್ತೀಚೆಗೆ ಹಿಮಾಚಲ ಪ್ರದೇಶದಲ್ಲಿ ಭಾರೀ ಟ್ರಾಫಿಕ್ ಜಾಮ್‌ಗಳ ವರದಿಯಾಗಿತ್ತು. ಆ ಸಮಯದಲ್ಲಿ ಹಿಮಾಚಲದಿಂದ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ ಎಂದು ನಾವು ಭಾವಿಸುತ್ತೇವೆ.

ರಸ್ತೆಯಲ್ಲಿ ನಿಲ್ಲಿಸಿದ ಪ್ರತಿಯೊಂದು ವಾಹನದ ಮೇಲೆ ದಟ್ಟವಾದ ಹಿಮದ ಪದರವನ್ನು ನಾವು ನೋಡಬಹುದು. ಭಾರೀ ಹಿಮಪಾತದಿಂದಾಗಿ ಸಂಚಾರ ಸ್ಥಗಿತಗೊಂಡಿದೆ ಎಂದು ವ್ಲಾಗರ್ ಹೇಳಿಕೊಂಡಿದ್ದಾರೆ. ವೀಡಿಯೊದಲ್ಲಿ ಕಂಡುಬರುವ ಹೆಚ್ಚಿನ ಕಾರುಗಳು 2 ವ್ಹೀಲ್ ಡ್ರೈವ್ ಆಗಿದ್ದು, ಹಿಮದಲ್ಲಿ ಯಾವುದೇ ಪ್ರಯೋಜನವಿಲ್ಲ. ಅಲ್ಲದೆ, ವೀಡಿಯೊದಲ್ಲಿರುವ ಹೆಚ್ಚಿನ ವಾಹನಗಳು ಹಿಮದಲ್ಲಿ ಚಾಲನೆ ಮಾಡಿದ ಅನುಭವವಿಲ್ಲದ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ.
ಈ ವೇಳೆ ರಾಜಸ್ಥಾನ ಮೂಲದ ಟಾಟಾ ಕರ್ವ್ ಇವಿ ಚಾಲಕ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದು, ಹೆಚ್ಚಿನ ಭಾರತೀಯರಂತೆ ಆತನಿಗೂ ಒಂದು ಕಪ್ ಚಹಾ ಕುಡಿಬೇಕೆಂದು ಅನಿಸಿದೆ. ಹಾಗಾದರೆ, ಅವನು ಎಲ್ಲಿ ಚಹಾ ಕುಡಿಯುವುದು ಎಂದು ಯೋಜಿಸುತ್ತಾರೆ. ಈ ಸಂದರ್ಭದಲ್ಲಿ ಅವರ ತಲೆಗೆ ಒಂದು ಉಪಾಯ ಹೊಳೆಯುತ್ತದೆ. ಅವರು ಸರಳವಾಗಿ ವಿದ್ಯುತ್ ಕೆಟಲ್ ಅನ್ನು ಕರ್ವ್ ಇವಿ ಚಾರ್ಜಿಂಗ್ ಪೋರ್ಟ್‌ಗೆ ಸಂಪರ್ಕಿಸಿದರು ಮತ್ತು ಚಹಾವನ್ನು ತಯಾರಿಸಲು ಪ್ರಾರಂಭಿಸಿದರು.

ಈ ಎಲೆಕ್ಟ್ರಿಕ್ ಎಸ್‍ಯುವಿ ವೆಹಿಕಲ್ ಟು ಲೋಡ್ ಅಥವಾ V2L ನೊಂದಿಗೆ ಬರುತ್ತದೆ. ಇದು ಹೆಚ್ಚಿನ ಆಧುನಿಕ ಎಲೆಕ್ಟ್ರಿಕ್ ಕಾರುಗಳಲ್ಲಿನ ವೈಶಿಷ್ಟ್ಯವಾಗಿದ್ದು, ವಾಹನದ ಬ್ಯಾಟರಿಯು ಬಾಹ್ಯ ಸಾಧನಗಳಿಗೆ ಪವರ್ ಅನ್ನು ನೀಡುತ್ತದೆ. ನೀವು ಸರಿಯಾದ ಅಡಾಪ್ಟರ್ ಹೊಂದಿದ್ದರೆ, ನೀವು ಟೆಲಿವಿಷನ್‌ಗಳು, ಇಂಡಕ್ಷನ್ ಕುಕ್‌ಟಾಪ್‌ಗಳು, ಕಾಫಿ ಯಂತ್ರಗಳು ಮತ್ತು ಮುಂತಾದ ಹಲವಾರು ಎಲೆಕ್ಟ್ರಾನಿಕ್ ಸಾಧನಗಳಿಗೆ ಶಕ್ತಿಯನ್ನು ನೀಡಬಹುದು.
ಈ ಸಂದರ್ಭದಲ್ಲಿ, ಮಾಲೀಕರು ಚಹಾ ಮಾಡಲು ಎಲೆಕ್ಟ್ರಿಕ್ ಕೆಟಲ್ ಅನ್ನು ಪವರ್ ಆಗಿ ಬಳಿಸಲು ನಿರ್ಧರಿಸಿದರು. ಇದನ್ನು ಬಳಿಸಿ ಆತ ಚಹಾ ಮಾಡಿ ಕುಡಿದನು. ಈ ವೀಡಿಯೋ ಅಡಿಯಲ್ಲಿ ಇವಿ ಮಾಲೀಕರನ್ನು ಟೀ ತಯಾರಿಸಿದ್ದಕ್ಕೆ ಗೇಲಿ ಮಾಡುವ ಕಾಮೆಂಟ್‌ಗಳಿವೆ. ಅವರಲ್ಲಿ ಹಲವರು ಇದು ಕೆಟ್ಟ ಆಲೋಚನೆ ಮತ್ತು ಶೀಘ್ರದಲ್ಲೇ ಕಾರಿನ ಚಾರ್ಜ್ ಖಾಲಿಯಾಗಲಿದೆ ಎಂದು ಬರೆದಿದ್ದಾರೆ.
ಆದರೆ ಇದು ಸಂಪೂರ್ಣ ಸತ್ಯವಲ್ಲ. ನೀವು ಈ ವೈಶಿಷ್ಟ್ಯವನ್ನು ವ್ಯಾಪಕವಾಗಿ ಬಳಸಿದರೆ ಮಾತ್ರ ಸಮಸ್ಯೆಯಾಗುತ್ತದೆ. ಚಹಾವನ್ನು ತಯಾರಿಸಲು ಹೆಚ್ಚಿನ ಪವರ್ ಅಗತ್ಯವಿರುವುದಿಲ್ಲ. ಟಾಟಾ ಕರ್ವ್ ಇವಿ ಎಂಬುದು ಟಾಟಾದ ಶ್ರೇಣಿಯಲ್ಲಿನ ಇತ್ತೀಚಿನ ಎಲೆಕ್ಟ್ರಿಕ್ ವಾಹನವಾಗಿದೆ. ಟಾಟಾ ಕರ್ವ್ ಇವಿಯು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳನ್ನು ಹೊಂದಿವೆ.
ಇದರಲ್ಲಿ 45 kWh ಬ್ಯಾಟರಿ ಪ್ಯಾಕ್ 502 ಕಿ.ಮೀ ರೇಂಜ್ ನೀಡಿದರೆ, 55 kWh ಬ್ಯಾಟರಿ ಪ್ಯಾಕ್ 585 ಕಿ.ಮೀ ರೇಂಜ್ ನೀಡುತ್ತದೆ. ಈ ಎಲೆಕ್ಟ್ರಿಕ್ ಕಾರನ್ನು ಫಾಸ್ಟ್ ಚಾರ್ಜಿಂಗ್ ಮೂಲಕ ಕೇವಲ 10 ನಿಮಿಷಗಳು ಚಾರ್ಜ್ ಮಾಡಿದರೆ 150 ಕಿಮೀ ರೇಂಜ್ ಅನ್ನು ನೀಡಬಹುದು. ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಈ ಹೊಸ ಟಾಟಾ ಕರ್ವ್ ಇವಿಯು 163 bhp ಪವರ್ ಉತ್ಪಾದಿಸುವ ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ.


Click it and Unblock the Notifications