ಬೆಂಗಳೂರಿನಲ್ಲಿ ಅಪ್ಪ-ಮಗನಿಗೆ ಒಂದೇ ದಿನ ಹೊಸ ಕಾರುಗಳ ಡೆಲಿವರಿ ಕೊಟ್ಟ ಡೀಲರ್

ಬೆಂಗಳೂರಿನ ಶೋರೂಂವೊಂದರಲ್ಲಿ ಒಂದೇ ದಿನ ಅಪ್ಪ-ಮಗನಿಗೆ ಎರಡು ಟೊಯೊಟಾ ಕಾರುಗಳನ್ನು ಡೆಲಿವರಿ ನೀಡಲಾಗಿದೆ. ತಂದೆಗೆ ಟೊಯೋಟಾ ಫಾರ್ಚೂನರ್ ಮತ್ತು ಮಗನಿಗೆ ಅರ್ಬನ್ ಕ್ರೂಸರ್ ಹೈರೈಡರ್ ಎಸ್‌ಯುವಿಗಳನ್ನು ಡೆಲಿವರಿ ನೀಡಲಾಗಿದೆ. ಇಬ್ಬರೂ ಕಪ್ಪು ಪ್ಯಾಂಟ್ ಮತ್ತು ಬಿಳಿ ಶರ್ಟ್ ಧರಿಸಿ, ತಮ್ಮ ಸತಿ ಹಾಗೂ ಮಕ್ಕಳೊಂದಿಗೆ ಡೆಲಿವರಿ ಪಡೆದಿದ್ದಾರೆ. ಇದೇ ವೇಳೆ ಫೋಟೋಗಳಿಗೆ ಪೋಸ್ ಕೊಟ್ಟು ಸಿಹಿ ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದ್ದಾರೆ. ಈ ಅಪರೂಪದ ಡೆಲಿವರಿ ಬೆಂಗಳೂರಿನ ರವೀಂದು ಟೊಯೊಟಾದಲ್ಲಿ ನಡೆಯಿತು. ಈ ಕುರಿತ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ರವೀಂದ್ರ ಗೌಡ ಮತ್ತು ಕುಟುಂಬವು ಈ ಎರಡು ಹೊಸ ಕಾರುಗಳನ್ನು ಡೆಲಿವರಿ ಪಡೆಯಲು ತಮ್ಮ ಹಳೆಯ ಇನ್ನೋವಾ ಮತ್ತು ಗ್ಲಾಂಝಾದಲ್ಲಿ ಆಗಮಿಸಿದ್ದರು. ರವೀಂದ್ರ ಗೌಡ ಫಾರ್ಚೂನರ್ ಖರೀದಿಸಿದ್ದು, ಈ ಕಾರು ಶ್ರೀಮಂತರಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಇದನ್ನು ಹೆಚ್ಚಾಗಿ ಯಶಸ್ಸು ಮತ್ತು ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇನ್ನು ಗೌಡರ ಮಗ ಹೊಸ ಅರ್ಬನ್ ಕ್ರೂಸರ್ ಹೈರೈಡರ್ ಎಸ್‌ಯುವಿಯನ್ನು ಖರೀದಿಸಿದ್ದಾರೆ.

toyota-fortuner-and-hyryder-father-son-taken-delivery-same-day

ಟೊಯೋಟಾ ಹೈರೈಡರ್ ವಿಶೇಷತೆ: ಭಾರತದಲ್ಲಿ ಟೊಯೋಟಾ ಹೈರೈಡರ್ 1.5 ಲೀಟರ್ 4-ಸಿಲಿಂಡರ್ ಪೆಟ್ರೋಲ್, 1.5 ಲೀಟರ್ 3-ಸಿಲಿಂಡರ್ ಪೆಟ್ರೋಲ್ ಹೈಬ್ರಿಡ್, 1.5 ಲೀಟರ್ 4-ಸಿಲಿಂಡರ್ ಸಿಎನ್‌ಜಿ ಎಂಬ ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದರಲ್ಲಿ ಸ್ಟ್ರಾಂಗ್ ಹೈಬ್ರಿಡ್ ವೇರಿಯೆಂಟ್‌ಗಳು ಉತ್ತಮ ಮೈಲೇಜ್ ನೀಡುತ್ತವೆ.

ಇದು 5-ಸೀಟರ್ ಎಸ್‌ಯುವಿಯಾಗಿದ್ದು, ಒಳಭಾಗದಲ್ಲಿ ಸಾಕಷ್ಟು ಸ್ಥಳಾವಕಾಶವನ್ನು ಹೊಂದಿದೆ. ಫ್ರಂಟ್ ಸ್ಲೈಡಿಂಗ್ ಆರ್ಮ್ರೆಸ್ಟ್, ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಸ್ಟೀರಿಂಗ್ ವೀಲ್, ಎಲೆಕ್ಟ್ರಿಕ್ ಫೋಲ್ಡಿಂಗ್ ವಿಂಗ್ ಮಿರರ್, ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿ 4.2-ಇಂಚಿನ ಟಿಎಫ್ಟಿ ಡಿಸ್ಪ್ಲೇ, ರಿಕ್ಲೈನಿಂಗ್ ಹಿಂಭಾಗದ ಸೀಟುಗಳು, ಆಟೋ ಎಸಿ, ರಿಯರ್ ಎಸಿ ವೆಂಟ್‌ಗಳು, ಕೀಲೆಸ್ ಎಂಟ್ರಿ ಮತ್ತು ಗೋನಂತಹ ಫೀಚರ್ಸ್ ಹೊಂದಿದೆ.

toyota-fortuner-and-hyryder-father-son-taken-delivery-same-day

ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸಾರ್, ಇಬಿಡಿಯೊಂದಿಗೆ ಎಬಿಎಸ್, ಹಿಲ್ ಹೋಲ್ಡ್ ಕಂಟ್ರೋಲ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ (ವಿಎಸ್ ಸಿ) ಇತ್ಯಾದಿಗಳನ್ನು ಒಳಗೊಂಡಿದೆ. ಈ ಕಾರು ಭಾರತದಲ್ಲಿ ಮಾರುತಿ ಸುಜುಕಿ ಗ್ರಾಂಡ್‌ ವಿಟಾರದ ರೀಬ್ಯಾಡ್ಜ್ ಆವೃತ್ತಿಯಾಗಿದ್ದು, ಉತ್ತಮ ಮಾರಾಟವನ್ನು ಕಾಣುತ್ತಿದೆ.

ಟೊಯೋಟಾ ಫಾರ್ಚೂನರ್ ವಿಶೇಷತೆ: ಫಾರ್ಚೂನರ್ ಆಫ್‌ರೋಡ್ ಟೆಕ್, ಹಾರ್ಡ್‌ವೇರ್‌ ಮತ್ತು ಲಕ್ಷುರಿಗೆ ಜನಪ್ರಿಯತೆ ಪಡೆದಿದೆ. ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್, ಆಫ್-ರೋಡ್ ಸ್ಪೆಕ್ ಸಸ್ಪೆಂಷನ್, ರಿಯರ್ ಡಿಫರೆನ್ಷಿಯಲ್ ಲಾಕ್, ಆಕ್ಟಿವ್ ಟ್ರಾಕ್ಷನ್ ಕಂಟ್ರೋಲ್, ಲಿಮಿಟೆಡ್ ಸ್ಲಿಪ್ ಡಿಫರೆನ್ಷಿಯಲ್ ಮತ್ತು ಡೌನ್ ಹಿಲ್ ಅಸಿಸ್ಟ್ ಕಂಟ್ರೋಲ್‌ನಂತಹ ಪವರ್‌ಫುಲ್ ಫೀಚರ್ಸ್ ಒಳಗೊಂಡಿದೆ.

4×4 ಹಾರ್ಡ್‌ವೇರ್ ನೊಂದಿಗೆ ಬರುವ ಫಾರ್ಚೂನರ್, 2.8 ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, ಹಿಲಕ್ಸ್ ಪ್ಲಾಟ್ ಫಾರ್ಮ್ ಅನ್ನು ಆಧರಿಸಿದೆ. ಫಾರ್ಚೂನರ್‌ನಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿವೆ. ಉಳಿದಂತೆ ಲೀಡರ್ ಆವೃತ್ತಿಯಂತಹ ಕೆಲವು ಆಯ್ದ ವಿಶೇಷ ಆವೃತ್ತಿಗಳನ್ನು ಹೊರತುಪಡಿಸಿ, ಕಳೆದ ಕೆಲವು ವರ್ಷಗಳಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಿಲ್ಲದೆ ಈ ಎಸ್‌ಯುವಿ ಮುಂದುವರಿಯುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, September 20, 2024, 16:34 [IST]
English summary
Toyota fortuner and hyryder father son taken delivery same day
Read more on india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+