Video: ಗಜ ಗಾತ್ರದ ಟೊಯೊಟಾ ಫಾರ್ಚುನರ್.. ಸಣ್ಣ ಟಾಟಾ ಟಿಯಾಗೊ ಡಿಶುಂ - ಡಿಶುಂ: ಮುಂದೇನಾಯ್ತು?

ದೇಶದಲ್ಲಿ ನಾನಾ ಕಾರಣಗಳಿಗೆ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಬಹುತೇಕ ರಸ್ತೆ ಅಪಘಾತಗಳಿಗೆ ಅತಿ ವೇಗದ ಚಾಲನೆ ಹಾಗೂ ಚಾಲನಾ ಅನುಭವದ ಕೊರತೆ ಪ್ರಮುಖ ಕಾರಣವಾಗಿದೆ. ಸದ್ಯ, ಟೊಯೊಟಾ ಫಾರ್ಚುನರ್ (Toyota Fortuner) ಹಾಗೂ ಟಾಟಾ ಟಿಯಾಗೊ (Tata Tiago) ಕಾರುಗಳು ಡಿಕ್ಕಿಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಅಪಘಾತವಾದ ರಭಸಕ್ಕೆ ಟೊಯೊಟಾ ಫಾರ್ಚುನರ್ ಹಲವು ಬಾರಿ ಪಲ್ಟಿಯಾಗಿದೆ.

'ಸೇಫ್ ಕಾರ್ಸ್ ಇಂಡಿಯಾ' ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ಕಾರುಗಳ ಅಪಘಾತದ ವಿಡಿಯೋವನ್ನು ಹಂಚಿಕೊಳ್ಳಲಿದೆ. ಅಪಘಾತದ ಪರಿಣಾಮ ಎರಡು ಕಾರುಗಳ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಅದರಲ್ಲೂ ಸಣ್ಣ ಹ್ಯಾಚ್‌ಬ್ಯಾಕ್ ಟಿಯಾಗೊಗೆ ಹೋಲಿಕೆ ಮಾಡಿದರೆ, ಟೊಯೊಟಾ ಫಾರ್ಚುನರ್ ಎಸ್‌ಯುವಿಗೆ ಹೆಚ್ಚಿನ ಹಾನಿಯಾಗಿರುವಂತೆ ತೋರುತ್ತಿದೆ.

Toyota Fortuner And Tata Tiago Car Crashes Video Viral What Happens Next

ಈ ಅಪಘಾತ ಎಲ್ಲಿ ನಡೆದಿದೆ ಎಂಬುದರ ಕುರಿತಂತೆ ಸ್ಪಷ್ಟವಾದ ವಿವರಗಳು ಲಭ್ಯವಾಗಿಲ್ಲ. ಅಲ್ಲಿನ ಪ್ರತ್ಯಕ್ಷದರ್ಶಿಯೊಬ್ಬರ ಪ್ರಕಾರ, 'ಈ ಟೊಯೊಟಾ ಫಾರ್ಚುನರ್ ಕಾರನ್ನು ಅತಿ ವೇಗದಲ್ಲಿ ಚಲಾಯಿಸಲಾಗುತ್ತಿತ್ತು. ಈ ವೇಳೆ, ಅಪಘಾತವಾಗುವುದನ್ನು ತಪ್ಪಿಸಲು ಅದರ ಚಾಲಕ ಪ್ರಯತ್ನಿಸುತ್ತನೆ. ಆದರೆ, ನಿಯಂತ್ರಣ ಕಳೆದುಕೊಂಡು ಟಾಟಾ ಟಿಯಾಗೊ ಹ್ಯಾಚ್‌ಬ್ಯಾಕ್‌ಗೆ ಡಿಕ್ಕಿಯಾಗುತ್ತದೆ' ಎಂದು ಹೇಳಿದ್ದಾರೆ.

ವಿಡಿಯೋದಲ್ಲಿ ಟಿಯಾಗೊ ಕಾರಿನಲ್ಲಿ ಪ್ರಯಾಣಿಕರ ಜೀವರಕ್ಷಕವಾಗಿರುವ ಏರ್‌ಬ್ಯಾಗ್‌ಗಳು ಕೂಡ ತೆರೆದುಕೊಂಡಿರುವುದನ್ನು ಕಾಣಬಹುದು. ಫಾರ್ಚುನರ್‌ನ ಏರ್‌ಬ್ಯಾಗ್‌ಗಳು ತೆರೆದುಕೊಂಡಿವೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ. ಅದೃಷ್ಟವಶಾತ್ ಎರಡು ಕಾರುಗಳ ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿರುವುದು ಬಿಟ್ಟರೆ, ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.

ಟಾಟಾ ಟಿಯಾಗೊ ಹಾಗೂ ಟೊಯೊಟಾ ಫಾರ್ಚುನರ್ ಕಾರುಗಳು, ಪ್ರಯಾಣಿಕರ ರಕ್ಷಣೆಗಾಗಿ ಗರಿಷ್ಠ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿವೆ. ಈ ಟಾಟಾ ಟಿಯಾಗೊ ಹ್ಯಾಚ್‌ಬ್ಯಾಕ್‌ ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಕಾರ್ನೆರಿಂಗ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ರೇರ್ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಒಳಗೊಂಡಿದೆ.

ಟೊಯೊಟಾ ಫಾರ್ಚುನರ್ 7 ಆಸನಗಳ ಹೊಂದಿರುವ ಪುಲ್-ಸೈಜ್ ಎಸ್‌ಯುವಿಯಾಗಿದ್ದು, ಪ್ರಯಾಣಿಕರಿಗೂ ಹೆಚ್ಚಿನ ರಕ್ಷಣೆ ಒದಗಿಸಬಲ್ಲದು. ಸುರಕ್ಷತೆಯ ದೃಷ್ಟಿಯಿಂದ 7 - ಏರ್‌ಬ್ಯಾಗ್‌ಗಳು, ವಿಎಸ್‌ಸಿ (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), ಟ್ರಾಕ್ಷನ್ ಕಂಟ್ರೋಲ್ ಹಾಗೂ ಹಿಲ್ ಅಸಿಸ್ಟ್ ಸೇರಿದಂತೆ ವಿವಿಧ ರಕ್ಷಣಾತ್ಮಕ ವೈಶಿಷ್ಟ್ಯಗಳನ್ನು ಪಡೆದಿದೆ.

ವಾಹನ ಚಲಾಯಿಸುವಾಗ ಜಾಗ್ರತೆ ಅಗತ್ಯ: ಕಾರು ಮತ್ತು ಇತರೆ ಯಾವುದೇ ವಾಹನಗಳನ್ನು ತುಂಬಾ ಎಚ್ಚರಿಕೆಯಿಂದ ಚಲಾಯಿಸಬೇಕು. ಇದರಿಂದ ಸಂಭಾವ್ಯ ಅಪಘಾತವನ್ನು ತಪ್ಪಿಸಬಹುದು. ಚಾಲನೆ ವೇಳೆ ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಅತಿ ವೇಗದಲ್ಲಿ ಚಾಲನೆ ಮಾಡಬಾರದು. ನಿಗದಿಪಡಿಸಿದ ವೇಗದಲ್ಲಿಯೇ ವಾಹನಗಳನ್ನು ಓಡಿಸಬೇಕು. ಹೆದ್ದಾರಿಯಲ್ಲಿ ಹೋಗುವಾಗ ಸರಿಯಾದ ಪಥದಲ್ಲಿಯೇ ವಾಹನಗಳನ್ನು ಚಲಾಯಿಸಬೇಕು.

ಮದ್ಯಪಾನ ಮಾಡಿ ವಾಹನಗಳನ್ನು ಚಲಾಯಿಸಬಾರದು. ಏರ್‌ಫೋನ್‌ ಅಥವಾ ಮೊಬೈಲ್ ಫೋನ್‌ನಲ್ಲಿ ಮಾತನಾಡಿಕೊಂಡು ವಾಹನಗಳನ್ನು ಓಡಿಸಬೇಡಿ. ನಿದ್ರೆ ಮಂಪರಿನಲ್ಲಿದ್ದಾಗ ಎಂದಿಗೂ ವಾಹನಗಳನ್ನು ಚಲಾಯಿಸಬಾರದು. ಕಾರಿನಲ್ಲಿ ತೆರಳುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಿರಿ. ಬೈಕ್ ಇಲ್ಲವೇ ಸ್ಕೂಟರ್‌ನಲ್ಲಿ ಹೋಗುವಾಗ ತಲೆಗೆ ಉತ್ತಮ ಗುಣಮಟ್ಟದ ಹೆಲ್ಮೆಟ್ ಹಾಕಿಕೊಳ್ಳುವುದನ್ನು ಮರೆಯದಿರಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, November 21, 2024, 12:36 [IST]
English summary
Toyota fortuner and tata tiago car crashes video viral what happens next
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+