ಟಾಟಾ ಹ್ಯಾರಿಯರ್‌ಗೆ ಡಿಕ್ಕಿಯೊಡೆದ ಟೊಯೊಟಾ ಫಾರ್ಚುನರ್: ಏನಾಯಿತು?.. ವಿಡಿಯೋ ನೋಡಿ

ದೇಶದಲ್ಲಿ ನಾನಾ ಕಾರಣಗಳಿಗೆ ಒಂದಿಲ್ಲೊಂದು ರಸ್ತೆ ಅಪಘಾತಗಳು ಸಂಭವಿಸುತ್ತವೆ. ಇಂತಹ ಘಟನೆಯಲ್ಲಿ ಕೆಲವರು ತಮ್ಮ ತಪ್ಪು ಇಲ್ಲದಿದ್ದರೂ ತೊಂದರೆಗೆ ಸಿಲುಕಿಕೊಳ್ಳುತ್ತಾರೆ. ಹಲವು ಅಪಘಾತಗಳು ಮುಂಭಾಗದಲ್ಲಿರುವ ವಾಹನ ಸಡನ್ ಬ್ರೇಕ್ ಹಾಕಿದಾಗ, ಹಿಂಬದಿಯಿಂದ ಮತ್ತೊಂದು ವಾಹನ ಬಂದು ಡಿಕ್ಕಿಯೊಡೆದು ಜರುಗುತ್ತವೆ. ಸದ್ಯ, ಆ ರೀತಿಯಾಗಿಯೇ ಇಲ್ಲೊಂದು ಕಡೆ ನಡೆದಿದೆ ಎನ್ನಲಾಗಿದೆ.

ಟಾಟಾ ಹ್ಯಾರಿಯರ್‌ಗೆ (Tata Harrier) ಟೊಯೊಟಾ ಫಾರ್ಚುನರ್ (Toyota Fortuner) ಗುದ್ದಿರುವ ವಿಡಿಯೋವನ್ನು ಇಂಡಿಯನ್ ಆಟೋಮೊಬೈಲ್ 786 ಎಂಬ ಯೂಟ್ಯೂಬ್‌ ವಾಹಿನಿಯಲ್ಲಿ ಹಂಚಿಕೊಳ್ಳಲಾಗಿದೆ. ಬಿಳಿ ಬಣ್ಣದ ಟೊಯೊಟಾ ಫಾರ್ಚುನರ್, ಹಝರ್ಡ್ ಲೈಟ್ (ಅಪಾಯದ ದೀಪ - hazard lights) ಆನ್ ಮಾಡಿ, ರಸ್ತೆಯಲ್ಲಿ ನಿಂತಿದ್ದು, ಅದಕ್ಕೆ ಸ್ವಲ್ಪ ಹಾನಿಯಾಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಟಾಟಾ ಹ್ಯಾರಿಯರ್‌ಗೆ ಡಿಕ್ಕಿಯೊಡೆದ ಟೊಯೊಟಾ ಫಾರ್ಚುನರ್: ಏನಾಯಿತು?.. ವಿಡಿಯೋ ನೋಡಿ

ಹೊಸ, ಟಾಟಾ ಹ್ಯಾರಿಯರ್ ಡಾರ್ಕ್ ಎಡಿಷನ್ ಹಿಂಭಾಗಕ್ಕೂ ಡ್ಯಾಮೇಜ್ ಆಗಿದ್ದು, ನಿಧಾನವಾಗಿ ರಸ್ತೆಯಲ್ಲಿ ಹೋಗುತ್ತಿರುವುದನ್ನು ನೋಡಬಹುದು. ಈ ಅಪಘಾತ ಹೇಗೆ, ಎಲ್ಲಿ ನಡೆಯಿತು ಎಂಬುದರ ಕುರಿತು ಸದ್ಯಕ್ಕೆ ವಿವರಗಳು ಲಭ್ಯವಿಲ್ಲ. ಆದಾಗ್ಯೂ ಮಳೆ ಬಂದು ರಸ್ತೆ ಒದ್ದೆಯಾಗಿದ್ದು, ಹ್ಯಾರಿಯರ್ ಚಾಲಕ ಬ್ರೇಕ್‌ ಹಾಕಿರಬಹುದು. ಆಗ, ಹಿಂಬದಿ ಬರುತ್ತಿದ್ದ ಫಾರ್ಚುನರ್ ಕಾರನ್ನು ಚಾಲಕನಿಗೆ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಗದೇ ಅಪಘಾತವಾಗಿದೆ ಎಂದು ಹೇಳಲಾಗಿದೆ.

ಸುರಕ್ಷತೆ ದೃಷ್ಟಿಯಿಂದ ಟಾಟಾ ಹ್ಯಾರಿಯರ್‌, ಗೋಬಲ್ ಎನ್‌ಸಿಎಪಿಯಿಂದ 5 ಸ್ಟಾರ್ ರೇಟಿಂಗ್ ಪಡೆದಿದ್ದು, ಇಲ್ಲಿಯೂ ಆ ಕಾರಿಗೆ ಕಡಿಮೆ ಹಾನಿಯಾಗಿದೆ. ಹಾಗೆಂದು, ಟೊಯೊಟಾ ಫಾರ್ಚುನರ್ ಸುರಕ್ಷತೆಯ ದೃಷ್ಟಿಯಿಂದ ಉತ್ತಮವಾಗಿಲ್ಲವೆಂದು ಕೊಳ್ಳುವುದು ತಪ್ಪು. ಯಾವುದೇ ಕಾರುಗಳಿಗೆ ಉಂಟಾಗುವ ಡ್ಯಾಮೆಜ್, ಅಪಘಾತ ಹೇಗೆ ಸಂಭವಿಸಿತು ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ.

ಟಾಟಾ ಹ್ಯಾರಿಯರ್‌ಗೆ ಡಿಕ್ಕಿಯೊಡೆದ ಟೊಯೊಟಾ ಫಾರ್ಚುನರ್: ಏನಾಯಿತು?.. ವಿಡಿಯೋ ನೋಡಿ

ಸೇಫ್ಟಿ ವಿಚಾರದಲ್ಲಿ ಟಾಟಾ ಹ್ಯಾರಿಯರ್‌ ಹಾಗೂ ಟೊಯೊಟಾ ಫಾರ್ಚುನರ್ ಕಾರುಗಳು ಅತ್ಯುತ್ತಮವಾಗಿವೆ. ಮೊದಲಿಗೆ ಹ್ಯಾರಿಯರ್‌ ಪಡೆದುಕೊಂಡಿರುವ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ. ಈ ಕಾರು, 7 ಏರ್‌ಬ್ಯಾಗ್‌, ಹಿಲ್ ಅಸಿಸ್ಟ್‌, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) 360-ಡಿಗ್ರಿ ಕ್ಯಾಮೆರಾ ಹಾಗೂ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಟೊಯೊಟಾ ಫಾರ್ಚುನರ್ ಕಾರು ಸಹ ವಿವಿಧ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದು, 7 ಏರ್‌ಬ್ಯಾಗ್‌, VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), ಟ್ರಾಕ್ಷನ್ ಕಂಟ್ರೋಲ್, ಹಿಲ್ ಅಸಿಸ್ಟ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್) ಒಳಗೊಂಡಂತೆ ಹಲವು ಸೇಫ್ಟಿ ಫೀಚರ್ಸ್ ಪಡೆದಿದೆ.

ಟಾಟಾ ಹ್ಯಾರಿಯರ್‌ಗೆ ಡಿಕ್ಕಿಯೊಡೆದ ಟೊಯೊಟಾ ಫಾರ್ಚುನರ್: ಏನಾಯಿತು?.. ವಿಡಿಯೋ ನೋಡಿ

ರಸ್ತೆ ಅಪಘಾತ ತಡೆಯುವುದು ಹೇಗೆ: ಎಲ್ಲ ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಸಂಭವಿಸಬಹುದಾದ ರಸ್ತೆ ಅಪಘಾತವನ್ನು ತಪ್ಪಿಸಬಹುದು. ಹೆದ್ದಾರಿಯಲ್ಲಿ ನಿಗದಿತ ವೇಗ ಮಿತಿಯಲ್ಲಿ ವಾಹನಗಳನ್ನು ಚಲಾಯಿಸಿರಿ. ಪಥ ಶಿಸ್ತನ್ನು ಕಾಯ್ದುಕೊಳ್ಳಿ. ಯಾವುದೇ ಕಾರಣಕ್ಕೂ ಅದನ್ನು ಉಲ್ಲಂಘಿಸದಿರಿ. ಜೊತೆಗೆ ಎಚ್ಚರಿಕೆಯಿಂದ ವಾಹನಗಳನ್ನು ಓಡಿಸುವ ಮೂಲಕ ಮುಂದಾಗಬಹುದಾದ ಅಪಾಯವನ್ನು ತಪ್ಪಿಸಬಹುದು.

ಅಲ್ಲದೇ, ಫೋನ್ ನಲ್ಲಿ ಮಾತನಾಡಿಕೊಂಡು ಅಥವಾ ಮಧ್ಯಪಾನ ಮಾಡಿ ಕಾರು ಅಥವಾ ಬೈಕ್ ಚಲಾಯಿಸಬೇಡಿ. ಆಗೊಮ್ಮೆ ಈ ರೀತಿ ಮಾಡಿ, ವಾಹನಗಳನ್ನು ಓಡಿಸಿದರೇ ರಸ್ತೆಯ ಮೇಲೆ ಗಮನ ಹರಿಸಲಾಗದೇ ಅಪಘಾತವಾಗಬಹುದು. ಕಾರು ಓಡಿಸುವಾಗ ಸೀಟ್ ಬೆಲ್ಟ್, ಬೈಕ್ ಚಲಾಯಿಸುವಾಗ ಹೈಲ್ಮೆಟ್ ಧರಿಸುವ ಮೂಲಕ ಮುಂದಾಗಬಹುದಾದ ದೊಡ್ಡ ಅವಘಡವನ್ನು ತಪ್ಪಿಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, November 6, 2023, 13:36 [IST]
English summary
Toyota fortuner crashes tata harrier what happened video details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+