ಗೂಗಲ್ ಮ್ಯಾಪ್ ಯಡವಟ್ಟು: ಶಾರ್ಟ್‌ಕಟ್‌ನಲ್ಲಿ ಹೋಗಿ ಮೆಟ್ಟಿಲುಗಳಲ್ಲಿ ಸಿಲುಕಿದ ಫಾರ್ಚೂನರ್

ಅನೇಕರು ಒಂದು ಸ್ಥಳದಿಂದ ಮತ್ತೊಂದು ಜಾಗಕ್ಕೆ ಹೋಗಲು ದಾರಿ ಗೊತ್ತಿಲ್ಲ ಅಂದರೆ ಗೂಗಲ್ ಮ್ಯಾಪ್ಸ್ (Google Map) ಮೇಲೆ ಅವಲಂಬಿತರಾದ್ದಾರೆ. ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಗೂಗಲ್ ಮ್ಯಾಪ್ ಸಾಮಾನ್ಯವಾಗಿ ನಿಖರವಾಗಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಗೂಗಲ್ ಮ್ಯಾಪ್ ಅಷ್ಟು ನಿಖರವಿರಲ್ಲ. ಕೆಲವು ಸಲ ಇತರ ಜಾಗಗಳಿಗೂ ಕರೆದುಕೊಂಡಿರುವ ಹಲವು ಉದಾಹರಣೆಗಳಿವೆ.

ನಾವು ಗೂಗಲ್ ಮ್ಯಾಪ್ ನೋಡಿ ಹೋಗುವಾಗ, ಸಾಮಾನ್ಯವಾಗಿ ಫ್ಲೈಓವರ್ ತೆಗೆದುಕೊಳ್ಳುವ ಅಥವಾ ಅದರ ಕೆಳಗೆ ಹೋಗುವುದರ ಬಗ್ಗೆ ಗೊಂದಲಕ್ಕೊಳಗಾಗುತ್ತೇವೆ. ಗೂಗಲ್ ಮ್ಯಾಪ್ ನಮ್ಮ ಡ್ರೈವಿಂಗ್‌ನ ಅವಿಭಾಜ್ಯ ಅಂಗವಾಗಿರುವುದರಿಂದ, ನಮ್ಮಲ್ಲಿ ಹೆಚ್ಚಿನವರು ನಾವು ಕಾರನ್ನು ಸ್ಟಾರ್ಟ್ ಮಾಡಿದ ತಕ್ಷಣ ಗೂಗಲ್ ಮ್ಯಾಪ್ ಅನ್ನು ಆನ್ ಮಾಡುತ್ತೇವೆ. ಗೂಗಲ್ ಮ್ಯಾಪ್ ಅನ್ನು ಕಣ್ಮುಚ್ಚಿ ನಂಬುವ ಹಾಗೆಯೇ ಇಲ್ಲ. ಇದಕ್ಕೆ ಸಾಕ್ಷಿಯಾಗಿ ಈಗಾಗಲೇ ಬಹಳಷ್ಟು ಘಟನೆಗಳ ಬಗ್ಗೆ ನೀವು ಕೇಳಿರುತ್ತೀರಾ.

Google Map

ಇತ್ತೀಚೆಗೆ ಇದೆ ರೀತಿ ಗೂಗಲ್ ಮ್ಯಾಪ್ ನಂಬಿ ಸಂಕಷ್ಟಕ್ಕೆ ಸಿಲುಕಿದ ಘಟನೆಯೊಂದು ವರದಿಯಾಗಿದೆ. ಕಳೆದ ವಾರ ಲಾಂಗ್ ವೀಕೆಂಡ್ ಇದ್ದ ಕಾರಣ ಬೆಂಗಳೂರಿನಿಂದ ವ್ಯಕ್ತಿಯೊಬ್ಬರು ತನ್ನ ಸ್ನೇಹಿತರೊಂದಿಗೆ ತಮಿಳುನಾಡಿನ ನೀಲಗಿರಿ ಹಿಲ್ಸ್ ಗೆ ಪ್ರವಾಸ ಹೋಗಿದ್ದರು. ತಮಿಳುನಾಡಿನ ನೀಲಗಿರಿ ಪರ್ವತ ಶ್ರೇಣಿಯಲ್ಲಿ ಗುಡಲೂರು ಎಂಬ ಪ್ರವಾಸಿ ತಾಣವಿದೆ. ಇದು ಬೆಂಗಳೂರಿನಿಂದ ಸುಮಾರು 250 ಕಿ.ಮೀ. ದೂರದಲ್ಲಿದೆ.

ವೀಕೆಂಡ್ ನಲ್ಲಿ ಗುಡಲೂರಿಗೆ ತಮ್ಮ ಟೊಯೊಟಾ ಫಾರ್ಚೂನರ್ (Toyota Fortuner) ಎಸ್‍ಯುವಿಯಲ್ಲಿ ಟ್ರಿಪ್ ಹೋಗಿದ್ದರು. ಹೆಚ್ಚಿನವರು ಗೊತ್ತಿಲ್ಲದ ಪ್ರದೇಶಕ್ಕೆ ಹೋಗುವಾಗ ಗೂಗಲ್ ಮ್ಯಾಪ್ ಅನ್ನು ಫಾಲೋ ಮಾಡಿ ಓಡಿಸುತ್ತಾರೆ. ಅದೇ ರೀತಿ ಇವರು ಕೂಡ ಗೂಗಲ್ ಮ್ಯಾಪ್ ಫಾಲೋ ಮಾಡಿ ವಾಹನ ಓಡಿಸಿದ್ದಾರೆ. ಇವರು ಗೂಗಲ್ ಮ್ಯಾಪ್ ನಲ್ಲಿ ಫಾಸ್ಟೆಸ್ಟ್ ರೂಟ್ ಆಯ್ಕೆ ಮಾಡಿಕೊಂಡಿದ್ದಾರೆ.

Google Map

ಫಾಸ್ಟೆಸ್ಟ್ ರೂಟ್ ಆಯ್ಕೆ ಮಾಡಿಕೊಂಡು ಡ್ರೈವ್ ಮಾಡುತ್ತಿರುವಾಗ ಸಣ್ಣ ಊರುಗಳ ಮಾರ್ಗವನ್ನು ತೋರಿಸುತ್ತದೆ. ಮುಂದೆ ಹೋಗುತ್ತಾ ಹಳ್ಳಿಯ ಕಿರಿದಾದ ರಸ್ತೆ ಮಾರ್ಗವನ್ನು ತೋರಿಸುತ್ತದೆ. ಇವರು ಹಳ್ಳಿಗಳ ಮೂಲ ಶಾರ್ಟ್ ಕಟ್ ದಾರಿಯಾಗಿರುತ್ತೆ ಎಂದು ಕುರುಡಾಗಿ ಫಾಲೋ ಮಾಡುತ್ತಾ ಡ್ರೈವ್ ಮಾಡುತ್ತಾರೆ. ಹೋಗೆ ಮುಂದೆ ಹೋಗುತ್ತಾ ಒಂದು ಅದೊಂದು ಕಡೆ ಗೂಗಲ್ ಮ್ಯಾಪ್ ತಿರುವನ್ನು ತೋರಿಸುತ್ತದೆ.

ಗೂಗಲ್ ಮ್ಯಾಪ್ ನಂಬಿ ತಿರುವು ತಿರುಗಿಸಿದ ಅವರಿಗೆ ಆಘಾತವೂ ಕಾಡಿತ್ತು. ತಿರುವು ನಂತರ ಕಂಡಿದ್ದು ರಸ್ತೆಯಲ್ಲ ಮೆಟ್ಟಿಲುಗಳು ಆಗಿದೆ. ಸ್ನೇಹಿತರ ಜೊತೆ ಮಾತಾಡುತ್ತಾ ಕಾರು ಓಡಿಸುತ್ತಿದ್ದರಿಂದ ರಸ್ತೆ ಇರುತ್ತೆ ಅಂತ ತಿರುವು ತೆಗೆದುಕೊಂಡಿರುವುದರಿಂದ ಸಡನ್ ಮೆಟ್ಟಿಲುಗಳನ್ನು ನೋಡಿ ಬ್ರೇಕ್ ಹಾಕುವಷ್ಟರಲ್ಲಿ ಆ ಕಾರು ಕೆಲವಾರು ಮೆಟ್ಟಿಲುಗಳನ್ನು ಏರಿತ್ತು. ಹಿಂದೆ ಬರಲು ಆಗದೆ, ಮುಂದೆ ಹೋಗಲೂ ಆಗದೇ ಆ ದೊಡ್ಡ್ ಎಸ್‍ಯುವಿಯು ಅಲ್ಲೇ ಸಿಲುಕಿಕೊಂಡಿತು.

Google Map

ಅಲ್ಲೇ ಇದ್ದ ಸ್ಥಳೀಯರು ಎಸ್‍ಯುವಿಯು ಸಿಲುಕಿಕೊಂಡಿರುವುದನ್ನು ಕಂಡು ರವಿಗೆ ಬಂದಿದ್ದಾರೆ. ಇಟ್ಟಿಗೆಗಳನ್ನು ಮೆಟ್ಟಿಲುಗಳ ಮೇಲೆ ಜೋಡಿಸಿದರು. ನಂತರ ಈ ದೊಡ್ಡ ಎಸ್‍ಯುವಿಯು ಧಾನವಾಗಿ ಮೆಟ್ಟಿಲುಗಳಿಂದ ಪುನಃ ರಸ್ತೆಗೆ ಹಿಂದಕ್ಕೆ ತೆಗೆದುಕೊಂಡರು. ಸ್ಥಳೀಯರಿಗೆ ಧನ್ಯವಾದ ಹೇಳಿ ಅವರ ಬಳಿ ದಾರಿ ಕೇಳಿ ಬೆಂಗಳೂರಿಗೆ ಸೇಫ್ ಆಗಿ ಮರಳಿದ್ದಾರೆ.

ಇಲ್ಲಿ ಅವರು ಡ್ರೈವ್ ಮಾಡುತ್ತಿದ್ದ ಟೊಯೊಟಾ ಫಾರ್ಚೂನರ್ ಬಗ್ಗೆ ಹೇಳುವುದಾದರೆ, ಈ ಎಸ್‍ಯುವಿಯು ಉತ್ತಮ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿರುವ ಮಾದರಿಯಾಗಿದೆ. ಆದರೆ ಇಲ್ಲಿ ದೊಡ್ಡ ಮೆಟ್ಟಿಲುಗಳ ನಡುವೆ ಸಿಲುಕಿಕೊಂಡಿದೆ. ಇದು ಫ್ಹೋರ್ ವ್ಹೀಲ್ ಡ್ರೈವ್ ವಾಹನವಾಗಿದೆ. ಫುಲ್ ಸೈಜ್ ಗಾತ್ರದ ಎಸ್‌ಯುವಿ ವಿಭಾಗದ ಮಾರಾಟದಲ್ಲಿ ಟೊಯೊಟಾ ಫಾರ್ಚೂನರ್ ದೀರ್ಘಕಾಲದಿಂದ ಅಗ್ರಸ್ಥಾನದಲ್ಲಿದೆ.

ಸದ್ಯ ಈ 7-ಸೀಟುಗಳ ಪ್ರಸ್ತುತ ಜನರೇಷನ್ ಫಾರ್ಚೂನರ್ ಅನ್ನು 2016 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಫಾರ್ಚೂನರ್ ಜಿಆರ್ ಸ್ಪೋರ್ಟ್ ರೂಪಾಂತರವನ್ನು ಶ್ರೇಣಿಗೆ ಸೇರಿಸಲಾಯಿತು. ಟೊಯೊಟಾ ಫಾರ್ಚುನರ್ ಎಸ್‍ಯುವಿಯ ಲೆಜೆಂಡರ್ ಆವೃತ್ತಿಯು ಮಾರಾಟದಲ್ಲಿದೆ ಮತ್ತು ಇದು 4X4 ಆಯ್ಕೆಯೊಂದಿಗೆ ಸಹ ಲಭ್ಯವಿದೆ. ಟೊಯೊಟಾ ಲೆಜೆಂಡರ್‌ನ 4×4 ರೂಪಾಂತರವನ್ನು ಫಾರ್ಚುನರ್‌ನ ಶ್ರೇಣಿಗೆ ಸೇರಿಸಿತು. ಈ ಫಾರ್ಚುನರ್‌ನ ಜಿಆರ್-ಸ್ಪೋರ್ಟ್ ರೂಪಾಂತರವನ್ನು ಕೂಡ ಬಿಡುಗಡೆಗೊಳಿಸಿತ್ತು.

Article Published On: Tuesday, January 30, 2024, 13:35 [IST]
English summary
Toyota fortuner driver following fastest route on google map stucked in steps
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+