ಟೊಯೊಟಾ ಫಾರ್ಚುನರ್ ಮಾಲೀಕನಿಗೆ ರೂ. 28,500 ದಂಡ: ಶೋಕಿ ಮಾಡುವ ಮುನ್ನ ಇವು ತಿಳಿದಿರಲಿ...

ಭಾರತದಲ್ಲಿ ವಾಹನಗಳ ನೋಂದಣಿ ಫಲಕವನ್ನು (Number Plate) ತಿದ್ದುವುದು ದೊಡ್ಡ ಅಪರಾಧವಾಗಿದೆ. ನೋಂದಣಿ ಫಲಕಗಳನ್ನು ತಿದ್ದಿ ಅದೆಷ್ಟೋ ಮಂದಿ ದಂಡ ಕಟ್ಟಿರುವುದನ್ನು ಈಗಾಗಲೇ ನಾವು ನೋಡಿದ್ದೇವೆ. ಆದರೂ ಹಲವರಿಗೆ ಬುದ್ದಿ ಬಾರದೇ ಎಲ್ಲಾ ತಿಳಿದಿದ್ದರೂ ಮತ್ತದೇ ತಪ್ಪನ್ನು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಟೊಯೊಟಾ ಫಾರ್ಚುನರ್ ಕಾರಿನ ಮಾಲೀಕನಿಗೆ ಭಾರಿ ದಂಡ ವಿಧಿಸಲಾಗಿದೆ.

ಟೊಯೊಟಾ ಫಾರ್ಚುನರ್ ಕಾರಿನ ನೋಂದಣಿ ಫಲಕವನ್ನು ತಿದ್ದಿದ್ದಕ್ಕಾಗಿ 28,500 ರೂ.ಗಳ ಚಲನ್ ನೀಡಿ ಮಾಲೀಕನ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದ್ದು, ಮಾಹಿತಿಯ ಪ್ರಕಾರ ವಾರಣಾಸಿ ನಗರದ ಟೊಯೊಟಾ ಫಾರ್ಚುನರ್ ಮಾಲೀಕರು ವಾಹನದ ನೋಂದಣಿ ಸಂಖ್ಯೆಯ ಬದಲಿಗೆ ನೋಂದಣಿ ಫಲಕದಲ್ಲಿ ತಮ್ಮ ಹೆಸರನ್ನು ಬರೆಸಿಕೊಂಡಿದ್ದರು. ಇದನ್ನು ಅಪರಿಚಿತ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ವಾಹನದ ಬಗ್ಗೆ ಬರೆದು ದೂರು ನೀಡಿ ಪೊಲೀಸರಿಗೆ ರವಾನಿಸಿದ್ದಾನೆ.

ಟೊಯೊಟಾ ಫಾರ್ಚುನರ್ ಮಾಲೀಕನಿಗೆ ರೂ. 28,500 ದಂಡ: ಶೋಕಿ ಮಾಡುವ ಮುನ್ನ ಇವು ತಿಳಿದಿರಲಿ...

ದೂರು ದಾಖಲಿಸಿಕೊಂಡ ಉತ್ತರ ಪ್ರದೇಶ ಪೊಲೀಸರು ಕಾರ್ಯಪ್ರವೃತ್ತರಾಗಿ ಚೆಕ್‌ಪೋಸ್ಟ್ ಒಂದರಲ್ಲಿ ವಾಹನವನ್ನು ತಡೆದಿದ್ದರು. ವಾರಣಾಸಿ ಕ್ಯಾಂಟ್ ಠಾಣಾ ಚೆಕ್ ಪೋಸ್ಟ್ ನಲ್ಲಿ ವಾಹನವನ್ನು ನಿಲ್ಲಿಸಲಾಗಿತ್ತು. ವಾಹನದ ಮಾಲೀಕರು ನೋಂದಣಿ ಸಂಖ್ಯೆಯನ್ನು "ಠಾಕೂರ್" ಎಂಬ ಹೆಸರಿನೊಂದಿಗೆ ಬೇರೆ ನಂಬರ್ ಪ್ಲೇಟ್‌ನೊಂದಿಗೆ ಬದಲಾಯಿಸಿದ್ದರು. ಚೆಕ್‌ಪಾಯಿಂಟ್‌ನಲ್ಲಿ ಇದ್ದ ಪೊಲೀಸರು ತಕ್ಷಣವೇ ವಾಹನವನ್ನು ವಶಪಡಿಸಿಕೊಂಡು ಫಾರ್ಚೂನರ್ ಮಾಲೀಕರಿಗೆ 28,500 ರೂ. ದಂಡ ವಿಧಿಸಿದ್ದಾರೆ. ಪೊಲೀಸರು ಮಾಲೀಕ ಹಾಗೂ ಚಲನ್‌ನ ವಿವರಗಳನ್ನು ಬಹಿರಂಗಪಡಿಸಿಲ್ಲ.

ಉತ್ತರ ಪ್ರದೇಶದಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತವೆ. ಹಾಗಾಗಿ ಅಧಿಕಾರಿಗಳು 2020 ಡಿಸೆಂಬರ್ 24 ರಂದು ಹೊಸ ಆದೇಶ ಹೊರಡಿಸಿ, ಅಂದಿನಿಂದ ಪೊಲೀಸರು ರಾಜ್ಯದಾದ್ಯಂತ ಇರುವ ಇಂತಹ ವಾಹನ ಮಾಲೀಕರಿಗೆ ಚಲನ್‌ಗಳನ್ನು ಜಾರಿಗೊಳಿಸಿದ್ದರು. ಮೊದಲ ಪ್ರಕರಣ ಯುಪಿಯ ಕಾನ್ಪುರದಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬರು 500 ರೂ.ಗಳ ಚಲನ್ ಪಡೆದಿದ್ದರು. ಭಾರತೀಯ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 177 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಟೊಯೊಟಾ ಫಾರ್ಚುನರ್ ಮಾಲೀಕನಿಗೆ ರೂ. 28,500 ದಂಡ: ಶೋಕಿ ಮಾಡುವ ಮುನ್ನ ಇವು ತಿಳಿದಿರಲಿ...

ಇದನ್ನು ಪುನರಾವರ್ತನೆ ಮಾಡಿದರೆ 1,500 ರೂ. ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದ್ದರು. ಇಷ್ಟೆಲ್ಲಾ ಕ್ರಮಗಳನ್ನು ತೆಗೆದುಕೊಂಡರು ಯುಪಿ ಪೊಲೀಸರು ಇಂತಹ ವಾಹನಗಳ ವಿರುದ್ಧ ಇಂದಿಗೂ ದೂರು ದಾಖಲಿಸುತ್ತಿರುವುದು ವಿಪರ್ಯಾಸ. ಕಳೆದ ವರ್ಷ ಗೌತಮ್ ಬುದ್ಧ ಪೊಲೀಸ್ ಠಾಣೆ ವಿಶೇಷ ತಂಡಗಳನ್ನು ರಚಿಸಿ ಎರಡು ದಿನ ಇಂತಹ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸಿತ್ತು. ಆಗಲೂ ಕೂಡ ನೂರಾರು ಚಲನ್‌ಗಳನ್ನು ನೀಡಲಾಗಿದ್ದು, ಪೊಲೀಸರು ಸ್ಥಳದಲ್ಲೇ ವಾಹನಗಳ ಸ್ಟಿಕ್ಕರ್‌ಗಳನ್ನು ತೆಗೆದಿದ್ದಾರೆ.

ಹೆಚ್ಚಾಗಿ ಇಲ್ಲಿನ ಜನರು ತಮ್ಮ ಜಾತಿ, ಮನೆತನ, ಅಧಿಕಾರ ಕುರಿತು ವಾಹನ ಫಲಕಗಳ ಮೇಲೆ ಬರೆದುಕೊಂಡು ಪ್ರದರ್ಶನ ಮಾಡುತ್ತಾರೆ. ಇದು ಕಾನೂನು ಬಾಹಿರವಾಗಿದ್ದು, ಇಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಕಾನೂನು ಈಗಾಗಲೇ MV ಕಾಯಿದೆಯಲ್ಲಿದೆ. ಆದಾಗ್ಯೂ, ಹೆಚ್ಚಿನ ರಾಜ್ಯ ಪೊಲೀಸ್ ಪಡೆಗಳು ಅವರನ್ನು ನಿರ್ಲಕ್ಷಿಸುತ್ತವೆ. ಕೆಲವೊಮ್ಮೆ ಹೆಸರಾಂತ ವ್ಯಕ್ತಿಗಳೇ ಇಂತಹ ಕೃತ್ಯಗಳನ್ನು ಎಸಗುತ್ತಾರೆ. ಇವರಿಗೆ ರಾಜಕೀಯ ಗಣ್ಯರ ಸಹಕಾರವಿರುವುದರಿಂದ ಪೊಲೀಸರು ಕೂಡ ಕೈಕಟ್ಟಿ ಕೂರುವ ಪರಿಸ್ಥಿತಿಯಿದೆ.

ಭಾರತದಲ್ಲಿ ಎಚ್‌ಎಸ್‌ಆರ್‌ಪಿ
ಇದಕ್ಕಾಗಿಯೇ ಭಾರತ ಸರ್ಕಾರವು ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಅಥವಾ HSRP ಅನ್ನು ಪರಿಚಯಿಸಿದೆ. ಪ್ರಸ್ತುತ, ದೆಹಲಿ-ಎನ್‌ಸಿಆರ್ ಅಧಿಕಾರಿಗಳು ಎಚ್‌ಎಸ್‌ಆರ್‌ಪಿ ಬಳಕೆಯನ್ನು ಕಡ್ಡಾಯಗೊಳಿಸಿದ್ದಾರೆ. ಈ ಹೈ-ಸೆಕ್ಯುರಿಟಿ ಪ್ಲೇಟ್‌ಗಳಿಲ್ಲದ ಯಾವುದೇ ವಾಹನವು ಚಲನ್‌ಗಳನ್ನು ಪಡೆಯುತ್ತದೆ. ಈ ನೋಂದಣಿ ಫಲಕಗಳು ಟ್ಯಾಂಪರ್-ಪ್ರೂಫ್ ಆಗಿರುತ್ತವೆ. ಮತ್ತೆ ತೆರೆಯಲಾಗದ ಏಕ-ಬಳಕೆಯ ಬೋಲ್ಟ್ ಅನ್ನು ಬಳಸಿಕೊಂಡು ವಾಹನಕ್ಕೆ ಅಳವಡಿಸಲಾಗುತ್ತದೆ. ಇದು ಎಲ್ಲರಿಗೂ ಕಡ್ಡಾಯವಾಗಿದ್ದರೂ ಕೆಲವರು ರಾಜಕೀಯ ಗಣ್ಯರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ.

ಇದೀಗ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಇವಕ್ಕೆ ಬ್ರೇಕ್ ಬಿದ್ದಂತಾಗಿದೆ. ಸದ್ಯ ಎಲ್ಲರಿಗೂ ಇದು ವರ್ತಿಸಲಿದ್ದು, ಇಂತಹ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹಿಂದೆಯೂ ಗಣ್ಯರ ಹೆಸರು ಹೇಳಿಕೊಂಡು ಟ್ಯಾಂಪರ್ಡ್ ರಿಜಿಸ್ಟ್ರೇಶನ್ ಪ್ಲೇಟ್‌ಗಳನ್ನು ಬಳಸಿದ ಅನೇಕ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡ್ರೈವ್‌ಸ್ಪಾರ್ಕ್ ಕನ್ನಡ ಎಲ್ಲಾ ರೀತಿಯ ವಾಹನ ಕುರಿತ ಸುದ್ದಿಗಳನ್ನು ಓದುಗರೊಂದಿಗೆ ಹಂಚಿಕೊಳ್ಳುತ್ತದೆ. ನಮ್ಮ ವೆಬ್‌ಸೈಟ್ ಎಲ್ಲಾ ಸಾಮಾಜಿಕ ತಾಣಗಳಲ್ಲೂ ಲಭ್ಯವಿದೆ. ಆಟೋ ಸುದ್ದಿಗಳ ಕುರಿತ ಹೆಚ್ಚಿನ ಮಾಹಿತಿಗಾಗಿ ಡ್ರೈವ್‌ಸ್ಪಾರ್ಕ್‌ನೊಂದಿಗೆ ಸಂಪರ್ಕದಲ್ಲಿರಿ.

Most Read Articles

Kannada
English summary
Toyota fortuner owner gets rs 28 500 fine
Story first published: Monday, January 23, 2023, 15:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X