Toyota Fortuner: ವೈರಲ್ ಆಗಲು ಮಳೆಯಲ್ಲಿ 100 ಕಿ.ಮೀ.ಗೂ ಹೆಚ್ಚು ವೇಗದಲ್ಲಿ ಡ್ರೈವ್ ಮಾಡಿದ ಯುವಕ: ಕಾರು ಪಲ್ಟಿ
ಭಾರತದಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಸ್ಟಂಟ್‌ಗಳನ್ನು ಪ್ರದರ್ಶಿ, ಅದನ್ನು ವೀಡಿಯೋ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡುತ್ತಾರೆ. ವೈರಲ್ ಆಗಲು ಮತ್ತು ಹೆಚ್ಚು ಲೈಕ್ಸ್ ಪಡೆಯಲು ಅಪಾಯಕಾರಿಯಾದ ಸ್ಟಂಟ್‌ಗಳನ್ನು ಮಾಡುತ್ತಾರೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಸ್ಟಂಟ್ ವೀಡಿಯೊಗಳಲ್ಲಿ ಅದ್ದೂರಿ ಬಿಜಿಎಂ ಹಾಕಿ ವೈಭವೀಕರಿಸುತ್ತಿದ್ದಾರೆ
ಇತ್ತೀಚೆಗೆ, ಅಂತಹ ಮತ್ತೊಂದು ಘಟನೆಯ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಈ ವೀಡಿಯೊದಲ್ಲಿ ಭಾರೀ ಮಳೆಯ ನಡುವೆ, ವ್ಯಕ್ತಿಯೊಬ್ಬ ತನ್ನ ಟೊಯೊಟಾ ಫಾರ್ಚುನರ್ ಎಸ್‍ಯುವಿಯನ್ನು ವೇಗವಾಗಿ ಚಲಾಯಿಸಿ ಅಪಘಾತಕ್ಕೀಡಾಗಿದ್ದಾನೆ. ಫಾರ್ಚುನರ್ ಎಸ್‍ಯುವಿಯು ಸಂಪೂರ್ಣವಾಗಿ ಒಂದು ಬದಿ ಉರುಳಿಬಿದ್ದಿದೆ. ಈ ವೀಡಿಯೊವನ್ನು ಯುವಕನೊಬ್ಬ Instagram ರೀಲ್ಸ್‌ನಲ್ಲಿ ಹಂಚಿಕೊಂಡಿದ್ದಾನೆ ಮತ್ತು ಪ್ರತೀಕ್ ಸಿಂಗ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿವರಣೆಗಳೊಂದಿಗೆ ಶೇರ್ ಮಾಡಿದ್ದಾರೆ.

ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಸ್ನ್ಯಾಪ್‌ಚಾಟ್‌ನಂತಹ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ತಮ್ಮ ವಾಹನಗಳಲ್ಲಿ ಅಪಾಯಕಾರಿ ಸ್ಟಂಟ್‌ಗಳ ವೀಡಿಯೊವನ್ನು ಹೆಚ್ಚು ಶೇರ್ ಮಾಡುತ್ತಿದ್ದಾರೆ. ಏಕೆಂದರೆ ಅಂತಹ ವೀಡಿಯೊಗಳಿಗ್ ಹೆಚ್ಚಿನ ವಿಕ್ಷಿಕರು ಇದ್ದಾರೆ. ಈ ವೀಡಿಯೊದಲ್ಲಿಯು ಕೂಡ, ವೀಡಿಯೊ ಮಾಡುವಾಗ ಅಪಾಯಕಾರಿಯಾಗಿ ಡ್ರೈವ್ ಮಾಡುವ ವೀಡಿಯೊಗಳನ್ನು ಹೆಚ್ಚು ಜನರು ನೋಡುತ್ತಾರೆಂದು ವೀಡಿಯೊ ಪ್ರಾರಂಭವಾಗುತ್ತದೆ.
ಅಪಘಾತಕ್ಕೀಡಾದ ಟೊಯೊಟಾ ಫಾರ್ಚುನರ್ ಎಸ್‍ಯುವಿ ಟೈಪ್ 2 ಅಪಘಾತದ ಸ್ಥಳದಿಂದ ದೂರ ಹೋಗುತ್ತಿರುವುದನ್ನು ನೋಡಿದ ಇತ್ತೀಚಿನ ಘಟನೆಯನ್ನು ವೀಡಿಯೊ ತೋರಿಸುತ್ತದೆ. ಅಪಘಾತದ ವೀಡಿಯೊವನ್ನು ಎಸ್‌ಯುವಿ ಮಾಲೀಕರು ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರ ನಂತರ, ನೈಜ ಸಮಯದಲ್ಲಿ ಅಪಘಾತ ಸಂಭವಿಸಿದ ಮೂಲ ವೀಡಿಯೊವನ್ನು ತೋರಿಸಲಾಗಿದೆ.
ಈ ಕ್ಲಿಪ್‌ನಲ್ಲಿ, ಟೊಯೊಟಾ ಫಾರ್ಚುನರ್‌ನಲ್ಲಿರುವ ವ್ಯಕ್ತಿಯು ಮಳೆಯ ನಡುವೆ ಕಿರಿದಾದ ಏಕ-ಪಥದ ರಸ್ತೆಯಲ್ಲಿ ಗಂಟೆಗೆ 100 ಕಿಮೀ ವೇಗದಲ್ಲಿ ಡ್ರೈವ್ ಮಾಡುವುದನ್ನು ನಾವು ನೋಡಬಹುದು. ನಂತರ ವೇಗವನ್ನು ಮತ್ತಷ್ಟು ಹೆಚ್ಚಿಸಿದಾಗ, ಒದ್ದೆಯಾದ ರಸ್ತೆಯಲ್ಲಿ ಎಸ್‍ಯುವಿ ಹೈಡ್ರೋಪ್ಲೇನ್‌ಗಳಾಗಿ ಚಾಲಕ ನಿಯಂತ್ರಣವನ್ನು ಕಳೆದುಕೊಳ್ಳುವುದನ್ನು ನಾವು ನೋಡಬಹುದು. ನಂತರ ಎಸ್‍ಯುವಿಯು ಸ್ಕಿಡ್ ಆಗಿ ಪಲ್ಟಿಯಾಗುತ್ತಿರುವುದನ್ನು ವೀಡಿಯೊದಲ್ಲಿ ತೋರಿಸಿದ್ದಾರೆ.
ರಸ್ತೆ ಬದಿಯಲ್ಲಿದ್ದ ಕಂಬಕ್ಕೆ ಕಾರು ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಯಾವುದೇ ವಾಹನ ಅಥವಾ ನಾಗರಿಕರಿಗೆ ಡಿಕ್ಕಿಯಾಗಲಿಲ್ಲ. ಎಸ್‍ಯುವಿಯನ್ನು ಡ್ರೈವ್ ಮಾಡಿದ ವ್ಯಕ್ತಿಗೆ ಯಾವುದೇ ಗಾಯಗಳಾಗಿರುವುದರ ಬಗ್ಗೆ ವರದಿಯಾಗಿಲ್ಲ. ಡ್ರೈವರ್ ಸೇಪ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಎಸ್‍ಯುವಿಗೆ ಹಲವು ಡ್ಯಾಮೇಜ್ ಆಗಿದೆ. ಈ ಅವಘಡಕ್ಕೆ ಮುಖ್ಯ ಕಾರಣ ಹೈಡ್ರೋಪ್ಲೇನಿಂಗ್. ಒದ್ದೆಯಾದ ರಸ್ತೆಯಲ್ಲಿ ವಾಹನದ ಟೈರ್‌ಗಳು ಟ್ರ್ಯಾಕ್ಷನ್ ಕಳೆದುಕೊಂಡಾಗ ಹೈಡ್ರೋಪ್ಲೇನಿಂಗ್ ಸಂಭವಿಸುತ್ತದೆ,
ಇದರಿಂದಾಗಿ ವಾಹನವು ನೀರಿನ ಪದರದ ಮೇಲೆ ಅನಿಯಂತ್ರಿತವಾಗಿ ಸ್ಕಿಡ್ ಆಗುತ್ತದೆ. ಒದ್ದೆಯಾದ ರಸ್ತೆಯಲ್ಲಿ ಚಾಲನೆ ಮಾಡುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಹೈಡ್ರೋಪ್ಲಾನಿಂಗ್ ಅನ್ನು ತಪ್ಪಿಸಬಹುದು. ಮೊದಲನೆಯದಾಗಿ, ರಸ್ತೆ ಮತ್ತು ಹವಾಮಾನ ಪರಿಸ್ಥಿತಿಗಳಿಗೆ ಸೂಕ್ತವಾದ ಸುರಕ್ಷಿತ ವೇಗವನ್ನು ನಿರ್ವಹಿಸುವುದು ಮುಖ್ಯವಾಗಿದೆ. ನಿಧಾನಗೊಳಿಸುವಿಕೆಯು ರಸ್ತೆ ಮೇಲ್ಮೈಯೊಂದಿಗೆ ಟೈರ್ ಸಂಪರ್ಕವನ್ನು ಹೆಚ್ಚಿಸುವ ಮೂಲಕ ಹೈಡ್ರೋಪ್ಲೇನಿಂಗ್ ಅಪಾಯವನ್ನು ಕಡಿಮೆ ಮಾಡಬಹುದು.
ಎರಡನೇಯದಾಗಿ, ನಿಮ್ಮ ಟೈರ್‌ಗಳು ಉತ್ತಮ ಸ್ಥಿತಿಯಲ್ಲಿ ಇರಬೇಕು ಮತ್ತು ಸರಿಯಾದ ಸ್ಟ್ಯಾಂಡರ್ಡ್ ಟೈರ್ ಗಳನ್ನು ಖರೀದಿಸಿ ಹೈಡ್ರೋಪ್ಲಾನಿಂಗ್ ಅಪಾಯವನ್ನು ಕಡಿಮೆ ಮಾಡುತ್ತದೆ. ಲೋ ಕ್ವಾಲಿಟಿ ಟೈರ್‌ಗಳು ಹೈಡ್ರೋಪ್ಲೇನಿಂಗ್‌ಗೆ ಹೆಚ್ಚು ಒಳಗಾಗುತ್ತವೆ. ಇನ್ನು ತೀಕ್ಷ್ಣವಾದ ತಿರುವುಗಳು ಅಥವಾ ಹಠಾತ್ ಬ್ರೇಕ್ ಹಾಕಿದಾಗ ಹೀಗೆ ಸಂಭವಿಸುತ್ತದೆ. ಇದರಿಂದ ನಿಯಂತ್ರಿತ ವೇಗದಲ್ಲಿ ಕಾರನ್ನು ಡ್ರೈವ್ ಮಾಡಬೇಕು. ಇದರಿಂದ ನೀವು ಮಳೆಯ ನಡುವೆ ಡ್ರೈವ್ ಮಾಡುವಾಗ ಎಚ್ಚರಿಕೆ ವಹಿಸಬೇಕು.


Click it and Unblock the Notifications