ಹೋಂಡಾ ಬೈಕ್ v/s ಫಾರ್ಚೂನರ್... ರೇಸಿನಲ್ಲಿ ಗೆದ್ದಿದ್ಯಾರು ಗೊತ್ತಾ?
ಭಾರತದ ಹೆದ್ದಾರಿಗಳಲ್ಲಿ ಕಾರು ಹಾಗೂ ಬೈಕ್‍ಗಳ ನಡುವೆ ರೇಸ್ ಏರ್ಪಡುವುದು ಸಾಮಾನ್ಯ. ಯೂಟ್ಯೂಬ್‍ನಲ್ಲಿ ಈ ರೀತಿಯ ರೇಸ್‍ಗಳ ಅನೇಕ ವೀಡಿಯೊಗಳಿವೆ. ಈಗ ನಾವು ಹೇಳಲು ಹೊರಟಿರುವುದು ಭಾರತದ ಹೆದ್ದಾರಿಯೊಂದರಲ್ಲಿ ಹೋಂಡಾ ಸಿಬಿಆರ್ ಬೈಕ್ ಹಾಗೂ ಟೊಯೊಟಾ ಫಾರ್ಚೂನರ್ ಎಸ್‍ಯುವಿಯ ಮಧ್ಯೆ ಏರ್ಪಟ್ಟ ರೇಸಿನ ಬಗ್ಗೆ.

ಈ ವೀಡಿಯೊವನ್ನು ಟಿಬಿಸಿ ಮೋಟೊವಿಲಾಗ್ ಅಪ್‍ಲೋಡ್ ಮಾಡಿದೆ. ಈ ವೀಡಿಯೊ 120 ಕಿ.ಮೀ ವೇಗದಲ್ಲಿ ಸಾಗುವ ಹೋಂಡಾ ಸಿಬಿಆರ್ 250 ಆರ್ ಬೈಕಿನೊಂದಿಗೆ ಶುರುವಾಗುತ್ತದೆ. ಕೆಲವೇ ಕ್ಷಣಗಳಲ್ಲಿ ಟೊಯೊಟಾ ಫಾರ್ಚೂನರ್ ಆ ಬೈಕ್ ಅನ್ನು ಹಿಂದಿಕ್ಕುತ್ತದೆ.

ನಂತರ ಬೈಕ್ ಸವಾರನು ಫಾರ್ಚೂನರ್‍ನೊಂದಿಗೆ ಸ್ಪರ್ಧೆಗಿಳಿಯುತ್ತಾನೆ. ಆದರೆ ಫಾರ್ಚೂನರ್ ಅತಿ ವೇಗವಾಗಿ ಸಾಗುತ್ತದೆ. ಹೋಂಡಾ ಬೈಕಿನ ಸವಾರನು ಫಾರ್ಚೂನರ್ ಅನ್ನು ಹಿಂದಿಕ್ಕಲೇ ಬೇಕೆಂದು ಅತಿ ವೇಗವಾಗಿ ಬೈಕ್ ಚಲಾಯಿಸುತ್ತಾನೆ.

ಹೆದ್ದಾರಿಯು ಖಾಲಿಯಾಗಿರುವ ಕಾರಣಕ್ಕೆ ಬೈಕ್ ಸವಾರನು ಬೈಕ್ ಅನ್ನು ಅತಿ ವೇಗವಾಗಿ ಚಲಾಯಿಸುತ್ತಾನೆ. ಕೆಲ ಸಮಯದ ನಂತರ ಫಾರ್ಚೂನರ್ ಕಾರಿನ ಹತ್ತಿರ ಬರುತ್ತಾನೆ. ಬೈಕಿನ ಸ್ಪೀಡೊಮೀಟರ್‍ನಲ್ಲಿ 158 ಕಿ.ಮೀ ವೇಗವನ್ನು ಕಾಣಬಹುದು.

ಈ ವೇಗದಲ್ಲಿ ಬೈಕ್ ಸವಾರನು ಫಾರ್ಚೂನರ್ ಅನ್ನು ಹಿಂದಿಕ್ಕುತ್ತಾನೆ. ಫಾರ್ಚೂನರ್ ಸಾಕಷ್ಟು ದೂರ ಹಿಂದುಳಿಯುತ್ತದೆ. ಬೈಕ್ ಅನ್ನು ಹಿಂದಿಕ್ಕುವ ಪ್ರಯತ್ನವನ್ನು ಮಾಡಿದರೂ ಸಹ ರೇಸ್ ಅನ್ನು ಮುಂದುವರೆಸದೇ ಫಾರ್ಚೂನರ್ ಚಾಲಕನು ಸುಮ್ಮನಾಗುತ್ತಾನೆ.

ಈ ರೇಸಿನಲ್ಲಿ ಫಾರ್ಚೂನರ್ ಹಿಂದುಳಿದ ಕಾರಣಕ್ಕೆ, ಫಾರ್ಚೂನರ್‍ನಲ್ಲಿರುವ ಪವರ್ ಕಡಿಮೆ ಎಂದು ಹೇಳಲು ಸಾಧ್ಯವಿಲ್ಲ. ಹಲವು ಕಾರಣಗಳಿಗಾಗಿ ಫಾರ್ಚೂನರ್ ಚಾಲಕನು ವೇಗವನ್ನು ಕಡಿಮೆಗೊಳಿಸಿರುವ ಸಾಧ್ಯತೆಗಳಿವೆ.

ಚಾಲಕನು, ಭಯದಿಂದಲೋ ಅಥವಾ ಫಾರ್ಚೂನರ್‍ನಲ್ಲಿದ್ದ ಪ್ರಯಾಣಿಕರ ಕಾರಣದಿಂದಲೋ, ಫಾರ್ಚೂನರ್ ಎಸ್‍ಯುವಿಯಲ್ಲಿದ್ದ ಪವರ್ ಅನ್ನು ಪೂರ್ತಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲವೆಂದು ತೋರುತ್ತದೆ.
MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿಎಲ್ ಕಳೆದುಕೊಂಡ ಡ್ರೈವರ್..!

ಅಂದ ಹಾಗೆ ಫಾರ್ಚೂನರ್ ಎಸ್‍ಯುವಿಯಲ್ಲಿ 2.8 ಲೀಟರಿನ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 174 ಬಿಹೆಚ್‍ಪಿ ಪವರ್ ಉತ್ಪಾದಿಸುತ್ತದೆ. 2.7 ಲೀಟರಿನ ಪೆಟ್ರೋಲ್ ಎಂಜಿನ್ 164 ಬಿಹೆಚ್‍ಪಿ ಪವರ್ ಉತ್ಪಾದಿಸುತ್ತದೆ.
MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಫಾರ್ಚೂನರ್ ಕಾರಿನಂತೆಯೇ ಹೋಂಡಾ ಸಿಬಿಆರ್ 250 ಆರ್ ಬೈಕ್ ಅನ್ನು ಹಲವು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಬೈಕ್ ಅನ್ನು ಪ್ರವಾಸಕ್ಕೆ ಹೋಗುವವರು ಹೆಚ್ಚಾಗಿ ಖರೀದಿಸುತ್ತಾರೆ.
MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಹೋಂಡಾ ಸಿಬಿಆರ್ 250 ಆರ್ ಬೈಕಿನಲ್ಲಿ 248 ಸಿಸಿಯ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 25.7 ಬಿಹೆಚ್‍ಪಿ ಪವರ್ ಹಾಗೂ 22.9 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.
ಈ ರೀತಿಯಾಗಿ ಸಾರ್ವಜನಿಕ ರಸ್ತೆಗಳಲ್ಲಿ ರೇಸ್ ಮಾಡುವುದು ಬಲು ಅಪಾಯಕಾರಿ. ಇನ್ನೊಂದು ವಾಹನದೊಂದಿಗೆ ಸ್ಪರ್ಧೆಗೆ ಬಿದ್ದು ಅತಿವೇಗವಾಗಿ ಸಾಗುವಾಗ ಯಾವುದಾದರೂ ಪ್ರಾಣಿ, ಮನುಷ್ಯ ಅಥವಾ ವಾಹನಗಳು ಸಡನ್ನಾಗಿ ಅಡ್ಡಬರುವ ಸಾಧ್ಯತೆಗಳಿವೆ.

ಅತಿ ವೇಗದಲ್ಲಿರುವಾಗ ವಾಹನಗಳನ್ನು ನಿಯಂತ್ರಿಸುವುದು ಸುಲಭವಲ್ಲ. ರೇಸ್ ಮಾಡಲೇ ಬೇಕಿದ್ದಲ್ಲಿ ರೇಸ್ ಟ್ರಾಕ್‍ಗಳಲ್ಲಿ ಮಾಡುವುದು ಒಳ್ಳೆಯದು. ಇದರಿಂದ ಯಾರಿಗೂ ಅಪಾಯವಾಗುವುದಿಲ್ಲ.
Image Courtesy: TBC Motovlog/YouTube


Click it and Unblock the Notifications