ಚಂಡಮಾರುತದಿಂದ 16 ಲಕ್ಷ ಕಿ.ಮೀ ಸಂಚರಿಸಿದ ಕಾರು ಕಳೆದುಕೊಂಡ ವ್ಯಕ್ತಿಗೆ ಹೊಸ ಕಾರು ಗಿಫ್ಟ್ ನೀಡಿದ ಟೊಯೊಟಾ
ಜಪಾನ್ ಮೂಲದ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಟೊಯೊಟಾ ಅಂತರರಾಷ್ತ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಬ್ರ್ಯಾಂಡ್ ಗಳಲ್ಲಿ ಒಂದಾಗಿದೆ. ಟೊಯೊಟಾ ಅತ್ಯಂತ ವಿಶ್ವಾಸಾರ್ಹ ಕಾರುಗಳನ್ನು ಉತ್ಪಾದಿಸಲು ಹೆಸರುವಾಸಿಯಾಗಿದೆ. ಮಾರುಕಟ್ಟೆಯಲ್ಲಿ ಟೊಯೊಟಾ ಕಾರುಗಳು ವಿಶ್ವಾಸಾರ್ಹತೆ ಮತ್ತು ಉತ್ತಮ ಗುಣಮಟ್ಟದ ಸರ್ವಿಸ್ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆದುಕೊಳ್ಳುತ್ತಿದೆ.
ಇತ್ತೀಚೆಗೆ, ಇಯಾನ್ ಚಂಡಮಾರುತದಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ಒಬ್ಬ ವ್ಯಕ್ತಿ 16 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಹೈಲ್ಯಾಂಡರ್ ಎಸ್‍ಯುವಿಯನ್ನು ಕಳೆದುಕೊಂಡಿದ್ದರು. ಈ ವಿಚಾರ ತಿಳಿದ ಬಳಿಕ ಟೊಯೊಟಾ ಕಂಪನಿಯು ಆ ವ್ಯಕ್ತಿಗೆ 2023ರ ಟೊಯೊಟಾ ಹೈಲ್ಯಾಂಡರ್ ಎಸ್‍ಯುವಿಯನ್ನು ಉಡುಗೊರೆಯಾಗಿ ನೀಡಿದ್ದರು. ಟೊಯೊಟಾ ಕಂಪನಿಯು ಈ ವ್ಯಕ್ತಿಯ ನಿಷ್ಠೆಗೆ ಹೊಸ ಎಸ್‍ಯುವಿಯನ್ನು ಉಚಿತವಾಗಿ ನೀಡುವ ಮೂಲಕ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಟೊಯೊಟಾ ಕಂಪನಿಯು ಅಮೆರಿಕಾದ ಮಾರ್ಕ್ ಮಿಲ್ಲರ್ ಎಂಬ ಹೆಸರಿನ ವ್ಯಕ್ತಿಗೆ ಸ್ಥಳೀಯ ಡೀಲರ್‌ಶಿಪ್‌ನಲ್ಲಿ ಹೊಚ್ಚಹೊಸ 2023ರ ಹೈಲ್ಯಾಂಡರ್ ಹೈಬ್ರಿಡ್ ಬ್ರೌನ್ಸ್ ಆವೃತ್ತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ವರದಿಗಳ ಪ್ರಕಾರ, ಮಾರ್ಕ್ ತನ್ನ ಕಳೆದುಹೋದ, ಟೊಯೊಟಾ ಹೈಲ್ಯಾಂಡರ್ ಎಸ್‍ಯುವಿಯನ್ನು 2006ರಲ್ಲಿ ಖರೀದಿಸಿದ್ದರು. ಈ ಎಸ್‍ಯುವಿಯನ್ನು ಅವರು ಪ್ರತಿದಿನ ಬಳಸುತ್ತಿದ್ದರು.
ಕೆಲವೊಮ್ಮೆ ಅವರು ತಮ್ಮ ಈ ಹೈಬ್ರಿಡ್ ಎಸ್‍ಯುವಿಯನ್ನು ಮೊಬೈಲ್ ಕಚೇರಿಯಾಗಿ ಬಳಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. ಅವರು ತಮ್ಮ ಎಸ್‍ಯುವಿ ಅನ್ನು ತುಂಬಾ ಪ್ರೀತಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ, ಆದರೆ ದುಃಖಕರವೆಂದರೆ ಇಯಾನ್ ಚಂಡಮಾರುತ ರೌದ್ರವತಾರದಿಂದ ಈ ಎಸ್‍ಯುವಿಯನ್ನು ಕಳೆದುಕೊಂಡಿದ್ದಾರೆ. 2020 ರಲ್ಲಿ ಫ್ಲೋರಿಡಾದಲ್ಲಿ ಅಪ್ಪಳಿಸಿದ ಚಂಡಮಾರುತಕ್ಕೆ $113 ಶತಕೋಟಿ ಮೌಲ್ಯದ ಹಾನಿಯನ್ನು ಸೃಷ್ಟಿಸಿತು.

ಈ ಹಿಂದೆ, ತನ್ನ ಕಾರು 500,000 ಮೈಲುಗಳನ್ನು ತಲುಪಿದೆ ಎಂದು ತನ್ನ ಡೀಲರ್‌ಶಿಪ್‌ಗೆ ತಿಳಿಸಿದಾಗ ಕಂಪನಿಯು ಮಾರ್ಕ್‌ಗೆ ಕೂಲರ್ ಅನ್ನು ನೀಡಿದ್ದರು. ಬಳಿಕ ಅವರ ಕಾರು ಮಿಲಿಯನ್ ಮೈಲುಗಳನ್ನು ತಲುಪಿದೆ ಎಂದು ತಿಳಿಸಿದಾಗ, ಅವರನ್ನು ಮತ್ತೆ ಡೀಲರ್‌ಶಿಪ್‌ಗೆ ಕರೆಯಲಾಯಿತು. ಅವರು ಡೀಲರ್‌ಶಿಪ್‌ಗೆ ತೆರೆಳಿದಾಗ, ಕಂಪನಿ ಅವರಿಗೆ 2023ರ ಟೊಯೊಟಾ ಹೈಲ್ಯಾಂಡರ್ ಎಸ್‍ಯುವಿಯನ್ನು ಉಚಿತವಾಗಿ ನೀಡಿದ್ದರು.
ಟೊಯೊಟಾ ಈ ಹಿಂದೆ ಮಾರ್ಕ್ ಒಡೆತನದ ಹೈಲ್ಯಾಂಡರ್ ಅನ್ನು ನೇಪಲ್ಸ್‌ನಲ್ಲಿ ಜರ್ಮೈನ್ ಟೊಯೊಟಾ ತನ್ನ ಸಂಪೂರ್ಣ ಜೀವಿತಾವಧಿಯಲ್ಲಿ ಸೇವೆ ಸಲ್ಲಿಸಿದೆ ಎಂದು ಉಲ್ಲೇಖಿಸಿದೆ. ಮಿಲ್ಲರ್ ಪ್ರಕಾರ, ಇದು "ಅತ್ಯಂತ ವಿಶ್ವಾಸಾರ್ಹವಾದ ಎಸ್‍ಯುವಿಯಾಗಿದೆ, ಮಾರ್ಕ್ ಉಡುಗೊರೆಯಾಗಿ ಸ್ವೀಕರಿಸಿದ 2023ರ ಹೈಲ್ಯಾಂಡರ್ ಹೈಬ್ರಿಡ್ ಬ್ರೌನ್ಸ್ ಆವೃತ್ತಿಯು ಟೊಯೊಟಾದ ಇತ್ತೀಚಿನ ಹೊಸ ಮಾದರಿಯಾಗಿದೆ. ಈ ಹೈಬ್ರಿಡ್ ಎಸ್‍ಯುವಿ ನಯವಾದ ಮತ್ತು ಸೊಗಸಾದ ವಿನ್ಯಾಸವನ್ನು ಹೊಂದಿದೆ,
ಇದು ಶಕ್ತಿಯುತ ಕಾರ್ಯಕ್ಷಮತೆ ಮತ್ತು ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಸಂಯೋಜಿಸಲ್ಪಟ್ಟಿದೆ. ಬ್ರೌನ್ಸ್ ಆವೃತ್ತಿಯು ಹೊಸ ಟ್ರಿಮ್ ಮಟ್ಟವಾಗಿದ್ದು, ಡ್ರೈವಿಂಗ್ ಅನುಭವವನ್ನು ಹೆಚ್ಚಿಸಲು ವಿಶೇಷ ಫೀಚರ್ಸ್ ಮತ್ತು ನವೀಕರಣಗಳೊಂದಿಗೆ ಬರುತ್ತದೆ. ಈ ಎಸ್‍ಯುವಿ 2.5-ಲೀಟರ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 243 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಇದು ಎಲೆಕ್ಟ್ರಿಕ್ ನಿರಂತರವಾಗಿ ವೇರಿಯಬಲ್ ಟ್ರಾನ್ಸ್‌ಮಿಷನ್ (ಇಸಿವಿಟಿ) ಮತ್ತು ಆಲ್-ವೀಲ್ ಡ್ರೈವ್‌ನೊಂದಿಗೆ ಬರುತ್ತದೆ. 2023ರ ಟೊಯೊಟಾ ಹೈಲ್ಯಾಂಡರ್ ಹೈಬ್ರಿಡ್ ಬ್ರೌನ್ಸ್ ಆವೃತ್ತಿಯ ಹೊರಭಾಗವು ವಿಶಿಷ್ಟವಾದ ಕಂಚಿನ ಫಿನಿಶ್, 18-ಇಂಚಿನ ಕಂಚಿನ ವ್ಹೀಲ್ಅರ್ ಮತ್ತು ಮುಂಭಾಗದ ಗ್ರಿಲ್ ಅನ್ನು ಹೊಂದಿದ್ದು ಅದು ಗಮನ ಸೆಳೆಯುವ ನೋಟವನ್ನು ನೀಡುತ್ತದೆ. ಈ ಎಸ್‍ಯುವಿಯ ಡೋರ್ ಪ್ಯಾನೆಲ್‌ಗಳು ಮತ್ತು ಡ್ಯಾಶ್‌ಬೋರ್ಡ್‌ಗಳ ಮೇಲೆ ಬ್ರೌನ್ಸ್ ಅಸ್ಸೆಂಟ್ ಗಳು ಮತ್ತು ಹೊಲಿಗೆಗಳೊಂದಿಗೆ ಒಳಭಾಗವು ಆಕರ್ಷಕವಾಗಿದೆ.


Click it and Unblock the Notifications