10,000 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದ ಟೊಯೊಟಾ ಹಿಲಕ್ಸ್ ಕಾರು

ಟೊಯೊಟಾ ಕಂಪನಿಯ ಜನಪ್ರಿಯ ಕಾರುಗಳಲ್ಲಿ ಹಿಲಕ್ಸ್ ಪಿಕಪ್ ಟ್ರಕ್ ಸಹ ಒಂದು. ಟೊಯೊಟಾ ಕಂಪನಿಯು ಈ ಕಾರ್ ಅನ್ನು ಶೀಘ್ರದಲ್ಲಿಯೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ.

10,000 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದ ಟೊಯೊಟಾ ಹಿಲಕ್ಸ್ ಕಾರು

ಇಸುಝು ವಿ-ಕ್ರಾಸ್ ಪಿಕ್-ಅಪ್ ಟ್ರಕ್‌ಗೆ ಪೈಪೋಟಿ ನೀಡಲು ಈ ಕಾರ್ ಅನ್ನು ಬಿಡುಗಡೆಗೊಳಿಸಲಾಗುತ್ತದೆ. ಈ ಕಾರ್ ಅನ್ನು ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈಗ ಈ ಕಾರಿಗೆ ಸಂಬಂಧಿಸಿದ ವೀಡಿಯೊವೊಂದು ವೈರಲ್ ಆಗಿದೆ.

10,000 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದ ಟೊಯೊಟಾ ಹಿಲಕ್ಸ್ ಕಾರು

ಕೆಲವು ಯುವಕರು ಈ ಕಾರ್ ಅನ್ನು 10 ಸಾವಿರ ಅಡಿ ಎತ್ತರದಿಂದ ಬೀಳಿಸಿದ್ದಾರೆ. ಅಷ್ಟು ಎತ್ತರದಿಂದ ಬೀಳಿಸಲು ಈ ಯುವಕರು ಹೆಲಿಕಾಪ್ಟರ್ ಬಳಸಿದ್ದಾರೆ. ವರದಿಗಳ ಪ್ರಕಾರ ಟೊಯೊಟಾ ಹಿಲಕ್ಸ್ ಪಿಕ್-ಅಪ್ ಟ್ರಕ್‌ನ ಸ್ಥಿರತೆಯನ್ನು ಪರೀಕ್ಷಿಸಲು ಈ ಯುವಕರು ಹೀಗೆ ಮಾಡಿದ್ದಾರೆ.

10,000 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದ ಟೊಯೊಟಾ ಹಿಲಕ್ಸ್ ಕಾರು

ವಿಸ್ಲಿನ್‌ಡೀಸೆಲ್‌ ಎಂಬ ಯೂಟ್ಯೂಬ್ ಚಾನೆಲ್'ನ ಯುವಕರು ಈ ವಿಲಕ್ಷಣ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಈ ಕಾರ್ಯಕ್ಕಾಗಿ ಅವರು ದೊಡ್ಡ ಖಾಲಿ ಜಾಗವನ್ನು ಬಳಸಿದ್ದಾರೆ. ಭಾರವಾದ ವಸ್ತುಗಳನ್ನು ಎತ್ತುವ ಸಾಮರ್ಥ್ಯವಿರುವ ಕಮನ್ ಕೆ-ಮ್ಯಾಕ್ಸ್ ಹೆಲಿಕಾಪ್ಟರ್ ಅನ್ನು ಈ ಕಾರ್ಯಕ್ಕಾಗಿ ಬಳಸಲಾಗಿದೆ.

10,000 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದ ಟೊಯೊಟಾ ಹಿಲಕ್ಸ್ ಕಾರು

ಈ ಹೆಲಿಕಾಪ್ಟರ್ ಮೂಲಕ ಟೊಯೊಟಾ ಹಿಲಕ್ಸ್ ಪಿಕ್-ಅಪ್ ಟ್ರಕ್ ಅನ್ನು 10,000 ಅಡಿ ಎತ್ತರದಿಂದ ಕೆಳಕ್ಕೆ ಬೀಳಿಸಲಾಗಿದೆ. ಇದಕ್ಕೂ ಮುನ್ನ ಈ ಯುವಕರು 500 ಅಡಿ ಎತ್ತರದಿಂದ ಕಾರನ್ನು ಇಳಿಸಿ ಪರೀಕ್ಷಿಸಿದರು.

10,000 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದ ಟೊಯೊಟಾ ಹಿಲಕ್ಸ್ ಕಾರು

ಆಗ ಹಿಲಕ್ಸ್ ಪಿಕ್ ಅಪ್ ಟ್ರಕ್ ತೀವ್ರವಾಗಿ ಹಾನಿಗೊಳಗಾಗಿತ್ತು. ಮತ್ತೆ ಅದೇ ವಾಹನವನ್ನು 10 ಸಾವಿರ ಅಡಿ ಎತ್ತರದಿಂದ ಇಳಿಸಲಾಯಿತು. ಅಷ್ಟು ಎತ್ತರದಿಂದ ಈ ವಾಹನವು ನೆಲವನ್ನು ತಲುಪಲು 29 ಸೆಕೆಂಡುಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದೆ.

10,000 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದ ಟೊಯೊಟಾ ಹಿಲಕ್ಸ್ ಕಾರು

ಕೆಳಕ್ಕೆ ಬಿದ್ದ ಕಾರಿನ ಬಾಡಿ, ಟಯರ್, ವ್ಹೀಲ್ ಎಲ್ಲವೂ ಪುಡಿ ಪುಡಿಯಾಗಿವೆ. ವಿಸ್ಲಿನ್‌ಡೀಸೆಲ್‌ ಯೂಟ್ಯೂಬ್ ಚಾನೆಲ್, ಗೋ ಪ್ರೊ ಹಾಗೂ ಸಾಮಾನ್ಯ ವೀಡಿಯೊ ಕ್ಯಾಮೆರಾಗಳ ಮೂಲಕ ಈ ದೃಶ್ಯಗಳನ್ನು ಸೆರೆ ಹಿಡಿದು ತನ್ನ ಚಾನಲ್‌ನಲ್ಲಿ ಅಪ್ ಲೋಡ್ ಮಾಡಿದೆ.

ಜನಪ್ರಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ವೋಲ್ವೋ ಸಹ ಇತ್ತೀಚೆಗೆ ಇದೇ ರೀತಿಯ ಪ್ರಯೋಗವನ್ನು ನಡೆಸಿತ್ತು. ವೋಲ್ವೋ ಕಂಪನಿಯು ತನ್ನ ಹೊಸ ಐಷಾರಾಮಿ ಕಾರನ್ನು ಕ್ರೇನ್ ಬಳಸಿ 30 ಮೀಟರ್ ಎತ್ತರದಿಂದ ಇಳಿಸಿ ಕ್ರ್ಯಾಶ್ ಟೆಸ್ಟ್ ನಡೆಸಿತ್ತು.

10,000 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದ ಟೊಯೊಟಾ ಹಿಲಕ್ಸ್ ಕಾರು

ಇದನ್ನು ಅನುಸರಿಸಿ ವಿಸ್ಲಿನ್‌ಡೀಸೆಲ್‌ ಯೂಟ್ಯೂಬ್ ಚಾನೆಲ್‌ ಯುವಕರು ಹೆಚ್ಚಿನ ವೀಕ್ಷಕರನ್ನು ಸೆಳೆಯಲು ಹಾಗೂ ಕಾರಿನ ಸ್ಥಿರತೆಯನ್ನು ಪರೀಕ್ಷಿಸಲು ಈ ವಿಲಕ್ಷಣಕಾರ್ಯದಲ್ಲಿ ತೊಡಗಿದ್ದಾರೆ.

Most Read Articles

Kannada
English summary
Toyota Hilux dropped from 10000 feet height. Read in Kannada.
Story first published: Saturday, June 19, 2021, 17:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X