ನೆಚ್ಚಿನ ಕಾರಿಗೆ ಗುದ್ದಿದ ಮಹಿಳೆಗೆ ಗೂಸಾ ನೀಡಿದ ಅಮೇರಿಕಾ ನಟ

ಅವರು ನಗುತ್ತಿರಲಿಲ್ಲ. ಅಲ್ಲಿದ್ದವರು ನಗುತ್ತಲೂ ಇರಲಿಲ್ಲ. ಅಮೇರಿಕಾದ ಖ್ಯಾತ ಹಾಸ್ಯ ನಟರಾದ ಟ್ರೇಸಿ ಮಾರ್ಗನ್‍‍ರವರು ತಮ್ಮ 2 ಮಿಲಿಯನ್ ಡಾಲರ್ ಬೆಲೆಯ ಬುಗಾಟಿ ಸ್ಪೋರ್ಟ್ ಕಾರಿಗೆ ಮಹಿಳೆಯೊಬ್ಬಳು ಗುದ್ದಿದ ನಂತರ ಆಕೆಗೆ ಗೂಸಾ ನೀಡಿದ್ದಾರೆ.

ನೆಚ್ಚಿನ ಕಾರಿಗೆ ಗುದ್ದಿದ ಮಹಿಳೆಗೆ ಗೂಸಾ ನೀಡಿದ ಅಮೇರಿಕಾ ನಟ

ಈ ಘಟನೆಯು ಮಂಗಳವಾರ ಮ್ಯಾನ್‍‍ಹಟನ್‍‍ನಲ್ಲಿ ನಡೆದಿದೆ. ಈ ವೀಡಿಯೊ ಪೇಜ್ ಸಿಕ್ಸ್ ಶೋಗೆ ಲಭ್ಯವಾಗಿದೆ. ತನ್ನ ಬುಗಾಟಿ ಕಾರಿಗೆ ಗುದ್ದಿ, ಪಕ್ಕದಲ್ಲಿ ನಿಂತ ಹೋಂಡಾ ಸಿ‍ಆರ್-ವಿ ಕಾರಿನ ಒಳಗೆ ಕುಳಿತಿದ್ದ ಮಹಿಳೆಗೆ ಗುದ್ದಿದ ನಂತರ ಬಿಚ್, ಗೆಟ್ ಔಟ್ ಆಫ್ ದಿ ಕಾರ್ ಎಂದು ಮಾರ್ಗನ್‍‍ರವರು ಕಿರುಚಾಡುತ್ತಿರುವುದನ್ನು ಈ ವೀಡಿಯೊದಲ್ಲಿ ನೋಡಬಹುದಾಗಿದೆ. ಈ ವೀಡಿಯೊ, ಮಾರ್ಗನ್‍‍ರವರು ಕಾಗ್ನಾಕ್ ಬಣ್ಣದ ಬುಗಾಟಿ ವೇರಾನ್ 16.4 ಗ್ರಾಂಡ್ ಸ್ಪೋರ್ಟ್‍ ಕಾರಿನಿಂದ ಮೇಲೆ ಎದ್ದು ಪಕ್ಕದಲ್ಲಿರುವ ಇನ್ನೊಂದು ಕಾರಿನ ಒಳಗಿರುವವರಿಗೆ ಕೈನಿಂದ ಗುದಿಯುತ್ತಿರುವುದರಿಂದ ಪ್ರಾರಂಭವಾಗುತ್ತದೆ.

ನಂತರ ಅವರು ಕೂಗಾಡುತ್ತಾ ಸೆಂಟರ್ ಕಂಸೋಲ್‍‍ನ ಮೇಲಿಂದ ಪ್ಯಾಸೇಂಜರ್ ಡೋರ್‍‍ಗೆ ಬರುತ್ತಾರೆ. ಈಗ ತಾನೇ ಖರೀದಿಸಿದ್ದೆ ಎಂದು ದಾರಿಯಲ್ಲಿ ಹೋಗುವವರಿಗೆ ಹೇಳುತ್ತಾ, ಕಾರಿನ ಬಾಗಿಲು ತೆಗೆದು ಹೊರ ನಡೆಯುತ್ತಾರೆ.

ನೆಚ್ಚಿನ ಕಾರಿಗೆ ಗುದ್ದಿದ ಮಹಿಳೆಗೆ ಗೂಸಾ ನೀಡಿದ ಅಮೇರಿಕಾ ನಟ

ಪೊಲೀಸರ ಪ್ರಕಾರ ಈ ಘಟನೆಯಲ್ಲಿ ಯಾರೊಬ್ಬರಿಗೂ ಗಾಯಗಳಾಗಿಲ್ಲ. ಮಹಿಳೆಯು ಸಹ ಘಟನೆಯ ಬಗ್ಗೆ ದೂರು ನೀಡಿಲ್ಲ. 50 ವರ್ಷ ವಯಸ್ಸಿನ ಟ್ರೇಸಿ ಮಾರ್ಗನ್‍‍ರವರು ಅನೇಕ ಸಿನಿಮಾಗಳಲ್ಲಿ ನಟರಾಗಿ, ವಾಯ್ಸ್ ಆಕ್ಟರ್ ಆಗಿ ಕಾಣಿಸಿಕೊಂಡಿದ್ದಾರೆ.

ನೆಚ್ಚಿನ ಕಾರಿಗೆ ಗುದ್ದಿದ ಮಹಿಳೆಗೆ ಗೂಸಾ ನೀಡಿದ ಅಮೇರಿಕಾ ನಟ

ಮಾರ್ಗನ್‍‍ರವರು 2006 ರಿಂದ 2013ರವರೆಗೆ ಪ್ರಸಾರವಾದ 30 ರಾಕ್‍ ಟಿವಿ ಸರಣಿಯಲ್ಲಿ, ಟ್ರೇಸಿ ಜೊರ್ಡಾನ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರಕ್ಕಾಗಿ ಅವರನ್ನು 2009ರ ಎಮ್ಮಿ ಅವಾರ್ಡ್‍‍‍ಗೆ ನಾಮಿನೇಟ್ ಮಾಡಲಾಗಿತ್ತು. ಹೈಸ್ಕೂಲಿನಲ್ಲಿ ಓದುತ್ತಿದ್ದಾಗಲೇ ತಮ್ಮ ಗೆಳತಿ ಸಬಿನಾರನ್ನು ಮದುವೆಯಾಗಿದ್ದರು. 2009ರಲ್ಲಿ ಸಬಿನಾರಿಂದ ವಿಚ್ಛೇದನ ಪಡೆದು, 2015ರಲ್ಲಿ ಮಾಡೆಲ್ ಮೆಘನ್ ವೊಲೊವರ್‍‍ರವರನ್ನು ಮದುವೆಯಾದರು.

MOST READ: ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು

ನೆಚ್ಚಿನ ಕಾರಿಗೆ ಗುದ್ದಿದ ಮಹಿಳೆಗೆ ಗೂಸಾ ನೀಡಿದ ಅಮೇರಿಕಾ ನಟ

ಇನ್ನೂ ಬುಗಾಟಿ ಕಾರಿನ ಬಗ್ಗೆ ಹೇಳುವುದಾದರೆ, ಜರ್ಮನ್ ಮೂಲದ ಫೋಕ್ಸ್ ವ್ಯಾಗನ್ ಕಂಪನಿಯು ಈ ಕಾರನ್ನು ವಿನ್ಯಾಸಗೊಳಿಸಿ ಅಭಿವೃದ್ಧಿ ಪಡಿಸಿದ್ದು, ಫ್ರೆಂಚ್ ಆಟೋಮೊಬೈಲ್ ಕಂಪನಿ ಬುಗಾಟಿಯು ಈ ಕಾರನ್ನು ಫ್ರಾನ್ಸ್ ನಲ್ಲಿರುವ ಮೊಲ್‍‍ಶಿಮ್ ಘಟಕದಲ್ಲಿ ತಯಾರಿಸುತ್ತದೆ.

MOST READ: ಮ್ಯಾನುವಲ್ ಕಾರ್ ಡ್ರೈವಿಂಗ್ ಮಾಡದಿದ್ರೆ ಲೈಸೆನ್ಸ್ ಸಿಗೋದಿಲ್ಲ

ನೆಚ್ಚಿನ ಕಾರಿಗೆ ಗುದ್ದಿದ ಮಹಿಳೆಗೆ ಗೂಸಾ ನೀಡಿದ ಅಮೇರಿಕಾ ನಟ

ಈ ಕಾರಿನಲ್ಲಿ 8.0 ಲೀಟರಿನ ಕ್ವಾಡ್ ಟರ್ಬೊ‍‍ಚಾರ್ಜ್ಡ್ ಡಬ್ಲ್ಯು16 ಎಂಜಿನ್‍‍ಯಿದ್ದು, 1,200 ಬಿ‍‍ಹೆಚ್‍‍ಪಿ ಹಾಗೂ 1,500 ಎನ್‍‍‍‍ಎಂ ಟಾರ್ಕ್ ಉತ್ಪಾದಿಸುತ್ತದೆ. 0 - 100 ಕಿ.ಮೀ ವೇಗವನ್ನು 2.5 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ. ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 415 ಕಿ.ಮೀ ಆಗಿದೆ. ಬುಗಾಟಿ ವೇರಾನ್ ಕಾರಿನ ಬೆಲೆಯು ರೂ.9.8 ಕೋಟಿಗಳಾಗಿದೆ.

Source: Page Six

More from DriveSpark

Article Published On: Friday, June 7, 2019, 19:10 [IST]
English summary
Tracy Morgan goes off on woman who hit his new $2 million Bugatti - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+