ಫೇಸ್‌ಮಾಸ್ಕ್ ಧರಿಸದೇ ದಂಡ ತೆತ್ತ ಟ್ರಾಫಿಕ್ ಕಾನ್‌ಸ್ಟೇಬಲ್‌

ಕರೋನಾ ವೈರಸ್ ಸೋಂಕು ದೇಶದೆಲ್ಲೆಡೆ ವೇಗವಾಗಿ ಹರಡುತ್ತಿದೆ. ಕರೋನಾ ವೈರಸ್ ನಿಯಂತ್ರಣಕ್ಕೆ ಸರ್ಕಾರಗಳು ಹಲವಾರು ಮಾರ್ಗಸೂಚಿಗಳನ್ನು ಹೊರಡಿಸಿವೆ. ಇವುಗಳಲ್ಲಿ ಫೇಸ್‌ಮಾಸ್ಕ್ ಕಡ್ಡಾಯ ಬಳಕೆ ಸಹ ಸೇರಿದೆ.

ಫೇಸ್‌ಮಾಸ್ಕ್ ಧರಿಸದೇ ದಂಡ ತೆತ್ತ ಟ್ರಾಫಿಕ್ ಕಾನ್‌ಸ್ಟೇಬಲ್‌

ಆದರೆ ಕೆಲವರು ಫೇಸ್‌ಮಾಸ್ಕ್ ಧರಿಸದೇ ಸರ್ಕಾರದ ಮಾರ್ಗಸೂಚಿಗಳನ್ನು ಗಾಳಿಗೆ ತೂರುತ್ತಿದ್ದಾರೆ. ಸಾಮಾನ್ಯ ಜನರ ಜೊತೆಗೆ ಕೆಲವು ಸ್ಥಳಗಳಲ್ಲಿ ಪೊಲೀಸರು ಸಹಈ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಫೇಸ್‌ಮಾಸ್ಕ್ ಧರಿಸದ ಕಾರಣಕ್ಕೆ ಒಡಿಶಾದ ಪೊಲೀಸ್ ಕಾನ್‌ಸ್ಟೇಬಲ್‌ ಒಬ್ಬರಿಗೆ ದಂಡ ವಿಧಿಸಿರುವ ಘಟನೆ ವರದಿಯಾಗಿದೆ.

ಫೇಸ್‌ಮಾಸ್ಕ್ ಧರಿಸದೇ ದಂಡ ತೆತ್ತ ಟ್ರಾಫಿಕ್ ಕಾನ್‌ಸ್ಟೇಬಲ್‌

ಮಾಧ್ಯಮ ವರದಿಗಳ ಪ್ರಕಾರ ಕೋವಿಡ್ 19 ಸುರಕ್ಷತಾ ನಿಯಮಗಳನ್ನು ಜಾರಿಗೊಳಿಸುವ 14 ದಿನಗಳ ಫೇಸ್‌ಮಾಸ್ಕ್ ಅಭಿಯಾನದಲ್ಲಿ ಫೇಸ್‌ಮಾಸ್ಕ್ ಧರಿಸದ ಟ್ರಾಫಿಕ್ ಕಾನ್‌ಸ್ಟೇಬಲ್‌ಗೆ ರೂ.2,000 ದಂಡ ವಿಧಿಸಲಾಗಿದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಫೇಸ್‌ಮಾಸ್ಕ್ ಧರಿಸದೇ ದಂಡ ತೆತ್ತ ಟ್ರಾಫಿಕ್ ಕಾನ್‌ಸ್ಟೇಬಲ್‌

ಟ್ರಾಫಿಕ್ ಕಾನ್‌ಸ್ಟೇಬಲ್‌ ಫೇಸ್‌ಮಾಸ್ಕ್ ಧರಿಸದ ವಿಷಯ ನಮ್ಮ ಗಮನಕ್ಕೆ ಬಂದ ತಕ್ಷಣ ಅವರಿಗೆ ರೂ.2,000ಗಳ ದಂಡ ವಿಧಿಸಲಾಗಿದೆ ಎಂದು ಪುರಿ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಫೇಸ್‌ಮಾಸ್ಕ್ ಧರಿಸದೇ ದಂಡ ತೆತ್ತ ಟ್ರಾಫಿಕ್ ಕಾನ್‌ಸ್ಟೇಬಲ್‌

ಜವಾಬ್ದಾರಿಯುತ ಪ್ರಜೆಯಾಗಿ ಟ್ರಾಫಿಕ್ ಕಾನ್‌ಸ್ಟೆಬಲ್ ದಂಡ ಪಾವತಿಸಿದ್ದಾರೆ. ಯಾವಾಗಲೂ ಫೇಸ್‌ಮಾಸ್ಕ್ ಧರಿಸಿ ಇಲ್ಲವೇ ದಂಡ ಪಾವತಿಸಲು ಸಿದ್ಧರಾಗಿ. ಇದನ್ನು ಹೊರತುಪಡಿಸಿ ಬೇರೆ ದಾರಿಯಿಲ್ಲವೆಂದು ಪೊಲೀಸರು ಟ್ವೀಟ್ ಬರೆದಿದ್ದಾರೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಫೇಸ್‌ಮಾಸ್ಕ್ ಧರಿಸದೇ ದಂಡ ತೆತ್ತ ಟ್ರಾಫಿಕ್ ಕಾನ್‌ಸ್ಟೇಬಲ್‌

ಈ 14 ದಿನಗಳ ಫೇಸ್‌ಮಾಸ್ಕ್ ಅಭಿಯಾನದ ಸಂದರ್ಭದಲ್ಲಿ ಫೇಸ್‌ಮಾಸ್ಕ್ ಧರಿಸದ ಜನರಿಗೆ ಒಡಿಶಾ ಸರ್ಕಾರವು ರೂ.2,000ಗಳ ದಂಡ ವಿಧಿಸುತ್ತಿದೆ. ಕರೋನಾ ನಿಯಮಗಳನ್ನು ಪಾಲಿಸದ ನಮ್ಮ ಪೊಲೀಸ್ ಕಾನ್‌ಸ್ಟೆಬಲ್‌ಗೆ ನಾವು ದಂಡ ವಿಧಿಸಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕನ್ವರ್ ವಿಶಾಲ್ ಸಿಂಗ್ ಹೇಳಿದ್ದಾರೆ.

ಫೇಸ್‌ಮಾಸ್ಕ್ ಧರಿಸದೇ ದಂಡ ತೆತ್ತ ಟ್ರಾಫಿಕ್ ಕಾನ್‌ಸ್ಟೇಬಲ್‌

ಈ ಮೂಲಕ ನಮ್ಮವರಿಗೆ ದಂಡ ವಿಧಿಸಿದ ಮೇಲೆ ಬೇರೆಯವರಿಗೆ ದಂಡ ವಿಧಿಸದೇ ಬಿಡುವುದಿಲ್ಲ ಎಂಬ ಸಂದೇಶವನ್ನು ಜನರಿಗೆ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.

MOSTREAD: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಫೇಸ್‌ಮಾಸ್ಕ್ ಧರಿಸದೇ ದಂಡ ತೆತ್ತ ಟ್ರಾಫಿಕ್ ಕಾನ್‌ಸ್ಟೇಬಲ್‌

ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್'ರವರು ಕಳೆದ ಶುಕ್ರವಾರ 14 ದಿನಗಳ ಫೇಸ್‌ಮಾಸ್ಕ್ ಅಭಿಯಾನವನ್ನು ಆರಂಭಿಸುವುದಾಗಿ ಘೋಷಿಸಿದ್ದರು.

Most Read Articles

Kannada
English summary
Traffic constable fined for not wearing mask in Odisha. Read in Kannada.
Story first published: Friday, April 30, 2021, 17:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X