ವಿಡಿಯೋ ಮಾಡಿ ನಟ ವಿಜಯ್‌ಗೆ ಕಂಠಕವಾದ ವ್ಯಕ್ತಿ... ಸೀನ್ ಉಲ್ಟಾ! ವಿಡಿಯೋ ಮಾಡಿದವನಿಗೇ ಷಾಕ್!

ಮೊನ್ನೆಯಷ್ಟೆ ಕಾರ್ಯಕ್ರಮವೊಂದಕ್ಕೆ ತೆರಳಿ ಹಿಂದಿರುಗುವಾಗ ಟ್ರಾಫಿಕ್ ನಿಯಮ ಉಲ್ಲಂಘಿಸಿದ ಕಾರಣ ತಮಿಳು ನಟ ವಿಜಯ್‌ ಅವರಿಗೆ ದಂಡ ವಿಧಿಸಲಾಗಿತ್ತು. ಇದೀಗ ಅದೇ ದಿನ ನಟ ವಿಜಯ್ ಕಾರನ್ನು ಬೆಂಬಿದ್ದು ವಿಡಿಯೋ ಮಾಡಿಕೊಂಡು ವಾಹನ ಚಾಲನೆ ಮಾಡಿದ್ದ ವ್ಯಕ್ತಿಗೂ ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

ಜುಲೈ 11ರಂದು ಚೆನ್ನೈನ ಪನೈಯೂರಿನಲ್ಲಿ ವಿಜಯ್ ಪೀಪಲ್ಸ್ ಮೂವ್‌ಮೆಂಟ್ ಕಾರ್ಯಕರ್ತರು ಬಂದಿದ್ದರು. ವಿಜಯ್ ಅವರೊಂದಿಗೆ ಸಮಾಲೋಚನೆ ನಡೆಸಿ ಫೋಟೋ ತೆಗೆಸಿಕೊಂಡಿದ್ದರು. ನಂತರ ಪಣಯೂರು ಬಿಟ್ಟು ತಮ್ಮ ನಿವಾಸಕ್ಕೆ ತೆರಳಿದರು. ಅಂದು ಸಂಜೆ ಕಾರಿನಲ್ಲಿ ಪನೈಯೂರಿಗೆ ಬರುತ್ತಿದ್ದಾಗ ಅಕ್ಕರೈ ಬಳಿಯ ಸಿಗ್ನಲ್ ಜಂಪ್ ಮಾಡಲಾಗಿದೆ.

traffic-police-fined-cameraman-took-video-vijay

ಇಲ್ಲಿ ಇನ್ನೊಂದು ಆಸಕ್ತಿಕರ ವಿಷಯವೆಂದರೆ ವಿಜಯ್ ಕಾರಿನಲ್ಲಿ ತೆರಳುವಾಗ ವಿಡಿಯೋ ಮಾಡಲು ಫಾಲೋ ಮಾಡಿಕೊಂಡು ಬಂದಿದ್ದ ವ್ಯಕ್ತಿಯಿಂದಲೇ ವಿಜಯ್‌ಗೆ ದಂಡ ಬಿದ್ದಿದೆ. ಈತ ರೆಕಾರ್ಡ್ ಮಾಡಿರುವ ವಿಡಿಯೋದಲ್ಲಿ ವಿಜಯ್ ಸಿಗ್ನಲ್ ಜಂಪ್ ಮಾಡಿರುವುದು ಕಂಡುಬಂದಿದೆ. ವಿಡಿಯೋ ವೈರಲ್ ಆದ ಬಳಿಕ ಇದು ಪೊಲೀಸರ ಗಮನಕ್ಕೆ ಬಂದಿದ್ದು, ದಂಡ ವಿಧಿಸಲಾಗಿದೆ.

ಸದ್ಯ ವೈರಲ್ ವಿಡಿಯೋ ಆಧಾರದ ಮೇಲೆ ಟ್ರಾಫಿಕ್ ಪೊಲೀಸರು ಅಲ್ಲಿನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿ ವಿಜಯ್‌ಗೆ ಸಿಗ್ನಲ್ ಜಂಪ್ ಮಾಡಿದಕ್ಕಾಗಿ 500 ರೂ. ದಂಡ ವಿಧಿಸಲಾಗಿದೆ. ಇಲ್ಲಿ ಕುತೂಹಲಕಾರಿ ವಿಷಯವೆಂದರೆ ವಿಜಯ್ ಅವರ ಕಾರನ್ನು ಬೆಂಬಿದ್ದು ವಿಡಿಯೋ ಮಾಡಿದ್ದ ವ್ಯಕ್ತಿಗೂ ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

traffic-police-fined-cameraman-took-video-vijay

ನಟ ವಿಜಯ್ ಅವರ ಕಾರು ಹಿಂದೆ ಬರುತ್ತಿದ್ದರೆ ಮುಂದೆ ಬೈಕಿನಲ್ಲಿ ಬರುತ್ತಾ ಹಿಂದಕ್ಕೆ ಮುಖಮಾಡಿ ಕ್ಯಾಮರಾ ಹಿಡಿದು ಶೂಟ್ ಮಾಡಲಾಗಿದೆ. ಅಲ್ಲಿಗೆ ಮೊದಲು ಬೈಕ್‌ನಲ್ಲಿ ಬಂದ ವ್ಯಕ್ತಿ ಸಿಗ್ನಲ್ ಜಂಪ್ ಮಾಡಿದ್ದಾರೆ. ಬಳಿಕ ಅವರನ್ನು ಫಾಲೋ ಮಾಡಿಕೊಂಡು ಬಂದು ವಿಜಯ್ ಕೂಡ ಸಿಗ್ನಲ್ ಜಂಪ್ ಮಾಡಿದ್ದು, ಈ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ವಿಜಯ್ ಅಭಿಮಾನಿಯೊಬ್ಬರು ಚೆನ್ನೈ ಮೆಟ್ರೋಪಾಲಿಟನ್ ಟ್ರಾಫಿಕ್ ಪೊಲೀಸರ ಟ್ವಿಟರ್ ಪುಟವನ್ನು ಟ್ಯಾಗ್ ಮಾಡಿ ವಾಹನ ಸಂಖ್ಯೆ, ಸ್ಥಳ ಮತ್ತು ಸಿಗ್ನಲ್ ಉಲ್ಲಂಘನೆಯ ಸಮಯವನ್ನು ನಮೂದಿಸಿ ದೂರು ದಾಖಲಿಸಿದ್ದಾರೆ. ಈ ದೂರಿಗೆ ಪ್ರತಿಕ್ರಿಯಿಸಿದ ಚೆನ್ನೈ ಸಿಟಿ ಟ್ರಾಫಿಕ್ ಪೊಲೀಸರು ಟ್ರಾಫಿಕ್ ನಿಯಮ ಉಲ್ಲಂಘಿಸಿದ ಅಪರಾಧಕ್ಕೆ 2500 ರೂ. ದಂಡ ವಿಧಿಸಿದ್ದಾರೆ.

ಸಿಗ್ನಲ್ ಉಲ್ಲಂಘನೆಗೆ 500 ರೂ., ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿ ವಾಹನದ ಹಿಂದೆ ಕುಳಿತುಕೊಂಡಿದ್ದಕ್ಕೆ 200 ರೂ. ದಂಡ, ವಾಹನದಲ್ಲಿ ಕ್ಯಾಮರಾ ಸ್ಟಂಟ್ ಸೇರಿದಂತೆ ಒಟ್ಟು ರೂ. 2500 ದಂಡ ವಿಧಿಸಲಾಗಿದೆ. ಇದನ್ನು ಚೆನ್ನೈ ಮೆಟ್ರೋಪಾಲಿಟನ್ ಪೊಲೀಸರು ತಮ್ಮ ಟ್ವಿಟರ್ ಖಾತೆಯಲ್ಲಿ ಖಚಿತಪಡಿಸಿದ್ದಾರೆ.

ಇನ್ನು ಚೆನ್ನೈನ ಮಟ್ಟಿಗೆ ಯಾರೇ ಟ್ರಾಫಿಕ್ ಉಲ್ಲಂಘನೆ ಮಾಡಿದರೂ ಕೇವಲ ಫೋಟೋ ತೆಗೆದು ದಿನಾಂಕ ಮತ್ತು ಸಮಯವನ್ನು ನಮೂದಿಸಿ ಚೆನ್ನೈ ಮೆಟ್ರೋಪಾಲಿಟನ್ ಪೊಲೀಸರಿಗೆ ಟ್ಯಾಗ್ ಮಾಡಿದರೆ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿ ದಂಡ ವಿಧಿಸುತ್ತಾರೆ. ಇದು ಅಲ್ಲಿ ಸಾಮಾನ್ಯ ಅಭ್ಯಾಸ. ಅದರ ಆಧಾರದ ಮೇಲೆ ವಿಜಯ್ ಹಾಗೂ ವಿಜಯ್ ವಿಡಿಯೋ ತೆಗೆದವನಿಗೆ ದಂಡ ವಿಧಿಸಲಾಗಿದೆ.

Article Published On: Friday, July 14, 2023, 16:03 [IST]
English summary
Traffic police fined cameraman took video vijay
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+