ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು 2 ಕಿ.ಮೀ ದೂರ ಓಡಿದ ಟ್ರಾಫಿಕ್ ಪೊಲೀಸ್

ಭಾರತದ ನಗರಗಳಲ್ಲಿರುವ ರಸ್ತೆಗಳು ಯಾವಾಗಲೂ ಟ್ರಾಫಿಕ್ ಜಾಮ್ ನಿಂದ ಕೂಡಿರುತ್ತವೆ. ಅಂತಹ ಸಂದರ್ಭಗಳಲ್ಲಿ ಆಂಬ್ಯುಲೆನ್ಸ್‌ಗಳಂತಹ ತುರ್ತು ಸೇವೆಯನ್ನು ನೀಡುವ ವಾಹನಗಳು ಟ್ರಾಫಿಕ್ ಜಾಮ್ ನಿಂದ ಹೊರಬರಲು ಕಷ್ಟಪಡಬೇಕಾಗುತ್ತದೆ.

ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು 2 ಕಿ.ಮೀ ದೂರ ಓಡಿದ ಟ್ರಾಫಿಕ್ ಪೊಲೀಸ್

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವೊಂದು ವೈರಲ್ ಆಗಿದೆ. ಈ ವೀಡಿಯೊದಲ್ಲಿ ಟ್ರಾಫಿಕ್ ಪೊಲೀಸ್ ಒಬ್ಬರು ವಾಹನಗಳು ತುಂಬಿರುವ ರಸ್ತೆಯಲ್ಲಿ ಓಡುತ್ತಾ ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟಿದ್ದಾರೆ. ಈ ವೀಡಿಯೊವನ್ನು ವೀಕ್ಷಿಸಿರುವ ಸಾರ್ವಜನಿಕರು ಈ ಟ್ರಾಫಿಕ್ ಪೊಲೀಸ್ ಅನ್ನು ನಿಜವಾದ ಹೀರೋ ಎಂದು ಬಣ್ಣಿಸಿದ್ದಾರೆ.

ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು 2 ಕಿ.ಮೀ ದೂರ ಓಡಿದ ಟ್ರಾಫಿಕ್ ಪೊಲೀಸ್

ಈ ವಿಡಿಯೋವನ್ನು ಹೈದರಾಬಾದ್ ಪೊಲೀಸರು ತಮ್ಮ ಟ್ವಿಟರ್ ಖಾತೆಯ ಮೂಲಕ ಅಪ್‌ಲೋಡ್ ಮಾಡಿದ್ದಾರೆ. ಈ ಘಟನೆ ನಡೆದಿರುವುದು ಹೈದರಾಬಾದ್‌ನ ಕೋಟಿ ಎಂಬ ಪ್ರದೇಶದಲ್ಲಿ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು 2 ಕಿ.ಮೀ ದೂರ ಓಡಿದ ಟ್ರಾಫಿಕ್ ಪೊಲೀಸ್

ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಹೊತ್ತು ಬಂದ ಆಂಬುಲೆನ್ಸ್ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡಿದೆ. ಈ ವೇಳೆ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್ ಪೊಲೀಸ್ ಆಂಬುಲೆನ್ಸ್ ನೆರವಿಗೆ ಧಾವಿಸಿದ್ದಾರೆ.

ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು 2 ಕಿ.ಮೀ ದೂರ ಓಡಿದ ಟ್ರಾಫಿಕ್ ಪೊಲೀಸ್

ಪೊಲೀಸರ ಈ ಕಾರ್ಯವನ್ನು ಆಂಬ್ಯುಲೆನ್ಸ್ ಚಾಲಕ ತನ್ನ ಫೋನ್‌ನಲ್ಲಿ ರೆಕಾರ್ಡ್ ಮಾಡಿದ್ದಾನೆ. ರಸ್ತೆಯಲ್ಲಿ ಟ್ರಾಫಿಕ್ ಜಾಮ್ ನಿಂದಾಗಿ ವಾಹನಗಳು ತೆವಳುತ್ತ ಸಾಗುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು 2 ಕಿ.ಮೀ ದೂರ ಓಡಿದ ಟ್ರಾಫಿಕ್ ಪೊಲೀಸ್

ಟ್ರಾಫಿಕ್ ಜಾಮ್ ತೆರವುಗೊಳಿಸಲು ಆ ಪೊಲೀಸ್ ಆಂಬ್ಯುಲೆನ್ಸ್ ಜೊತೆಯಲ್ಲಿಯೇ ಓಡಿದ್ದಾರೆ. ರಸ್ತೆಯಲ್ಲಿ ಸಾಗುತ್ತಿರುವ ವಾಹನಗಳಿಗೆ ಆಂಬ್ಯುಲೆನ್ಸ್ ಗೆ ದಾರಿ ನೀಡುವಂತೆ ಕೇಳಿಕೊಂಡಿದ್ದಾರೆ.

ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು 2 ಕಿ.ಮೀ ದೂರ ಓಡಿದ ಟ್ರಾಫಿಕ್ ಪೊಲೀಸ್

ಹೀಗೆ ಸುಮಾರು 2 ಕಿ.ಮೀ ಸಾಗಿ ಆಂಬ್ಯುಲೆನ್ಸ್ ಸಾಗಲು ನೇರವಾದ ಆ ಟ್ರಾಫಿಕ್ ಪೊಲೀಸರ ಹೆಸರು ಜಿ ಬಾಬ್ಜಿ. ಅವರಿಗೆ ಕೋಟಿ ಪ್ರದೇಶದಲ್ಲಿ ಸಂಚಾರ ನಿರ್ವಹಿಸುವ ಉಸ್ತುವಾರಿಯನ್ನು ನೀಡಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು 2 ಕಿ.ಮೀ ದೂರ ಓಡಿದ ಟ್ರಾಫಿಕ್ ಪೊಲೀಸ್

ಈ ವಿಡಿಯೋವನ್ನು ಹೈದರಾಬಾದ್‌ನ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಅನಿಲ್ ಕುಮಾರ್ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಹೈದರಾಬಾದ್ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಬಾಬ್ಜಿ ಆಂಬ್ಯುಲೆನ್ಸ್‌ಗಾಗಿ ಸಂಚಾರವನ್ನು ಬೇರೆಡೆಗೆ ತಿರುಗಿಸಿದ್ದಾರೆ. ಹೈದರಾಬಾದ್ ಟ್ರಾಫಿಕ್ ಪೊಲೀಸರು ನಾಗರಿಕರ ಸೇವೆಗೆ ಸದಾ ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.

ಆಂಬ್ಯುಲೆನ್ಸ್‌ ಸೈರನ್ ಮಾಡಿದರೂ ದಾರಿ ಬಿಡದ ವಾಹನ ಸವಾರರ ವಿರುದ್ಧ ಟ್ವಿಟರ್ ಬಳಕೆದಾರರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸಂಚಾರಿ ನಿಯಮಗಳ ಬಗ್ಗೆ ಜನರು ಜಾಗೃತರಾಗಿರಬೇಕು ಎಂದು ಅನೇಕ ಟ್ವಿಟರ್ ಬಳಕೆದಾರರು ಹೇಳಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು 2 ಕಿ.ಮೀ ದೂರ ಓಡಿದ ಟ್ರಾಫಿಕ್ ಪೊಲೀಸ್

ಮೋಟಾರು ವಾಹನ ಕಾಯ್ದೆ 1988ರ ಪ್ರಕಾರ ತುರ್ತು ವಾಹನಗಳಿಗೆ ದಾರಿ ನೀಡದ ವಾಹನ ಸವಾರರಿಗೆ ರೂ.10,000ಗಳ ದಂಡ ವಿಧಿಸಬಹುದು.

Most Read Articles

Kannada
English summary
Traffic Police from Hyderabad clears traffic for ambulance by running 2 kilometers. Read in Kannada.
Story first published: Friday, November 6, 2020, 17:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X