ಸಂಚಾರಿ ಪೊಲೀಸರ ಕೈಗೆ ಬಂತು ಹೈಟೆಕ್ ಚಲನ್ ಮಷಿನ್

ತಂತ್ರಜ್ಞಾನ ಬದಲಾದಂತೆಲ್ಲಾ ಕಾನೂನು ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಾ ಹೋಗುತ್ತವೆ. ಇದರಿಂದ ಪೊಲೀಸರಿಗೂ ತಲೆ ನೋವು ತಪ್ಪಿದ್ದಲ್ಲ. ಇನ್ನು ಮುಂದೆ ಪೊಲೀಸರು ಸಹ ಹೈ ಟೆಕ್ ಆಗಲಿದ್ದಾರೆ.

ಸಂಚಾರಿ ಪೊಲೀಸರ ಕೈಗೆ ಬಂತು ಹೈಟೆಕ್ ಚಲನ್ ಮಷಿನ್

ಕಳೆದ ಶುಕ್ರವಾರ ಗ್ರೇಟರ್ ಚೆನ್ನೈನ ಟ್ರಾಫಿಕ್ ಪೊಲೀಸರಿಗೆ 352 ಇಂಟರ್ನೆಟ್ ಆಧಾರಿತ ಇ-ಚಲನ್ ಯಂತ್ರಗಳನ್ನು ನೀಡಲಾಗಿದೆ. ಇ-ಚಲನ್ ವ್ಯವಸ್ಥೆಯನ್ನು ಮೊದಲ ಬಾರಿಗೆ ಪರಿಚಯಿಸಿಲ್ಲ. 2011ರಲ್ಲಿ ಮೊದಲ ಬಾರಿಗೆ, ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಸ್ಥಳದಲ್ಲಿಯೇ ದಂಡ ಹಾಕುವ ಉದ್ದೇಶದಿಂದ ಪರಿಚಯಿಸಲಾಗಿತ್ತು. ಆದರೆ ಅಷ್ಟೊಂದು ಪರಿಣಾಮಕಾರಿಯಾಗಿರಲಿಲ್ಲ. ಈಗ ಬಿಡುಗಡೆಗೊಳಿಸಲಾಗಿರುವ ಹೊಸ ಯಂತ್ರವನ್ನು ದೇಶದಲ್ಲಿರುವ ಎಲ್ಲಾ ಆರ್‍‍‍ಟಿ‍ಒಗಳೊಂದಿಗೆ ಲಿಂಕ್ ಮಾಡಲಾಗಿದೆ.

ಸಂಚಾರಿ ಪೊಲೀಸರ ಕೈಗೆ ಬಂತು ಹೈಟೆಕ್ ಚಲನ್ ಮಷಿನ್

ಕೇಂದ್ರ ಸರ್ಕಾರದ ರಸ್ತೆ ಹಾಗೂ ಹೆದ್ದಾರಿ ಸಚಿವಾಲಯದ ವಾಹನ್ ಹಾಗೂ ಸಾರಥಿಯ ಸಾಫ್ಟ್ ವೇರ್‍‍ಗಳ ಜೊತೆ ಲಿಂಕ್ ಆಗಿರುವ ಈ ಯಂತ್ರವನ್ನು ನ್ಯಾಷನಲ್ ಇನ್ಫಾರ್ಮೆಟಿಕ್ ಸೆಂಟರ್ (ಎನ್ ಐ ಸಿ) ಅಭಿವೃದ್ಧಿಪಡಿಸಿದೆ.

ಸಂಚಾರಿ ಪೊಲೀಸರ ಕೈಗೆ ಬಂತು ಹೈಟೆಕ್ ಚಲನ್ ಮಷಿನ್

ಈ ಹೊಸ ಯಂತ್ರದಿಂದ ವಾಹನದ ಮೇಲೆ ಬೇರೆ ರಾಜ್ಯಗಳಲ್ಲಿ ಯಾವುದಾದರೂ ನಿಯಮ ಉಲ್ಲಂಘನೆಯ ಪ್ರಕರಣ ದಾಖಲಾಗಿದೆಯೇ ಎಂದು ಪರಿಶೀಲಿಸಬಹುದು. ಇದರ ಜೊತೆಗೆ, ಬೇರೆ ರಾಜ್ಯಗಳ ವಾಹನಗಳ ಮೇಲೆ ಪ್ರಕರಣ ದಾಖಲಿಸಿ ಮಾಹಿತಿಯನ್ನು ಸಂಬಂಧಪಟ್ಟ ಆರ್‍‍ಟಿ‍ಒಗಳಿಗೆ ಕಳುಹಿಸಲಿದೆ.

ಸಂಚಾರಿ ಪೊಲೀಸರ ಕೈಗೆ ಬಂತು ಹೈಟೆಕ್ ಚಲನ್ ಮಷಿನ್

ಈ ಯಂತ್ರದಲ್ಲಿ ಡ್ರೈವಿಂಗ್ ಲೈಸೆನ್ಸ್ ಅನ್ನು ಅಮಾನತುಗೊಳಿಸಲು ಶಿಫಾರಸ್ಸು ಮಾಡುವ ಆಯ್ಕೆಯನ್ನು ನೀಡಲಾಗಿದೆ. ಈ ಹೊಸ ಯಂತ್ರದಲ್ಲಿ ಸೇಲ್ ಮೆಷಿನ್‍‍ಗಳನ್ನು ನೀಡಲಾಗಿರುವುದರಿಂದ ಸಂಚಾರಿ ಪೊಲೀಸರಿಗೆ ಅನುಕೂಲವಾಗಲಿದೆ. ಯಾವುದೇ ಹೆಚ್ಚುವರಿ ಯಂತ್ರಗಳನ್ನು ಜೊತೆಯಲ್ಲಿ ಕೊಂಡೊಯ್ಯದೇ ಈ ಯಂತ್ರದ ಸಹಾಯದಿಂದಲೇ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‍‍ಗಳನ್ನು ಉಪಯೋಗಿಸಿ ದಂಡವನ್ನು ವಸೂಲಿ ಮಾಡಬಹುದಾಗಿದೆ.

MOST READ: ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು

ಸಂಚಾರಿ ಪೊಲೀಸರ ಕೈಗೆ ಬಂತು ಹೈಟೆಕ್ ಚಲನ್ ಮಷಿನ್

ಈ ಯಂತ್ರದಲ್ಲಿ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ನಿಯಮ ಉಲ್ಲಂಘಿಸುವ ವಾಹನಗಳ ಫೋಟೊಗಳನ್ನು ತೆಗೆಯುವುದರ ಜೊತೆಗೆ, ನಿಯಮ ಉಲ್ಲಂಘನೆಯ ಮಾಹಿತಿಯನ್ನು ಸಂಬಂಧಪಟ್ಟ ಆರ್‍‍ಟಿ‍ಒ‍‍ಗಳಿಗೆ ಕಳುಹಿಸಲಿದೆ.

MOST READ: ಈ ಹುಚ್ಚು ಸಾಹಸಕ್ಕೆ ಬಹುದೊಡ್ಡ ಸಲಾಂ..!

ಸಂಚಾರಿ ಪೊಲೀಸರ ಕೈಗೆ ಬಂತು ಹೈಟೆಕ್ ಚಲನ್ ಮಷಿನ್

ಈ ಬಗ್ಗೆ ಮಾತನಾಡಿದ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಕಮೀಷನರ್ ಆರ್.ಸುಧಾಕರ್‍‍ರವರು ಗೂಗಲ್ ಮ್ಯಾಪ್‍‍ನ ಸಹಾಯದಿಂದ ಈ ಯಂತ್ರಗಳು ಯಾವ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ಮೇಲಾಧಿಕಾರಿಗಳು ವೀಕ್ಷಿಸಲಿದ್ದಾರೆ ಎಂದು ತಿಳಿಸಿದರು.

MOST READ: ಮ್ಯಾನುವಲ್ ಕಾರ್ ಡ್ರೈವಿಂಗ್ ಮಾಡದಿದ್ರೆ ಲೈಸೆನ್ಸ್ ಸಿಗೋದಿಲ್ಲ

ಸಂಚಾರಿ ಪೊಲೀಸರ ಕೈಗೆ ಬಂತು ಹೈಟೆಕ್ ಚಲನ್ ಮಷಿನ್

ಸಂಚಾರಿ ವಿಭಾಗದ ಹೆಚ್ಚುವರಿ ಆಯುಕ್ತರಾದ ಎ ಅರುಣ್‍‍ರವರು ಮಾತನಾಡಿ, ನಿಯಮಗಳನ್ನು ಉಲ್ಲಂಘಿಸುವವರು ದಂಡವನ್ನು ಪಾವತಿಸದೇ ಹೋದರೆ, ಅವರು ಫಿಟ್‍‍ನೆಸ್ ಸರ್ಟಿಫಿಕೇಟ್ ಪಡೆಯಲು ಹಾಗೂ ವಾಹನಗಳನ್ನು ಮಾರಾಟ ಮಾಡಲು ತೊಂದರೆಯಾಗಲಿದೆ ಎಂದು ತಿಳಿಸಿದರು.

More from DriveSpark

Article Published On: Monday, June 10, 2019, 12:07 [IST]
English summary
Traffice police get high tech e-challan units - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+