ಸಮಯಪ್ರಜ್ಞೆಯಿಂದ ಆನೆಗಳ ಪ್ರಾಣ ಉಳಿಸಿದ ಲೊಕೊ ಪೈಲಟ್

ಕೆಲ ದಿನಗಳ ಹಿಂದೆ ಹೈಸ್ಪೀಡ್ ರೈಲಿನ ಸ್ಥಿರತೆಯನ್ನು ಪರೀಕ್ಷಿಸಲು ಭಾರತೀಯ ರೈಲ್ವೆಯು ರೈಲು ಬೋಗಿಯಲ್ಲಿ ಗಾಜಿನ ಲೋಟದಲ್ಲಿ ನೀರು ತುಂಬಿಸಿ ಪರೀಕ್ಷೆ ನಡೆಸಿತ್ತು. ಪರೀಕ್ಷೆಯನ್ನು ಬೆಂಗಳೂರು - ಮೈಸೂರು ನಡುವಿನ ರೈಲು ಮಾರ್ಗದಲ್ಲಿ ನಡೆಸಲಾಗಿತ್ತು.

ಸಮಯಪ್ರಜ್ಞೆಯಿಂದ ಆನೆಗಳ ಪ್ರಾಣ ಉಳಿಸಿದ ಲೊಕೊ ಪೈಲಟ್

ಈ ಪರೀಕ್ಷೆಯಲ್ಲಿ ಗಾಜಿನ ಲೋಟವು ಅಲುಗಾಡಿರಲಿಲ್ಲ. ಜೊತೆಗೆ ಗಾಜಿನ ಲೋಟದ ತುಂಬಾ ಇದ್ದ ನೀರು ಸಹ ಹೊರ ಬಂದಿರಲಿಲ್ಲ. ಈ ಪರೀಕ್ಷೆಯ ವೀಡಿಯೊವನ್ನು ಭಾರತೀಯ ರೈಲ್ವೆ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿತ್ತು.

ಸಮಯಪ್ರಜ್ಞೆಯಿಂದ ಆನೆಗಳ ಪ್ರಾಣ ಉಳಿಸಿದ ಲೊಕೊ ಪೈಲಟ್

ಈಗ ಕೇಂದ್ರ ರೈಲ್ವೆ ಸಚಿವರಾದ ಪಿಯೂಷ್ ಗೋಯಲ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹೊಸ ವೀಡಿಯೊವೊಂದನ್ನು ಶೇರ್ ಮಾಡಿದ್ದಾರೆ. ಈ ವೀಡಿಯೊದಲ್ಲಿ ತಡರಾತ್ರಿಯಲ್ಲಿ ರೈಲು ಹಳಿಗಳ ಮೇಲೆ ನಿಂತಿರುವುದನ್ನು ಕಾಣಬಹುದು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಸಮಯಪ್ರಜ್ಞೆಯಿಂದ ಆನೆಗಳ ಪ್ರಾಣ ಉಳಿಸಿದ ಲೊಕೊ ಪೈಲಟ್

ಇದರ ಜೊತೆಗೆ ಕೆಲವು ಆನೆಗಳು ರೈಲ್ವೆ ಹಳಿ ದಾಟುತ್ತಿರುವುದನ್ನು ಸಹ ಕಾಣಬಹುದು. ಈ ಘಟನೆ ಪಶ್ಚಿಮ ಬಂಗಾಳದ ಸಿವೊಕ್-ಗುಲ್ಮಾ ವಿಭಾಗದ ಸಮೀಪದಲ್ಲಿ ನಡೆದಿದೆ ಎಂದು ಪಿಯೂಷ್ ಗೋಯಲ್ ಮಾಹಿತಿ ನೀಡಿದ್ದಾರೆ.

ಸಮಯಪ್ರಜ್ಞೆಯಿಂದ ಆನೆಗಳ ಪ್ರಾಣ ಉಳಿಸಿದ ಲೊಕೊ ಪೈಲಟ್

ಮೂರು ಆನೆಗಳು ಇದ್ದಕ್ಕಿದ್ದಂತೆ ರೈಲಿನ ಮುಂದೆ ಬರುತ್ತವೆ. ಈ ಕಾರಣಕ್ಕೆ ಲೊಕೊ ಪೈಲಟ್ ರೈಲನ್ನು ನಿಲ್ಲಿಸುತ್ತಾರೆ. ಈ ಮೂರು ಆನೆಗಳಲ್ಲಿ ಒಂದು ಆನೆ ಮರಿಯು ಸೇರಿದೆ. ಇದೇ ಘಟನೆಯ ವೀಡಿಯೊವನ್ನು ಪಿಯೂಷ್ ಗೋಯಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಸಮಯಪ್ರಜ್ಞೆಯಿಂದ ಆನೆಗಳ ಪ್ರಾಣ ಉಳಿಸಿದ ಲೊಕೊ ಪೈಲಟ್

ವೀಡಿಯೊ ಶೇರ್ ಮಾಡಿರುವ ಪಿಯೂಷ್ ಗೋಯಲ್, ಪಶ್ಚಿಮ ಬಂಗಾಳದ ಸಿವೊಕ್-ಗುಲ್ಮಾ ವಿಭಾಗದ ಕ್ರಾಸ್ ರೈಲು ಹಳಿಗಳಲ್ಲಿ ಮೂರು ಆನೆಗಳ ಜೀವ ಉಳಿಸಲು ಲೊಕೊ ಪೈಲಟ್ ಹಾಗೂ ಸಿಬ್ಬಂದಿಗಳ ಸಮಯಪ್ರಜ್ಞೆ ಹಾಗೂ ತ್ವರಿತ ಕ್ರಮವು ನೆರವಿಗೆ ಬಂದಿದೆ ಎಂದು ಹೇಳಿದ್ದಾರೆ.

ಸಮಯಪ್ರಜ್ಞೆಯಿಂದ ಆನೆಗಳ ಪ್ರಾಣ ಉಳಿಸಿದ ಲೊಕೊ ಪೈಲಟ್

ಆನೆಗಳು ಸುರಕ್ಷಿತವಾಗಿ ಇನ್ನೊಂದು ಬದಿಗೆ ಹೋಗುವುದನ್ನು ಕಾಯುತ್ತಾ ರೈಲು ನಿಂತಿದೆ ಎಂದು ಅವರು ಹೇಳಿದ್ದಾರೆ. ಈ ಮೊದಲು ಹೇಳಿದಂತೆ ಬೆಂಗಳೂರು - ಮೈಸೂರು ಮಾರ್ಗದ ರೈಲ್ವೆ ಟ್ರಾಕ್ ನಲ್ಲಿ ರೈಲು ವೇಗವಾಗಿ ಚಲಿಸಿದರೂ ರೈಲಿನ ಬೋಗಿಯೊಳಗಿದ್ದ ಗಾಜಿನ ಲೋಟದಿಂದ ಒಂದು ಹನಿ ನೀರು ಹೊರ ಬಂದಿಲ್ಲ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಗಾಜಿನ ಲೋಟವು ಅಲುಗಾಡದೇ ಇರುವುದು ಹಾಗೂ ಅದರಿಂದ ಒಂದು ಹನಿ ನೀರು ಹೊರ ಬಾರದೇ ಇರುವುದು ರೈಲ್ವೆ ಇಲಾಖೆಗೆ ಬಹಳ ದೊಡ್ಡ ವಿಷಯವೇ ಹೌದು. ಏಕೆಂದರೆ ಭಾರತದ ರೈಲುಗಳು ಹಾಗೂ ರೈಲು ಟ್ರಾಕ್ ಗಳು ಕುಲುಕಾಟಕ್ಕೆ ಹೆಸರುವಾಸಿಯಾಗಿವೆ.

ಸಮಯಪ್ರಜ್ಞೆಯಿಂದ ಆನೆಗಳ ಪ್ರಾಣ ಉಳಿಸಿದ ಲೊಕೊ ಪೈಲಟ್

ಈ ವೀಡಿಯೊ ಬಗ್ಗೆ ಟ್ವೀಟ್ ಮಾಡಿದ್ದ ರೈಲ್ವೆ ಇಲಾಖೆ, ಈ ವೀಡಿಯೊ ಭಾರತೀಯ ರೈಲ್ವೆಯು ಟ್ರ್ಯಾಕ್ ಗಳನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ. ರೈಲಿನ ಪ್ರಯಾಣವು ಆರಾಮದಾಯಕವಾಗಿರುವುದು ಇದರಿಂದ ಸಾಬೀತಾಗಿದೆ ಎಂದು ಹೇಳಿದೆ.

Most Read Articles

Kannada
English summary
Train loco pilot saves lives of three elephants, video shared by Railway Minister. Read in Kannada.
Story first published: Wednesday, November 11, 2020, 14:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X