ರಾಜಮನೆತನಕ್ಕೆ ಹೊಸ Audi A4 ಎಂಟ್ರಿ... BMW, Benz ದುಬಾರಿ, ನಮಗಿದು ಬಜೆಟ್ ಕಾರೆಂದ ರಾಜಕುಮಾರ!
ತಿರುವಾಂಕೂರು ರಾಜಮನೆತನದ ಕಿರಿಯ ಸದಸ್ಯರಲ್ಲಿ ಒಬ್ಬರಾದ ಪ್ರಿನ್ಸ್ ಆದಿತ್ಯ ವರ್ಮ ಅವರು ಇತ್ತೀಚೆಗೆ ಆಡಿ A4 ಐಷಾರಾಮಿ ಸೆಡಾನ್ ಖರೀದಿಸಿದ್ದಾರೆ. ಈ ಕಾರಿನ ವಿಶೇಷತೆ ಏನೆಂದರೆ, ಇದು ರಾಜಮನೆತನದಿಂದ ಸ್ವಾಧೀನಪಡಿಸಿಕೊಂಡಿರುವ ಮೊದಲ ಆಡಿ ಕಾರು. ಪ್ರಿನ್ಸ್ ಆದಿತ್ಯ ವರ್ಮಾ ಅವರು ಹೊಚ್ಚಹೊಸ ಆಡಿ A4 ವಿತರಣೆ ಪಡೆಯುತ್ತಿರುವ ಚಿತ್ರಗಳು ವೈರಲ್ ಆಗಿವೆ.
ಈ ರಾಜಮನೆತನದವರು ಖರೀದಿಸಿದ ಮೊದಲ ಆಡಿ ಕಾರು ಇದಾಗಿದೆ. ಇದಕ್ಕೂ ಮೊದಲು ಪ್ರತ್ಯೇಕವಾಗಿ ಮರ್ಸಿಡಿಸ್ ಬೆಂಝ್ನಿಂದ ಕಾರುಗಳನ್ನು ಖರೀದಿಸಿದ್ದರು. ಆಡಿ A4 ಆದಿತ್ಯ ವರ್ಮ ಅವರ ಆಯ್ಕೆಯಲ್ಲ, ಬದಲಾಗಿ ಇದನ್ನು ಅವರ ಕಂಪನಿಯ ನಿರ್ದೇಶಕರು ನಿರ್ಧರಿಸಿರುವುದಾಗಿ ಪ್ರಿನ್ಸ್ ತಿಳಿಸಿದ್ದಾರೆ. ಭಾರತದಲ್ಲಿ ಆಡಿ A4 ಬೆಲೆ ಈಗ ರೂ. 41 ಲಕ್ಷದಿಂದ ಪ್ರಾರಂಭವಾಗುತ್ತದೆ. ಸದ್ಯ ಖರೀದಿಸಿರುವ ಮಾದರಿಯು ಎಕ್ಸ್ ಶೋ ರೂಂ ಪ್ರಕಾರ ರೂ. 51 ಲಕ್ಷವಿದೆ.

ಈ Audi A4 ಸೆಡಾನ್ ಹೊಸ ಜನ್ ಆಗಿದ್ದು, ಬಿಳಿ ಬಣ್ಣದಲ್ಲಿ ಖರೀದಿಸಿದ್ದಾರೆ. ಹೊಸದಾಗಿ ಖರೀದಿಸಿದ ಕಾರು ವಾಸ್ತವವಾಗಿ ಅವರ ಕಂಪನಿಯ ಮಾಲೀಕತ್ವದಲ್ಲಿದೆ ಎಂದು ರಾಜಕುಮಾರ ತಿಳಿಸಿದ್ದಾರೆ. ಕಾರು ನೋಂದಣಿ ಫಲಕದ ಕೆಳಗೆ ಇರಿಸಲಾಗಿರುವ ರಾಜಮನೆತನದ ಲೋಗೋವನ್ನು ನೋಡಬಹುದು. ಲೋಗೊ ತಮ್ಮ ವಾಹನಕ್ಕೆ ಬಳಸಲು ರಾಜಮನೆತನದವರಿಗೆ ಮಾತ್ರ ವಿಶೇಷ ಅನುಮತಿಯನ್ನು ನೀಡಲಾಗಿದೆ.
ಪ್ರಿನ್ಸ್ ಆದಿತ್ಯ ವರ್ಮ ಹೇಳುವಂತೆ, ಅವರು ಬಜೆಟ್‌ನೊಳಗೆ ಕಾರೊಂದನ್ನು ಹುಡುಕಿದ್ದು ಅನೇಕ ಕಾರುಗಳು ತಮ್ಮ ಬಜೆಟ್ ಅನ್ನು ಮೀರಿದ್ದವು. ಕೊನೆಗೆ ಆಡಿ A4 ಮಾತ್ರ ಅವರ ಬಜೆಟ್‌ಗೆ ಅನುಗುಣವಾಗಿ ಸಿಕ್ಕಿದೆ. ಅದರ ಪ್ರತಿಸ್ಪರ್ಧಿಗಳಾದ Volvo S60, Mercedes-Benz C-Class, BMW 3-Series ಗಣನೀಯವಾಗಿ ಹೆಚ್ಚು ದುಬಾರಿಯಾಗಿದ್ದು, Audi A4 ಸ್ಪಷ್ಟ ಆಯ್ಕೆಯಾಗಿ ಲಭಿಸಿದೆ ಎಂದಿದ್ದಾರೆ.

ಕಳೆದ ವರ್ಷ, 1955 ರ ಮಾಡೆಲ್ Mercedes-Benz 180 T ವಿಂಟೇಜ್ ಐಷಾರಾಮಿ ಸೆಡಾನ್ ಅನ್ನು ಹಿಂದಿನ ತಿರುವಾಂಕೂರ್ ಸಾಮ್ರಾಜ್ಯದ ಮಾಜಿ ಮಹಾರಾಜ ಶ್ರೀ ಉತ್ತರೋಮ್ ತಿರುನಾಳ್ ಮಾರ್ತಾಂಡ ವರ್ಮಾ ಅವರು ಬಳಸುತ್ತಿದ್ದರು. ಅದನ್ನು ಲುಲು ಗ್ರೂಪ್‌ನ ಅಧ್ಯಕ್ಷ ಎಂ.ಎ ಯೂಸುಫ್ ಅಲಿ ಅವರಿಗೆ ಉಡುಗೊರೆಯಾಗಿ ನೀಡಲಾಯಿತು. ಈ ವಿಂಟೇಜ್ ಕಾರನ್ನು ರಾಜಮನೆತನದವರು 1950 ರಲ್ಲಿ ಕೇವಲ 12,000 ರೂ.ಗಳಿಗೆ ಖರೀದಿಸಿದ್ದರು.
ಇನ್ನು Audi A4 ಬಗ್ಗೆ ಹೇಳೋದಾದ್ರೆ, ಇದು ವರ್ಚುವಲ್ ಕಾಕ್‌ಪಿಟ್, ಆಡಿ ಸೌಂಡ್ ಸಿಸ್ಟಮ್, 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, LED ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್ ಲ್ಯಾಂಪ್‌ಗಳು, ಲೆಥೆರೆಟ್ ಸೀಟ್‌ಗಳು, ಆಂಬಿಯೆಂಟ್ ಲೈಟಿಂಗ್, ಎಲೆಕ್ಟ್ರಿಕ್ ಸನ್‌ರೂಫ್, ವಿವಿಧ ಡ್ರೈವಿಂಗ್ ಮೋಡ್‌ಗಳು, ಎಲೆಕ್ಟ್ರಿಕಲಿ ಅಡ್ಜೆಸ್ಟ್ ಮಾಡಬಹುದಾದ ಮುಂಭಾಗವನ್ನು ಹೊಂದಿದೆ.

Audi A4, 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಪೆಟ್ರೋಲ್ ಎಂಜಿನ್ 190 Ps ಪವರ್ ಮತ್ತು 320 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 7-ಸ್ಪೀಡ್ DCT ಗೇರ್‌ಬಾಕ್ಸ್‌ನೊಂದಿಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ. Audi A4, 7.3 ಸೆಕೆಂಡುಗಳಲ್ಲಿ 100 kmph ವೇಗವನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿದ್ದು, 241 kmph ಟಾಪ್ ಸ್ಪೀಡ್ ಹೋಗಬಲ್ಲದು.
ರಾಜಕುಮಾರ ಆದಿತ್ಯ ವರ್ಮಾ ಒಬ್ಬ ಆಟೋ ಉತ್ಸಾಹಿಯಾಗಿದ್ದು, ಒಂದು ಕಾಲದಲ್ಲಿ ರಾಜಮನೆತನದ ಒಡೆತನದಲ್ಲಿದ್ದ ಹೆಚ್ಚಿನ ವಾಹನಗಳನ್ನು ನೋಡಿಕೊಂಡಿದ್ದರು. ತಮ್ಮ ದೈನಂದಿನ ಪ್ರಯಾಣಕ್ಕಾಗಿ ಮಾರುತಿ ಸೆಲೆರಿಯೊವನ್ನು ಓಡಿಸುತ್ತಾರೆ. ಫೋಕ್ಸ್‌ವ್ಯಾಗನ್ ಬೀಟಲ್ ಸಹ ಹೊಂದಿದ್ದು, ಅವರು ಆಫ್-ರೋಡಿಂಗ್ ಮಾಡಲು ಮಿತ್ಸುಬಿಷಿ ಪಜೆರೊವನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications