1 ಪೈಸೆ ಖರ್ಚಿಲ್ಲದೆ ವಿಮಾನದಲ್ಲಿ ಪ್ರಯಾಣಿಸಬಹುದೇ! ತುಂಬಾ ಜನ ಹೋಗಿದ್ದಾರೆ.. ನೀವೂ ಈ ಟ್ರಿಕ್ ಅನುಸರಿಸಿ!
ಸುಖಕರ ಪ್ರಾಯಣ ಹಾಗೂ ಕಡಿಮೆ ಸಮಯದಲ್ಲಿ ನಿಮ್ಮ ಗಮ್ಯ ಸ್ಥಳಗಳಿಗೆ ಕೊಂಡೊಯ್ಯುವ ವಿಮಾನಗಳು ಒಂದು ಕಾಲದಲ್ಲಿ ದುಬಾರಿಯಾಗಿದ್ದವು. ಆದ್ರೆ ಈಗ ಎಲ್ಲರೂ ಪ್ರಯಾಣಿಸಬಹುದಾದ ಬೆಲೆಗೆ ವಿಮಾನಗಳ ಟಿಕೆಟ್ ಧರಗಳು ಇವೆ. ಆದ್ರೆ ಇನ್ನೂ ಕೆಲವರು ಒಂದು ಪೈಸೆ ಖರ್ಚಿಲ್ಲದೇ ಸಿಂಪಲ್ ಟ್ರಿಕ್ಸ್ ಬಳಿಸಿಕೊಂಡು ಉಚಿತವಾಗಿ ವಿಮಾನಗಳಲ್ಲಿ ಪ್ರಯಾಣಿಸುತ್ತಾರೆ.
ಇದನ್ನು ಓದಲು ಸುಳ್ಳೆನಿಸಿದರೂ 100% ನಿಜ. ಆದ್ರೆ ಉಚಿತ ಪ್ರಯಾಣಕ್ಕಾಗಿ ನೀವು ಅನುಸರಿಸಬೇಕಾದ ಕೆಲವು ಮುಖ್ಯ ವಿಧಾನಗಳಿವೆ. ಮೊದಲಿಗೆ ಈ ಉಚಿತ ಪ್ರಯಾಣ ಎಲ್ಲರಿಗೂ ಲಭ್ಯವಿರುವುದಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು. ಆಗ್ಗಾಗೆ ವಿಮಾನಗಳಲ್ಲಿ ಪ್ರಯಾಣಿಸುವವರಾದರೆ ನೀವು ಕಂಡಿತ ಈ ಟ್ರಿಕ್ಸ್ ಬಳಸಿಕೊಂಡು ಉಚಿತವಾಗಿ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಇದೆ.

ವಿವರವಾಗಿ ಹೇಳುವುದಾದರೆ ನಾವು ಆನ್‌ಲೈನ್‌ನಲ್ಲಿ ಏನನ್ನಾದರೂ ಖರೀದಿಸಿದರೆ ಕೆಲವು ಬ್ರಾಂಡ್‌ಗಳು ನಮಗೆ ರಿವಾರ್ಡ್ ಪಾಯಿಂಟ್ಸ್ ನೀಡುತ್ತವೆ. ಇದರ ಬಗ್ಗೆ ಬಹುತೇಕರಿಗೆ ಗೊತ್ತೇ ಇರುತ್ತದೆ, ಹಾಗೆಯೇ ಬಹುತೇಕ ಏರ್‌ಲೈನ್ಸ್ ಗಳು ಕೂಡ ನಿಮಗೆ ರಿವಾರ್ಡ್ ಪಾಯಿಂಟ್ ಗಳನ್ನು ನೀಡುತ್ತವೆ. ನಾವು ಆ ರಿವಾರ್ಡ್ ಪಾಯಿಂಟ್ ಗಳನ್ನು ಹಲವು ವಿಧಗಳಲ್ಲಿ ಬಳಸಬಹುದು.
ನಾವು ಆನ್‌ಲೈನ್‌ನಲ್ಲಿ ಒಂದು ನಿರ್ದಿಷ್ಟ ವಿಮಾನಯಾನ ಸಂಸ್ಥೆಯ ವಿಮಾನ ಪ್ರಯಾಣಕ್ಕಾಗಿ ಟಿಕೆಟ್ ಬುಕ್ ಮಾಡಿದಾಗ ಅವರೂ ಕೂಡ ರಿವಾರ್ಡ್ ಪಾಯಿಂಟ್ ನೀಡುತ್ತಾರೆ. ಈ ರಿವಾರ್ಡ್ ಪಾಯಿಂಟ್‌ಗಳನ್ನು ಭಾರತದಲ್ಲಿ ಏರ್ ಮೈಲ್ಸ್ ಎಂದು ಕರೆಯಲಾಗುತ್ತದೆ. ಇವನ್ನು ಹಲವು ವಿಧಗಳಲ್ಲಿ ಬಳಸಿಕೊಳ್ಳಬಹುದು. ಉಚಿತ ವಿಮಾನ ಟಿಕೆಟ್ ಪಡೆಯಲು ಕೂಡ ಪಾಯಿಂಟ್‌ಗಳನ್ನು ರಿಡೀಮ್ ಮಾಡಿಕೊಳ್ಳಬಹುದು.

ಈ ಪಾಯಿಂಟ್‌ಗಳಿಗೆ ಕರೆನ್ಸಿ ಮೌಲ್ಯವನ್ನು ಕೂಡ ನೀಡಲಾಗಿದೆ. ಒಂದೊಂದು ಏರ್‌ಲೈನ್ ವಿಭಿನ್ನ ಮೌಲ್ಯವನ್ನು ನೀಡುತ್ತವೆ. ಉದಾಹರಣೆಗೆ SpiceJet ಪ್ರತಿ ರಿವಾರ್ಡ್ ಪಾಯಿಂಟ್‌ಗೆ 50 ಪೈಸೆ ಮೌಲ್ಯವನ್ನು ನೀಡುತ್ತದೆ. ನೀವು ಎರಡು ಸ್ಪೈಸ್ ಜೆಟ್ ಪಾಯಿಂಟ್‌ಗಳನ್ನು ಹೊಂದಿದ್ದರೆ ಅದು ಒಂದು ರೂಪಾಯಿ ಮೌಲ್ಯವನ್ನು ಪಡೆಯುತ್ತದೆ. ಹಾಗೆಯೇ 10 ಪಾಯಿಂಟ್‌ಗಳಿದ್ದರೇ 5 ರೂ. ಮೌಲ್ಯವನ್ನು ಪಡೆಯುತ್ತದೆ.
ಈ ಪಾಯಿಂಟ್‌ಗಳನ್ನು ಹಾಗೆಯೇ ಉಳಿಸಿಕೊಂಡು ಒಂದು ಪ್ರದೇಶಕ್ಕೆ ವಿಮಾನದಲ್ಲಿ ತೆರಳಲು ಟಿಕೆಟ್ ಬೆಲೆಯು ರೂ. 5 ಸಾವಿರ ಇದೆ ಎಂದುಕೊಳ್ಳೋಣ. ಈಗ ನೀವು 10,000 ಸ್ಪೈಸ್‌ಜೆಟ್ ರಿವಾರ್ಡ್ ಪಾಯಿಂಟ್‌ಗಳನ್ನು ಹೊಂದಿದ್ದರೆ ಸಾಕು ಪಾಯಿಂಟ್‌ಗಳನ್ನು ರಿಡೀಮ್ ಮಾಡಿಕೊಂಡು ವಿಮಾನದಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಈಗಾಗಲೇ ಹಲವರು ಈ ಟ್ರಿಕ್ಸ್ ಬಳಸಿಕೊಂಡು ಉಚಿತವಾಗಿ ಪ್ರಯಾಣಿಸಿದ್ದಾರೆ.

ಪಾಯಿಂಟ್‌ಗಳನ್ನು ಗಳಿಸುವುದೇಗೆ?: ನೀವು ಮೊದಲು ಏರ್‌ಲೈನ್‌ನ ಲಾಯಲ್ಟಿ ಪ್ರೋಗ್ರಾಂನೊಂದಿಗೆ ಖಾತೆಯನ್ನು ರಚಿಸಿಕೊಂಡಿದ್ದರೆ ಮಾತ್ರ ಈ ರಿವಾರ್ಡ್ ಪಾಯಿಂಟ್ ಗಳನ್ನು ಗಳಿಸಬಹುದು. ಇದರ ನಂತರ, ನೀವು ಪ್ರತಿ ವಹಿವಾಟಿನ ಮೇಲೆ ರಿವಾರ್ಡ್ ಪಾಯಿಂಟ್‌ಗಳನ್ನು ಗಳಿಸಲು ಸಹ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಬಹುದು. ಈ ಮೂಲಕ ಕೂಡ ನಮಗೆ ರಿವಾರ್ಡ್ ಪಾಯಿಂಟ್ಸ್ ಸಿಗುತ್ತವೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications