ಒಂದು ಕೆ.ಜಿ ಕೇಕ್ ಖರೀದಿಸುವವರಿಗೆ ಉಚಿತವಾಗಿ ಸಿಗಲಿದೆ ಒಂದು ಲೀಟರ್ ಪೆಟ್ರೋಲ್

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ವಾಹನ ಸವಾರರು ವಾಹನಗಳನ್ನು ಹೊರ ತೆಗೆಯಲು ಹಿಂದೇಟು ಹಾಕುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಕಡಿಮೆ ಮಾಡುವಂತೆ ವಾಹನ ಸವಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸುತ್ತಿದ್ದಾರೆ.

ಒಂದು ಕೆ.ಜಿ ಕೇಕ್ ಖರೀದಿಸುವವರಿಗೆ ಉಚಿತವಾಗಿ ಸಿಗಲಿದೆ ಒಂದು ಲೀಟರ್ ಪೆಟ್ರೋಲ್

ಪೆಟ್ರೋಲ್, ಡೀಸೆಲ್ ಮೇಲೆ ವಿಧಿಸಲಾಗಿರುವ ಅಬಕಾರಿ ಸುಂಕ ಹಾಗೂ ವ್ಯಾಟ್ ಕಡಿಮೆ ಮಾಡುವಂತೆ ವಾಹನ ಸವಾರರು ಒತ್ತಾಯಿಸುತ್ತಿದ್ದಾರೆ. ಆದರೆ ಇದುವರೆಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಾವುದೇ ಘೋಷಣೆ ಮಾಡಿಲ್ಲ. ಬೇರೆ ದಾರಿ ಕಾಣದೇ ವಾಹನ ಸವಾರರು ಪೆಟ್ರೋಲ್, ಡೀಸೆಲ್'ಗಾಗಿ ಹೆಚ್ಚು ಬೆಲೆ ತೆರುವಂತಾಗಿದೆ.

ಒಂದು ಕೆ.ಜಿ ಕೇಕ್ ಖರೀದಿಸುವವರಿಗೆ ಉಚಿತವಾಗಿ ಸಿಗಲಿದೆ ಒಂದು ಲೀಟರ್ ಪೆಟ್ರೋಲ್

ತಿರುಚ್ಚಿಯಲ್ಲಿ ಹೊಸದಾಗಿ ತೆರೆಯಲಾದ ಬೇಕರಿಯೊಂದರಲ್ಲಿ ಗ್ರಾಹಕರನ್ನು ಆಕರ್ಷಿಸಲು ಹೊಸ ಕೊಡುಗೆಯೊಂದನ್ನು ನೀಡಲಾಗುತ್ತಿದೆ. ಈ ಬೇಕರಿಯಲ್ಲಿ ಒಂದು ಕೆ.ಜಿ ಕೇಕ್ ಖರೀದಿಸಿದರೆ 1 ಲೀಟರ್ ಪೆಟ್ರೋಲ್ ಉಚಿತವಾಗಿ ನೀಡಲಾಗುತ್ತದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಒಂದು ಕೆ.ಜಿ ಕೇಕ್ ಖರೀದಿಸುವವರಿಗೆ ಉಚಿತವಾಗಿ ಸಿಗಲಿದೆ ಒಂದು ಲೀಟರ್ ಪೆಟ್ರೋಲ್

ಈ ಬೇಕರಿ ಮಾಲೀಕ ಸಗೈರಾಜ್ ಈ ಬಗ್ಗೆ ಪ್ರಕಟಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಬೇಕರಿಯನ್ನು ಹೊಸದಾಗಿ ಆರಂಭಿಸಿರುವ ಹಿನ್ನೆಲೆಯಲ್ಲಿ ಈ ಕೊಡುಗೆ ನೀಡಲಾಗುತ್ತಿದೆ.

ಒಂದು ಕೆ.ಜಿ ಕೇಕ್ ಖರೀದಿಸುವವರಿಗೆ ಉಚಿತವಾಗಿ ಸಿಗಲಿದೆ ಒಂದು ಲೀಟರ್ ಪೆಟ್ರೋಲ್

ಬೇಕರಿಯ ಉದ್ಘಾಟನಾ ಸಮಾರಂಭದಲ್ಲಿ ಬೇಕರಿ ಮಾಲೀಕ ಸಗೈರಾಜ್ ಈ ಕೊಡುಗೆ ಬಗ್ಗೆ ಮಾತನಾಡಿದ್ದಾರೆ. ಪೆಟ್ರೋಲ್ ಬೆಲೆ ಈಗ ಗಗನಕ್ಕೇರಿರುವುದರಿಂದ, ಪೆಟ್ರೋಲ್ ಅನ್ನು ಉಚಿತವಾಗಿ ನೀಡಿದರೆ ಗ್ರಾಹಕರಿಗೆ ಲಾಭವಾಗುತ್ತದೆ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಒಂದು ಕೆ.ಜಿ ಕೇಕ್ ಖರೀದಿಸುವವರಿಗೆ ಉಚಿತವಾಗಿ ಸಿಗಲಿದೆ ಒಂದು ಲೀಟರ್ ಪೆಟ್ರೋಲ್

ಬೇರೆ ಕೊಡುಗೆಗಳನ್ನು ನೀಡಿದರೆ ಗ್ರಾಹಕರಿಗೆ ಅದರಿಂದ ಪ್ರಯೋಜನವಾಗುವುದಿಲ್ಲ ಎಂಬುದು ಅವರ ಅಭಿಪ್ರಾಯ. ಒಂದು ಕೆ.ಜಿ ಕೇಕ್ ಖರೀದಿಸಿರುವವರಿಗೆ 1 ಲೀಟರ್ ಉಚಿತವಾಗಿ ಪೆಟ್ರೋಲ್ ನೀಡುವ ಆಫರ್ ಒಂದು ತಿಂಗಳವರೆಗೆ ಇರಲಿದೆ ಎಂದು ಅವರು ಹೇಳಿದರು. ಈ ಬಗ್ಗೆ ಬಿಹೈಂಡ್ ವುಡ್ಸ್ ವರದಿ ಪ್ರಕಟಿಸಿದೆ.

ಒಂದು ಕೆ.ಜಿ ಕೇಕ್ ಖರೀದಿಸುವವರಿಗೆ ಉಚಿತವಾಗಿ ಸಿಗಲಿದೆ ಒಂದು ಲೀಟರ್ ಪೆಟ್ರೋಲ್

ಯಾವುದೇ ವಸ್ತು ಖರೀದಿಸಿದಾಗ ಪೆಟ್ರೋಲ್, ಡೀಸೆಲ್ ಉಚಿತವಾಗಿ ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬೇಕರಿಗಳಲ್ಲಿ ಈ ರೀತಿ ಉಚಿತವಾಗಿ ಪೆಟ್ರೋಲ್ ನೀಡುವ ಕೊಡುಗೆಗಳನ್ನು ಘೋಷಿಸಲಾಗಿತ್ತು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಒಂದು ಕೆ.ಜಿ ಕೇಕ್ ಖರೀದಿಸುವವರಿಗೆ ಉಚಿತವಾಗಿ ಸಿಗಲಿದೆ ಒಂದು ಲೀಟರ್ ಪೆಟ್ರೋಲ್

ಬೇಕರಿಗಳಲ್ಲಿ ಮಾತ್ರವಲ್ಲದೇ ಯಾವುದಾದರೂ ಸಭೆ, ಸಮಾರಂಭಗಳಲ್ಲಿಯೂ ಸಹ ಪೆಟ್ರೋಲ್ ಅನ್ನು ಕಾಣಿಕೆಯಾಗಿ ನೀಡಿದ್ದ ಘಟನೆಗಳು ವರದಿಯಾಗಿದ್ದವು.ಅದರಲ್ಲೂ ಮದುವೆ ಸಮಾರಂಭಗಳಲ್ಲಿ ವಧು ವರರಿಗೆ ಪೆಟ್ರೋಲ್ ಅನ್ನು ಉಡುಗೊರೆಯಾಗಿ ನೀಡಿದ್ದ ಬಗ್ಗೆ ವರದಿಗಳಾಗಿದ್ದವು.

ಒಂದು ಕೆ.ಜಿ ಕೇಕ್ ಖರೀದಿಸುವವರಿಗೆ ಉಚಿತವಾಗಿ ಸಿಗಲಿದೆ ಒಂದು ಲೀಟರ್ ಪೆಟ್ರೋಲ್

ಇತ್ತೀಚೆಗೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಕ್ರಿಕೆಟ್ ಪಂದ್ಯವೊಂದರಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ವಿಜೇತನಿಗೆ 5 ಲೀಟರ್ ಪೆಟ್ರೋಲ್ ಉಡುಗೊರೆಯಾಗಿ ನೀಡಿದ್ದ ಘಟನೆ ಎಲ್ಲರ ಗಮನ ಸೆಳೆದಿತ್ತು. 5 ರಾಜ್ಯಗಳಲ್ಲಿ ಚುನಾವಣೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಇಳಿಯುವ ಸಾಧ್ಯತೆಗಳಿವೆ.

Most Read Articles

Kannada
English summary
Trichy bakery offering one liter free petrol for customers who purchase one kg cake. Read in Kannada.
Story first published: Friday, March 5, 2021, 10:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X