ಸಣ್ಣ ಕೃಷಿಕರಿಗಾಗಿ 'ಬುಲೆಟ್ ಟ್ರಾಕ್ಟರ್' ನಿರ್ಮಿಸಿದ ತ್ರಿಶೂಲ್ ಫಾರ್ಮ್ ಮಾಸ್ಟರ್
ನಿತ್ಯ ಸಾಮಾನ್ಯರಿಂದ ತಯಾರಾಗುವ ಎಷ್ಟೋ ಆವಿಷ್ಕಾರಗಳನ್ನು ನಾವು ಸೋಷಿಯಲ್ ಮೀಡಿಯಾದಲ್ಲಿ ನೋಡುತ್ತಿರುತ್ತೇವೆ. ಇಂತಹ ಕಾರ್ಯಗಳಿಗೆ ಕಾರಣರಾಗುವವರಿಗೆ ಜನ ಮೆಚ್ಚುಗೆಯೂ ಅಪಾರವಾಗಿ ಸಿಗುತ್ತಿರುತ್ತದೆ. ಅದರಲ್ಲೂ ಕೃಷಿ ಸಂಬಂಧಿತ ಉಪರಕರಣಗಳನ್ನು ತಯಾರಿಸಿ ರೈತರಿಗೆ ಪರಿಚಯಿಸುವವರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದಾರೆ.

ಎಲ್ಲರೂ ಕಂಡಂತೆ ಕೃಷಿ ಮಾಡಲು ಈಗ ಹಲವು ದೇಶೀಯ ಹಾಗೂ ವಿದೇಶಿ ಆಧುನಿಕ ಯಂತ್ರಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವುಗಳ ಹೊರತಾಗಿಯೂ ಕೆಲವರು ತಮ್ಮ ಕೃಷಿ ಕೆಲಸಗಳನ್ನು ಸುಲಭಗೊಳಿಸಲು ನಂಬಲಾಗದ ಹಲವು ಯಂತ್ರಗಳನ್ನು ನಿರ್ಮಿಸಿ ಆಗಾಗ ಆಶ್ಚರ್ಯಗೊಳಿಸಿದ್ದಾರೆ. ಆದರೆ ರಾಯಲ್ ಎನ್‌ಫೀಲ್ಡ್‌ನಿಂದ ಟ್ರಾಕ್ಟರ್ ಅನ್ನು ಅಭಿವೃದ್ಧಿಗೊಳಿಸಿರುವುದು ನೀವು ನೋಡಿರಲು ಸಾಧ್ಯವಿಲ್ಲ.

ಹೌದು... ನಾವು ಈಗ ಹೇಳಲು ಹೊರಟಿರುವ ವರದಿಯು ಡಿಸ್ಕೋವರ್ ಅಗ್ರಿಕಲ್ಚರ್ ಎಂಬ ಯೂಟ್ಯೂಬ್ ಚಾನಲ್‌ನಲ್ಲಿ ಲಭ್ಯವಾದ ಅಪರೂಪದ ಬುಲೆಟ್ ಟ್ರ್ಯಾಕ್ಟರ್ ಬಗ್ಗೆ. ಈ ಚಾನಲ್‌ನಿಂದ ಲಭ್ಯವಾದ ಮಾಹಿತಿಯ ಪ್ರಕಾರ, ತ್ರಿಶೂಲ್ ಫಾರ್ಮ್ ಮಾಸ್ಟರ್ ಗುಜರಾತ್‌ನಲ್ಲಿನ ಗೋಂಡಾ ರಾಜ್‌ಕೋಟ್‌ನ ಸ್ಥಳೀಯ ಟ್ರಾಕ್ಟರ್ ತಯಾರಕರಾಗಿದ್ದು, ಅವರು RTO-ಅನುಮೋದಿತ ಕೃಷಿ ಉಪಕರಣಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.

ಈ ತ್ರಿಶೂಲ್ ಟ್ರಾಕ್ಟರ್ಸ್ ಅನ್ನು 1994 ರಲ್ಲಿ ಸ್ಥಾಪಿಸಲಾಗಿದ್ದು, ಅಂದಿನಿಂದಲೂ ಕೃಷಿ ಚಟುವಟಿಕೆಗಳಿಗೆ ಬಳಸುವ ಉಪಕರಣಗಳ ತಯಾರಿಯಲ್ಲಿ ತೊಡಗಿದ್ದಾರೆ. ಇವರ ಬಳಿ 12 hp ನಿಂದ 22 hp ವರೆಗಿನ ಟ್ರಾಕ್ಟರುಗಳ ಶ್ರೇಣಿಯಲ್ಲಿ ವಿವಿಧ ಮಾದರಿಗಳು ಇವೆ. ಅದರಲ್ಲಿ ಸದ್ಯ ಹೆಸರು ಮಾಡುತ್ತಿರುವುದು ಟ್ರಾಕ್ಟರ್ ಎಂದರೆ ಬುಲೆಟ್ ಮಾದರಿ.

ಟ್ರಾಕ್ಟರ್ ಟ್ರಾಲಿಗೆ ಮುಂಭಾಗದಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ ಅನ್ನು ಜೋಡಿಸಲಾಗಿದ್ದು, ಹಿಂಭಾಗವು ವಿವಿಧ ಚಟುವಟಿಕೆಗಳನ್ನು ನಿರ್ವಹಿಸುವ ವಿವಿಧ ಯಂತ್ರಗಳನ್ನು ಜೋಡಣೆ ಮಾಡಿಕೊಳ್ಳಬಹುದು. ಇವುಗಳಲ್ಲಿ ಹೊಲದಲ್ಲಿ ಬೀಜಗಳನ್ನು ಹರಡುವುದು, ಉಳುಮೆ ಮಾಡುವುದು, ಮೇಲ್ಮೈಯನ್ನು ನೆಲಸಮ ಮಾಡುವುದು, ನೀರಾವರಿಗಾಗಿ ನೀರನ್ನು ಸಿಂಪಡಿಸುವುದು ಮತ್ತು ಶೇಖರಣಾ ಸ್ಥಳಗಳಿಗೆ ಟ್ರ್ಯಾಕ್ಟರ್‌ನಲ್ಲಿ ಸಾಗಿಸಲು ಬೆಳೆಗಳನ್ನು ಕೊಯ್ಲು ಮಾಡಬಹುದು.

ಇದರ ಕಾರ್ಯಾಚರಣೆಯು ಸಹ ಸಾಕಷ್ಟು ಸರಳವಾಗಿದೆ. ಟ್ರಾಕ್ಟರ್‌ನಲ್ಲಿ ಬಳಸುವ ಹ್ಯಾಂಡಲ್ ಮತ್ತು ಟೈರ್ ಮೋಟಾರ್‌ಸೈಕಲ್‌ನ ಒಂದು ಭಾಗವಾಗಿದೆ, ಆದರೆ ಗೇರ್ ಲಿವರ್ ಸಾಮಾನ್ಯ ಟ್ರಾಕ್ಟರ್‌ನದ್ದಾಗಿದೆ. ಎಂಜಿನ್ ಟ್ರಾಕ್ಟರ್‌ಗೆ ಮಾತ್ರವಲ್ಲದೆ ಇತರ ಕೃಷಿ ಉಪಕರಣಗಳಿಗೂ ಶಕ್ತಿಯನ್ನು ನೀಡುತ್ತದೆ.

ಟ್ರಾಕ್ಟರ್ ಅನ್ನು ಓಡಿಸಲು ನಿಯಮಿತ ಹ್ಯಾಂಡಲ್‌ಬಾರ್‌ನೊಂದಿಗೆ ಕಸ್ಟಮೈಸ್ ಮಾಡಿದ ಸೀಟನ್ನು ನೀಡಲಾಗಿದೆ. ಕಸ್ಟಮ್ ತಂತ್ರಗಳನ್ನು ಬಳಸಿಕೊಂಡು ಎಲ್ಲಾ ಇತರ ಕೃಷಿ ಉಪಕರಣಗಳನ್ನು ಹಿಂಭಾಗದಲ್ಲಿ ಜೋಡಿಸಲಾಗಿದೆ. ರಾಯಲ್ ಎನ್‌ಫೀಲ್ಡ್ ಬುಲೆಟ್‌ನ ಶಕ್ತಿಶಾಲಿ ಎಂಜಿನ್ ಟ್ರಾಕ್ಟರ್ ಆಗಿ ಕಾರ್ಯನಿರ್ವಹಿಸಲು ಹೆಚ್ಚಿನ ಪವರ್ ಒದಗಿಸುತ್ತದೆ.

ಇನ್ನು ಈ ಬೈಕ್ ಉತ್ತರ ಭಾರತದಲ್ಲಿ ಈಗಾಗಲೇ ಭಾರಿ ಹೆಸರು ಮಾಡಿದೆ. ಇದರಿಂದ ಬಹುತೇಕ ರೈತರು ಕಡಿಮೆ ಬೆಲೆಗೆ ಸಿಗುತ್ತಿರುವುದರಿಂದ ಹೆಚ್ಚಾಗಿ ಈ ಬೈಕ್ ಟ್ರಾಕ್ಟ್ರರ್ ಅನ್ನು ಬುಕ್ ಮಾಡಿಕೊಳ್ಳುತ್ತುದ್ದಾರೆ. ಮುಂಬರುವ ದಿನಗಳಲ್ಲಿ ಈ ಬೈಕ್ ದೇಶಾದ್ಯಂತ ಲಭ್ಯವಾಗುವ ನಿರೀಕ್ಷೆಯಿದೆ.

ಈ ತ್ರಿಶೂಲ್ ಟ್ರಾಕ್ಟರ್ಸ್‌ನವರು ಕೇವಲ ಬುಲೆಟ್ ಮಾತ್ರವಲ್ಲದೆ ಇನ್ನಿತರ ವಾಹನ ಯಂತ್ರಗಳನ್ನು ಬಳಿಸಿಕೊಂಡು ಹಲವು ಕೃಷಿ ಸಂಬಂಧಿತ ಉಪಕರಣಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇವೆಲ್ಲವು ಕೇವರ ರೈತ ಸಂಬಂಧಿತ ಉಪಕರಣಗಳಾಗಿರುವುದರಿಂದ ಸ್ಥಳೀಯ ಸರ್ಕಾರವು ಕೂಡ ಇವರಿಗೆ ಹೆಚ್ಚಾಗಿ ಉತ್ತೇಜಿಸುತ್ತದೆ.

ರಾಯಲ್ ಎನ್‌ಫೀಲ್ಡ್ ಬುಲೆಟ್ 346 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್‌ನೊಂದಿಗೆ ಕ್ರಮವಾಗಿ 19.36 ಪಿಎಸ್ ಮತ್ತು 28 ಎನ್ಎಂ ಪೀಕ್ ಪವರ್ ಮತ್ತು ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಟ್ರಾನ್ಸ್ಮಿಷನ್ಗೆ ಜೋಡಿಸಲಾಗಿದೆ. ಇದು ಎರಡು-ಟ್ಯೂಬ್ ಬೆನ್ನೆಲುಬಿನ ಚೌಕಟ್ಟನ್ನು ಹೊಂದಿದ್ದು, ಮುಂಭಾಗದಲ್ಲಿ 35 ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ಟ್ವಿನ್ ರಿಯರ್ ಶಾಕ್ ಅಬ್ಸಾರ್ಬರ್‌ಗಳನ್ನು ಐದು-ಹಂತದ ಹೊಂದಾಣಿಕೆಯ ಲೋಡ್‌ನೊಂದಿಗೆ ಬರುತ್ತದೆ.

ಮುಂಭಾಗದ ಡಿಸ್ಕ್ 280 ಎಂಎಂ ಮತ್ತು ಹಿಂದಿನ ಡ್ರಮ್ 153 ಎಂಎಂ ಇದ್ದು, ಬುಲೆಟ್ ಎರಡು ತುದಿಗಳಲ್ಲಿ 19-ಇಂಚಿನ ಸ್ಪೋಕ್ಡ್ ಚಕ್ರಗಳನ್ನು ಹೊಂದಿದೆ. RE ಕ್ಲಾಸಿಕ್ 350 ಎಕ್ಸ್ ಶೋರೂಂ ಬೆಲೆಯು ರೂ 1.48 ಲಕ್ಷದಿಂದ ರೂ 1.63 ಲಕ್ಷದವರೆಗೆ ಇದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಭಾರತದಲ್ಲಿ ರೈತರಿಗೆ ಮೊದಲಿನಿಂದಲೂ ಕೃಷಿ ಸಂಬಂಧಿತ ಉಪಕರಣಗಳ ಪೂರೈಕೆ ತೀರಾ ಕಡಿಮೆ, ಹಲವರು ವೈಜ್ಞಾನಿಕ ಕೃಷಿ ಮೂಲಕ ಉತಮ್ಮ ಬೆಳೆ ಸಾಧಿಸಬಹುದು ಎಂದು ಹೇಳುತ್ತಾರೆ. ಆದರೆ ದೇಶದ ಪ್ರತಿ ಹಳ್ಳಿಗೂ ಇವನ್ನು ತಲುಪುವಂತೆ ಮಾಡುವಲ್ಲಿ ವಿಫಲವಾಗುತ್ತಾರೆ. ಆದರೆ ಈಗ ಕಾಲ ಬದಲಾಗಿದ್ದು, ತಂತ್ರಜ್ಞಾನವು ಬೆರಳ ತುದಿಯಲ್ಲಿದೆ. ಈ ಮೂಲಕ ರೈತರು ಕೂಡ ತಮ್ಮ ಅಭಿವೃದ್ಧಿಯನ್ನು ತಾವೇ ಕಂಡುಕೊಳ್ಳಬೇಕಿದೆ.


Click it and Unblock the Notifications