ಚೀನಾ-ಪಾಕ್ ಕಿತಾಪತಿ; ಗಡಿ ರಕ್ಷಣೆಗಾಗಿ ಭಾರತಕ್ಕೆ ರಷ್ಯಾ ನೆರವು!

By Nagaraja

ಚೀನಾ ಮತ್ತು ಪಾಕಿಸ್ತಾನ ನಡುವಣ ಗಡಿ ಪ್ರದೇಶವನ್ನು ಹಂಚಿಕೊಳ್ಳುತ್ತಿರುವ ಭಾರತದ ಭದ್ರತೆಯನ್ನು ಬಿಗುಗೊಳಿಸಲು ತನ್ನ ಹಳೆಯ ಮಿತ್ರ ರಾಷ್ಟ್ರ ರಷ್ಯಾ ನೆರವಾಗಲಿದೆ. ಗಡಿಯಲ್ಲಿ ಪದೇ ಪದೇ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹದೊಂದು ಮಹತ್ವದ ನಿರ್ಧಾರಕ್ಕೆ ನರೇಂದ್ರ ಮೋದಿ ಸರಕಾರ ಮುಂದಾಗಿದೆ.

ವಿಷಯ ಏನೆಂದರೆ, ರಷ್ಯಾ ಜೊತೆಗೆ ಬಹು ಕೋಟಿ ಒಪ್ಪಂದಕ್ಕೆ ಸಹಿ ಹಾಕಿರುವ ಭಾರತ ಗಡಿ ರಕ್ಷಣೆಗಾಗಿ ಅತ್ಯಾಧುನಿಕ ಟ್ರಯಂಪ್ (Triumf)ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು ಪಡೆಯಲಿದೆ. ಇದರೊಂದಿಗೆ ಪಾಕ್ ಹಾಗೂ ಚೀನಾಗೆ ಸೆಡ್ಡು ಹೊಡೆಯಲು ಭಾರತಕ್ಕೆ ಸಾಧ್ಯವಾಗಲಿದೆ.

ಚೀನಾ-ಪಾಕ್ ಕಿತಾಪತಿ; ಗಡಿ ರಕ್ಷಣೆಗಾಗಿ ಭಾರತಕ್ಕೆ ರಷ್ಯಾ ನೆರವು!

ರಷ್ಯಾ ಜೊತೆಗೆ ಮಾಡಿರುವ 39,000 ಕೋಟಿ ರುಪಾಯಿಗಳ ಮಹತ್ತರ ಒಪ್ಪಂದದ ಪ್ರಕಾರ ಐದು ಏರ್ ಡಿಫೆನ್ಸ್ ಮಿಸೈಲ್ ಸಿಸ್ಟಂಗಳನ್ನು ಭಾರತ ಖರೀದಿಸಲಿದೆ. ಇದು ಶತ್ರು ರಾಷ್ಟ್ರದಿಂದ ಚಿಮ್ಮಿ ಬರುವ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.

ಚೀನಾ-ಪಾಕ್ ಕಿತಾಪತಿ; ಗಡಿ ರಕ್ಷಣೆಗಾಗಿ ಭಾರತಕ್ಕೆ ರಷ್ಯಾ ನೆರವು!

ನ್ಯಾಟೋ ರಾಷ್ಟ್ರಗಳನ್ನು ಸಹ ದಿಗಿಲು ಮುಟ್ಟಿಸಿರುವ ಈ ರಕ್ಷಣಾ ವ್ಯವಸ್ಥೆಯ ಮುಖಾಂತರ ಗಡಿಯಲ್ಲಿ ಮುನ್ನುಗಿ ಬರುವ ಯುದ್ಧ ವಿಮಾನ ದಾಳಿ, ರಹಸ್ಯ ದಾಳಿ, ಕ್ಷಿಪಣಿ, ಡ್ರೋನ್ ದಾಳಿಗಳನ್ನು ತಡೆಯಬಹುದಾಗಿದೆ.

ಚೀನಾ-ಪಾಕ್ ಕಿತಾಪತಿ; ಗಡಿ ರಕ್ಷಣೆಗಾಗಿ ಭಾರತಕ್ಕೆ ರಷ್ಯಾ ನೆರವು!

400 ಕೀ.ಮೀ. ದೂರದ ವ್ಯಾಪ್ತಿಯ ಆಕ್ರಮಣವನ್ನು ತಡೆಯುವ ಶಕ್ತಿಯನ್ನು ಇದು ಹೊಂದಿರುತ್ತದೆ. ಈ ಮಹತ್ತರ ಒಪ್ಪಂದವು ಪ್ರಧಾನಿ ಮೋದಿ ಅವರ ರಷ್ಯಾ ಭೇಟಿಗೂ ಮುನ್ನ ಕಂಡುಬಂದಿದೆ.

ಚೀನಾ-ಪಾಕ್ ಕಿತಾಪತಿ; ಗಡಿ ರಕ್ಷಣೆಗಾಗಿ ಭಾರತಕ್ಕೆ ರಷ್ಯಾ ನೆರವು!

ರಕ್ಷಣಾ ಸ್ವಾಧೀನ ಕೌನ್ಸಿಲ್ (DAC) ನಿಕಟ ಮೂಲಗಳ ಪ್ರಕಾರ ಇಂತಹ ಮೂರು ಪಶ್ಚಿಮದಲ್ಲಿ ಭಾರತ-ಪಾಕ್ ಗಡಿ ಹಾಗೂ ಇತರ ಎರಡನ್ನು ಪೂರ್ವದಲ್ಲಿ ಭಾರತ-ಚೀನಾ ಗಡಿ ಪ್ರದೇಶದಲ್ಲಿ ನಿಲುಗಡೆಗೊಳಿಸಲಾಗುವುದು.

ಚೀನಾ-ಪಾಕ್ ಕಿತಾಪತಿ; ಗಡಿ ರಕ್ಷಣೆಗಾಗಿ ಭಾರತಕ್ಕೆ ರಷ್ಯಾ ನೆರವು!

ಹಾಗಿದ್ದರೂ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯು ಭಾರತ ತಲುಪಲು ಇನ್ನು ಕೆಲವು ವರ್ಷಗಳು ಬೇಕಾಗುವುದು. ಈ ಮೂಲಕ ದೇಶದ ರಕ್ಷಣಾ ವ್ಯವಸ್ಥೆಯನ್ನು ಭದ್ರಪಡಿಸಲು ಭಾರತೀಯ ವಾಯುಸೇನೆ ನಿರ್ಧರಿಸಿದೆ.

ಚೀನಾ-ಪಾಕ್ ಕಿತಾಪತಿ; ಗಡಿ ರಕ್ಷಣೆಗಾಗಿ ಭಾರತಕ್ಕೆ ರಷ್ಯಾ ನೆರವು!

ಇದಕ್ಕೂ ಮೊದಲು ಚೀನಾ ಸಹ ರಷ್ಯಾ ಜೊತೆಗೆ ನಡೆಸಿರುವ 3 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಒಪ್ಪಂದದ ಪ್ರಕಾರ ಆರು ಎಸ್-400 ಏರ್ ಡಿಫೆನ್ಸ್ ಕ್ಷಿಪಣಿಗಳು 2017ರ ವೇಳೆಯಾಗುವಾಗ ಚೀನಾವನ್ನು ತಲುಪಲಿದೆ.

ಚೀನಾ-ಪಾಕ್ ಕಿತಾಪತಿ; ಗಡಿ ರಕ್ಷಣೆಗಾಗಿ ಭಾರತಕ್ಕೆ ರಷ್ಯಾ ನೆರವು!

ಒಟ್ಟಿನಲ್ಲಿ ಗಡಿಯಲ್ಲಿ ಉದ್ನಿಗ್ವ ಪರಿಸ್ಥಿತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತ ಸಹ ತನ್ನ ಭದ್ರತೆಯನ್ನು ಬಲಿಷ್ಠಗೊಳಿಸುತ್ತಿದೆ.

More from DriveSpark

Article Published On: Monday, December 21, 2015, 12:07 [IST]
English summary
Triumf air defence missile system
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+