ತುಮಕೂರಿಗೆ ಬಂದ ಅಶ್ವಮೇಧ ಬಸ್‌ಗಳು.. ಶಾಸಕ ಶ್ರೀನಿವಾಸ್‌ರಿಂದ ಡ್ರೈವಿಂಗ್: ಸಚಿವರುಗಳೇ ಪ್ರಯಾಣಿಕರು!
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ - KSRTC), ತನ್ನ ಪ್ರಯಾಣಿಕರ ಅನುಕ್ಕೂಲಕ್ಕಾಗಿ ನೂತನ 100 ಅಶ್ವಮೇಧ ಕ್ಲಾಸಿಕ್ (Ashwamedha Classic) ಹೆಸರಿನ ಅತ್ಯಾಧುನಿಕ ಬಸ್‌ಗಳನ್ನು ಫೆ.5 ರಂದು ಪರಿಚಯಿಸಿತ್ತು. ತುಮಕೂರು (Tumakuru) ವಿಭಾಗಕ್ಕೂ ಈ ಬಸ್‌ಗಳು ಸೇರ್ಪಡೆಗೊಂಡಿವೆ.
ಇತ್ತೀಚೆಗೆ ತುಮಕೂರು ವಿಭಾಗಕ್ಕೆ ಬಂದಿರುವ 6 ಅಶ್ವಮೇಧ ಕ್ಲಾಸಿಕ್ ಹಾಗೂ 9 ಟಾಟಾ ಬಿಎಸ್ 6 ಆಧಾರಿತ ಬಸ್‌ಗಳನ್ನು ನಗರದ ಬಸ್ ನಿಲ್ದಾಣದಲ್ಲಿ ಲೋಕಾರ್ಪಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಯಣ್ಣ, ಕೆಎಸ್ಆರ್ಟಿಸಿ ಅಧ್ಯಕ್ಷ ಹಾಗೂ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಸೇರಿದಂತೆ ಹಲವಾರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ಹೊಸ ಅಶ್ವಮೇಧ ಕ್ಲಾಸಿಕ್ ಬಸ್‌ನ್ನು ಚಾಲನೆ ಮಾಡಿದರು. ಆ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿಯೂ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಈ ಬಸ್‌ನಲ್ಲಿ ಸಚಿವ ಡಾ.ಜಿ.ಪರಮೇಶ್ವರ್, ಕೆ.ಎನ್.ರಾಯಣ್ಣ ಹಾಗೂ ಶಾಸಕ ಜ್ಯೋತಿ ಗಣೇಶ್ ಸಹ ಕೊಂಚ ದೂರ ಪ್ರಯಾಣಿಸಿದರು.
ಈ ಅಶ್ವಮೇಧ ಕ್ಲಾಸಿಕ್ ಬಸ್‌ಗಳು (ಪಾಯಿಂಟ್ ಟು ಪಾಯಿಂಟ್ ಎಕ್ಸ್‌ಪ್ರೆಸ್) ಅತ್ಯಾಧುನಿಕ ವಿನ್ಯಾಸವನ್ನು ಪಡೆದಿದ್ದು, 'ಪ್ರಯಾಣದ ಮರುಕಲ್ಪನೆ' ಎಂಬ ಘೋಷ ವಾಕ್ಯವನ್ನು ಹೊಂದಿವೆ. ಬೆಂಗಳೂರು ಹಾಗೂ ರಾಜ್ಯದ ಪ್ರಮುಖ ನಗರಗಳಿಗೆ ಸಂಪರ್ಕವನ್ನು ಕಲ್ಪಿಸುತ್ತವೆ. ಈಗಾಗಲೇ ಕೆಎಸ್ಆರ್ಟಿಸಿಯ ವಿವಿಧ ವಿಭಾಗಗಳಿಗೆ ಈ ಬಸ್‌ಗಳನ್ನು ತಲುಪಿದ್ದು, ಸಂಚಾರವನ್ನು ಕೂಡ ಶುರು ಮಾಡಿವೆ.

ನೂತನ ಅಶ್ವಮೇಧ ಕ್ಲಾಸಿಕ್ ಬಸ್‌ಗಳು ಸಾಕಷ್ಟು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿವೆ. ನಾನ್-ಎಸಿ ಬಸ್‌ಗಳಾಗಿದ್ದು, 52 ಆಸನಗಳನ್ನು ಹೊಂದಿವೆ. ಮುಂಭಾಗ (ಫ್ರಂಟ್) ಹಾಗೂ ಹಿಂಭಾಗ (ಹಿಂಭಾಗ) ಎಲ್‌ಇಡಿ ಡೆಸ್ಟಿನೇಶನ್ ಬೋರ್ಡ್‌ಗಳನ್ನು ಪಡೆದಿವೆ. ಸೆನ್ಸರ್ ಚಾಲಿತ ನ್ಯೂಮ್ಯಾಟಿಕ್ ಡೋರ್ (ಬಾಗಿಲು), ಜಿಪಿಎಸ್, ರೇರ್ (ಹಿಂಭಾಗ) ಕ್ಯಾಮೆರಾ, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಎಮರ್ಜೆನ್ಸಿ ಬಟನ್ ಅನ್ನು ಪಡೆದಿವೆ.
ಅಶ್ವಮೇಧ ಕ್ಲಾಸಿಕ್ ಬಸ್‌ಗಳಲ್ಲಿ ಮಹಿಳೆಯರು ಕೂಡ ಉಚಿತವಾಗಿ ಪ್ರಯಾಣಿಸಲು ಅವಕಾಶವಿದೆ. ಕೆಎಸ್ಆರ್ಟಿಸಿ ಈ ವರ್ಷ 2,000 ಹೊಸ ಬಸ್‌ಗಳನ್ನು ಬಿಡಲು ಹಾಗೂ ವಿಟಿಎಂಎಸ್ (ವೆಹಿಕಲ್ ಟ್ರ್ಯಾಕಿಂಗ್ - ಮಾನಿಟರಿಂಗ್ ಸಿಸ್ಟಮ್), ಮೊಬೈಲ್ ಅಪ್ಲಿಕೇಶನ್, ನಗದು ರಹಿತ ಪ್ರಯಾಣದಂತಹ ಸೌಕರ್ಯವನ್ನು ಒದಗಿಸಲು ಮುಂದಾಗಿದೆ ಎಂದು ಕಳೆದ ಜನವರಿಯಲ್ಲಿ ವರದಿಯಾಗಿತ್ತು. ಇದು ಕೆಲವೇ ತಿಂಗಳಲ್ಲಿ ಸಹಕಾರಗೊಳ್ಳಬಹುದು.
ದೇಶದಲ್ಲಿಯೇ ಕೆಎಸ್ಆರ್ಟಿಸಿ ವಿನೂತನವಾಗಿ 'ನಮ್ಮ ಕಾರ್ಗೋ' ಸೇವೆಯನ್ನು ನಡೆಸುತ್ತಿದೆ. ಸದ್ಯವಿರುವ 20 ಟ್ರಕ್‌ಗಳಿಂದ ವರ್ಷಾಂತ್ಯದೊಳಗೆ 500 ಟ್ರಕ್‌ಗಳಿಗೆ ವಿಸ್ತರಿಸಲು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಸಾರ್ವಜನಿಕರಿಗೆ ಉತ್ತಮ ಪ್ರಯಾಣದ ಅನುಭವನ್ನು ಒದಗಿಸಲು ಸಾಮಾನ್ಯ ಬಸ್‌ಗಳೊಂದಿಗೆ ರಾಜಹಂಸ, ಅಂಬಾರಿ, ಐರಾವತ, ಅಂಬಾರಿ ಉತ್ಸವ್ ಬಸ್‌ಗಳನ್ನು ಸಹ ಓಡಿಸುತ್ತಿದೆ. ಇವು ಪ್ರಯಾಣಿಕರಿಗೆ ಐಷಾರಾಮಿ ಸೌಲಭ್ಯವನ್ನು ಒದಗಿಸುವುದರೊಂದಿಗೆ ನಿರ್ದಿಷ್ಟ ಗಮ್ಯ ಸ್ಥಾನವನ್ನು ವೇಗವಾಗಿ ತಲುಪಿಸುತ್ತವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications