ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ಜನಪ್ರಿಯ ಕಿರುತೆರೆ ನಟಿ

ಮುನ್‌ಮುನ್ ದತ್ತಾ ಜನಪ್ರಿಯ ಕಿರುತೆರೆ ನಟಿ ಮತ್ತು ರೂಪದರ್ಶಿ. ಜನಪ್ರಿಯ ಹಿಂದಿ ಸಿಟ್ಕಾಮ್ ತಾರಕ್ ಮೆಹ್ತಾ ಕಾ ಊಲ್ತಾ ಚಾಶ್ಮಾದಲ್ಲಿ ಬಬಿತಾ ಅಯ್ಯರ್ ಪಾತ್ರಕ್ಕಾಗಿ ಅವರು ಹೆಚ್ಚು ಹೆಸರುವಾಸಿಯಾಗಿದ್ದಾರೆ. ಈ ನಟಿ ಹೊಸ ಐಷಾರಾಮಿ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಕಾರನ್ನು ಖರೀದಿಸಿದ್ದಾರೆ.

ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ಜನಪ್ರಿಯ ಕಿರುತೆರೆ ನಟಿ

ನಟಿ ಮುನ್‌ಮುನ್ ದತ್ತಾ ಅವರು ಮುಂಬೈನ ಆಟೋಹ್ಯಾಂಗರ್ ಮರ್ಸಿಡಿಸ್ ಶೋರೂಮ್‌ನಿಂದ ಹೊಸ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಕಾರಿನ ವಿತರಣೆಯನ್ನು ಪಡೆದುಕೊಂಡಿದ್ದಾರೆ. ಅವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೊಸ ಕಾರಿನೊಂದಿಗೆ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.42 ಲಕ್ಷದಿಂದ ಪ್ರಾರಂಭವಾಗುತ್ತದೆ. ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕರಿಂದ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಎಂಟ್ರಿ ಲೆವೆಲ್ ಲಿಮೋಸಿನ್ ಆಗಿದೆ.

ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ಜನಪ್ರಿಯ ಕಿರುತೆರೆ ನಟಿ

ಪ್ರಸಿದ್ಧ ಹಾಸ್ಯ ಕಾರ್ಯಕ್ರಮ 'ತಾರಕ್ ಮೆಹ್ತಾ ಕಾ ಉಲ್ಟಾ ಚಾಶ್ಮಾ' ಕಳೆದ 12 ವರ್ಷಗಳಿಂದ ಜನರ ಮನಗೆದ್ದಿದೆ. ಇದರಲ್ಲಿ ನಟಿಸಿರುವ ಪ್ರತಿಯೊಂದು ಪಾತ್ರವೂ ಅವರ ನಟನೆಯಿಂದ ಜನರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದಾರೆ. ಜನರು ಬಬಿತಾ ಜೀ ಪಾತ್ರವನ್ನು ಹೆಚ್ಚು ಇಷ್ಟಪಡುತ್ತಾರೆ, ಬಬಿತಾ ಜಿ' ಪಾತ್ರದಲ್ಲಿ ನಟಿಸಿರುವ ನಟಿ ಮುನ್‌ಮುನ್ ದತ್ತಾ.

ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ಜನಪ್ರಿಯ ಕಿರುತೆರೆ ನಟಿ

ಈ ನಟಿ ಮುನ್‌ಮುನ್ ದತ್ತಾ ಅವರು ಖರೀದಿಸಿದ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಕಾರಿನ ಬಗ್ಗೆ ಹೇಳುವುದಾದರೆ, ಈ ಲಿಮೋಸಿನ್ ಕಾರು ಪೋಲಾರ್ ವೈಟ್, ಮೊಜಾವೆ ಸಿಲ್ವರ್, ಮೌಂಟೇನ್ ಗ್ರೇ, ಕಾಸ್ಮೋಸ್ ಬ್ಲ್ಯಾಕ್, ಡೆನಿಮ್ ಬ್ಲೂ, ಮತ್ತು ಇರಿಡಿಯಮ್ ಸಿಲ್ವರ್ ಬಣ್ಣಗಳಲ್ಲಿ ಲಭ್ಯವಿದೆ. ವಿಶೇಷ ವೆಚ್ಚದಲ್ಲಿ ವಿಶೇಷ ಯೆಲ್ಲೋ ಬಣ್ಣದ ಆಯ್ಕೆಯೊಂದಿಗೆ ನೀಡಲಾಗುತ್ತದೆ.

ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ಜನಪ್ರಿಯ ಕಿರುತೆರೆ ನಟಿ

ಇರಿಡಿಯಮ್ ಸಿಲ್ವರ್ ಬಣ್ಣದ ಮಾದರಿಯನ್ನು ಹೊರತುಪಡಿಸಿ, ಉಳಿದ ಬಣ್ಣ ಆಯ್ಕೆಗಳು ಬೀಜ್ ಥೀಮ್ ಒಳಭಾಗವನ್ನು ಹೊಂದಿವೆ. ಮತ್ತೊಂದೆಡೆ ಇರಿಡಿಯಮ್ ಸಿಲ್ವರ್ ಬಣ್ಣದ ಮಾದರಿಯು ಆಲ್-ಬ್ಲ್ಯಾಕ್ ಒಳಭಾಗವನ್ನು ಹೊಂದಿದೆ. ಎಎಂಜಿ ಮಾದರಿಯು ಸೆಡಾನ್‌ನ ಸ್ಟ್ಯಾಂಡರ್ಡ್ ರೂಪಾಂತರಕ್ಕಿಂತ ಸ್ಪೋರ್ಟಿಯರ್ ಥೀಮ್‌ನೊಂದಿಗೆ ಆಲ್-ಬ್ಲ್ಯಾಕ್ ಒಳಾಂಗಣವನ್ನು ಸಹ ಹೊಂದಿದೆ.

ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ಜನಪ್ರಿಯ ಕಿರುತೆರೆ ನಟಿ

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ನಲ್ಲಿ ರೂಪಾಂತರಕ್ಕೆ ಅನುಗುಣವಾಗಿ ಮೂರು ಎಂಜಿನ್ ಆಯ್ಕೆಗಳಲ್ಲಿ ನೀಡಲಾಗಿದೆ. ಇದರಲ್ಲಿ ಎ200 ರೂಪಾಂತರದಲ್ಲಿ 1.3-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 161 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಂಜಿನ್ ಅನ್ನು 7-ಸ್ಪೀಡ್ ಡಿಸಿಟಿ ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್‌ಗೆ ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ಜನಪ್ರಿಯ ಕಿರುತೆರೆ ನಟಿ

ಇನ್ನು ಈ ಎ220ಡಿ ರೂಪಾಂತರದಲ್ಲೊ 2.0-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದ್ದು, ಈ ಎಂಜಿನ್ 148 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಂಜಿನ್ 8-ಸ್ಪೀಡ್ ಡಿಸಿಟಿಗೆ ಹೊಂದಿಕೆಯಾಗುತ್ತದೆ.

ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ಜನಪ್ರಿಯ ಕಿರುತೆರೆ ನಟಿ

ಇದರೊಂದಿಗೆ ಎ 35 4 ಮ್ಯಾಟಿಕ್ ರೂಪಾಂತರದಲ್ಲಿ 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 304 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 7-ಸ್ಪೀಡ್ ಡಿಸಿಟಿ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ.

ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ಜನಪ್ರಿಯ ಕಿರುತೆರೆ ನಟಿ

ಇನ್ನು ಈ ಎ200 ಪೆಟ್ರೋಲ್ ರೂಪಾಂತರವು ಎಆರ್ಎಐ ಪ್ರಕಾರ 17.50 ಕಿ.ಮೀ ಮೈಲೇಜ್ ನೀಡುತ್ತದೆ ಮತ್ತು ಎ200ಡಿ ಯಲ್ಲಿ 21.35 ಕಿ.ಮೀ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಐಷಾರಾಮಿ ಕಾರು ಕೇವಲ 4.8 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ಜನಪ್ರಿಯ ಕಿರುತೆರೆ ನಟಿ

ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರಿನಲ್ಲಿ ಸುತ್ತಲೂ ಎಲ್ಇಡಿ ಲೈಟಿಂಗ್ (ಹೆಡ್‌ಲ್ಯಾಂಪ್‌ಗಳು, ಡಿಆರ್‌ಎಲ್‌ಗಳು, ಟೈಲ್‌ಲೈಟ್‌ಗಳು ಮತ್ತು ಟರ್ನ್ ಸಿಗ್ನಲ್‌ಗಳು) ಮತ್ತು 7-ಇಂಚಿನ ಎರಡು-ಟೋನ್ ಡೈಮಂಡ್-ಕಟ್ ಅಲಾಯ್ ವ್ಹೀಲ್ ಗಳು ಹೊಂದಿವೆ. ಇನ್ನು ಈ ಕಾರಿನಲ್ಲಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, 10.25-ಇಂಚಿನ ಕಸ್ಟಮೈಸ್ ಮಾಡಬಹುದಾದ ಟಿಎಫ್‌ಟಿ ಕ್ಲಸ್ಟರ್, 64 ಅಂಬೈಟ್ ಲೈಟಿಂಗ್, ಎಲೆಕ್ಟ್ರಿಕ್ ಆಗಿ ಅಡ್ಜೆಸ್ಟ್ ಮಾಡಬಹುಡಾದ ಸೀಟುಗಳು, ಡ್ಯುಯಲ್ ಝೋನ್ ಕ್ಲೈಮೆಂಟ್ ಕಂಟ್ರೋಲ್, ಪನರೋಮಿಕ್ ಸನ್‌ರೂಫ್, ಎಂಬಿಯುಎಕ್ಸ್ ವಾಯ್ಸ್ ಅಸಿಸ್ಟ್, ಅಲೆಕ್ಸಾ ಮತ್ತು ಗೂಗಲ್ ಹೋಮ್ ಇಂಟರ್ಗೇಷನ್ ಒಳಗೊಂಡಿದೆ.

ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ಜನಪ್ರಿಯ ಕಿರುತೆರೆ ನಟಿ

ಈ ಎ-ಕ್ಲಾಸ್ ಲಿಮೋಸಿನ್ ಕಾರಿನಲ್ಲಿ ಸುರಕ್ಷತೆಗಾಗಿ, 7 ಏರ್‌ಬ್ಯಾಗ್‌ಗಳು, ಬ್ಲೈಂಡ್‌ಸ್ಪಾಟ್ ಮಾಹಿತಿ ಸಿಸ್ಟಂ, ಹಿಲ್ ಹೋಲ್ಡ್ ಕಂಟ್ರೋಲ್, ಟ್ರ್ಯಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಇಬಿಡಿಯೊಂದಿಗೆ ಎಬಿಎಸ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಎಮರ್ಜನ್ಸಿ ಬ್ರೇಕ್ ಅಸಿಸ್ಟ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ವಾಲ್ಯೂಮೆಟ್ರಿಕ್ ಅಲಾರಂ, ಕ್ರ್ಯಾಶ್ ಅಸಿಸ್ಟ್ ಮತ್ತು ಇತರ ಫೀಚರ್‌ಗಳನ್ನು ನೀಡಿದೆ. ಸ್ಟ್ಯಾಂಡರ್ಡ್ ವಾರಂಟಿ ಪ್ಯಾಕೇಜ್ ಜೊತೆಗೆ ಕಂಪನಿಯು ಗ್ರಾಹಕರಿಗೆ ಹೆಚ್ಚುವರಿ ವೆಚ್ಚದಲ್ಲಿ ಖರೀದಿಸಲು ಹಲವಾರು ನಿರ್ವಹಣಾ ಪ್ಯಾಕೇಜ್‌ಗಳನ್ನು ಸಹ ನೀಡುತ್ತಿದೆ. ಇದರೊಂದಿಗೆ ಕಂಪನಿಯು 24x7 (ಆರ್‌ಎಸ್‌ಎ) ರೋಡ್ ಸೈಡ್ ಅಸಿಸ್ಟ್ ಅನ್ನು ನೀಡುತ್ತಿದೆ.

ದುಬಾರಿ ಬೆಲೆಯ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಿದ ಜನಪ್ರಿಯ ಕಿರುತೆರೆ ನಟಿ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ನಟಿ ಮುನ್‌ಮುನ್ ದತ್ತಾ ಅವರು ಜನಪ್ರಿಯ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಕಾರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಮರ್ಸಿಡಿಸ್ ಬೆಂಝ್ ಎ-ಕ್ಲಾಸ್ ಲಿಮೋಸಿನ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು 2-ಸೀರಿಸ್ ಗ್ರ್ಯಾನ್ ಕೂಪೆಗೆ ಪೈಪೋಟಿ ನೀಡುತ್ತದೆ.

Article Published On: Tuesday, June 28, 2022, 15:55 [IST]
English summary
Tv actress munmun dutta buys new mercedes benz a class details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+