ಕೋಟಿ ಬೆಲೆಯ ಐಷಾರಾಮಿ ಮರ್ಸಿಡಿಸ್-ಮೇಬ್ಯಾಕ್ ಜಿಎಲ್ಎಸ್600 ಕಾರು ಖರೀದಿಸಿದ ಖ್ಯಾತ ನಿರೂಪಕ
ಕಾರು ಕ್ರೇಜ್ ಅನ್ನೋದು ಯಾರಿಗೆ ಇರಲ್ಲ ಹೇಳಿ, ಅದರಲ್ಲಿಯು ಸಿನಿಮಾ ರಂಗದ ಸೆಲಬ್ರಿಟಿಗಳಿಗೆ ಈ ಕ್ರೇಜ್ ಸ್ವಲ್ಪ ಹೆಚ್ಚೆ ಇರುತ್ತೆ. ಸಿನಿಮಾ ತಾರೆಯರು ತಾವು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ಮಾರುಕಟ್ಟೆಗೆ ಲಗ್ಗೆ ಇಟ್ಟ ಐಷಾರಾಮಿ ಕಾರುಗಳನ್ನು ಖರೀದಿಸುವುದು ಸೆಲಬ್ರಿಟಿಗಳಿಗೆ ಒಂದು ಹೊಸ ಟ್ರೆಂಡ್ ಆಗಿದೆ.

ಇತ್ತೀಚೆಗೆ ನಟ, ನಿರೂಪಕ ಮನೀಷ್ ಮನೀಶ್ ಪೌಲ್ ಹೊಸ ಮರ್ಸಿಡಿಸ್-ಮೇಬ್ಯಾಕ್ ಜಿಎಲ್ಎಸ್ 600 ಕಾರನ್ನು ಖರೀದಿಸಿದ್ದಾರೆ. ಈ ಐಷಾರಾಮಿ ಕಾರಿನ ಬೆಲೆಯು ರೂ,2.47 ಕೋಟಿಯಾಗಿದೆ. ಈ ಹೊಸ ಮರ್ಸಿಡಿಸ್-ಮೇಬ್ಯಾಕ್ ಜಿಎಲ್ಎಸ್ 600 ಎಸ್‍ಯುವಿ ಮಾದರಿಯು ಬ್ಲೂ ಮತ್ತು ಸಿಲ್ವರ್ ಉತ್ತಮ ಡ್ಯುಯಲ್-ಟೋನ್ ಪೇಂಟ್ ಶೇಡ್‌ನಲ್ಲಿ ಪೂರ್ಣಗೊಳಿಸಲಾಗಿದೆ. ನಿರೂಪಕ ಮನೀಷ್ ಪಾಲ್ ಅವರು ಬ್ಯಾಕ್ ಟು ಬ್ಯಾಕ್ ಒಂದಾದ ಮೇಲೆ ಒಂದರಂತೆ ಪ್ರಾಜೆಕ್ಟ್ ಗಳಿಸುತ್ತಿದ್ದಾರೆ. ಸ

ಸದ್ಯ ನಿರೂಪಕ ಮನೀಶ್ ಪೌಲ್ ಅವರು 'ಸ್ಮಾರ್ಟ್ ಜೋಡಿ' ಶೋನಲ್ಲಿ ನಿರೂಪಕರಾಗಿದ್ದಾರೆ. ನಟ ವರುಣ್ ಧವನ್, ಕಿಯಾರಾ ಅಡ್ವಾಣಿ ನಟನೆಯ ಹೊಸ ಸಿನಿಮಾದಲ್ಲಿ ಮನೀಷ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ರಾಜ್ ಮೆಹ್ತಾ ಹಣ ಹೂಡುತ್ತಿದ್ದಾರೆ.

ಮರ್ಸಿಡಿಸ್-ಮೇಬ್ಯಾಕ್ ಜಿಎಲ್ಎಸ್ 600 ಎಸ್‍ಯುವಿಯನ್ನು ಭಾರತಕ್ಕೆ ಸೀಮಿತ ಸಂಖ್ಯೆಯಲ್ಲಿ ತರಲಾಯಿತು ಮತ್ತು ಅವೆಲ್ಲವೂ ಮಾರಾಟವಾಗಿವೆ. ಈ ಎಸ್‍ಯುವಿ ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಪಡೆಯಿತು ಮತ್ತು ಅನೇಕ ನಟರು ಅದನ್ನು ಹೊಂದಿದ್ದಾರೆ. ಇನ್ನು ಈ ಐಷಾರಾಮಿ ಎಸ್‌ಯುವಿ ಮಾದರಿಯು 4 ಮ್ಯಾಟಿಕ್ ಎನ್ನುವ ಒಂದೇ ಒಂದು ವೆರಿಯೆಂಟ್ ಹೊಂದಿದೆ.

ಗ್ರಾಹಕರ ಬೇಡಿಕೆಯೆಂತೆ 4 ಸೀಟರ್ ಅಥವಾ 5 ಸೀಟರ್ ಮಾದರಿಯೊಂದಿಗೆ ಖರೀದಿ ಮಾಡಬಹುದಾಗಿದೆ. ಇನ್ನು ಈ ಮರ್ಸಿಡಿಸ್-ಮೇಬ್ಯಾಕ್ ಜಿಎಲ್ಎಸ್ 600 ಅತ್ಯಾಧುನಿಕ ಸೌಲಭ್ಯಗಳೊಂದಿಗೆ ತನ್ನ ಸರಣಿ ಕಾರುಗಳಲ್ಲಿಯೇ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಸುಧಾರಿತ ತಂತ್ರಜ್ಞಾನ ಮತ್ತು ಹಲವಾರು ತಾಂತ್ರಿಕ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದೆ. ಇದರ ಒಳಗೆ ಮತ್ತು ಹೊರಗೆ ಬೆಸ್ಪೋಕ್ ವೈಶಿಷ್ಟ್ಯಗಳನ್ನು ಹೊಂದಿದೆ.

ಈ ಎಸ್‍ಯುವಿಯ ಒಟ್ಟಾರೆ ವಿನ್ಯಾಸವು ಐಷಾರಾಮಿ ಮತ್ತು ಪ್ರೀಮಿಯಂ ಆಗಿದೆ. ಇದರಲ್ಲಿ ದೊಡ್ಡದಾದ ವರ್ಟಿಕಲ್ ಸ್ಲ್ಯಾಟ್ ಗ್ರಿಲ್, ವಿಂಡೋ ಲೈನ್, ಸೈಡ್-ಸ್ಟೆಪ್, ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳಲ್ಲಿ ಡಿಸೈನ್ ಆಕ್ಸೆಂಟ್, ರೂಫ್ ರೈಲ್ಸ್ ಮತ್ತು ಸ್ಪೋರ್ಟಿ ಎಕ್ಸಾಸ್ ನೋಟ್ ಹೊಂದಿದೆ.

ಈ ಹೊಸ ಪ್ರೀಮಿಯಂ ಐಷಾರಾಮಿ ಎಸ್‌ಯುವಿ ಕಾರಿನ ವಿನ್ಯಾಸಕ್ಕೆ ತಕ್ಕಂತೆ 23 ಇಂಚಿನ ಬ್ರಷ್ಡ್ ಮಲ್ಟಿ-ಸ್ಪೋಕ್ ವೀಲ್ಹ್ ಆಯ್ಕೆ ಜೊತೆಗೆ ವಿಂಡೋ ಪಿಲ್ಲರ್, ರೂಫ್ ಮೇಲೆ ಕಪ್ಪು ಬಣ್ಣದ ಡ್ಯುಯಲ್ ಟೋನ್ ಪೇಂಟ್ ಸ್ಕೀಮ್ ಮತ್ತು 'ಮೇಬ್ಯಾಕ್' ಬ್ರಾಂಡ್ ಬ್ಯಾಡ್ಜ್ ಹೊಂದಿದೆ.

ಈ ಎಸ್‍ಯುವು ಕಾರು ಮಾದರಿಯ ಪ್ರತಿ ಸೀಟ್ ವೆಂಟಿಲೆಟರ್ ಮತ್ತು ಮಸಾಜ್ ಫಂಕ್ಷನ್ ವೈಶಿಷ್ಟ್ಯತೆ ಒಳಗೊಂಡಿದ್ದು, ಪ್ರತಿ ಸೀಟ್ ನಲ್ಲೂ ಆಡಿಯೋ, ಹವಾಮಾನ ನಿಯಂತ್ರಣ, ಆಂಬಿಯೆಂಟ್ ಲೈಟಿಂಗ್, ಸನ್ಶೇಡ್ಸ್ ಮತ್ತು ನ್ಯಾವಿಗೇಷನ್ ಅನ್ನು ಒಳಗೊಂಡಿದೆ. ಹಿಂಭಾಗದಲ್ಲಿ ಫೋರ್ಡರ್‌ಗಳಲ್ಲಿ ರೆಫ್ರಿಜರೇಟರ್ ಅನ್ನು ಸಹ ಒಳಗೊಂಡಿದೆ.

ಇನ್ನು ದೊಡ್ಡದಾದ ಪನೋರಮಿಕ್ ಮೂನ್‌ರೂಫ್, 12.3-ಇಂಚಿನ ಎಂಬಿಯುಎಕ್ಸ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಮತ್ತು 12.3-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬರ್ಮೆಸ್ಟರ್ ಸರೌಂಡ್ ಸೌಂಡ್ ಸಿಸ್ಟಮ್, 64 ಬಣ್ಣ ಮತ್ತು ಹೆಚ್ಚಿನ ಎಲ್ಇಡಿ ಆಪ್ಟಿಕಲ್ ಫೈಬರ್ ಆಂಬಿಯೆಂಟ್ ಲೈಟಿಂಗ್ ಅನ್ನು ಒಳಗೊಂಡಿದೆ.

ಈ ಎಸ್‍ಯುವಿ ಮಾದರಿಯಲ್ಲಿ ವಿಶೇಷ ತಂತ್ರಜ್ಞಾನ ಪ್ರೇರಿತ ಇ-ಆಕ್ಟಿವ್ ಬಾಡಿ ಕಂಟ್ರೋಲ್ ಸಸ್ಪೆಂಕ್ಷನ್ ಸಿಸ್ಟಂ ಹೊಂದಿದ್ದು, ಫ್ರಂಟ್ ಕ್ಯಾಮೆರಾ ಮೂಲಕ ಕಾರು ಚಾಲನೆಯಲ್ಲಿರುವಾಗ ರಸ್ತೆಯನ್ನು ಸ್ಕ್ಯಾನ್ ಮಾಡುವ ಮೂಲಕ ಮತ್ತು ಸಸ್ಪೆಂಕ್ಷನ್ ಹೊಂದಾಣಿಕೆಯೊಂದಿಗೆ ಅಂಡರ್ ಬಾಡಿ ಡ್ಯಾಮೆಜ್ ತಪ್ಪಿಸಲು ನೆರವಾಗುತ್ತದೆ. ಈ ಮರ್ಸಿಡಿಸ್-ಮೇಬ್ಯಾಕ್ ಜಿಎಲ್ಎಸ್ 600 ಎಸ್‍ಯುವಿಯು 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಈ ಎಸ್‍ಯುವಿಯಲ್ಲಿ 4.0 ಲೀಟರ್ ವಿ8 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 9 ಜಿ-ಟ್ರಾನಿಕ್ ಸ್ವಯಂಚಾಲಿತ ಗೇರ್‌ಬಾಕ್ಸ್‌ನೊಂದಿಗೆ 550ಬಿಎಚ್‌ಪಿ ಮತ್ತು 730ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಹೊಸ ಎಂಜಿನ್‌ನಲ್ಲಿ 21ಬಿಎಚ್‌ಪಿ ಮತ್ತು 249ಎನ್ಎಂ ಟಾರ್ಕ್ ಕೊಡುಗೆ ನೀಡುವ ಸಂಯೋಜಿತ ಇಕ್ಯೂ ಬೂಸ್ಟ್ ಸ್ಟಾರ್ಟರ್-ಜನರೇಟರ್ ಅನ್ನು ಸಹ ಹೊಂದಿದೆ.ಇನ್ನು ಇತ್ತೀಚೆಗೆ ಜಾಗತಿಕವಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳುತ್ತಿದೆ. ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡುತ್ತಿದ್ದಾರೆ. ಇದರಿಂದ ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ. ಬಹುತೇಕ ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಪಡಿಸುವಲ್ಲಿ ನಿರತರಾಗಿದ್ದಾರೆ.

ಐಷಾರಾಮಿ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ ಕೂಡ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಿದೆ. ಇದೀಗ ಅಧಿಕ ರೇಂಜ್ ಹೊಂದಿರುವ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇತ್ತೀಚೆಗೆ ಮರ್ಸಿಡಿಸ್ ಬೆಂಝ್ ತನ್ನ ಹೊಸ ವಿಷನ್ ಇಕ್ಯೂಎಕ್ಸ್ಎಕ್ಸ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಿತು. ಇದು ಒಂದೇ ಚಾರ್ಜ್‌ನಲ್ಲಿ 1,000 ಕಿಲೋಮೀಟರ್ ರೇಂಜ್ ಅನ್ನು ನೀಡುತ್ತದೆ ಎಂದು ಕಂಪನಿ ಹೇಳಿದೆ.


Click it and Unblock the Notifications