ಹೊಸ ವರ್ಷದಲ್ಲಿ ಧೋನಿ-ಪ್ರಭು 'ಲುಂಗಿ' ಡ್ಯಾನ್ಸ್
ಭಾರತದ ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್ ತಂಡದ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಮಗದೊಮ್ಮೆ ಸುದ್ದಿಯಲ್ಲಿದ್ದಾರೆ. ದೇಶದ ಅತ್ಯಂತ ಬೆಲೆ ಬಾಳುವ ಕ್ರೀಡಾಪಟು ಎನಿಸಿಕೊಂಡಿರುವ ಧೋನಿ ಪ್ರಚಾರ ಜಾಹೀರಾತಿಗೂ ಅಷ್ಟೇ ಬೇಡಿಕೆಯಿರುತ್ತದೆ.
Also Read: ಧೋನಿ ಮೊದಲ ಬೈಕ್ ಯಾವುದು ಗೊತ್ತಾ ?
ಕ್ರಿಕೆಟ್ ಮೈದಾನದ ಹೊರಗೂ ತಮ್ಮ ಸರಳ ವ್ಯಕ್ತಿತ್ವದಿಂದ ಗುರುತಿಸಿಕೊಂಡಿರುವ ಧೋನಿ ಅಭಿನಯಿಸುವ ಜಾಹೀರಾತಿನಲ್ಲೂ ಏನೋ ವಿಶಿಷ್ಟತೆಯಿದ್ದು, ಅಷ್ಟೇ ಬೇಡಿಕೆಯನ್ನು ಕಾಯ್ದುಕೊಳ್ಳುತ್ತದೆ.

ಇದನ್ನೇ ಮನಗಂಡಿರುವ ದೇಶದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆ ಟಿವಿಎಸ್ ತನ್ನ ನೂತನ ಸ್ಟಾರ್ ಸಿಟಿ ಪ್ಲಸ್ ಬೈಕ್ ಪ್ರಚಾರಕ್ಕಾಗಿ ಭಾರತೀಯ ಕಪ್ತಾನರನ್ನು ಬಳಸಿಕೊಂಡಿದೆ.

ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಧೋನಿ ಟೂರ್ನಿಗೂ ಮುನ್ನ ಟಿವಿಎಸ್ ಪ್ರಚಾರ ಜಾಹೀರಾತಿನಲ್ಲಿ ಭಾಗವಹಿಸಿದ್ದರು. ದಕ್ಷಿಣದ ಜೊತೆಗೆ ಬಾಲಿವುಡ್ ರಂಗದಲ್ಲೂ ಹೆಸರು ಮಾಡಿರುವ ಡ್ಯಾನ್ಸ್ ಕಿಂಗ್ ಪ್ರಭುದೇವ ಸಹ ಧೋನಿ ಅವರಿಗೆ ಸಾಥ್ ನೀಡಿದರು.

ಹೊಸ ವರ್ಷ ಆಗಮನವಾಗಿರುವಂತೆಯೇ ತಮಿಳುನಾಡಿನಲ್ಲಿ ಪೊಂಗಲ್ ಹಬ್ಬ ಆಚರಣೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಈ ವೇಳೆಯಲ್ಲಿ ನೂತನ ವಾಹನ ಖರೀದಿಗೆ ಸೂಕ್ತ ಕಾಲ ನಂಬಿಕೆಯಿದೆ.

ಇದನ್ನೇ ನಂಬಿಕೊಂಡಿರುವ ಟಿವಿಎಸ್ ಸಂಸ್ಥೆ ಧೋನಿ ಹಾಗೂ ಪ್ರಭುದೇವ ಬೆಂಬಲದೊಂದಿಗೆ ನೂತನ ಟಿವಿ ಜಾಹೀರಾತು ರಚಿಸಿದೆ.

ಇಲ್ಲಿ ಪ್ರಮುಖವಾಗಿಯೂ ದಕ್ಷಿಣದ ಜನಪ್ರಿಯ ಲುಂಗಿ ವೇಷ ಭೂಷಣದಲ್ಲಿ ಕಾಣಿಸಿಕೊಂಡಿರುವ ಧೋನಿ ಅವರು ಪ್ರಭು ಅವರ ಜೊತೆಗೂಡಿ ಲುಂಗಿ ಡ್ಯಾನ್ಸ್ ಮಜಾ ಸವಿಯುತ್ತಾರೆ.

ವಿಶೇಷವೆಂದರೆ ಧೋನಿ ಅವರ ಪಂಚೆ ಡ್ಯಾನ್ಸ್ ಬಹುತೇಕ ಎಲ್ಲ ಪ್ರಾದೇಶಿಕ ಭಾಷೆಗಳಲ್ಲೂ ಸಿದ್ಧಗೊಳ್ಳುತ್ತಿದೆ. ಕನ್ನಡದಲ್ಲೂ ಇದರ ಭಾಷಾಂತರವಾಗಲಿದೆ.

ಅಂದ ಹಾಗೆ 110 ಸಿಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಪ್ರಯಾಣಿಕ ವಿಭಾಗದಲ್ಲಿ ಹೆಚ್ಚಿನ ನಿರೀಕ್ಷೆಯನ್ನಿಟ್ಟುಕೊಂಡಿದೆ.

ಕೂಲ್ ಕಪ್ತಾನ ಧೋನಿಯ ಪವರ್ ಫುಲ್ ಕಾರು ಕಲೆಕ್ಷನ್


Click it and Unblock the Notifications








