ಸ್ಮಾರ್ಟ್ ಕಾರಿನೊಳಗೆ ನುಗ್ಗಿದ 20 ತರುಣಿಯರ ಗಿನ್ನೆಸ್ ವಿಶ್ವ ದಾಖಲೆ!
ಅಬ್ಬಬ್ಬಾ... ಉಸಿರು ಗಟ್ಟಿಸುವ ದೃಶ್ಯಗಳೆಂದರೆ ಇವೇ ನೋಡಿ! ವಿನೂತನ ಪ್ರಯತ್ನವೊಂದರಲ್ಲಿ ಅತಿ ಚಿಕ್ಕದಾದ ಸ್ಮಾರ್ಟ್ ಕಾರಿನೊಳಗೆ ಪ್ರವೇಶಿಸುವ ಮೂಲಕ 20ರಷ್ಟು ತರುಣಿಯರು ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿದ್ದಾರೆ.
ಧೈರ್ಯ ಕೈಬಿಡದ ಇಟಲಿಯ ಚಿಯರ್ ಲೀಡರ್ ಗಳು ವಿಶೇಷವಾಗಿಯೂ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಗಿನ್ನೆಸ್ ದಾಖಲೆ ಪುಟಕ್ಕೆ ಅಧಿಕೃತವಾಗಿ ಪ್ರವೇಶ ಪಡೆದಿದ್ದಾರೆ.

ಇಟಲಿಯ ವಾರದ ಕಾರ್ಯಕ್ರಮ 'ಲೊ ಸ್ನೊ ಡೇ ರೆಕಾರ್ಡ್' ನಲ್ಲಿ ಚಿಯರ್ ಲೀಡರ್ ಗಳು ಆಘಾತಕಾರಿ ಮತ್ತು ವಿಸ್ಮಯ ಹುಟ್ಟಿಸುವ ರೀತಿಯಲ್ಲಿ ಅತ್ಯಂತ ಆಶ್ಚರ್ಯಪೂರ್ವಕವಾಗಿ ದಾಖಲೆ ಬರೆದಿದ್ದಾರೆ.

ಸ್ಮಾರ್ಟ್ ಕಾರಿನಲ್ಲಿ ಅಬ್ಬಬ್ಬಾ ಅಂದರೆ ಐದಾರು ಮಂದಿ ಕುಳಿತುಕೊಳ್ಳಬಹುದೇನೋ? ಹಾಗಿರುವಾಗ ಎರಡು ಬಾಗಿಲುಗಳ ಈ ಚೊಕ್ಕದಾದ ಕಾರಿನಲ್ಲಿ 20ರಷ್ಟು ತರುಣಿಯರು ತಮ್ಮನ್ನು ತಾವೇ ತುರುಕಿಸುವ ಮೂಲಕ ವಿಶಿಷ್ಟ ಸಾಧನೆಗೈದಿದ್ದಾರೆ.

ಈ ಸ್ಮಾರ್ಟ್ ಕಾರಿನ ಉದ್ದ ಬರಿ 2.69 ಮೀಟರ್ ಮಾತ್ರವಾಗಿದೆ. ಕಾಮೆಟ್ಸ್ ಚಿಯರ್ ಲೀಡರ್ಸ್ ಗೆ ಸೇರಿದ ವಯ್ಯಾರಿಗಳು ಸಾಹಸ ಪ್ರದರ್ಶಿಸಿದ್ದಾರೆ.

ಗಿನ್ನೆಸ್ ರೆಕಾರ್ಡ್ ಅಧಿಕೃತರು ಇದಕ್ಕಾಗಿ ವಿಶೇಷ ನಿಯಾಮಾಳಿಗಳನ್ನು ರೂಪಿಸಿದ್ದರು. ಭಾಗವಹಿಸುವ ಸ್ಪರ್ಧಿಗಳು 18 ವರ್ಷ ಪ್ರಾಯ ಪೂರ್ತಿಯಾಗಿರಬೇಕು ಮತ್ತು ಐದು ಅಡಿ ಎತ್ತರವನ್ನು ಹೊಂದಿರಬೇಕು.

ಇಷ್ಟೆಲ್ಲ ನಿರ್ದೇಶನಗಳಿದ್ದರೂ ನುರಿತ ತರಬೇತಿಯೊಂದಿಗೆ 20 ಚಿಯರ್ ಲೀಡರ್ಸ್ ಸ್ಮಾರ್ಟ್ ಕಾರಿನೊಳಗೆ ನುಗ್ಗುವ ಮೂಲಕ ಪ್ರಶಂಸೆಗೆ ಪಾತ್ರವಾಗಿದ್ದಾರೆ.

ಅಂದ ಹಾಗೆ ಜರ್ಮನಿಯ ಮೂಲದ ಡೈಮ್ಲರ್ ಬೆಂಝ್ ನಿರ್ಮಿತ ಎರಡು ಸೀಟುಗಳ ಸ್ಮಾರ್ಟ್ ಕಾರು ವಿಶ್ವದ ಅಂದವಾದ ಕಾರುಗಳಲ್ಲಿ ಒಂದಾಗಿದೆ.

ಅಷ್ಟಕ್ಕೂ ಈ ಯುವತಿಯರ ತಂಡಕ್ಕೆ ದಾಖಲೆ ಮುರಿಯಲು ಸಾಧ್ಯವಾಗಲಿಲ್ಲ. ಇದಕ್ಕೂ ಮೊದಲು 2011ರಲ್ಲಿ ಅಮೆರಿಕದ ಗ್ಲೆಂಡಲ್ ಚಿಯರ್ ಲೀಡಿಂಗ್ ತಂಡವು ಗಿನ್ನೆಸ್ ದಾಖಲೆಯನ್ನು ಸ್ಥಾಪಿಸಿದ್ದರು. ಇದರೊಂದಿಗೆ ದಾಖಲೆಯನ್ನು ಸಮಗಟ್ಟಿದಂತಾಗಿದೆ.
ರೋಚಕ ವಿಡಿಯೋ ವೀಕ್ಷಿಸಿ


Click it and Unblock the Notifications








