ಈ ವರ್ಷ ಬಾಲಿವುಡ್‌ ಸ್ಟಾರ್‌ಗಳ ಮನಸ್ಸು ಗೆದ್ದ 2 ಐಷಾರಾಮಿ ಕಾರುಗಳಿವು

ಬಾಲಿವುಡ್ ಸಿನಿಮಾ ರಂಗ ಎಂಬ ಕಲರ್‍‍‍ಫುಲ್ ದುನಿಯಾದಲ್ಲಿರುವ ಸೆಲಬ್ರಿಟಿಗಳಿಗೆ ವಿಭಿನ್ನ ಕ್ರೇಜ್‍‍ಗಳಿವೆ. ಅದರಲ್ಲೂ ದುಬಾರಿ ಕಾರುಗಳನ್ನು ಕೊಂಡುಕೊಳ್ಳುವ ಕ್ರೇಜ್ ತುಸು ಹೆಚ್ಚೆ ಇದೆ. ಬಾಲಿವುಡ್ ಸೂಪರ್ ಸ್ಟಾರ್‌‍ಗಳು ಪೈಪೋಟಿಗೆ ಬಿದ್ದ ರೀತಿಯಲ್ಲಿ ಮಾರುಕಟ್ಟೆಯಲ್ಲಿರುವ ಲಭ್ಯವಿರುವ ದುಬಾರಿ ಐಷಾರಾಮಿ ಕಾರುಗಳನ್ನು ಖರೀದಿಸುತ್ತಾರೆ.

ಈ ವರ್ಷ ಬಾಲಿವುಡ್‌ ಸ್ಟಾರ್‌ಗಳ ಮನಸ್ಸು ಗೆದ್ದ 2 ಐಷಾರಾಮಿ ಕಾರುಗಳಿವು

ಆದಾಯ ಮತ್ತು ಚಲನಚಿತ್ರಗಳ ಸಂಖ್ಯೆಎರಡರಲ್ಲೂ ಬಾಲಿವುಡ್ ದೊಡ್ಡ ಚಲನಚಿತ್ರ ಉದ್ಯಮವಾಗಿದೆ. ಬಾಲಿವುಡ್ ಸೆಲೆಬ್ರೆಟಿಗಳು ಹೆಚ್ಚಿನ ಸಂಭಾವನೆ ಪಡೆಯುವುದರಿಂದ ಐಷಾರಾಮಿ ಕಾರುಗಳೊಂದಿಗೆ ಅದ್ದೂರಿ ಜೀವನವನ್ನು ನಡೆಸುತ್ತಾರೆ, ತಮ್ಮ ಸಹ ನಟರಂತೆಯೇ ಅತಿ ದುಬಾರಿ ಕಾರನ್ನು ಖರೀದಿಸುವುದು ಒಂದು ಟ್ರೆಂಡ್ ಆಗಿದೆ. ಈ ವರ್ಷದಲ್ಲಿ ಹಲವು ಬಾಲಿವುಡ್ ಸ್ಟಾರ್‌ಗಳು ಈ ಎರಡು ನಿರ್ದಿಷ್ಟ ಐಷಾರಾಮಿ ಕಾರುಗಳನ್ನು ಖರೀದಿಸಿದ್ದಾರೆ. ಬಾಲಿವುಡ್ ಸ್ಟಾರ್‌ಗಳನ್ನು ಮೋಡಿ ಮಾಡಿದ ಈ ಎರಡು ಐಷಾರಾಮಿ ಕಾರುಗಳ ಮಾಹಿತಿ ಇಲ್ಲಿದೆ,

ಈ ವರ್ಷ ಬಾಲಿವುಡ್‌ ಸ್ಟಾರ್‌ಗಳ ಮನಸ್ಸು ಗೆದ್ದ 2 ಐಷಾರಾಮಿ ಕಾರುಗಳಿವು

ಮರ್ಸಿಡಿಸ್-ಬೆಂಝ್ ಮೇಬ್ಯಾಚ್ ಜಿಎಲ್ಎಸ್ 600

ಈ ಮರ್ಸಿಡಿಸ್-ಬೆಂಝ್ ಮೇಬ್ಯಾಚ್ ಜಿಎಲ್ಎಸ್ 600 ಜರ್ಮನ್ ವಾಹನ ತಯಾರಕರಿಂದ ಅತ್ಯಂತ ಐಷಾರಾಮಿ ಎಸ್‍ಯುವಿಯಾಗಿದೆ. ವರದಿಗಳ ಪ್ರಕಾರ, ಈ ಎಸ್‍ಯುವಿ 2021ಕ್ಕೆ ಕೇವಲ 50 ಯುನಿಟ್ ಗಳನ್ನು ಮಾತ್ರ ನಿಗದಿಪಡಿಸಿದೆ ಮತ್ತು ಈ ಎಸ್‍ಯುವಿ ಐದು ಬಾಲಿವುಡ್ ಸೆಲೆಬ್ರಿಟಿಗಳ ಒಡೆತನದಲ್ಲಿದೆ.

ಈ ವರ್ಷ ಬಾಲಿವುಡ್‌ ಸ್ಟಾರ್‌ಗಳ ಮನಸ್ಸು ಗೆದ್ದ 2 ಐಷಾರಾಮಿ ಕಾರುಗಳಿವು

ಬಾಲಿವುಡ್‌ನಲ್ಲಿ ಕಾರಿನ ಮೊದಲ ಮಾಲೀಕರಲ್ಲಿ ಒಬ್ಬರು ರಣವೀರ್ ಸಿಂಗ್ ಮತ್ತು ಅವರು ಜುಲೈನಲ್ಲಿ ಈ ಐಷಾರಾಮಿ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ಇದು ಅವರ ಹುಟ್ಟುಹಬ್ಬದ ಉಡುಗೊರೆಯಾಗಿದೆ. ರಣವೀರ್ ಸಿಂಗ್ ನಂತರ ಆಯುಷ್ಮಾನ್ ಖುರಾನಾ ಅವರು ಖರೀದಿಸಿದ್ದಾರೆ.

ಈ ವರ್ಷ ಬಾಲಿವುಡ್‌ ಸ್ಟಾರ್‌ಗಳ ಮನಸ್ಸು ಗೆದ್ದ 2 ಐಷಾರಾಮಿ ಕಾರುಗಳಿವು

ಲ್ಯಾಂಡ್ ರೋವರ್ ಡಿಫೆಂಡರ್ ಖರೀದಿಸಿದ ಕೆಲವೇ ತಿಂಗಳುಗಳಲ್ಲಿ ಅರ್ಜುನ್ ಕಪೂರ್ ಮರ್ಸಿಡಿಸ್-ಬೆಂಝ್ ಮೇಬ್ಯಾಚ್ ಜಿಎಲ್ಎಸ್600 ಎಸ್‍ಯುವಿಯನ್ನು ಖರೀದಿಸಿದರು. ರಣವೀರ್ ಸಿಂಗ್ ಅವರ ಮೇಬ್ಯಾಕ್ ಜಿಎಲ್ಎಸ್600 ನಲ್ಲಿ ಸವಾರಿ ಮಾಡಿದ ನಂತರ ಮತ್ತು ಅದರಿಂದ ಪ್ರಭಾವಿತರಾದ ನಂತರ ಅರ್ಜುನ್ ಕಾರನ್ನು ಖರೀದಿಸಿದರು.

ಈ ವರ್ಷ ಬಾಲಿವುಡ್‌ ಸ್ಟಾರ್‌ಗಳ ಮನಸ್ಸು ಗೆದ್ದ 2 ಐಷಾರಾಮಿ ಕಾರುಗಳಿವು

ಬಳಿಕ ನಟಿ ಕೃತಿ ಸನೋನ್ ನೆಟ್‌ಫ್ಲಿಕ್ಸ್‌ನಲ್ಲಿ ಅವರ 'ಮಿಮಿ' ಚಿತ್ರ ಹಿಟ್ ಆದ ನಂತರ ಮರ್ಸಿಡಿಸ್-ಬೆಂಝ್ ಮೇಬ್ಯಾಚ್ ಜಿಎಲ್ಎಸ್600 ಎಸ್‍ಯುವಿಯನ್ನು ಖರೀದಿಸಿದರು. ಈ ಐಷಾರಾಮಿ ಮರ್ಸಿಡಿಸ್ ಕಾರು ಕ್ಯಾನಾಸೈಟ್ ಬ್ಲೂ ಶೇಡ್ ಬಣ್ಣವನ್ನು ಹೊಂದಿದೆ. 'ಮಿಮಿ' ಸಿನಿಮಾ ಸೂಪರ್​ ಹಿಟ್ ಆದ ಬಳಿಕ ಕೃತಿ ಸನೋನ್​ ಸಂಭಾವನೆಯನ್ನು ಹೆಚ್ಚು ಮಾಡಿದ್ದಾರೆ,

ಈ ವರ್ಷ ಬಾಲಿವುಡ್‌ ಸ್ಟಾರ್‌ಗಳ ಮನಸ್ಸು ಗೆದ್ದ 2 ಐಷಾರಾಮಿ ಕಾರುಗಳಿವು

ಈ ಮರ್ಸಿಡಿಸ್-ಮೇಬ್ಯಾಕ್ ಜಿಎಲ್ಎಸ್ 600 ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಈ ಐಷಾರಾಮಿ ಎಸ್‌ಯುವಿ ಮಾದರಿಯು 4 ಮ್ಯಾಟಿಕ್ ಎನ್ನುವ ಒಂದೇ ಒಂದು ವೆರಿಯೆಂಟ್ ಹೊಂದಿದೆ. ಗ್ರಾಹಕರ ಬೇಡಿಕೆಯೆಂತೆ 4 ಸೀಟರ್ ಅಥವಾ 5 ಸೀಟರ್ ಮಾದರಿಯೊಂದಿಗೆ ಖರೀದಿ ಮಾಡಬಹುದಾಗಿದೆ. ಇನ್ನು ಈ ಮರ್ಸಿಡಿಸ್-ಮೇಬ್ಯಾಕ್ ಜಿಎಲ್ಎಸ್ 600 ಅತ್ಯಾಧುನಿಕ ಸೌಲಭ್ಯಗಳೊಂದಿಗೆ ತನ್ನ ಸರಣಿ ಕಾರುಗಳಲ್ಲಿಯೇ ವಿಭಿನ್ನವಾಗಿ ಗುರುತಿಸಿಕೊಂಡಿದೆ.

ಈ ವರ್ಷ ಬಾಲಿವುಡ್‌ ಸ್ಟಾರ್‌ಗಳ ಮನಸ್ಸು ಗೆದ್ದ 2 ಐಷಾರಾಮಿ ಕಾರುಗಳಿವು

ಸುಧಾರಿತ ತಂತ್ರಜ್ಞಾನ ಮತ್ತು ಹಲವಾರು ತಾಂತ್ರಿಕ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದೆ. ಇದರ ಒಳಗೆ ಮತ್ತು ಹೊರಗೆ ಬೆಸ್ಪೋಕ್ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಎಸ್‍ಯುವಿ ಮಾದರಿಯಲ್ಲಿ ವಿಶೇಷ ತಂತ್ರಜ್ಞಾನ ಪ್ರೇರಿತ ಇ-ಆಕ್ಟಿವ್ ಬಾಡಿ ಕಂಟ್ರೋಲ್ ಸಸ್ಪೆಂಕ್ಷನ್ ಸಿಸ್ಟಂ ಹೊಂದಿದ್ದು, ಫ್ರಂಟ್ ಕ್ಯಾಮೆರಾ ಮೂಲಕ ಕಾರು ಚಾಲನೆಯಲ್ಲಿರುವಾಗ ರಸ್ತೆಯನ್ನು ಸ್ಕ್ಯಾನ್ ಮಾಡುವ ಮೂಲಕ ಮತ್ತು ಸಸ್ಪೆಂಕ್ಷನ್ ಹೊಂದಾಣಿಕೆಯೊಂದಿಗೆ ಅಂಡರ್ ಬಾಡಿ ಡ್ಯಾಮೆಜ್ ತಪ್ಪಿಸಲು ನೆರವಾಗುತ್ತದೆ.

ಈ ವರ್ಷ ಬಾಲಿವುಡ್‌ ಸ್ಟಾರ್‌ಗಳ ಮನಸ್ಸು ಗೆದ್ದ 2 ಐಷಾರಾಮಿ ಕಾರುಗಳಿವು

ಈ ಎಸ್‍ಯುವಿಯಲ್ಲಿ 4.0 ಲೀಟರ್ ವಿ8 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 9 ಜಿ-ಟ್ರಾನಿಕ್ ಸ್ವಯಂಚಾಲಿತ ಗೇರ್‌ಬಾಕ್ಸ್‌ನೊಂದಿಗೆ 550ಬಿಎಚ್‌ಪಿ ಮತ್ತು 730ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಹೊಸ ಎಂಜಿನ್‌ನಲ್ಲಿ 21ಬಿಎಚ್‌ಪಿ ಮತ್ತು 249ಎನ್ಎಂ ಟಾರ್ಕ್ ಕೊಡುಗೆ ನೀಡುವ ಸಂಯೋಜಿತ ಇಕ್ಯೂ ಬೂಸ್ಟ್ ಸ್ಟಾರ್ಟರ್-ಜನರೇಟರ್ ಅನ್ನು ಸಹ ಹೊಂದಿದೆ. ಈ ಮರ್ಸಿಡಿಸ್-ಮೇಬ್ಯಾಕ್ ಜಿಎಲ್ಎಸ್ 600 ಎಸ್‍ಯುವಿಯು 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಈ ವರ್ಷ ಬಾಲಿವುಡ್‌ ಸ್ಟಾರ್‌ಗಳ ಮನಸ್ಸು ಗೆದ್ದ 2 ಐಷಾರಾಮಿ ಕಾರುಗಳಿವು

ಲ್ಯಾಂಬೊರ್ಗಿನಿ ಉರುಸ್

ಬಾಲಿವುಡ್ ತಾರೆಯರ ಮತ್ತೊಂದು ಮೆಚ್ಚಿನ ಕಾರು ಲ್ಯಾಂಬೊರ್ಗಿನಿ ಉರುಸ್ ಆಗಿದೆ, ಈ ಐಷಾರಾಮಿ ಸ್ಪೋರ್ಟ್ಸ್ ಎಸ್‌ಯುವಿಯನ್ನು ಈ ವರ್ಷ ಇಬ್ಬರು ಜನಪ್ರಿಯ ಬಾಲಿವುಡ್ ತಾರೆಗಳಾದ ಕಾರ್ತಿಕ್ ಆರ್ಯನ್ ಮತ್ತು ರಣವೀರ್ ಸಿಂಗ್ ಖರೀದಿಸಿದ್ದಾರೆ. ಇದು ರಣವೀರ್ ಸಿಂಗ್ ಅವರ ಎರಡನೇ ಲಂಬೋರ್ಗಿನಿ ಉರಸ್ ಆಗಿದೆ ಮತ್ತು ಇದು ಲ್ಯಾಂಬೊರ್ಗಿನಿ ಉರುಸ್ ಪರ್ಲ್ ಕ್ಯಾಪ್ಸುಲ್ ಎಡಿಷನ್ ಆಗಿದೆ, ಈ ಸ್ಪೆಷಲ್ ಎಡಿಷನ್ ಮಾದರಿಗೆ ಲಂಬೋರ್ಗಿನಿ ಉರಸ್‌ಗಿಂತ ರೂ.28 ಲಕ್ಷ ಹೆಚ್ಚು ದುಬಾರಿಯಾಗಿದೆ.

ಈ ವರ್ಷ ಬಾಲಿವುಡ್‌ ಸ್ಟಾರ್‌ಗಳ ಮನಸ್ಸು ಗೆದ್ದ 2 ಐಷಾರಾಮಿ ಕಾರುಗಳಿವು

ಕಾರ್ತಿಕ್ ಆರ್ಯನ್ ಬ್ಲ್ಯಾಕ್ ಬಣ್ಣದ ಲ್ಯಾಂಬೊರ್ಗಿನಿ ಉರುಸ್ ಎಸ್‍ಯುವಿಯನ್ನು ಆಯ್ಕೆಮಾಡಿದ್ದಾರೆ. ಈ ಐಷಾರಾಮಿ ಕಾರಿನ ಬೆಲೆಯು ರೂ.3.10 ಕೋಟಿಯಾಗಿದೆ. ಉರುಸ್ ಒಂದು ಸ್ಪೋರ್ಟಿ ಯುಟಿಲಿಟಿ ವಿನ್ಯಾಸವನ್ನು ಹೊಂದಿದೆ. ಈ ಲ್ಯಾಂಬೊರ್ಗಿನಿ ಉರುಸ್ ಫೋಕ್ಸ್‌ವ್ಯಾಗನ್ ಗ್ರೂಪ್‌ನ ಎಂಎಲ್‌ಬಿ ಇವೊ ಪ್ಲಾಟ್‌ಫಾರಂ ಅನ್ನು ಆಧರಿಸಿದೆ.

ಈ ವರ್ಷ ಬಾಲಿವುಡ್‌ ಸ್ಟಾರ್‌ಗಳ ಮನಸ್ಸು ಗೆದ್ದ 2 ಐಷಾರಾಮಿ ಕಾರುಗಳಿವು

ಲ್ಯಾಂಬೊರ್ಗಿನಿ ಉರುಸ್ ಸ್ಲಿಮ್ ಆಗಿರುವ ಎಲ್‌ಇಡಿ ಹೆಡ್‌ಲೈಟ್ ಹಾಗೂ ಟೇಲ್ ಲೈಟ್‌ಗಳನ್ನು ಹೊಂದಿದೆ. ಇದರಲ್ಲಿ 4.0 ಲೀಟರಿನ 8-ಸಿಲಿಂಡರ್ ಟ್ವಿನ್-ಟರ್ಬೊ ವಿ8 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 650 ಬಿಹೆಚ್‌ಪಿ ಪವರ್ ಹಾಗೂ 850 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಉರುಸ್ ಲ್ಯಾಂಬೊರ್ಗಿನಿ ಕಂಪನಿಯ ಅತ್ಯಂತ ಪವರ್ ಫುಲ್ ಕಾರುಗಳಲ್ಲಿ ಒಂದಾಗಿದೆ.

ಈ ವರ್ಷ ಬಾಲಿವುಡ್‌ ಸ್ಟಾರ್‌ಗಳ ಮನಸ್ಸು ಗೆದ್ದ 2 ಐಷಾರಾಮಿ ಕಾರುಗಳಿವು

ಈ ಲ್ಯಾಂಬೊರ್ಗಿನಿ ಉರುಸ್ ಕಾರಿನ ವಿನ್ಯಾಸವು ಲ್ಯಾಂಬೊರ್ಗಿನಿ ಹುರಾಕನ್ ಸೂಪರ್ ಕಾರ್ ನಿಂದ ಸ್ಫೂರ್ತಿ ಪಡೆದಿದೆ. ಈ ಎಸ್‌ಯುವಿಯಲ್ಲಿ 22 ಹಾಗೂ 23 ಇಂಚಿನ ಅಲಾಯ್ ವ್ಹೀಲ್'ಗಳನ್ನು ಅಳವಡಿಸಬಹುದು. ಉರುಸ್, ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಲ್ಯಾಂಬೊರ್ಗಿನಿ ಕಂಪನಿಯ ಕಾರ್ ಆಗಿದೆ.

Most Read Articles

Kannada
English summary
Two luxurious suvs owned by many bollywood celebrities find here more details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X