Just In
- 2 hrs ago
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- 7 hrs ago
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- 22 hrs ago
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- 23 hrs ago
ಟಾಟಾಗೆ ಸೆಡ್ಡು ಹೊಡೆಯಲು 6 ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಮಾರುತಿ ಸುಜುಕಿ
Don't Miss!
- Movies
ವಿಷ್ಣು ಸ್ಮಾರಕ ಲೋಕಾರ್ಪಣೆ: ಎರಡು ಕಿಲೋಮೀಟರ್ ಸಾಲು ಸಾಲು ವಾಹನದಲ್ಲಿ ವಿಷ್ಣು ಫ್ಯಾನ್ಸ್ ಜಾಥಾ
- Sports
IND vs NZ: ಮುಂದಿನ 2 ಪಂದ್ಯಗಳು ಈತನಿಗೆ ನಿರ್ಣಾಯಕ; ದಿನೇಶ್ ಕಾರ್ತಿಕ್ ಎಚ್ಚರಿಕೆ
- News
Breaking; ನಂದಿ ಹಿಲ್ಸ್ನಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿದ 112 ತಂಡ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Finance
7th Pay Commission update news: ಕೇಂದ್ರ ಬಜೆಟ್ನಲ್ಲಿ 8ನೇ ವೇತನ ಆಯೋಗದ ಬಗ್ಗೆ ಘೋಷಣೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪೈಲಟ್‌ಗಳ ಎಡವಟ್ಟು: ಲ್ಯಾಂಡಿಂಗ್ ವೇಳೆ ನಿದ್ರೆಗೆ ಜಾರಿ 25 ನಿಮಿಷ ಆಕಾಶದಲ್ಲೇ ರೌಂಡ್ ಹೊಡೆದ ವಿಮಾನ
ಸುಡಾನ್‌ನಿಂದ ಇಥಿಯೋಪಿಯಾಕ್ಕೆ ವಿಮಾನವನ್ನು ಹಾರಿಸುತ್ತಿದ್ದ ಇಬ್ಬರು ಪೈಲಟ್‌ಗಳು ವಿಮಾನವು ಸಮುದ್ರ ಮಟ್ಟದಿಂದ 37,000 ಅಡಿಗಳಷ್ಟು ಎತ್ತರದಲ್ಲಿದ್ದಾಗ ನಿದ್ರೆಗೆ ಜಾರಿ ಅವರ ಲ್ಯಾಂಡಿಂಗ್ ಪ್ರದೇಶವನ್ನು ದಾಟಿ ಬೇರೆಡೆಗೆ ಹೋಗಿದ್ದಾರೆ.
ಈ ಘಟನೆ ಸೋಮವಾರ (ಆಗಸ್ಟ್ 15) ನಡೆದಿದ್ದು, ಪೈಲಟ್‌ಗಳು ಯಾವುದೇ ಅನಾಹುತಕ್ಕೆ ಎಡೆಮಾಡಿಕೊಡದೆ ವಿಮಾನವನ್ನು ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ದಿ ಏವಿಯೇಷನ್ ಹೆರಾಲ್ಡ್ ವರದಿ ಮಾಡಿದೆ.

ಫ್ಲೈಟ್ ಇಟಿ-343 - ಬೋಯಿಂಗ್ 737 ವಿಮಾನವನ್ನು- ಅಡಿಸ್ ಅಬಾಬಾ ವಿಮಾನ ನಿಲ್ದಾಣದಲ್ಲಿ ಇಳಿಯಲು ನಿರ್ಧರಿಸಲಾಗಿತ್ತು. ಆದರೆ ವಿಮಾನವು ಫ್ಲೈಟ್ ಮ್ಯಾನೇಜ್‌ಮೆಂಟ್ ಕಂಪ್ಯೂಟರ್ (ಎಫ್‌ಎಂಸಿ) ಯೋಜಿತ ಮಾರ್ಗವನ್ನು ಅನುಸರಿಸದೇ ಸೂಚಿತ ಎತ್ತರಕ್ಕಿಂತ ಮೇಲಕ್ಕೆ ಹಾರಾಟ ನಡೆಸಿದೆ ಎಂದು ಹೆರಾಲ್ಡ್ ವರದಿ ಮಾಡಿದೆ.

ಪೈಲಟ್‌ಗಳು ದೀರ್ಘ ಸಮಯದವರೆಗೂ ನಿದ್ರಿಸುತ್ತಿದ್ದ ಕಾರಣ ವಿಮಾನವು ಆಟೋಪೈಲಟ್ ಮೋಡ್‌ನಲ್ಲಿ ಇತ್ತು. ಹಾಗಾಗಿ ಲ್ಯಾಂಡಿಂಗ್ ಪ್ರದೇಶ ಬಂದರು ಎಚ್ಚರಗೊಳ್ಳದಿದ್ದರಿಂದ ವಿಮಾನ ಏರ್‌ಪೋರ್ಟ್ ದಾಟಿಹೋಗಿದೆ. ಈ ವೇಳೆ ಏರ್ ಟ್ರಾಫಿಕ್ ಕಂಟ್ರೋಲರ್‌ಗಳು (ATC) ಅವರನ್ನು ಹಲವು ಬಾರಿ ಸಂಪರ್ಕಿಸಲು ಪ್ರಯತ್ನಿಸಿದರಾದರೂ ಪೈಲಟ್‌ಗಳು ಪ್ರತಿಕ್ರಿಯೆಯನ್ನು ಸ್ವೀಕರಿಸಿಲ್ಲ.

ವಿಮಾನವು ರನ್‌ವೇಯನ್ನು ದಾಟಿ ಹೋಗುತ್ತಿದ್ದಂತೆ ಆಟೋಪೈಲಟ್ ಸಂಪರ್ಕ ಕಡಿತಗೊಂಡು ಅಲಾರಾಂ ಸದ್ದು ಮಾಡಿದೆ. ಈ ಶಬ್ದವೇ ಅಂತಿಮವಾಗಿ ಪೈಲಟ್‌ಗಳನ್ನು ಎಚ್ಚರಗೊಳಿಸಿದೆ. ಕೂಡಲೇ ಅವರು ವಿಮಾನವನ್ನು ಹಿಡಿತಕ್ಕೆ ತೆಗೆದುಕೊಂಡು ಲ್ಯಾಂಡ್ ಆಗಬೇಕಿದ್ದ ರನ್‌ವೇಯನ್ನು ದಾಟಿಹೋದ ಸುಮಾರು 25 ನಿಮಿಷಗಳ ನಂತರ ಅದನ್ನು ಸುರಕ್ಷಿತವಾಗಿ ಇಳಿಸಿದ್ದಾರೆ.

ಹೆರಾಲ್ಡ್ ವರದಿಯು ಏವಿಯೇಷನ್ ಸರ್ವೆಲೆನ್ಸ್ ಸಿಸ್ಟಮ್ (ಎಡಿಎಸ್-ಬಿ) ನಿಂದ ಈ ಡೇಟಾವನ್ನು ಉಲ್ಲೇಖಿಸಿದೆ, ವಿಮಾನವು ರನ್‌ವೇಯನ್ನು ದಾಟಿಹೋದ ಬಳಿಕವಷ್ಟೇ ಏರ್‌ಪೋರ್ಟ್‌ಗೆ ಮರಳಿ ಬಂದು ಲ್ಯಾಂಡ್ ಆಗಿದೆ ಎಂದು ಹೇಳಿದೆ. ವಿಮಾನವು ಹಾರಾಟದ ವೇಳೆ ಲ್ಯಾಂಡ್ ಆಗದೇ ಆಕಾಶದಲ್ಲಿ ಅಡಿಸ್ ಅಬಾಬಾದ ಏರ್‌ಪೋರ್ಟ್ ಸುತ್ತ ತೆಗೆದ ಡಿ-ಟೂರ್ ಲೂಪ್ ಅನ್ನು ತೋರಿಸುವ ಚಿತ್ರವನ್ನು ವರದಿಯು ಹಂಚಿಕೊಂಡಿದೆ.

ಲ್ಯಾಂಡಿಂಗ್ ನಂತರ ವಿಮಾನವು ಅದರ ಮುಂದಿನ ಪ್ರಯಾಣಕ್ಕೆ ಹೊರಡುವ ಮೊದಲು ಸುಮಾರು ಎರಡೂವರೆ ಗಂಟೆಗಳ ಕಾಲ ನೆಲದ ಮೇಲೆ ಇತ್ತು. ವಿಮಾನಯಾನ ವಿಶ್ಲೇಷಕ ಅಲೆಕ್ಸ್ ಮಚೆರಾಸ್ ಈ ಘಟನೆಯ ಬಗ್ಗೆ ಟ್ವೀಟ್ ಮಾಡಿದ್ದು, ಲೂಪ್ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ.

ಅವರ ಟ್ವೀಟ್‌ನಲ್ಲಿ "ಆಫ್ರಿಕಾದ ಅತಿದೊಡ್ಡ ವಿಮಾನಯಾನ ಸಂಸ್ಥೆಯಲ್ಲಿನ ಈ ಘಟನೆಯ ಬಗ್ಗೆ ವಿವರಿಸುತ್ತಾ, ಇಥಿಯೋಪಿಯನ್ ಏರ್ಲೈನ್ಸ್ ಬೋಯಿಂಗ್ 737 #ET343 ವಿಮಾನ ಗಮ್ಯಸ್ಥಾನವಾದ ಅಡಿಸ್ ಅಬಾಬಾ ಏರ್‌ಪೋರ್ಟ್ ತಲುಪುವ ಹೊತ್ತಿಗೆ ಇನ್ನೂ 37,000 ಅಡಿ ಎತ್ತರದಲ್ಲಿಯೇ ಇತ್ತು. ಲ್ಯಾಂಡಿಂಗ್‌ಗಾಗಿ ಅದು ಏಕೆ ಇಳಿಯಲು ಪ್ರಾರಂಭಿಸಲಿಲ್ಲ? ಇಬ್ಬರೂ ಪೈಲಟ್‌ಗಳು ನಿದ್ರಿಸುತ್ತಿದ್ದಾರೆ" ಎಂದು ಪೋಸ್ಟ್ ಮಾಡಿದ್ದಾರೆ.

ಇದೇ ರೀತಿಯ ಮತ್ತೊಂದು ಘಟನೆಯು ಏಪ್ರಿಲ್‌ನಲ್ಲಿ ನ್ಯೂಯಾರ್ಕ್‌ನಿಂದ ರೋಮ್‌ಗೆ 250 ಪ್ರಯಾಣಿಕರನ್ನು ಹೊತ್ತಯ್ಯುತ್ತಿದ್ದ ವಿಮಾನವೊಂದರಲ್ಲಿ ಸಂಭವಿಸಿತ್ತು ಎಂದು ವರದಿಯಾಗಿದೆ. ಎಬಿಸಿ ನ್ಯೂಸ್ ಪ್ರಕಾರ, ಐಟಿಎ ಏರ್‌ವೇಸ್‌ನ ಇಬ್ಬರೂ ಪೈಲಟ್‌ಗಳು ಕಾಕ್‌ಪಿಟ್‌ನಲ್ಲಿ ಮಲಗಿದ್ದರು ಎಂದು ಪ್ರಕರಣದ ತನಿಖೆಯಿಂದ ತಿಳಿದುಬಂದಿದೆ.

ಏಕೆಂದರೆ ಅವರ ವಿಮಾನವು ಫ್ರಾನ್ಸ್ ಬಂದರೂ 38,000 ಅಡಿಗಳ ಎತ್ತರದಲ್ಲಿ ಇತ್ತು. ಒಬ್ಬ ಪೈಲಟ್ ತನ್ನ ಗೊತ್ತುಪಡಿಸಿದ ನಿದ್ರೆಯ ವಿರಾಮದ ಸಮಯದಲ್ಲಿ ಮಲಗಿದ್ದಾಗ, ವಿಮಾನದ ಕ್ಯಾಪ್ಟನ್ ಕೂಡ ನಿದ್ರಿಸಿರುವುದಾಗಿ ತನಿಖಾಧಿಕಾರಿಗಳು ಹೇಳಿದ್ದಾರೆ. ಈ ವೇಳೆ ಎಟಿಸಿ ಸುಮಾರು 10 ನಿಮಿಷಗಳ ಕಾಲ ವಿಮಾನದ ಸಂಪರ್ಕವನ್ನು ಕಳೆದುಕೊಂಡಿತ್ತು.

ಇದರಿಂದ ಗಾಬರಿಗೊಂಡಿದ್ದ ವಿಮಾನಯಾನ ಸಂಸ್ಥೆ ಭಯೋತ್ಪಾದಕ ಘಟನೆಯ ಭಯದ ನಡುವೆ ರಕ್ಷಣೆಗಾಗಿ ಯುದ್ಧ ವಿಮಾನಗಳನ್ನು ಸಹ ಸಿದ್ಧಪಡಿಸಿತು. ಕೊನೆಗೆ ಪೈಲಟ್‌ಗಳು ಅಂತಿಮವಾಗಿ ಪ್ರತಿಕ್ರಿಯಿಸಿದ ಬಳಿಕ ನಿಟ್ಟುಸಿರು ಬಿಟ್ಟರು.