ರೈಡ್ ರದ್ದುಗೊಳಿಸಿ 23 ಲಕ್ಷ ಗಳಿಸಬಹುದೇ? 70 ವರ್ಷದ ಊಬರ್ ಚಾಲಕನ ಮಾಸ್ಟರ್ ಪ್ಲಾನ್!
ಊಬರ್ ಕ್ಯಾಬ್ ಚಾಲಕನೊಬ್ಬ ರೈಡ್‌ಗಳನ್ನು ರದ್ದು ಮಾಡುವ ಮೂಲಕ 23 ಲಕ್ಷ ರೂಪಾಯಿ ಗಳಿಸಿದ ಸುದ್ದಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಮೆರಿಕಾದ ಊಬರ್ ಚಾಲಕನನೊಬ್ಬ ಈ ಬಗ್ಗೆ ವಿವರಿಸಿದ್ದು, ಶೇ 10 ರಷ್ಟು ರೈಡ್‌ಗಳನ್ನು ಮಾತ್ರ ಸ್ವೀಕರಿಸಿ ಉಳಿದ ರೈಡ್‌ಗಳನ್ನು ರದ್ದುಗೊಳಿಸುತ್ತಿದೆ ಎಂದು ಹೇಳಿದ್ದಾನೆ.
'ಗಿಲ್' ಈತ ಅಮೆರಿಕಾದ 70 ವರ್ಷದ ಊಬರ್ ಚಾಲಕ, ಅಲ್ಲಿನ ಮಾದ್ಯವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತನ್ನ ಕಾರ್ಯತಂತ್ರಗಳನ್ನು ಬಿಚ್ಚಿಟ್ಟಿದ್ದಾರೆ. ಕಳೆದ ಆರು ವರ್ಷಗಳಲ್ಲಿ ಬರೋಬ್ಬರಿ 1,500 ಕ್ಕೂ ಹೆಚ್ಚು Uber ಟ್ರಿಪ್‌ಗಳನ್ನು ರದ್ದುಗೊಳಿಸಿದ್ದಾರೆ. ದಿನದಲ್ಲಿ ಶೇ 10 ಕ್ಕಿಂತ ಕಡಿಮೆ ರೈಡ್‌ಗಳನ್ನು ಮಾತ್ರ ಸ್ವೀಕರಿಸಿ ಶೇ30 ಕ್ಕಿಂತ ಹೆಚ್ಚು ರೈಡ್‌ಗಳನ್ನು ರದ್ದುಗೊಳಿಸುತ್ತಿದ್ದೆ ಎಂದು ಬಹಿರಂಗಪಡಿಸಿದ್ದಾರೆ.

ಗಿಲ್ ಸ್ವೀಕರಿಸುವ ರೈಡ್‌ಗಳು ಅವರ ಸಮಯಕ್ಕೆ ಅನುಗುಣವಾಗಿವೆಯೇ ಎಂಬುದನ್ನು ನೋಡುತ್ತಾರೆ. ಹೆಚ್ಚಾಗಿ ಒನ್ ವೇ ರೈಡ್‌ಗಳನ್ನು ತಪ್ಪಿಸುತ್ತಾರೆ, ರಾತ್ರಿ 10 ರಿಂದ ಮಧ್ಯ ರಾತ್ರಿ 2.30 ರವರೆಗೆ ಪೀಕ್ ಸಮಯವಂತೆ. ಆ ಸಮಯದಲ್ಲಿ ಅವರು ಹೆಚ್ಚಾಗಿ ವಿಮಾನ ನಿಲ್ದಾಣಗಳು ಮತ್ತು ಬಾರ್‌ಗಳ ಸುತ್ತಲೂ ಸುತ್ತಾಡುತ್ತಾರೆ. ಈ ಸಮಯದಲ್ಲಿ ಈ ಎಲ್ಲಾ ನಿರ್ದಿಷ್ಟ ಸ್ಥಳಗಳು ಜನಸಂದಣಿಯಿಂದ ಕೂಡಿರುತ್ತವೆ.
ಉದಾಹರಣೆಗೆ 20 ನಿಮಿಷಗಳ ಸವಾರಿಗೆ ಸಾಮಾನ್ಯವಾಗಿ 10 ಡಾಲರ್ ವರೆಗೆ ವೆಚ್ಚವಾಗುತ್ತದೆ. ಆದರೆ ಪೀಕ್ ಅವರ್‌ಗಳಲ್ಲಿ ಇದು 20, 40 ಕೆಲವೊಮ್ಮೆ 50 ಡಾಲರ್‌ಗೆ ಏರುತ್ತದೆ. 50 ಡಾಲರ್‌ಗೆ ಸವಾರಿ ಮಾಡಿದರೆ ಚಾಲಕನಿಗೆ ಶೇ50 ಕಮಿಷನ್ ಸಿಗುತ್ತದೆ. ಅದೇ ರೀತಿ 35 ನಿಮಿಷದ ರೈಡ್ ಮಾಡಿದರೆ 30ರಿಂದ 60 ಡಾಲರ್ ಗಳಿಸಬಹುದು. ಆದ್ದರಿಂದ ಅವರು ಇಂತಹ ಹೆಚ್ಚಿನ ಸವಾರಿಗಳನ್ನು ಆಯ್ಕೆ ಮಾಡುತ್ತಿದ್ದರು.

ಜೊತೆಗೆ ಪೀಕ್ ಅವರ್‌ಗಳಲ್ಲಿ ಕಡಿಮೆ ದೂರದ ಪ್ರಯಾಣ ಕೂಡ ಹೆಚ್ಚಿನ ಹಣವನ್ನು ಗಳಿಸುತ್ತದೆ. ಹಾಗಾಗಿ ಅದನ್ನೇ ಆಯ್ಕೆ ಮಾಡುತ್ತಿದ್ದರು. ಕೆಲವೇ ಗಂಟೆಗಳ ಕೆಲಸ ಸಿಕ್ಕರೆ ಅಂತಹ ರೈಡ್‌ಗಳನ್ನು ರದ್ದುಪಡಿಸಿ, ಅಗತ್ಯ ರೈಡ್‌ಗಳನ್ನು ಮಾತ್ರ ಸ್ವೀಕರಿಸಿ ಉತ್ತಮ ಆದಾಯ ಪಡೆಯಬಹುದು ಎಂದು ಹೇಳಿದ್ದಾರೆ. ಈ ಮೂಲಕ ಇಲ್ಲಿಯವರೆಗೆ ಅವರು 23 ಲಕ್ಷಕ್ಕೂ ಹೆಚ್ಚು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
20 ಲಕ್ಷಕ್ಕಿಂತ ಹೆಚ್ಚಿನ ಸಂಬಳದ ಪ್ಯಾಕೇಜ್ ಪಡೆಯುವುದು ಇನ್ನೂ ಅನೇಕರಿಗೆ ಕನಸಾಗಿದೆ. ಐಐಟಿಯಿಂದ ಪದವಿ ಪಡೆದ ಉನ್ನತ ಎಂಜಿನಿಯರ್‌ಗಳು ಸಹ ಕೆಲವೊಮ್ಮೆ ಇಷ್ಟು ಸಂಬಳ ನೀಡುವ ಕೆಲಸವನ್ನು ಪಡೆಯಲು ವಿಫಲರಾಗುತ್ತಾರೆ. ಆದರೆ ಈ ಊಬರ್ ಚಾಲಕ ತನ್ನ ಹೆಚ್ಚಿನ ರೈಡ್‌ಗಳನ್ನು ರದ್ದುಗೊಳಿಸುವ ಮೂಲಕ 70 ರ ವಯಸ್ಸಿನಲ್ಲಿ 23 ಲಕ್ಷಕ್ಕೂ ಹೆಚ್ಚು ಹಣ ಗಳಿಸಿರುವುದು ಅಮೆರಿಕಾ ಜನರಲ್ಲಿ ಅಚ್ಚರಿ ಮೂಡಿಸಿದೆ.
ಬಿಲ್ ಹೇಳಿಕೆ: "ನಾನು ಪ್ರಯಾನಿಕರಿಗೆ ರೈಡ್ ಇಲ್ಲ ಎಂದೇ ಸಾಕಷ್ಟು ಸಮಯವನ್ನು ಕಳೆಯುತ್ತೇನೆ. ಪೀಕ್ ಅವರ್ ಹೊರತುಪಡಿಸಿ ಮಿಕ್ಕ ಸಮಯದಲ್ಲಿ ಕೆಲಸ ಮಾಡುವುದಿಲ್ಲ. ನಾವು ಮಾಡುವ ಪ್ರತಿ ಕೆಲಸದಲ್ಲೂ ಎಲ್ಲರಂತಲ್ಲದೇ ಪರ್ಯಾಯ ಮಾರ್ಗವನ್ನು ಕಂಡುಕೊಂಡು ಕಡಿಮೆ ಅವಧಿಯಲ್ಲಿ ಅದನ್ನು ಹೇಗೆ ಪೂರ್ಣಗೊಳಿಸಬಹುದು ಎಂಬುದನ್ನು ಪತ್ತೆಹಚ್ಚಬೇಕು. ಈ ಮೂಲಕ ಹೆಚ್ಚಿನ ಹಣ ಗಳಿಸಬಹುದು ಎಂದಿದ್ದಾರೆ.
ಅವರ ಪ್ರಕಾರ, ಡ್ರೈವಿಂಗ್ ವಲಯದಲ್ಲಿ ಪೀಕ್ ಅವರ್‌ಗಳನ್ನು ಹೆಚ್ಚಾಗಿ ಬಳಸಿಕೊಳ್ಳಬೇಕು, ಒನ್ ವೇ ರೈಡ್‌ಗಳನ್ನು ಸ್ವೀಕರಿಸಬಾರದು, ವಿಮಾನ ನಿಲ್ದಾಣ ಮತ್ತು ಬಾರ್‌ಗಳ ಆಸುಪಾಸಿನಲ್ಲಿ ಸುತ್ತಾಡಬೇಕು. ಆದರೆ ಭಾರತದಲ್ಲಿ ಈ ರೀತಿ ಗಳಿಸಲು ಸಾಧ್ಯವೇ? ನಮ್ಮ ಪ್ರಕಾರ ಭಾರತದಲ್ಲಿ ಅವಕಾಶಗಳು ತುಂಬಾ ಕಡಿಮೆ. ಅಮೆರಿಕದಲ್ಲನ ವಿಧಾನವೇ ಬೇರೆ ಭಾರತದಲ್ಲಿನ ವಿಧಾನಗಳೇ ಬೇರೆ, ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications