ಸಾಕು ಪ್ರಾಣಿಗಳ ಮಾಲೀಕರಿಗೆ ಭಯ ಬೇಡ... ಭರ್ಜರಿ ಆಫರ್ ಕೊಟ್ಟ ಊಬರ್!

ಭಾರತದ ಪ್ರಮುಖ ರೈಡ್‌ಶೇರಿಂಗ್ ಅಪ್ಲಿಕೇಶನ್‌ಗಳಲ್ಲಿ ಒಂದಾದ ಊಬರ್ (Uber), ಬೆಂಗಳೂರಿನ ತನ್ನ ಪ್ರಯಾಣಿಕರಿಗಾಗಿ ಹೊಸ 'ಉಬರ್ ಪೆಟ್' ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಈ ಹೊಸ ಉಪಕ್ರಮವು ಪ್ರಯಾಣಿಕರಿಗೆ ತಮ್ಮ ಪ್ರೀತಿಯ ಸಾಕುಪ್ರಾಣಿಗಳನ್ನು ತಮ್ಮೊಂದಿಗೆ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ನಾಯಿ ಅಥವಾ ಬೆಕ್ಕನ್ನು ಜೊತೆಗೆ ಕರೆತರುವ ಮಾಲೀಕರಿಗೆ ಮತ್ತು ಅವರ ಸಾಕುಪ್ರಾಣಿಗಳಿಗೆ ಆರಾಮದಾಯಕ ಅನುಭವವನ್ನು ಖಾತ್ರಿಪಡಿಸುವ ಆಯ್ಕೆಯನ್ನು ನೀಡುತ್ತದೆ. ಈ ಹೊಸ ಸೇವೆಯೊಂದಿಗೆ, ಸಾಕುಪ್ರಾಣಿ ಮಾಲೀಕರು ಒತ್ತಡ ಮುಕ್ತ ಪ್ರಯಾಣವನ್ನು ಆನಂದಿಸಬಹುದು ಎಂದು ಊಬರ್ ಭರವಸೆ ನೀಡಿದೆ.

ಈ ಹೊಸ ಉಬರ್ ಪೆಟ್ ಸೇವೆಯು ಪ್ರಯಾಣಿಕ ಸೌಕರ್ಯವನ್ನು ಖಾತ್ರಿಪಡಿಸುವುದು ಮಾತ್ರವಲ್ಲದೆ ಪ್ರಯಾಣದ ಸಮಯದಲ್ಲಿ ಸಾಕುಪ್ರಾಣಿಗಳಿಗೂ ಆರಾಮವನ್ನು ಒದಗಿಸುತ್ತದೆ. ಅಪ್ಲಿಕೇಷನ್‌ನಲ್ಲಿ ಊಬರ್ ಪೆಟ್ ಆಯ್ಕೆಯನ್ನು ಆರಿಸುವ ಮೂಲಕ, ಸಾಕುಪ್ರಾಣಿಗಳು ಪ್ರಯಾಣಿಸುತ್ತವೆ ಎಂದು ಚಾಲಕರಿಗೆ ಸೂಚನೆ ನೀಡಲಾಗುತ್ತದೆ. ಇದು ಸವಾರ ಮತ್ತು ಚಾಲಕ ಇಬ್ಬರಿಗೂ ಅನುಭವವನ್ನು ಸುಗಮವಾಗಿಸುತ್ತದೆ.

uber-pet-launched-in-bangalore-travel-with-your-furry-friends

ತಮ್ಮ ಸಾಕು ಪ್ರಾಣಿಗಳನ್ನು ಬಿಟ್ಟು ಹೋಗಲು ಇಷ್ಟಪಡದವರಿಗೆ ಊಬರ್ ಪೆಟ್ ಆಯ್ಕೆಯು ಅನುಕೂಲಕರ ಸಾರಿಗೆ ಆಯ್ಕೆಗಳನ್ನು ನೀಡುತ್ತದೆ. ಈ ಹೊಸ ಸೇವೆಯು Uber ಪ್ಲಾಟ್‌ಫಾರ್ಮ್‌ನಲ್ಲಿ ಚಾಲಕರಿಗೆ ಹೆಚ್ಚುವರಿ ಗಳಿಕೆಯ ಅವಕಾಶಗಳನ್ನು ಸಹ ನೀಡುತ್ತದೆ. Uber Pet ಸವಾರರು ಮತ್ತು ಚಾಲಕರಿಬ್ಬರಿಗೂ ಒಟ್ಟಾರೆ ಅನುಭವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಕಂಪನಿ ಹೇಳಿದೆ.

ಈ ಹೊಸ ಸೇವೆಯು ಬೆಂಗಳೂರಿನಲ್ಲಿ ಪ್ರಯಾಣವನ್ನು ಸಂಪರ್ಕಿಸಲು ಮತ್ತು ಹಂಚಿಕೊಳ್ಳಲು ಸುಲಭವಾಗುತ್ತದೆ. "ಸಾಕುಪ್ರಾಣಿಗಳು ತಮ್ಮ ಕುಟುಂಬಗಳಿಗೆ ಎಷ್ಟು ಮುಖ್ಯವೆಂದು ನಾವು ಅರ್ಥಮಾಡಿಕೊಂಡಿದ್ದೇವೆ. ಅವುಗಳನ್ನು ತಮ್ಮ ಪ್ರವಾಸಗಳಲ್ಲಿ ಸೇರಿಸುವುದು ಅತ್ಯಗತ್ಯ ಎಂದು ಉಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ರೈಡರ್ ವರ್ಟಿಕಲ್ಸ್ ಮುಖ್ಯಸ್ಥೆ ಶ್ವೇತಾ ಮಂತ್ರಿ ಹೇಳಿದರು.

uber-pet-launched-in-bangalore-travel-with-your-furry-friends

ಸಾಕುಪ್ರಾಣಿ ಮಾಲೀಕರು ಮತ್ತು ಅವರ ಸಹಚರರಿಗೆ ಪ್ರಯಾಣವನ್ನು ಹೆಚ್ಚು ಸುಲಭವಾಗಿ ಮತ್ತು ಅನುಕೂಲಕರವಾಗಿಸಲು Uber Pet ನಮ್ಮ ಪ್ರಯತ್ನವಾಗಿದೆ. ಸಾಕು ಪ್ರಾಣಿಗಳ ಮಾಲೀಕರಿಗೆ ಉತ್ತಮ ಅನುಭವವನ್ನು ಒದಗಿಸುವುದು ನಮ್ಮ ಗುರಿಯಾಗಿದೆ. ಜೊತೆಗೆ ಚಾಲಕರಿಗೆ ಹೆಚ್ಚುವರಿ ಗಳಿಕೆಯ ಅವಕಾಶಗಳನ್ನು ಸೃಷ್ಟಿಸುತ್ತದೆ, ಪ್ರತಿಯೊಬ್ಬರೂ ತಮ್ಮ ಪ್ರೀತಿಯ ಸಾಕುಪ್ರಾಣಿಗಳನ್ನು ತಮ್ಮ ಪ್ರಯಾಣದಲ್ಲಿ ಸೇರಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದರು.

Uber Pet ಬೆಂಗಳೂರಿನ ಸವಾರರಿಗಾಗಿ Uber ಅಪ್ಲಿಕೇಶನ್‌ನಲ್ಲಿ ಮೀಸಲು-ಮಾತ್ರ ಆಯ್ಕೆಯಾಗಿ ಪ್ರತ್ಯೇಕವಾಗಿ ಲಭ್ಯವಿರುತ್ತದೆ. ಸವಾರರು ತಮ್ಮ ರೈಡ್‌ಗಳನ್ನು 60 ನಿಮಿಷದಿಂದ 90 ದಿನಗಳವರೆಗೆ ಮುಂಚಿತವಾಗಿ ಕಾಯ್ದಿರಿಸಬಹುದು. ಉಬರ್ ಪೆಟ್ ಸೇವೆಯನ್ನು ಮುಂಬರುವ ದಿನಗಳಲ್ಲಿ ಭಾರತದ ಇತರ ನಗರಗಳಿಗೂ ಪರಿಚಯಿಸುವ ಸಾಧ್ಯತೆ ಇದೆ.

ಈವರೆಗೆ ಟ್ಯಾಕ್ಸಿ ಸೇವೆಗಳಲ್ಲಿ ಸಾಕುಪ್ರಾಣಿಗಳನ್ನು ಕರೆದೊಯ್ಯುವ ಅವಕಾಶವಿಲ್ಲದೆ ಹಲವರು ಪರದಾಡುವಂತಾಗಿತ್ತು. ಇಷ್ಟವಿದ್ದರೂ ತಮ್ಮ ಸಾಕುಪ್ರಾಣಿಗಳನ್ನು ಮನೆಗಳಲ್ಲಿಯೇ ಒಬ್ಬಂಟಿಯಾಗಿ ಬಿಟ್ಟು ಹೋಗುವಂತಹ ಪರಿಸ್ಥಿತಿಯಿತ್ತು. ಈಗ ಊಬರ್ ನೀಡಿರುವ ಹೊಸ ಪೆಟ್ ಆಯ್ಕೆಯು ಸಾಕು ಪ್ರಾಣಿ ಮಾಲೀಕರಿಗೆ ವರವಾಗಲಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, October 8, 2024, 13:31 [IST]
English summary
Uber pet launched in bangalore travel with your furry friends
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+