Uber ಟ್ಯಾಕ್ಸಿ ಡ್ರೈವರ್‌ನ ಮೋಸವನ್ನು ಬಯಲಿಗೆಳೆದ ಯುವಕ: ಬುಕ್ ಮಾಡೋ ಮುನ್ನ ಯುವಕನ ಸಲಹೆ ಕೇಳಿ

ಬೆಂಗಳೂರು ಟ್ಯಾಕ್ಸಿ ಚಾಲಕರ ಮೋಸಗಳು ನಗರದಲ್ಲಿ ಹೆಚ್ಚಾಗುತ್ತಿವೆ. ಯಾವುದೋ ಒಂದು ಕಾರಣ ಹೇಳಿ ಪ್ರಯಾಣಿಕರಿಂದ ಹೆಚ್ಚಿನ ಹಣ ಪೀಕುತ್ತಿರುವುದು ಇದೀಗ ಬಯಲಾಗಿದೆ. ಎಲ್ಲವನ್ನೂ ಸರಿಯಾಗಿ ಪರಿಶೀಲಿಸಿ ಉಬರ್ ಬುಕ್ ಮಾಡಿದ್ರೂ ಡ್ರೈವರ್‌ ಹೇಗೆ ಹೆಚ್ಚಿನ ಹಣ ಪಡೆದ ಎಂದು ಯುವಕನೊಬ್ಬ ತನ್ನ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.

ಯುವಕ ತನಗಾದ ಮೋಸವನ್ನು Reddit (ಸಾಮಾಜಿಕ ಜಾಲತಾಣ) ನಲ್ಲಿ ಹಂಚಿಕೊಂಡಿದ್ದಾನೆ. ಟ್ಯಾಕ್ಸಿ ಡ್ರೈವರ್‌ಗಳಲ್ಲಿ, ವಿಶೇಷವಾಗಿ Uber ಮತ್ತು Ola ನಂತಹ ರೈಡ್-ಶೇರಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಬೆಳೆಯುತ್ತಿರುವ ಹಗರಣವನ್ನು ಬಯಲಿಗೆಳೆದಿದ್ದಾನೆ. ಯುವಕನ ತಾಯಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ T2 (ಟರ್ಮಿನಲ್ 2) ವಿಮಾನ ನಿಲ್ದಾಣದಿಂದ ಪ್ರಯಾಣಿಸಲು ಉಬರ್ ಬುಕ್ ಮಾಡಿದ್ದರು.

uber-taxi-drivers-scam-young-man-exposes

ವಿಮಾನ ನಿಲ್ದಾಣದ ಆವರಣದಲ್ಲಿ ತಮ್ಮ ಡ್ರಾಪ್ ಮಾಡಬೇಕಾದ ಸ್ಥಳದ ಬಗ್ಗೆ ಚಾಲಕ ದಾರಿತಪ್ಪಿಸಲು ಯತ್ನಿಸಿದ್ದಾನೆ ಎಂಬುದು ಯುವಕನ ಆರೋಪ. ಈ ಪ್ರಕರಣದಲ್ಲಿ ಪ್ರಯಾಣಿಕರು Uber ಅಪ್ಲಿಕೇಶನ್‌ನಲ್ಲಿ T2 (ಟರ್ಮಿನಲ್ 2) ಅನ್ನು ಗಮ್ಯಸ್ಥಾನವಾಗಿ ಆಯ್ಕೆ ಮಾಡಿದರೂ, T1 (ಟರ್ಮಿನಲ್ 1) ಗೆ ಪ್ರಯಾಣಿಕರನ್ನು ಕರೆದೊಯ್ದು ಬಿಟ್ಟಿದ್ದಲ್ಲದೇ ಟರ್ಮಿನಲ್ 2 ಗೆ ಬಿಡಬೇಕಂದ್ರೆ ಹೆಚ್ಚಿನ ಹಣ ಪಾವತಿಸಲು ಹೇಳಿದ್ದಾನೆ.

T2 ಗೆ ಪ್ರಯಾಣಿಕರನ್ನು ಸಾಗಿಸಲು 75 ರೂ. ಹೆಚ್ಚುವರಿ ಶುಲ್ಕವನ್ನು ಕೇಳಿದ್ದಾನೆ. ಈ ತೊಂದರೆದಾಯಕ ಪ್ರವೃತ್ತಿಯು ಪ್ರಯಾಣಿಕರಲ್ಲಿ ಕಳವಳವನ್ನು ಹುಟ್ಟುಹಾಕಿದೆ. ವಿಮಾನ ನಿಲ್ದಾಣಗಳಲ್ಲಿ ಟ್ಯಾಕ್ಸಿಗಳನ್ನು ಬಳಸುವಾಗ ಜಾಗರೂಕತೆಯ ಅಗತ್ಯವನ್ನು ಒತ್ತಿಹೇಳಿದೆ. ನಾವು ಎಲ್ಲವನ್ನೂ ತಪ್ಪಿಲ್ಲದೇ ಮಾಡಿದ್ರೂ ಯಾಮಾರಿಸಿ ಹಣ ಪೀಕಿರುವುದು ಇಲ್ಲಿ ಸ್ಪಷ್ಟವಾಗಿದೆ.

uber-taxi-drivers-scam-young-man-exposes

ಅಲ್ಲದೇ ಇಲ್ಲಿ ನಾವು ಕೂಡ ಎಚ್ಚರಿಕೆಯಿಂದ ಇರಬೇಕು, ಏಕೆಂದರೆ ಸರಿಯಾದ ಟರ್ಮಿನಲ್ ಬಗ್ಗೆ ಪ್ರಯಾಣಿಕರ ಖಚಿತತೆಯ ಹೊರತಾಗಿಯೂ, ಇದು ತಪ್ಪಾಗಿದೆಯೇನೋ ಎಂದು ಶಂಕಿಸಿ ಹೆಚ್ಚುವರಿ ಮೊತ್ತವನ್ನು ಪಾವತಿಸಲು ಆಕೆ ಒಪ್ಪಿಕೊಂಡಿದ್ದಾರೆ. ವಿಮಾನ ನಿಲ್ದಾಣವನ್ನು ಪ್ರವೇಶಿಸಿದ ನಂತರ, ಆಕೆ Uber ಅಪ್ಲಿಕೇಶನ್ ಅನ್ನು ಪರಿಶೀಲಿಸಿದ್ದು, ಚಾಲಕ ಹೇಳಿಕೊಂಡಂತೆ ಆಕೆಯ ಮೂಲ ಬುಕಿಂಗ್ ನಿಜವಾಗಿಯೂ T2 ಆಗಿರುವುದು ಕಂಡುಬಂದಿದೆ.

ಯುವಕ ಈ ಹಗರಣದ ಬಗ್ಗೆ ಜಾಗೃತಿ ಮೂಡಿಸಲು ಈ ಘಟನೆಯನ್ನು ಹಂಚಿಕೊಂಡಿದ್ದಾರೆ. ವಿಮಾನ ನಿಲ್ದಾಣಕ್ಕೆ ಹೋಗುವಾಗ ಪ್ರಯಾಣಿಕರು ಜಾಗರೂಕರಾಗಿರಿ ಎಂದು ಎಚ್ಚರಿಸಿದ್ದಾರೆ. ತಮ್ಮ ತಾಯಿ ಉಬರ್‌ಗೆ ದೂರು ಸಲ್ಲಿಸಿದ್ದು, ಉಬರ್‌ನಿಂದ ಅವರ ಹಣವನ್ನು ವಾಪಸ್ ನೀಡಲಾಗಿದೆ. ಆದ್ರೆ ಇದೇ ಮುಂದುವರಿದ್ರೆ ವಂಚನೆ ಬಗ್ಗೆ ತಿಳಿಯದೆ ಅದೆಷ್ಟೋ ಮಂದಿ ಮೋಸಹೋಗುತ್ತಾರೆ.

uber-taxi-drivers-scam-young-man-exposes

ವಿಚಿತ್ರವೆಂಬಂತೆ ರೆಡ್ಡಿಟ್‌ನಲ್ಲಿ ಹಲವರು ಇದೇ ರೀತಿಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇದರ ಬದಲು ಮೂಲತಃ ಕಾಯ್ದಿರಿಸಿದ ಸ್ಥಳದಲ್ಲಿ ಪ್ರಯಾಣಿಕರನ್ನು ಬಿಡಲು ಚಾಲಕನನ್ನು ಕೇಳಿಕೊಳ್ಳುವುದು ಮತ್ತು ಅಗತ್ಯವಿದ್ದರೆ ಟರ್ಮಿನಲ್‌ಗಳ ನಡುವೆ ಉಚಿತ ಶಟಲ್ ಸೇವೆಗಳ ಲಾಭವನ್ನು ಪಡೆದುಕೊಳ್ಳುವುದು ಉತ್ತಮವೆಂದು ಕೆಲ ರೆಡ್ಡಿಟ್ ಬಳಕೆದಾದರರು ಸಲಹೆಗಳನ್ನು ನೀಡಿದರು.

ಈ ಘಟನೆಯಿಂದ ನಾವು ತಿಳಿಯಬೇಕಾಗಿರುವುದು ಏನೆಂದರೆ ಪ್ರಯಾಣಿಕರು ತಮ್ಮ ಪ್ರಯಾಣದ ವಿವರಗಳನ್ನು ಅಪ್ಲಿಕೇಶನ್‌ನಲ್ಲಿ ಎರಡು ಬಾರಿ ಪರಿಶೀಲಿಸುವುದು ತುಂಬಾ ಮುಖ್ಯ. ಚಾಲಕರು ನಮ್ಮನ್ನು ಯಾಮಾರಿಸಲು ಯತ್ನಿಸಿದರೂ ಗಾಬರಿಗೊಳ್ಳದೇ ನಿಧಾನವಾಗಿ ಪರಿಶೀಲಿಸಿ ಅವರಿಗೆ ಉತ್ತರಿಸಬೇಕು. ಒಂದು ವೇಳೆ ಚಾಲಕರು ಬೇಕಂತಲೆ ಮೋಸಕ್ಕೆ ಮುಂದಾಗಿ ದಬ್ಬಾಳಿಕೆ ಮಾಡಿದ್ರೆ ಕೂಡಲೇ ಸ್ಥಳೀಯ ಪೊಲಿಸರಿಗೆ ದೂರು ನೀಡುವುದು ಉತ್ತಮ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, September 22, 2023, 12:51 [IST]
English summary
Uber taxi drivers scam young man exposes
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+