ಚಾಲಕರ-ಪಾಲುದಾರರ ನೆರವಿಗೆ ಮುಂದಾದ ಉಬರ್
ಆನ್‌ಲೈನ್ ಕ್ಯಾಬ್ ಸೇವಾ ಕಂಪನಿಯಾದ ಉಬರ್ ತನ್ನ ಎಲ್ಲ ಕ್ಯಾಬ್ ಚಾಲಕರಿಗೆ ಹಾಗೂ ರೈಡ್ ಪಾಲುದಾರರಿಗೆ ಭಾರತದಲ್ಲಿ ನೆರವು ನೀಡುವುದಾಗಿ ಘೋಷಿಸಿದೆ.

ಇದಕ್ಕಾಗಿ ಕಂಪನಿಯು ರೂ.25 ಕೋಟಿಗಳ ಮೊತ್ತವನ್ನು ಉಬರ್ ಕೇರ್ ಡ್ರೈವರ್ ಫಂಡ್‌ನಲ್ಲಿ ಜಮಾ ಮಾಡಿದೆ. ಸದ್ಯಕ್ಕೆ ಉಬರ್ ಕಂಪನಿಯು ತನ್ನ ಉದ್ಯೋಗಿಗಳಿಂದ, ಷೇರುದಾರರಿಂದ ಹಾಗೂ ಹೂಡಿಕೆದಾರರಿಂದ ಹೆಚ್ಚುವರಿಯಾಗಿ ರೂ.25 ಕೋಟಿಗಳನ್ನು ಸಂಗ್ರಹಿಸುತ್ತಿದೆ.

ಈ ಬಗ್ಗೆ ಮಾತನಾಡಿರುವ ಉಬರ್ ಇಂಡಿಯಾ ಹಾಗೂ ದಕ್ಷಿಣ ಏಷ್ಯಾ ಅಧ್ಯಕ್ಷರಾದ ಪ್ರದೀಪ್ ರಾಮೇಶ್ವರನ್‌ರವರು ನೇರ ವರ್ಗಾವಣೆಯ ಮೂಲಕ ಈ ಹಣವನ್ನು ಚಾಲಕರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಲಾಕ್‌ಡೌನ್ ಹಿನ್ನೆಲೆಯಲ್ಲಿ ಕ್ಯಾಬ್ ಚಾಲಕರು ಕೆಲಸವಿಲ್ಲದೇ ತಮ್ಮ ಆದಾಯವನ್ನು ಕಳೆದುಕೊಂಡಿದ್ದಾರೆ ಎಂದು ಅವರು ಹೇಳಿದರು. ಈ ಹಣದಿಂದಾಗಿ ಕ್ಯಾಬ್ ಚಾಲಕರು ತಮ್ಮ ಹಾಗೂ ತಮ್ಮ ಕುಟುಂಬದ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗಲಿದೆ.

ಆದರೆ ಈ ಅನುದಾನದಿಂದ ಎಷ್ಟು ಜನ ಚಾಲಕ-ಪಾಲುದಾರರು ಲಾಭ ಪಡೆಯಲಿದ್ದಾರೆ ಎಂಬುದನ್ನು ಉಬರ್ ಕಂಪನಿಯು ಬಹಿರಂಗಪಡಿಸಿಲ್ಲ. ಅಲ್ಲದೆ, ಪ್ರತಿಯೊಬ್ಬ ವ್ಯಕ್ತಿಗೆ ಎಷ್ಟು ಹಣವನ್ನು ನೀಡಲಾಗುವುದು ಎಂಬುದನ್ನೂ ಸಹ ಬಹಿರಂಗಪಡಿಸಲಾಗಿಲ್ಲ.
MOST READ:ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ಲಾಕ್‌ಡೌನ್ ಕಾರಣಕ್ಕೆ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಅನೇಕ ಮೆಟ್ರೋ ನಗರಗಳಲ್ಲಿ ಔಷಧಿಗಳು ಹಾಗೂ ಅಗತ್ಯ ಸರಕುಗಳ ವಿತರಣೆಗಾಗಿ ಉಬರ್ ಕಂಪನಿಯು ಉಬರ್ ಮೆಡಿಸಿನ್ ಹಾಗೂ ಉಬರ್ ಎಸೆನ್ಷಿಯಲ್ ಸೇವೆಗಳನ್ನು ಆರಂಭಿಸಿದೆ.

ಡಯಾಲಿಸಿಸ್ ಹಾಗೂ ಸರ್ಜರಿಯಂತಹ ಸಮಸ್ಯೆಯನ್ನು ಎದುರಿಸುತ್ತಿರುವ ರೋಗಿಗಳಿಗಾಗಿ ಹಾಗೂ ವಯಸ್ಸಾದವರಿಗಾಗಿ ಉಬರ್ ಕಂಪನಿಯು ವಿಶೇಷ ಸೇವೆಯನ್ನು ಆರಂಭಿಸಿದೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಉಬರ್ ಕಂಪನಿಯು ಮಾತ್ರವಲ್ಲದೇ ಓಲಾ ಹಾಗೂ ಬೈಕ್ ಟ್ಯಾಕ್ಸಿ ಸೇವೆಯನ್ನು ನೀಡುವ ರಾಪಿಡೊ ಕಂಪನಿಗಳು ಸಹ ಅಗತ್ಯ ವಸ್ತುಗಳನ್ನು ತಲುಪಿಸುತ್ತಿವೆ. ವೈದ್ಯರನ್ನು ಆಸ್ಪತ್ರೆಗೆ ಹಾಗೂ ಮನೆಗೆ ತಲುಪಿಸಲು ಓಲಾ ಸೇವೆಗಳನ್ನು ಆರಂಭಿಸಿದೆ.


Click it and Unblock the Notifications