ಉಡುಪಿಯಲ್ಲಿ ಅಪರೂಪದ ಮದುವೆ ದಿಬ್ಬಣ: JCB ಏರಿ ಮನೆಗೆ ಬಂದರು ನವಜೋಡಿ.. ಏನು ಅರೇಂಜ್ಮೆಂಟ್‌!

ಮದುವೆ (Marriage) ಅಂದರೆ ಗಂಡು - ಹೆಣ್ಣಿನ ಮನೆಯಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ವಿವಾಹದ ಸಂತೋಷವನ್ನು ಮತ್ತಷ್ಟು ಹೆಚ್ಚಿಸಲು ತಮಾಷೆಯಿಂದ ಕೂಡಿದ ಸಮಾರಂಭವನ್ನು ಆಯೋಜಿಸುವುದು ಇತ್ತೀಚಿನ ದಿನಗಳಲ್ಲಿ ಹೊಸ ಪ್ರವೃತ್ತಿಯಾಗಿ ಬೆಳೆಯುತ್ತಿದೆ. ಅಂತಹ ಹಲವು ವಿಡಿಯೋಗಳು ಆಗಾಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿರುತ್ತವೆ.

ಉಡುಪಿ (Udupi) ಜಿಲ್ಲೆಯ ಬ್ರಹ್ಮಾವರ (Bramavara)ದಲ್ಲಿ ಜೋಡಿಯೊಂದು ವಿಭಿನ್ನವಾಗಿ ಮದುವೆಯಾಗಿ ಭಾರೀ ಸುದ್ದಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿವಾಹ ಸಮಾರಂಭದ ವಿಡಿಯೋವನ್ನು ನೋಡಿದವರೂ ಹೀಗೂ ಮದುವೆ ಆಗುತ್ತಾರೆಯೇ ಎಂದು ಹೇಳುತ್ತಿದ್ದಾರೆ. ಮಿಥುನ್, ಪೂಜಾ ಎಂಬುವವರ ವಿವಾಹ ಸಮಾರಂಭ ಅದ್ದೂರಿಯಾಗಿ ನಡೆದಿದ್ದು, ಸ್ನೇಹಿತರು ಮಾಡಿದ್ದ ಅರೇಂಜ್ಮೆಂಟ್‌ ಕಂಡು ಹೊಸ ಜೋಡಿ ಫುಲ್ ಖುಷಿಯಾಗಿದ್ದಾರೆ.

ಉಡುಪಿಯಲ್ಲಿ ಅಪರೂಪದ ಮದುವೆ ದಿಬ್ಬಣ: JCB ಏರಿ ಮನೆಗೆ ಬಂದರು ನವಜೋಡಿ.. ಏನು ಅರೇಂಜ್ಮೆಂಟ್‌!

ಸಾಮಾನ್ಯವಾಗಿ ಮದುವೆ ಮುಗಿದಾಗ ಕಲ್ಯಾಣ ಮಂಟಪದಿಂದ ವಧು - ವರರನ್ನು ಅಲಂಕೃತಗೊಂಡ ತೆರದ ಕಾರಿನಲ್ಲಿ ಗಂಡಿನ ಮನೆವರೆಗೂ ಮೆರವಣಿಗೆ ಮಾಡುವುದನ್ನು ಕಂಡಿದ್ದೇವೆ. ಆದರೆ ಈ ವಿವಾಹ ಸಮಾರಂಭದಲ್ಲಿ ನವ ದಂಪತಿ, ವರನ ಮನೆಗೆ ತೆರಳಲು ಜೆಸಿಬಿ (JCB) ವ್ಯವಸ್ಥೆ ಮಾಡಲಾಗಿತ್ತು. ಹೂವಿನಿಂದ ಸಿಂಗಾರಗೊಂಡ ಜೆಸಿಬಿ ಮುಂಭಾಗ ವಿಶೇಷವಾದ ಸೋಫಾವನ್ನು ಜೋಡಿಸಿ, ಅದರ ಮೇಲೆ ವಧು - ವರರನ್ನು ಕುರಿಸಿ ಮೆರವಣಿಗೆ ಮಾಡಲಾಯಿತು.

ರಸ್ತೆಯುದ್ದಕ್ಕೂ ನವ ದಂಪತಿ ಸ್ನೇಹಿತರೂ ಭರ್ಜರಿಯಾಗಿ ನೃತ್ಯ ಮಾಡಿ ಸಂಭ್ರಮಿಸಿದರು. ಈ ವಿವಾಹ ಸಮಾರಂಭದ ಮತ್ತೊಂದು ಆಕರ್ಷಣೆ ಎಂದರೆ, ಮದುವೆ ಶಾಸ್ತ್ರಗಳು ಮಗಿಯುತ್ತಿದ್ದಂತೆ ವಧು - ವರರ ಸ್ನೇಹಿತರು ಕೋಳಿ ಕಾಳಗವನ್ನು ಆಯೋಜಿಸಿರುವುದು. ಗಂಡಿನ ಹಾಗೂ ಹೆಣ್ಣಿನ ಕಡೆಯಿಂದ ಒಂದೊಂದು ಕೋಳಿಗಳನ್ನು ಅಂಕಣಕ್ಕೆ ಇಳಿಸಲಾಗಿತ್ತು. ವರ ಮಿಥುನ್‌ಗೆ 'ಕೋಳಿ ಅಂಕ'ಕ್ಕೆ ಹೋಗುವ ಹವ್ಯಾಸವಿರುವವರಿಂದ ಗೆಳೆಯರು ಈ ಬಿಗ್ ಸರ್ಪ್ರೈಸ್ ನೀಡಿದ್ದಾರೆ.

ಉಡುಪಿಯಲ್ಲಿ ಅಪರೂಪದ ಮದುವೆ ದಿಬ್ಬಣ: JCB ಏರಿ ಮನೆಗೆ ಬಂದರು ನವಜೋಡಿ.. ಏನು ಅರೇಂಜ್ಮೆಂಟ್‌!

ಕರಾವಳಿ ಭಾಗದಲ್ಲಿ ಜೆಸಿಬಿಯಲ್ಲಿ ಮದುವೆ ದಿಬ್ಬಣ ಹೋಗಿರುವುದು ಇದೇ ಮೊದಲೇನೋ ಅಲ್ಲ. 2018ರಲ್ಲಿಯೂ ದಕ್ಷಿಣ ಕನ್ನಡ (Dakshina kannada) ಜಿಲ್ಲೆಯ ಪುತ್ತೂರಿನಲ್ಲಿ ಈ ರೀತಿಯ ವಿವಾಹ ಸಂಭ್ರಮವೊಂದು ನಡೆದಿತ್ತು. ಆ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಸಂಟ್ಯಾರ್ ನಿವಾಸಿಯಾಗಿದ್ದ ಜೆಸಿಬಿ ಆಪರೇಟರ್ ಚೇತನ್ ಎಂಬುವವರೂ ತಮ್ಮ ಮದುವೆ ಶಾಸ್ತ್ರಗಳು ಮುಗಿದ ಬಳಿಕ, ಮನೆಗೆ ಅದರಲ್ಲಿಯೇ ಹೋಗುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಉತ್ತರಭಾರತದ ಹಲವು ರಾಜ್ಯಗಳಲ್ಲಿ ಚಳಿಗಾಲದ ಸಂದರ್ಭದಲ್ಲಿ ಹಿಮಪಾತವಾಗುವುದು ಸರ್ವೇ ಸಾಮಾನ್ಯ. ಕಳೆದ ವರ್ಷ ಹಿಮಪಾತದ ನಡುವೆ ವರನೊಬ್ಬ ಜೆಸಿಬಿಯಲ್ಲಿ ಬಂದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಹಲ್ - ಚಲ್ ಸೃಷ್ಟಿಸಿತ್ತು. ಅದಕ್ಕೂ ಮುನ್ನ, ವಧು - ವರರಿಬ್ಬರೂ ಜೆಸಿಬಿಯನ್ನು ಓಡಿಸಿಕೊಂಡು ಕಲ್ಯಾಣ ಮಂಟಪಕ್ಕೆ ತೆರಳಿದ್ದ ವಿಡಿಯೋವನ್ನು ಪಾಕಿಸ್ತಾನದ ಪತ್ರಕರ್ತರೊಬ್ಬರು ಹಂಚಿಕೊಂಡಿದ್ದರು.

ಉಡುಪಿಯಲ್ಲಿ ಅಪರೂಪದ ಮದುವೆ ದಿಬ್ಬಣ: JCB ಏರಿ ಮನೆಗೆ ಬಂದರು ನವಜೋಡಿ.. ಏನು ಅರೇಂಜ್ಮೆಂಟ್‌!

ಇನ್ನು, ಮದುವೆಯಲ್ಲಿ ವಿಭಿನ್ನವಾದ ಈವೆಂಟ್ ಆಯೋಜಿಸುವುದು ಒಂದೆರೆಡು ವರ್ಷಗಳಿಂದ ಟ್ರೆಂಡ್ ಆಗಿ ಮಾರ್ಪಟ್ಟಿದೆ. ಅದರಲ್ಲೂ ಕೆಲವೊಂದು ಪ್ರಿ - ವೆಡ್ಡಿಂಗ್ ಫೋಟೋಶೂಟ್‌ಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುವುದನ್ನು ಕಂಡಿದ್ದೇವೆ. ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದ ಈ ವಿವಾಹ ಸಮಾರಂಭದ ವಿಡಿಯೋವನ್ನು ಹಲವು ನೆಟ್ಟಿಗರು ತಮ್ಮ ಖಾತೆಯಲ್ಲಿ ಶೇರ್ ಮಾಡುತ್ತಿದ್ದು, ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, December 13, 2023, 13:20 [IST]
English summary
Udupi special marriage new bride moved in jcb to groom house full viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+