ವಿಮಾನಯಾನ ಕಂಪನಿಯನ್ನೂ ಕಾಡಿದ ಕರೋನಾ ವೈರಸ್..!

ಯುನೈಟೆಡ್ ಕಿಂಗ್‍‍ಡಮ್‍‍ನ ಅತಿ ದೊಡ್ಡ ವಿಮಾನಯಾನ ಕಂಪನಿಗಳಲ್ಲಿ ಒಂದಾದ ಫ್ಲೈಬಿ ಗುರುವಾರ ವಿಶ್ವದ್ಯಾಂತ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಕರೋನಾ ವೈರಸ್‍‍ನಿಂದ ಭಾರೀ ಪ್ರಮಾಣದ ನಷ್ಟ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ. ಕಂಪನಿಯಲ್ಲಿರುವ ಎಲ್ಲಾ ವಿಮಾನಗಳನ್ನು ರದ್ಧುಗೊಳಿಸಲಾಗಿದೆ.

ವಿಮಾನಯಾನ ಕಂಪನಿಯನ್ನೂ ಕಾಡಿದ ಕರೋನಾ ವೈರಸ್..!

ಫ್ಲೈಬಿ ವೆಬ್‍‍ಸೈಟ್‍‍ನಲ್ಲಿ ತನ್ನ ಪ್ರಯಾಣಿಕರಿಗೆ ಪರ್ಯಾಯ ವಿಮಾನ ವ್ಯವಸ್ಥೆಯನ್ನು ಮಾಡಲು ಸಾಧ್ಯವಿಲ್ಲವೆಂದು ತಿಳಿಸಿದೆ. ಎಲ್ಲಾ ವಿಮಾನಗಳನ್ನು ನಿಲ್ಲಿಸಲಾಗಿದ್ದು, ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ. ಯುಕೆ ಸರ್ಕಾರವು ತೆರಿಗೆ ವಿನಾಯಿತಿ ನೀಡಿದ್ದರಿಂದ ಕಂಪನಿಯು ಜನವರಿಯಲ್ಲಿ ಸಂಕಷ್ಟದಿಂದ ಪಾರಾಗಿತ್ತು.

ವಿಮಾನಯಾನ ಕಂಪನಿಯನ್ನೂ ಕಾಡಿದ ಕರೋನಾ ವೈರಸ್..!

ಫ್ಲೈಬಿ ಕಂಪನಿಯಲ್ಲಿ 2,000ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಕಳೆದ ವರ್ಷ ಕನೆಕ್ಟಿಕಟ್ ಏರ್‍‍ವೇಸ್ ಒಕ್ಕೂಟವನ್ನು ಸ್ವಾಧೀನಪಡಿಸಿಕೊಂಡಾಗಿನಿಂದ ಫ್ಲೈಬಿ ಕಂಪನಿಯು ಕುಸಿತವನ್ನು ಕಾಣುತ್ತಿದೆ. ಕಡಿಮೆ ಬೇಡಿಕೆ ಹಾಗೂ ಬೇರೆ ಕಂಪನಿಗಳು ನೀಡುತ್ತಿರುವ ತೀವ್ರ ಸ್ಪರ್ಧೆಯಿಂದಾಗಿ ಕಂಪನಿಯು ಹೆಣಗಾಡುತ್ತಿದೆ.

ವಿಮಾನಯಾನ ಕಂಪನಿಯನ್ನೂ ಕಾಡಿದ ಕರೋನಾ ವೈರಸ್..!

ಈಗ ಕರೋನಾ ವೈರಸ್ ಪರಿಸ್ಥಿತಿಯನ್ನು ಇನ್ನಷ್ಟು ಹೆಚ್ಚಿಸಿದೆ. ಇದರಿಂದಾಗಿ ಬಹುತೇಕ ವಿಮಾನಯಾನ ಕಂಪನಿಗಳು ವಿಮಾನಗಳನ್ನು ರದ್ದುಗೊಳಿಸಿವೆ. ಇದರಿಂದಾಗಿ ಕಂಪನಿಗಳು ನಷ್ಟವನ್ನು ಅನುಭವಿಸುತ್ತಿವೆ.

ವಿಮಾನಯಾನ ಕಂಪನಿಯನ್ನೂ ಕಾಡಿದ ಕರೋನಾ ವೈರಸ್..!

ಕೆಲವು ದಿನಗಳ ಹಿಂದಷ್ಟೇ ಬ್ರಿಟಿಷ್ ಮಾಧ್ಯಮಗಳು ಫ್ಲೈಬಿ ಕಂಪನಿಯು ತನ್ನ ವ್ಯವಹಾರವನ್ನು ಸರಿಪಡಿಸಲು ಸರ್ಕಾರದಿಂದ ನೆರವನ್ನು ಪಡೆಯಲು ವಿಫಲವಾಗಿದೆ ಎಂದು ವರದಿ ಮಾಡಿದ್ದವು. ಕೋವಿಡ್ -19 ವೈರಸ್ ಈ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ ಎಂದು ಮೂಲಗಳು ತಿಳಿಸಿವೆ.

ವಿಮಾನಯಾನ ಕಂಪನಿಯನ್ನೂ ಕಾಡಿದ ಕರೋನಾ ವೈರಸ್..!

ಅಸ್ಥಿರವಾದ ಇಂಧನ ಬೆಲೆ ಹಾಗೂ ಕಡಿಮೆ ಬೇಡಿಕೆ ಸಣ್ಣ ಬ್ರಿಟಿಷ್ ವಾಹನ ತಯಾರಕ ಕಂಪನಿಗಳ ಮೇಲೆ ಪರಿಣಾಮವನ್ನು ಬೀರಿದೆ. ಫ್ಲೈಬಿ, ಇಂಗ್ಲೆಂಡ್‍‍ನ ಅತಿ ದೊಡ್ಡ ದೇಶೀಯ ವಿಮಾನಯಾನ ಕಂಪನಿಯಾಗಿದೆ. ಬೇರೆ ಯಾವ ವಿಮಾನಯಾನ ಕಂಪನಿಗಳೂ ಸಹ ಫ್ಲೈಬಿ ಕಂಪನಿಯಂತೆ ವರ್ಷಕ್ಕೆ ಎಂಟು ಮಿಲಿಯನ್ ಪ್ರಯಾಣಿಕರನ್ನು ಸಾಗಿಸುವುದಿಲ್ಲ.

ವಿಮಾನಯಾನ ಕಂಪನಿಯನ್ನೂ ಕಾಡಿದ ಕರೋನಾ ವೈರಸ್..!

ಈ ಕಂಪನಿಯು ಯುರೋಪಿನಾದ್ಯಂತ 43 ಹಾಗೂ ಯುಕೆಯಲ್ಲಿ 28 ವಿಮಾನ ನಿಲ್ದಾಣಗಳನ್ನು ಹೊಂದಿದೆ. ಫ್ಲೈಬಿ ಕಂಪನಿಯು ಕನೆಕ್ಟ್ ಏರ್‍‍ವೇಸ್ ಒಕ್ಕೂಟವನ್ನು ಹೊಂದಿರುವ ವರ್ಜಿನ್ ಅಟ್ಲಾಂಟಿಕ್ ಒಡೆತನದಲ್ಲಿದೆ. ಈ ಕಂಪನಿಯಲ್ಲಿ ಹೂಡಿಕೆ ಕಂಪನಿಯಾದ ಸೈರಸ್ ಹಾಗೂ ಮೂಲಸೌಕರ್ಯ ಕಂಪನಿಯಾದ ಸ್ಟೊಬಾರ್ಟ್ ಬಂಡವಾಳವನ್ನು ಹೂಡಿಕೆ ಮಾಡಿವೆ.

ವಿಮಾನಯಾನ ಕಂಪನಿಯನ್ನೂ ಕಾಡಿದ ಕರೋನಾ ವೈರಸ್..!

ಈ ವರ್ಷದ ಆರಂಭದಲ್ಲಿ ಫ್ಲೈಬಿ ಕಂಪನಿಯು ಬ್ರಿಟಿಷ್ ಸರ್ಕಾರದಿಂದ ತೆರಿಗೆ ವಿನಾಯಿತಿಯನ್ನು ಪಡೆದಿತ್ತು. ಬ್ರಿಟಿಷ್ ಏರ್‍‍ವೇಸ್‍‍ನ ಮಾಲೀಕ ಐಎಜಿ ಸೇರಿದಂತೆ ಉಳಿದ ಕಂಪನಿಗಳು ಫ್ಲೈಬಿ ಯುರೋಪಿಯನ್ ಯುನಿಯನ್‍‍ನಿಂದ ಹೆಚ್ಚಿನ ಸಹಾಯವನ್ನು ಪಡೆಯುತ್ತಿದೆ ಎಂದು ದೂರಿದ್ದವು. ಈ ಸಹಾಯವು ಇಯು ನಿಯಮಗಳನ್ನು ಉಲ್ಲಂಘಿಸುವುದಿಲ್ಲ.

ವಿಮಾನಯಾನ ಕಂಪನಿಯನ್ನೂ ಕಾಡಿದ ಕರೋನಾ ವೈರಸ್..!

ಬದಲಿಗೆ ಫ್ಲೈಬಿ ಕಂಪನಿಯ ಆಂತರಿಕ ಸೇವೆಗಳ ಪ್ರಾಮುಖ್ಯತೆ ಹಾಗೂ ಅದರ ಸ್ಥಳೀಯ ಆರ್ಥಿಕ ಅವಲಂಬನೆಯನ್ನು ಆಧರಿಸಿ ನೆರವನ್ನು ನೀಡಲಾಗಿದೆ ಎಂದು ಅಲ್ಲಿನ ಸರ್ಕಾರವು ಹೇಳಿತ್ತು. ಆದರೆ, ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಸರ್ಕಾರ ನೆರವು ದೊರಕದ ಕಾರಣ ಥಾಮಸ್ ಕುಕ್ ಕಂಪನಿಯು ವಿಶ್ವದಾದ್ಯಂತ 22,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿತ್ತು.

Most Read Articles

Kannada
English summary
UKs biggest domestic flight operator collapsed due to corona virus attack. Read in Kannada.
Story first published: Friday, March 6, 2020, 11:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X