ಒಂದೇ ವಾರದಲ್ಲಿ ಎರಡು ಬಾರಿ ದಂಡ ಪಾವತಿಸಿದ ಉಪ ಮೇಯರ್

ಭಾರತದಲ್ಲಿ ವಾಹನಗಳ ನಂಬರ್‌ ಪ್ಲೇಟ್‌ಗಳಿಗೆ ಸಂಬಂಧಪಟ್ಟಂತೆ ಹಲವಾರು ನಿಯಮಗಳಿವೆ. ನಂಬರ್ ಪ್ಲೇಟ್‌ನಲ್ಲಿರುವ ಸಂಖ್ಯೆಗಳು, ಅಕ್ಷರಗಳು ಸ್ಪಷ್ಟವಾಗಿರಬೇಕು, ಓದಲು ಸುಲಭವಾಗಿರಬೇಕು ಎಂಬ ನಿಯಮಗಳಿವೆ.

ಒಂದೇ ವಾರದಲ್ಲಿ ಎರಡು ಬಾರಿ ದಂಡ ಪಾವತಿಸಿದ ಉಪ ಮೇಯರ್

ಫ್ಯಾನ್ಸಿ ಅಕ್ಷರ, ಹೆಸರು ಹಾಗೂ ಫೋಟೋಗಳನ್ನು ನಂಬರ್ ಪ್ಲೇಟ್‌ನಲ್ಲಿ ಅಳವಡಿಸಲು ಅನುಮತಿ ನೀಡಲಾಗುವುದಿಲ್ಲ. ಆದರೆ ಅನೇಕ ಕಾರು ಮಾಲೀಕರು ಈ ನಿಯಮಗಳನ್ನು ಅನುಸರಿಸುವುದಿಲ್ಲ. ಕೆಲವು ಕಾರು ಮಾಲೀಕರು ಫ್ಯಾನ್ಸಿ ಡಿಸೈನ್ ನಂಬರ್ ಪ್ಲೇಟ್‌ಗಳನ್ನು ಬಳಸುತ್ತಾರೆ. ಜೊತೆಗೆ ರಾಜಕೀಯ ಮುಖಂಡರು ಹಾಗೂ ಚಿತ್ರ ನಟರ ಫೋಟೋಗಳನ್ನು ಸಹ ನಂಬರ್‌ ಪ್ಲೇಟ್‌ಗಳಲ್ಲಿ ಬಳಸುತ್ತಾರೆ.

ಒಂದೇ ವಾರದಲ್ಲಿ ಎರಡು ಬಾರಿ ದಂಡ ಪಾವತಿಸಿದ ಉಪ ಮೇಯರ್

ಹೀಗೆ ಮಾಡುವುದು ಕಾನೂನುಬಾಹಿರವಾದ ಕಾರಣ ಪೊಲೀಸರು ಅಂತಹ ವಾಹನ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ನಿಯಮ ಉಲ್ಲಂಘಿಸಿ ತಮ್ಮ ಟೊಯೊಟಾ ಫಾರ್ಚೂನರ್ ಎಸ್‌ಯುವಿಯಲ್ಲಿ ಫ್ಯಾನ್ಸಿ ನಂಬರ್ ಪ್ಲೇಟ್‌ ಅಳವಡಿಸಿಕೊಂಡಿದ್ದ ಉಪ ಮೇಯರ್ ಒಬ್ಬರಿಗೆ ಪೊಲೀಸರು ದಂಡ ವಿಧಿಸಿದ್ದಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಒಂದೇ ವಾರದಲ್ಲಿ ಎರಡು ಬಾರಿ ದಂಡ ಪಾವತಿಸಿದ ಉಪ ಮೇಯರ್

ಮಹಾರಾಷ್ಟ್ರದ ಉಲ್ಹಾಸ್‌ನಗರದ ಉಪ ಮೇಯರ್ ಆಗಿರುವ ಬಾಲೆರಾವ್ ತಮ್ಮ ಕಾರಿನಲ್ಲಿ 4141 ನಂಬರ್ ಅನ್ನು ಮರಾಠಿಯಲ್ಲಿ ದಾದಾ ಎಂದು ಕಾಣಿಸುವಂತೆ ಬರೆಸಿಕೊಂಡಿದ್ದರು. ಈ ಕಾರಣಕ್ಕೆ ಅವರಿಗೆ ಒಂದೇ ವಾರದಲ್ಲಿ ಎರಡು ಬಾರಿ ದಂಡ ವಿಧಿಸಲಾಗಿದೆ.

ಒಂದೇ ವಾರದಲ್ಲಿ ಎರಡು ಬಾರಿ ದಂಡ ಪಾವತಿಸಿದ ಉಪ ಮೇಯರ್

ನಿಯಮ ಉಲ್ಲಂಘಿಸಿದ ಕಾರಣಕ್ಕೆ ಅಕ್ಟೋಬರ್ 29ರಂದು ಟ್ರಾಫಿಕ್ ಪೊಲೀಸರು ಬಾಲೆರಾವ್ ಅವರ ಕಾರಿನ ಪ್ಯಾನ್ಸಿ ನಂಬರ್ ಪ್ಲೇಟ್ ಅನ್ನು ತೆಗೆದುಹಾಕಿ, ರೂ.1,200 ದಂಡ ವಿಧಿಸಿದ್ದರು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಒಂದೇ ವಾರದಲ್ಲಿ ಎರಡು ಬಾರಿ ದಂಡ ಪಾವತಿಸಿದ ಉಪ ಮೇಯರ್

ಇದಾದ ನಂತರವೂ ಬಾಲೆರಾವ್ ಫ್ಯಾನ್ಸಿ ನಂಬರ್ ಪ್ಲೇಟ್ ಬಳಕೆಯನ್ನು ಮುಂದುವರೆಸಿದರು. ಸಮಾಜ ಸೇವಕರೊಬ್ಬರು ಈ ಕುರಿತು ದೂರು ನೀಡಿದ ನಂತರ ಸಂಚಾರ ಪೊಲೀಸರು ಬಾಲೆರಾವ್ ಅವರ ಕಾರಿನಲ್ಲಿದ್ದ ಫ್ಯಾನ್ಸಿ ನಂಬರ್ ಪ್ಲೇಟ್ ತೆಗೆದುಹಾಕಿ ಮತ್ತೆ ದಂಡ ವಿಧಿಸಿದ್ದಾರೆ.

ಒಂದೇ ವಾರದಲ್ಲಿ ಎರಡು ಬಾರಿ ದಂಡ ಪಾವತಿಸಿದ ಉಪ ಮೇಯರ್

ಅನೇಕ ರಾಜಕಾರಣಿಗಳ ಕಾರುಗಳ ಮೇಲೆ ಈ ರೀತಿಯ ಫ್ಯಾನ್ಸಿ ನಂಬರ್ ಪ್ಲೇಟ್ ಗಳನ್ನು ಕಾಣಬಹುದು. ಬಹುತೇಕ ಪೊಲೀಸರು ರಾಜಕಾರಣಿಗಳ ಮೇಲೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಒಂದೇ ವಾರದಲ್ಲಿ ಎರಡು ಬಾರಿ ದಂಡ ಪಾವತಿಸಿದ ಉಪ ಮೇಯರ್

ಆದರೆ ಮಹಾರಾಷ್ಟ್ರದ ಉಲ್ಹಾಸ್ ನಗರದ ಪೊಲೀಸರು ಬಾಲೆರಾವ್ ಉಪ ಮೇಯರ್ ಆಗಿದ್ದರೂ ಧೈರ್ಯದಿಂದ ವರ್ತಿಸಿ ಕ್ರಮ ಕೈಗೊಂಡಿದ್ದಾರೆ. ಉಲ್ಹಾಸ್ ನಗರ ಪೊಲೀಸರ ಈ ಕ್ರಮ ನಿಜಕ್ಕೂ ಶ್ಲಾಘನೀಯ. ಕಾರುಗಳಲ್ಲಿ ಅಕ್ರಮ ನಂಬರ್‌ ಪ್ಲೇಟ್‌ಗಳನ್ನು ಅಳವಡಿಸುವವರಿಗೆ ಈ ಘಟನೆ ಪಾಠವಾಗಲಿದೆ.

ಒಂದೇ ವಾರದಲ್ಲಿ ಎರಡು ಬಾರಿ ದಂಡ ಪಾವತಿಸಿದ ಉಪ ಮೇಯರ್

ಹಲವು ರಾಜ್ಯಗಳ ಪೊಲೀಸರು ಈ ಹಿಂದೆಯೂ ಫ್ಯಾನ್ಸಿ ನಂಬರ್‌ ಪ್ಲೇಟ್‌ ಹೊಂದಿದ್ದ ವಾಹನಗಳ ವಿರುದ್ಧ ವಿಶೇಷ ಕ್ರಮ ಕೈಗೊಂಡಿದ್ದಾರೆ. ಕೆಲವು ಸಂದರ್ಭಗಳಲ್ಲಿ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ದೊಡ್ಡ ನಗರಗಳಲ್ಲಿ ಪೊಲೀಸರು ಫ್ಯಾನ್ಸಿ ನಂಬರ್ ಪ್ಲೇಟ್‌ಗಳ ವಿರುದ್ಧ ಗಂಭೀರ ಕ್ರಮ ಕೈಗೊಂಡರೆ, ಸಣ್ಣ ನಗರಗಳ ಪೊಲೀಸರು ಇವುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.

Most Read Articles

Kannada
English summary
Ulhasnagar deputy mayor fined twice in a week for using fancy number plate. Read in Kannada.
Story first published: Saturday, November 14, 2020, 17:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X