ಜಾವಾ 42 ಬೈಕ್ ಓಡಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು: ಆನಂದ್ ಮಹೀಂದ್ರಾ ಪ್ರಶಂಸೆ

ಭಾರತದಲ್ಲಿ ಜಾವಾ ಬೈಕ್‌ಗಳನ್ನು ಮರುಪ್ರಾರಂಭಿಸಿದ ಶ್ರೇಯಸ್ಸು ಮಹೀಂದ್ರಾ & ಮಹೀಂದ್ರಾ (M&M) ಕಂಪನಿಯಾದ Classic Legends ಗೆ ಸಲ್ಲುತ್ತದೆ. ಬಿಡುಗಡೆಯಾದಾಗಿನಿಂದ ಈ ಬೈಕ್ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.

Recommended Video

Royal Enfield Hunter 350 | ಹೊಸ ಬೈಕ್ ಕುರಿತಾದ ಮೊದಲ ಅನಿಸಿಕೆಯ ವಾಕ್‌ರೌಂಡ್ #FirstLook

ಅದರಲ್ಲೂ ಯುವಕರಲ್ಲಿ ಜಾವಾ ಬೈಕ್ ಗಳು ಸಾಕಷ್ಟು ಜನಪ್ರಿಯತೆ ಗಳಿಸುತ್ತಿವೆ. ಜಾವಾ ಬೈಕ್‌ಗಳು ಭಾರತದಲ್ಲಿ ರಾಯಲ್ ಎನ್‌ಫೀಲ್ಡ್‌ಗೆ ನೇರ ಸ್ಪರ್ಧೆಯನ್ನು ನೀಡುತ್ತವೆ. ಇತ್ತೀಚೆಗೆ, ಕಾನೂನು ಮತ್ತು ನ್ಯಾಯಾಂಗ ಸಚಿವ ಕಿರಣ್ ರಿಜಿಜು ಜಾವಾ 42 ಬೈಕ್‌ನಲ್ಲಿ ಸವಾರಿ ಮಾಡುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗುತ್ತಿವೆ.

ಜಾವಾ 42 ಬೈಕ್ ಓಡಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು: ಆನಂದ್ ಮಹೀಂದ್ರಾ ಪ್ರಶಂಸೆ

ಆಗಸ್ಟ್ 15 ರಂದು ದೇಶದ 76 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರದಲ್ಲಿ ನಡೆದ ಬೈಕ್ ರ್ಯಾಲಿಯಲ್ಲಿ ಕಿರಣ್ ರಿಜಿಜು ಭಾಗವಹಿಸಿದ್ದರು. ಈ ರ‍್ಯಾಲಿಯಲ್ಲಿ ಅವರು ಜಾವಾ 42 ಬೈಕ್‌ನಲ್ಲಿ ಓಡಾಡಿದ್ದಾರೆ.

ಜಾವಾ 42 ಬೈಕ್ ಓಡಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು: ಆನಂದ್ ಮಹೀಂದ್ರಾ ಪ್ರಶಂಸೆ

ಅವರ ಈ ಚಿತ್ರವನ್ನು ಕ್ಲಾಸಿಕ್ ಲೆಜೆಂಡ್ಸ್‌ನ ಸಹ-ಸಂಸ್ಥಾಪಕ ಅನುಪಮ್ ಥರೇಜಾ ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರವನ್ನು ಹಂಚಿಕೊಂಡ ಅವರು, "ಏನು ದೃಶ್ಯ! ಕಿರಣ್ ರಿಜಿಜು ಸರ್ ಅವರು ತ್ರಿವರ್ಣ ಧ್ವಜದೊಂದಿಗೆ Jawa42 ಸ್ಪೋರ್ಟ್ಸ್ ಸ್ಟ್ರೈಪ್ಸ್ ಆಲ್‌ಸ್ಟಾರ್‌ಬ್ಲಾಕ್ ಅನ್ನು ಸವಾರಿ ಮಾಡುತ್ತಿದ್ದಾರೆ. ಅಂತಹ ಐತಿಹಾಸಿಕ ದಿನವನ್ನು ಆಚರಿಸಲು ಹಲವಾರು ರೈಡರ್‌ಗಳು ಒಟ್ಟಿಗೆ ಸೇರುವುದನ್ನು ನೋಡಲು ಹೆಮ್ಮೆಪಡುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.

ಜಾವಾ 42 ಬೈಕ್ ಓಡಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು: ಆನಂದ್ ಮಹೀಂದ್ರಾ ಪ್ರಶಂಸೆ

" ಈ ಚಿತ್ರವನ್ನು ರಿಟ್ವೀಟ್ ಮಾಡಿರುವ ಮಹೀಂದ್ರಾ ಮತ್ತು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಕೂಡ ರಿಜಿಜು ಅವರನ್ನು ಹೊಗಳಿದ್ದಾರೆ. ಮಹೀಂದ್ರಾ ಗ್ರೂಪ್-ಮಾಲೀಕತ್ವದ ಕಂಪನಿಯಾದ ಕ್ಲಾಸಿಕ್ ಲೆಜೆಂಡ್ಸ್ 15 ನವೆಂಬರ್ 2018 ರಂದು ಭಾರತೀಯ ಮಾರುಕಟ್ಟೆಯಲ್ಲಿ ಜಾವಾ ಬೈಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿತ್ತು.

ಜಾವಾ 42 ಬೈಕ್ ಓಡಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು: ಆನಂದ್ ಮಹೀಂದ್ರಾ ಪ್ರಶಂಸೆ

ಪ್ರಸ್ತುತ, ಜಾವಾ ಭಾರತದಲ್ಲಿ ಜಾವಾ 42 ಮತ್ತು ಪೆರಾಕ್ ಸೇರಿದಂತೆ ಮೂರು ಬೈಕ್‌ಗಳನ್ನು ಮಾರಾಟ ಮಾಡುತ್ತಿದೆ. ಜಾವಾ ಮತ್ತು ಜಾವಾ 42 ರಲ್ಲಿ 293 ಸಿಸಿ ಎಂಜಿನ್ ನೀಡಲಾಗಿದೆ. ಜಾವಾ ಪೆರಾಕ್ 334 ಸಿಸಿ ಎಂಜಿನ್‌ನೊಂದಿಗೆ ಬರುತ್ತದೆ. ಜಾವಾದ ಎಲ್ಲಾ ಮೂರು ಬೈಕ್‌ಗಳಲ್ಲಿ ಜಾವಾದ ಹಳೆಯ ವಿನ್ಯಾಸದ ವೈಶಿಷ್ಟ್ಯಗಳನ್ನು ಉಳಿಸಿಕೊಳ್ಳಲಾಗಿದೆ.

ಜಾವಾ 42 ಬೈಕ್ ಓಡಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು: ಆನಂದ್ ಮಹೀಂದ್ರಾ ಪ್ರಶಂಸೆ

ಜಾವಾ 42 ಕುರಿತು ಮಾತನಾಡುವುದಾದರೆ, ಅದರ 293cc ಲಿಕ್ವಿಡ್ ಕೂಲ್ಡ್ ಎಂಜಿನ್ 27 bhp ಪವರ್ ಮತ್ತು 27.05 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಜಾವಾ 42 ಅನ್ನು ಸ್ಪೋಕ್ ಮತ್ತು ಅಲಾಯ್ ವೀಲ್‌ಗಳಲ್ಲಿ ನೀಡಲಾಗುತ್ತದೆ. ಅಲಾಯ್‌ ವೀಲ್‌ಗಳನ್ನು ಹೊಂದಿರುವ ಬೈಕು ಹೆಚ್ಚು ಪ್ರೀಮಿಯಂ ಮತ್ತು ವಿಭಿನ್ನ ಬಾಡಿ ಪೇಂಟ್‌ನೊಂದಿಗೆ ಬರುತ್ತದೆ.

ಜಾವಾ 42 ಬೈಕ್ ಓಡಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು: ಆನಂದ್ ಮಹೀಂದ್ರಾ ಪ್ರಶಂಸೆ

ಜಾವಾ 42 ಬೈಕು ಡ್ಯುಯಲ್-ಟೋನ್ ಕ್ರೋಮ್ ಫಿನಿಶ್ ಮತ್ತು ಇಂಧನ ಟ್ಯಾಂಕ್‌ನಲ್ಲಿ ಫ್ಲಾಟ್ ಸ್ಯಾಡಲ್ ಅನ್ನು ಪಡೆಯುತ್ತದೆ. ಜಾವಾ 42 ಹೆಚ್ಚು ಸಿಟಿ ಮತ್ತು ಮ್ಯಾಟ್ ಬ್ಲಾಕ್ ಫಿನಿಷ್‌ನೊಂದಿಗೆ ಆಧುನಿಕ ಥೀಮ್ ಹೊಂದಿದೆ. ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಗ್ಯಾಸ್ ಚಾರ್ಜ್ಡ್ ಟ್ವಿನ್ ಶಾಕ್ ಅಬ್ಸಾರ್ಬರ್‌ಗಳನ್ನು ನೀಡಲಾಗಿದೆ.

ಜಾವಾ 42 ಬೈಕ್ ಓಡಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು: ಆನಂದ್ ಮಹೀಂದ್ರಾ ಪ್ರಶಂಸೆ

ಮುಂಭಾಗದಲ್ಲಿ 280 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 153 ಎಂಎಂ ಡ್ರಮ್ ಬ್ರೇಕ್ ಸೆಟ್ ಅಪ್ ಇದೆ. ಹೊಸ ಜಾವಾ 42 ರಲ್ಲಿ ಸಿಂಗಲ್ ಚಾನೆಲ್ ಎಬಿಎಸ್ ನೀಡಲಾಗಿದೆ. ಜಾವಾ 42 ತೂಕ 170 ಕೆ.ಜಿ ಇದ್ದು ಅದರ ಸೀಟ್‌ ಎತ್ತರವು 765 ಮಿ.ಮೀ ಇದೆ, ಇದು ಈ ಶ್ರೇಣಿಯಲ್ಲಿ ಕಡಿಮೆ ಎತ್ತರವಾಗಿದ್ದು, ಜಾವಾ ಬೈಕ್‌ನ ವೀಲ್‌ಬೇಸ್ 1,369 ಎಂಎಂ ನೀಡಲಾಗಿದೆ.

ಜಾವಾ 42 ಬೈಕ್ ಓಡಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು: ಆನಂದ್ ಮಹೀಂದ್ರಾ ಪ್ರಶಂಸೆ

ಇನ್ನು ಇದು 14 ಲೀಟರ್ ಇಂಧನ ಟ್ಯಾಂಕ್ ಹೊಂದಿದೆ. ದೆಹಲಿಯ ಎಕ್ಸ್ ಶೋ ರೂಂ ಬೆಲೆ ಕುರಿತು ಮಾತನಾಡುವುದಾದರೆ, ಜಾವಾ ಬೆಲೆ 1,96,357 ರೂ., ಜಾವಾ 42 ಬೆಲೆ 1,94,142 ರೂ. ಮತ್ತು ಪೆರಾಕ್ ಬೆಲೆ 2,09,187 ರೂ. ಎಲ್ಲಾ ಮೂರು ಬೈಕ್‌ಗಳನ್ನು ಕಂಪನಿಯ ಡೀಲರ್‌ಶಿಪ್ ಅಥವಾ ಅಧಿಕೃತ ವೆಬ್‌ಸೈಟ್‌ನಿಂದ ಬುಕ್ ಮಾಡಬಹುದು. ಪ್ರಸ್ತುತ, ಜಾವಾ ದೇಶಾದ್ಯಂತ ಪ್ರಮುಖ ನಗರಗಳಲ್ಲಿ 175 ಕ್ಕೂ ಹೆಚ್ಚು ಡೀಲರ್‌ಶಿಪ್‌ಗಳನ್ನು ತೆರೆದಿದೆ.

ಜಾವಾ 42 ಬೈಕ್ ಓಡಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು: ಆನಂದ್ ಮಹೀಂದ್ರಾ ಪ್ರಶಂಸೆ

ದೇಶದಲ್ಲಿ ಜಾವಾ ಬೈಕ್ ಇತ್ತೀಚೆಗೆ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ. ಲಾಂಗ್‌ಡ್ರೈವ್‌ಗೆ ಇದು ಉತ್ತಮ ಆಯ್ಕೆಯಾಗಿದ್ದು, ಯುವಕರ ಹಾಟ್‌ ಫೇವರೆಟ್‌ ಆಗಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಇನ್ನು ರಾಯಲ್‌ ಎನ್‌ಫೀಲ್ಡ್ ಬೈಕ್‌ಗಳಿಗೆ ನೇರ ಪ್ರತಿ ಸ್ಪರ್ಧಿಯಾಗಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ.

ಜಾವಾ 42 ಬೈಕ್ ಓಡಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು: ಆನಂದ್ ಮಹೀಂದ್ರಾ ಪ್ರಶಂಸೆ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಪ್ರಸ್ತುತ ಭರತದಲ್ಲಿರುವ ಅತ್ಯುತ್ತಮ ಪರ್ಫಾಮೆನ್ಸ್‌ ನೀಡುವ ಬೈಕ್‌ಗಳಲ್ಲಿ ಜಾವಾ ಕೂಡ ಗುರ್ತಿಸಿಕೊಂಡಿದ್ದು, ಕಂಪನಿಯು ತನ್ನ ನವೀಕೃತ ಮಾದರಿಗಳನ್ನು ಹೊರತರಲು ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿ ಸಿಸಿ ಬೈಕ್‌ಗಳೊಂದಿಗೆ ರಾಯಲ್‌ ಎನ್‌ಫೀಲ್ಡ್‌ ಬೈಕ್‌ಗಳಿಗೆ ನೇರ ಪೈಪೋಟಿ ನೀಡಲು ಜಾವ ಸಜ್ಜಾಗುತ್ತಿದೆ.

Article Published On: Saturday, August 20, 2022, 12:15 [IST]
English summary
Union Minister Kiren Rijiju who rode the Java 42 bike
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+