ಫೋಕ್ಸ್‌ವ್ಯಾಗನ್ ಮಿನಿ ಬಸ್ಸಲ್ಲಿ ಒಂದು ರೌಂಡಪ್

By Nagaraja

ಜಾಗತಿಕ ವಾಹನೋದ್ಯಮ ಸದಾ ತನ್ನ ವಿಶಿಷ್ಟತೆಯನ್ನು ಕಾಪಾಡಿಕೊಳ್ಳಲು ಯಶ ಕಂಡಿದೆ. ಯಾಕೆಂದರೆ ವಾಹನ ಪ್ರೇಮಿಗಳು ವಿಂಟೇಜ್ ವಾಹನಗಳಿಂದ ಹಿಡಿದು ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಹೊಸ ಹೊಸ ಕಾನ್ಸೆಪ್ಟ್‌ಗಳಿಗೆ ಆಕರ್ಷಿತರಾಗಿರುತ್ತಾರೆ.

ನಾವಿಂದು ಜಗತ್ತಿನ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ಫೋಕ್ಸ್‌ವ್ಯಾಗನ್‌ನ ಅಪರೂಪದ ಬಂಡಿಯ ಬಗ್ಗೆ ಮಾತನಾಡಲಿದ್ದೇವೆ. ಅದುವೇ ಫೋಕ್ಸ್‌ವ್ಯಾಗನ್ ಲಿಮೊ ಬಸ್.

ಫೋಕ್ಸ್‌ವ್ಯಾಗನ್ ಮಿನಿ ಬಸ್ಸಲ್ಲಿ ಒಂದು ರೌಂಡಪ್

ಫೋಕ್ಸ್‌ವ್ಯಾಗನ್ ಲಿಮೊ ಮಿನಿ ಬಸ್ಸನ್ನು 1965ನೇ ಇಸವಿಯಲ್ಲಿ ನಿರ್ಮಿಸಲಾಗಿತ್ತು. ಇದರ ಅಸ್ಥಿತ್ವವನ್ನು ಇಲ್ಲಿಯ ವರೆಗೆ ಉಳಿಸಿಕೊಂಡು ಬಂದಿರುವುದೇ ಈ ಚೊಕ್ಕದಾದ ಬಂಡಿಯ ಬೇಡಿಕೆಗೆ ಕಾರಣವಾಗಿದೆ.

ಫೋಕ್ಸ್‌ವ್ಯಾಗನ್ ಮಿನಿ ಬಸ್ಸಲ್ಲಿ ಒಂದು ರೌಂಡಪ್

ಫೋಕ್ಸ್‌ವ್ಯಾಗನ್ ಮಿನಿ ಬಸ್ಸಿನ ಬದಿಯಲ್ಲಿ 33 ಕಿಟಕಿಗಳನ್ನು ಕಾಣಬಹುದಾಗಿದೆ. ಇದು ಅಪ್ಪಟ ವಿಂಟೇಜ್ ಬಸ್ಸಿನ ನೋಟವನ್ನು ಕಾಯ್ದುಕೊಂಡಿದೆ.

ಫೋಕ್ಸ್‌ವ್ಯಾಗನ್ ಮಿನಿ ಬಸ್ಸಲ್ಲಿ ಒಂದು ರೌಂಡಪ್

ಇನ್ನು ಇದರಲ್ಲಿ 12 ಮಂದಿ ಪ್ರಯಾಣಿಕರಿಗೆ ಆರಾಮವಾಗಿ ಕುಳಿತುಕೊಳ್ಳಬಹುದಾಗಿದೆ. ಅಂತೆಯೇ ಫೇಸ್ ಟು ಫೇಸ್ ಆಸನ ವ್ಯವಸ್ಥೆ ಪಡೆದುಕೊಂಡಿದೆ.

ಫೋಕ್ಸ್‌ವ್ಯಾಗನ್ ಮಿನಿ ಬಸ್ಸಲ್ಲಿ ಒಂದು ರೌಂಡಪ್

1960ರ ದಶಕದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಫೋಕ್ಸ್‌ವ್ಯಾಗನ್ ಮೈಕ್ರೋಬಸ್ ಅಥವಾ ಮಿನಿ ಬಸ್ ಉತ್ಪಾದನೆಯನ್ನು ಈಗ ನಿಲುಗಡೆಗೊಳಿಸಲಾಗಿದೆ.

ಫೋಕ್ಸ್‌ವ್ಯಾಗನ್ ಮಿನಿ ಬಸ್ಸಲ್ಲಿ ಒಂದು ರೌಂಡಪ್

ಇದು ತನ್ನದೇ ವಿಶಿಷ್ಟ ವಿನ್ಯಾಸದಿಂದ ಈಗಲೂ ವಿಂಟೇಜ್ ವಾಹನಗಳ ಪೈಕಿ ಹೆಚ್ಚು ಗಮನ ಸೆಳೆಯುತ್ತಿದೆ. ಇದು ಫೋಕ್ಸ್‌ವ್ಯಾಗನ್ ಪ್ರತಿಷ್ಠೆಯನ್ನು ಎತ್ತಿ ಹಿಡಿದಿದೆ.

ಫೋಕ್ಸ್‌ವ್ಯಾಗನ್ ಮಿನಿ ಬಸ್ಸಲ್ಲಿ ಒಂದು ರೌಂಡಪ್

ಸಾಂಪ್ರಾದಾಯಿಕ ಶೈಲಿಯ ಹೆಡ್ ಲೈಟ್ ಹಾಗೂ ಚಕ್ರಗಳು ವಿಶೇಷವಾಗಿ ಎದ್ದು ಕಾಣಿಸುತ್ತಿದೆ. ಇನ್ನು ಮೇಲ್ಛಾವಣಿ ಸಹ ತೆರೆದುಕೊಳ್ಳಬಹುದಾಗಿದೆ.

ಫೋಕ್ಸ್‌ವ್ಯಾಗನ್ ಮಿನಿ ಬಸ್ಸಲ್ಲಿ ಒಂದು ರೌಂಡಪ್

ದೊಡ್ಡದಾಗಿ ಎದ್ದು ಕಾಣಿಸುತ್ತಿರುವ ಫೋಕ್ಸ್‌ವ್ಯಾಗನ್ ಲಾಂಛನ ಮೆಚ್ಚುಗೆಗೆ ಪಾತ್ರವಾಗಿದೆ. ಅಂತೆಯೇ ಬಲಬದಿಯಲ್ಲಿ ಬಾಗಿಲು ಇರಲಿದೆ.

ಫೋಕ್ಸ್‌ವ್ಯಾಗನ್ ಮಿನಿ ಬಸ್ಸಲ್ಲಿ ಒಂದು ರೌಂಡಪ್

ಫೋಕ್ಸ್‌ವ್ಯಾಗನ್ ಟೈಪ್ 2 ಎಂದು ಅರಿಯಲ್ಪಡುವ ಫೋಕ್ಸ್‌ವ್ಯಾಗನ್ ಲಿಮೊ ಹಿಂದುಗಡೆಯೂ ಬಾಗಿಲನ್ನು ಹೊಂದಿದೆ.

ಫೋಕ್ಸ್‌ವ್ಯಾಗನ್ ಮಿನಿ ಬಸ್ಸಲ್ಲಿ ಒಂದು ರೌಂಡಪ್

ಒಟ್ಟಿನಲ್ಲಿ ವಾಹನ ಪ್ರೇಮಿಗಳಿಗೆ ಫೋಕ್ಸ್‌ವ್ಯಾಗನ್ ಲಿಮೊ ಮಿನಿ ಬಸ್ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ.

More from DriveSpark

Article Published On: Friday, March 6, 2015, 11:30 [IST]
English summary
Unique Designed Volkswagen Microbus Limousine
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+